ಚುನಾವಣೆಗೆ ಇನ್ನು ಮೂರು ವರ್ಷಗಳು ಬಾಕಿ ಇದೆ. ಅದರ ಬೆನ್ನಲ್ಲೇ ಪಕ್ಷ ಸೇರ್ಪಡೆ ಕಾರ್ಯಕ್ರಮಗಳು ಜೋರಾಗಿ ನಡೆಯುತ್ತಿದೆ. ಜೆಡಿಎಸ್ ಭಾಗದ ಎಲ್ಲಾ ಕಾರ್ಯಕರ್ತರನ್ನ ಡಿಕೆಶಿ ತಮ್ಮ ಪಕ್ಷಕ್ಕೆ ಸಳಿಯೋ ಮೂಲಕ ದಳಪತಿಗಳಿಗೆ ಶಾಕ್ ನೀಡುತ್ತಿದ್ದಾರೆ. ಇಂದು ಕೂಡ ಅನೇಕರು ಕಾಂಗ್ರೆಸ್ ಗೆ ಸೇರ್ಪಡೆಯಾಗುವ ಮೂಲಕ ಜೆಡಿಎಸ್ ಗೆ ಕೈಕೊಟ್ಟಿದ್ದಾರೆ.
ಹಳೆ ಮೈಸೂರು ಭಾಗ ಅಂದ್ರೆ ಜೆಡಿಎಸ್, ಜೆಡಿಎಸ್ ಅಂದ್ರೆ ಹಳೆ ಮೈಸೂರು ಭಾಗ ಅನ್ನುವಂತಹ ಮಾತು ಬಹಳ ವರ್ಷಗಳಿಂದ ಇತ್ತು. ಆದರೆ ಕಳೆದ ಚುನಾವಣೆಯಿಂದ ಪರಿಸ್ಥಿತಿ ಬದಲಾಗಿರುವುದಂತೂ ನಿಜ. ಅದರಲ್ಲೂ ಲೋಕಸಭಾ ಚುನಾವಣೆಯಲಂತೂ, ಜೆಡಿಎಸ್ ಹಳೆ ಮೈಸೂರು ಭಾಗದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಅದಕ್ಕೆ ಕಾರಣ ದೇವೇಗೌಡರ ಕುಟುಂಬವೋ, ಅಲ್ಲಿನ ಕಾರ್ಯಕರ್ತರೋ, ಪಕ್ಷದೊಳಗಿನ ಆಂತರಿಕ ಯುದ್ಧಗಳು ಗೊತ್ತಿಲ್ಲ. ಆದರೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ನ ಶಕ್ತಿ ಕುಂದಿರುವುದಂತೂ ಸತ್ಯ. ಇದನ್ನೇ ಅಂದರೆ ಈ ಪರಿಸ್ಥಿತಿಯ ಪ್ರಯೋಜನ ತೆಗೆದುಕೊಂಡಿರುವ ಕಾಂಗ್ರೆಸ್ ಅಲ್ಲಿ ಇರುವಂತಹ ಕಾರ್ಯಕರ್ತರು ಜೆಡಿಎಸ್ ಮುಖಂಡರುಗಳನ್ನು ಪಕ್ಷದತ್ತ ಸೆಳೆಯುವುದಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಅದರಂತೆ ಇಂದು ಅನೇಕರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ಜೆಡಿಎಸ್ ಭದ್ರಕೋಟೆ ಹಾಸನಗೆ ಲಗ್ಗೆ ಇಡಲು ಮುಂದಾಗಿರೋ ಡಿಕೆಶಿ,
ಶ್ರವಣಬೆಳಗೊಳ ಕ್ಷೇತ್ರದ ಜೆಡಿಎಸ್ ಮುಖಂಡರಿಗೆ ಡಿಕೆಶಿ ಗಾಳ ಹಾಕಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕಿನ ಜೆಡಿಎಸ್ ಮುಖಂಡರು ಇಂದು ಕೆಪಿಸಿಸಿ ಭಾರತ್ ಜೋಡೋ ಭವನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಡಿಕೆಶಿ ಸಮ್ಮುಖದಲ್ಲಿ ಹಲವು ಮುಖಂಡರು ಸೇರ್ಪಡೆಯಾದರು. ಇದೊಂದು ರೀತಿ ದೇವೇಗೌಡರು ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಮುಖಂಡರುಗಳಿಗೆ ದೊಡ್ಡ ಶಾಕ್ ಅಂದ್ರೆ ತಪ್ಪಾಗಲ್ಲ. ಕಾರ್ಯಕರ್ತರನ್ನ ಉಳಿಸಿಕೊಳ್ಳುವುದಕ್ಕೆ ಹತ್ತು ಹಲವು ಕಾರ್ಯಕ್ರಮಗಳನ್ನ ಮಾಡಿ ಏನೇ ಭರವಸೆ ನೀಡಿದರು ಕೂಡ ಕಾರ್ಯಕರ್ತರು ಬೇರೆ ಪಕ್ಷಕ್ಕೆ ವಲಸೆ ಹೋಗುತ್ತಿದ್ದಾರೆ.
ಇತ್ತ ಪಕ್ಷ ಸೇರ್ಪಡೆ ಬಗ್ಗೆ ಮಾತನಾಡಿದ ಡಿಕೆಶಿ, ಬಹಳ ಜನ ಪಕ್ಷಕ್ಕೆಬರೋಕೆ ಕಾಯ್ತಿದ್ದಾರೆ. ಲೋಕಲ್ನಲ್ಲಿ ನಾನು ಸಂದೇಶ ಕೊಟ್ಟಿದ್ದೇನೆ. ಇವತ್ತು ಎಲ್ಲರು ಕಾಂಗ್ರೆಸ್ ಗೆ ಬರ್ತಿದ್ದಾರೆ. ಕಾಂಗ್ರೆಸ್ ಪಾರ್ಟಿ ದೊಡ್ಡ ಸಮುದ್ರ. ತಿಮಿಂಗಲ,ದೊಡ್ಡ,ಸಣ್ಣ ಮೀನು ಎಲ್ಲ ಇರುತ್ತೆ. ರಾಷ್ಟ್ರಧ್ವಜ ತಯಾರಿಸಿದ ಪಕ್ಷ ನಮ್ಮದು. ರಾಷ್ಟ್ರಗೀತೆ, ಸಂವಿಧಾನ ಕೊಟ್ಟ ಪಕ್ಷ. ಸಮಯ ಈಗ ಬದಲಾಗಿರಬಹುದು. ಆದರೆ ಯಾರು ಪರ್ಮನೆಂಟ್ ಅಲ್ಲ. ಮೊನ್ಮೆ ಯುದ್ಧ ಆಯ್ತು. ಎಲ್ಲರೂ ಇಂದಿರಾಗಾಂಧಿ ನೆನೆಸಿಕೊಳ್ತಿದ್ರು. ಈಗ ಇದ್ದಿದ್ದರೆ ಏನಾಗ್ತಿತ್ತು ಅಂತ ನೆನಪಿಸ್ತಿದ್ರು. ನೆಹರು,ಇಂದಿರಾ ಕಾಲದಲ್ಲಿ ಎಲ್ಲವೂ ಆಯ್ತು. ಡ್ಯಾಂಗಳು ಎಲ್ಲವೂ ಕಾಂಗ್ರೆಸ್ ಕಾಲದಲ್ಲಿ ಆಗಿದ್ದು. ಬಿಜೆಪಿ, ಜೆಡಿಎಸ್ ಕಾಲದಲ್ಲಿ ಯಾವ್ದು ಆಗಲಿಲ್ಲ. ಎತ್ತಿನಹೊಳೆ ಮಾಡ್ತಿರೋದು ಬಿಜೆಪಿ, ಜೆಡಿಎಸ್ ಅಲ್ಲ

ಕುಮಾರಸ್ವಾಮಿ,ದೇವೇಗೌಡರು ಇದ್ರು. ಅವರು ಏನು ಮಾಡಿದ್ರು ಗುರುತು ಇದ್ಯಾ. ಮೈತ್ರಿ ಮಾಡಿಕೊಂಡು ತಬ್ಬಾಡ್ತಿದ್ದಾರೆ. ಈಗ ಎಸ್ ಟಿ ಸೋಮಶೇಖರ್ ಗೆ ಹೇಳಿದ್ದೆ. ಅಲ್ಲಿ ಹೋಗಬೇಡಿ ಅಂತ. ಯೋಗೇಶ್ವರ್ ಮತ್ತೆ ಕಾಂಗ್ರೆಸ್ ಗೆ ಬಂದ. ಎಂಟಿಬಿ ಕಥೆ ಏನಾಯ್ತು, ಶ್ರೀಮಂತ್ ಪಾಟೀಲ್ ಏನಾಯ್ತು. ಮಹೇಶ್ ಕುಮಟಳ್ಳಿ ಪರಿಸ್ಥಿತಿ ಹೇಗಿದೆ. ಅಯ್ಯೋ ನಮ್ಮನ್ನ ಸಾಯಿಸ್ತಾರೆ ಅಂತ ಯಾರೋ ಹೇಳ್ತಿದ್ದಾನೆ. ಮಾಡಬಾರದು ಮಾಡಿ ಬಾಯಿ ಬಡ್ಕೊತ್ತಿದ್ದಾರೆ. ಎಲ್ಲರು ವಾಪಸ್ ಬರ್ತಿದ್ದಾರೆ. ದಳದ ಲೀಡರ್ ನಂಬಿದ್ರೆ ಭವಿಷ್ಯ ಇಲ್ಲ. ಜೆಡಿಎಸ್ ಪಕ್ಷ ಅಲ್ಲ ಅದೊಂದು ಕುಟುಂಬ. ಅವರೆಲ್ಲ ಗೆದ್ದಿದ್ದು ಪಕ್ಷದಿಂದ ಅಲ್ಲ. ಅಳಿಯನನ್ನ ಕರೆದೋಯ್ದು ಬಿಜೆಪಿಗೆ ನಿಲ್ಲಿಸಿದ್ರು. ನಮಗೆ ತಂತ್ರ ಮಾಡೋಕೆಬರೋದಿಲ್ವೇ. ನಾವು ಯೋಗೇಶ್ವರ್ ಕರೆದೋಯ್ದು ನಿಲ್ಲಿಸಿದ್ವಿ. ಯೋಗೇಶ್ವರ್ ಗೆಲ್ಲಲ್ಲಿಲ್ವೇ. ಹಾಸನದಲ್ಲಿ ಏಳಕ್ಕೆ ಏಳು ನಾವು ಗೆಲ್ತೇವೆ. ಹಾಸನದಲ್ಲಿ ಎರಡು ಮೂರು ಗೆಲ್ತಿದ್ವಿ. ನಮ್ಮವ ಕುತಂತ್ರದಿಂದಲೇ ಸೋತಿದ್ದು ಅಂತ ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಇಂದು ಮುಖಂಡರು, ಕಾರ್ಯಕರ್ತರುಗಳನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ದಳಪತಿಗಳಿಗೆ ಶಾಕ್ ಮೇಲೆ ಶಾಕ್ ಕೊಟ್ಟಿದ್ದಾರೆ ಡಿಕೆ ಶಿವಕುಮಾರ್. ಜೆಡಿಎಸ್ ಒಂದು ಕುಟುಂಬ ಪಕ್ಷ ಅಲ್ಲ ಅಂತ ವಾಗ್ದಾಳಿ ನಡೆಸಿದ್ದಾರೆ. ಬರುವವರು ಪಕ್ಷಕ್ಕೆ ವಾಪಸ್ ಆಗಬಹುದು ಅಥವಾ ಅಲ್ಲಿರುವಂತಹ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಬರಬಹುದು ಅಂತ ಪರೋಕ್ಷ ಕರೆ ನೀಡಿದ್ದಾರೆ. ಈಗ ತಮ್ಮ ಕಾರ್ಯಕರ್ತರನ್ನ ಉಳಿಸಿಕೊಳ್ಳೋಕೆ ದೇವೇಗೌಡ್ರಾಗಲಿ ಅಥವಾ ಕುಮಾರಸ್ವಾಮಿಯವರು ಏನು ಕ್ರಮ ವಹಿಸ್ತಾರೆ ಕಾದು ನೋಡಬೇಕು.



