ಎರುಡ ಬಾರಿ ರಾಜ್ಯದ ಮುಖ್ಯಮಂತ್ರಿ, ಹಲವು ಬಾರಿ ಶಾಸಕರಾಗು ರಾಜ್ಯ ರಾಜಕಾರಣದಲ್ಲಿ ಪ್ರಬುದ್ಧ ನಾಯಕ ಎನಿಸಿಕೊಂಡಿರುವ ಸಿದ್ದರಾಮಯ್ಯ ಇದೀಗ ಸುದ್ದಿಯಲ್ಲಿದ್ದಾರೆ. ಅದು ಆಸ್ತಿಯ ವಿಚಾರಕ್ಕೆ. ಏನಪ್ಪಾ ವಿಷ್ಯ ಅಂದ್ರೆ. ಸಿಎಂ ಸಿದ್ದರಾಮಯ್ಯ ಅವರಿಗಿಂತಲೂ ಅವರ ಪತ್ನಿ ಪಾರ್ವತಿ ಅವರು ಶ್ರೀಮಂತೆಯಂತೆ. ಚುನಾವಣ ಸಂಧರ್ಭದಲ್ಲಿ ಸಲ್ಲಿಸಲಾದ ಅಫಿಡವಿಟ್ ಆಧಾರದ ಮೇಲೆ ಈ ವಿಚಾರ ಬಹಿರಂಗವಾಗಿದೆ. ಹಾಗಿದ್ದರೆ ಸಿಎಂ ಪತ್ನಿಯ ಆಸ್ತಿ, ಆಭರಣ, ಸಂಪತ್ತಿನ ಬಗ್ಗೆ ಈ ವರದಿಯಲ್ಲಿ ನೋಡೋಣ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಸಿದ್ದರಾಮಯ್ಯ ಅವರು 9,58 ಕೋಟಿ ಚರಾಸ್ತಿ, 9.43 ಕೋಟಿ ಸ್ಥಿರಾಸ್ತಿ ಹೊಂದಿದ್ದರೆ. ಅವರ ಪತ್ನಿ 11.26 ಕೋಟಿ ರೂ. ಚರಾಸ್ತಿ, 19.56 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. 1.29 ಕೋಟಿ ರೂ. ಪಿತ್ರಾರ್ಜಿತವಾಗಿ ಬಂದಿದೆ ಹಾಗೂ 16.24 ಕೋಟಿ ರೂ. ಸಾಲ ಇದೆ ಎನ್ನಲಾಗಿದೆ.
ಜೊತೆಗೆ ಸಿದ್ದರಾಮಯ್ಯ ಅವರೊಂದಿಗೆ 21.86 ಲಕ್ಷ ನಗದು ಠೇವಣಿ ಇದೆ. ಅವರ ಪತ್ನಿ ಪಾರ್ವತಿ ಅವರ ಬಳಿ 6.92 ಕೋಟಿ ರೂ ಠೇವಣಿ ಇದೆ. ಸಿದ್ದರಾಮಯ್ಯ ಅವರ ಬಳಿ 21 ಲಕ್ಷ ಮೌಲ್ಯದ ಚಿನ್ನ, 1.26 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳು ಇವೆ. ಅವರ ಪತ್ನಿ ಬಳಿ 32.40 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು 2.83 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳಿವೆ.
ಇನ್ನು ಸಿಎಂ ಪತ್ನಿ ಪಾರ್ವತಿ ಅವರು ಸುಮಾರು 16.24 ಕೋಟಿ ರೂಪಾಯಿ ಸಾಲ ಹೊಂದಿದ್ದಾರೆ. ಸಿದ್ದರಾಮಯ್ಯ ಅವರ ಒಟ್ಟು ಸಾಲ 6.84 ಕೋಟಿ ರೂಪಾಯಿಗಳಷ್ಟಿದೆ. ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಕೃಷಿ ಭೂಮಿ ಇಲ್ಲ. ಆದರೆ, ಪತ್ನಿ ಪಾರ್ವತಿ ಅವರ ಬಳಿ ಕುಂದಲಹಳ್ಳಿಯಲ್ಲಿ 1.08 ಎಕರೆ, ತೊರಾಯನ ಕಾಟೂರಿನಲ್ಲಿ 7.17 ಎಕರೆ, ವಿಜಯನಗರದಲ್ಲಿ ಕೃಷಿಯೇತರ ಭೂಮಿ ಇದೆ ಎಂದು ಅಫಿಡವಿಟ್ ಮೂಲಕ ತಿಳಿಯಲಾಗಿದೆ.



