ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಲಿರುವ ಕೊನೆಯ ಬಿಗ್ ಬಾಸ್ ಸೀಸನ್ ಇದು ಎಂದು ಬಿಗ್ ಬಾಸ್ ಕನ್ನಡ ಸೀಸನ್ 11 ಅವರಿಗೆ ಕೊನೆಯ ಸೀಸನ್ ಎಂದು ಟ್ವೀಟ್ ಮಾಡುವ ಮೂಲಕ ಬಿಬಿಕೆ 11 ಭರ್ಜರಿ ಟಿಆರ್ಪಿ ಬಂದಾಗ ಟ್ವೀಟ್ ಮಾಡಿದ್ದರು. ಅಭಿಮಾನಿಗಳು ಇದರಿಂದ ಬೇಸರ ಆಗಿದ್ದಂತೂ ನಿಜ. ಆದರೆ ಸುದೀಪ್ ಅವರು ಮತ್ತೆ ಮನಸ್ಸು ಬದಲಾಯಿಸಿ, ಬಿಗ್ ಬಾಸ್ ಶೋಗೆ ವಾಪಸ್ ಬರಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ ಸುದೀಪ್ ಅವರ ನಿರ್ಧಾರ ಬದಲಾಗಿಲಿಲ್ಲ. ಬಿಬಿಕೆ 11 ಫಿನಾಲೆಯ ಹಿಂದಿನ ದಿವಸ ಮತ್ತೊಂದು ಟ್ವೀಟ್ ಮಾಡುವ ಮೂಲಕ ಅದು ತಮ್ಮ ಕೊನೆಯ ಸೀಸನ್ ಎಂದು ಮತ್ತೆ ಸ್ಪಷ್ಟನೆ ಕೊಟ್ಟರು ಸುದೀಪ್ ಅವರ ಈ ನಿರ್ಧಾರ ಅವರ ಅಭಿಮಾನಿಗಳಿಗೆ ಬಹಳ ಬೇಸರ ತಂದಿತ್ತು.
ಕನ್ನಡದಲ್ಲಿ ಬಿಗ್ ಬಾಸ್ ಶೋ ಎಂದ ತಕ್ಷಣ ನೆನಪಿಗೆ ಬರುವುದೇ ಕಿಚ್ಚ ಸುದೀಪ್ ಅವರು. 11 ವರ್ಷಗಳು, 11 ಸೀಸನ್ ಗಳಲ್ಲಿ ಸುದೀಪ್ ಅವರು ಎಷ್ಟು ಅದ್ಭುತವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗಿದ್ದಾರೆ ಎಂದು ಗೊತ್ತೇ ಇದೆ. ಸುದೀಪ್ ಅವರ ಹಾಗೆ ಈ ಕಾರ್ಯಕ್ರಮ ನಡೆಸಿಕೊಡಲು ಬೇರೆ ಕಲಾವಿದರಿಂದ ಆಗುವುದಿಲ್ಲ ಎನ್ನುವುದು ಜನರ ಅಭಿಪ್ರಾಯ. ಆದರೆ ಸುದೀಪ್ ಅವರು ಈ ಮೊದಲೇ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ್ದರು. ಈ ಶೋನ ಬೇರೆ ಯಾರು ನಡೆಸಿಕೊಡೋಕೆ ಆಗೋದಿಲ್ಲ ಅಂತೆಲ್ಲ ಅಂದುಕೊಂಡಿಲ್ಲ ನಾನು, ಬೇರೆಯವರು ನನಗಿಂತಲೂ ಚೆನ್ನಾಗಿ ನಡೆಸಿಕೊಡಬಹುದು ಎಂದು ಹೇಳಿದ್ದರು. ಹಾಗೆಯೇ ಎಲ್ಲರನ್ನು ತಿದ್ದಿಕೊಂಡು ಇನ್ನೆಷ್ಟು ವರ್ಷ ಇರಲಿ ಎಂದು ಹೇಳಿದ್ದರು. ಆದರೂ ಎಲ್ಲೋ ಒಂದು ಕಡೆ ಸುದೀಪ್ ಅವರು ತಮ್ಮ ನಿರ್ಧಾರ ಬದಲಾಯಿಸುತ್ತಾರೆ.

ಮುಂದಿನ ಸೀಸನ್ ನಿರೂಪಣೆ ಮಾಡಬಹುದು ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಹಾಗೆಯೇ ಚಾನೆಲ್ ನವರು ಸಹ ಸುದೀಪ್ ಅವರಿಲ್ಲದೇ ಬಿಗ್ ಬಾಸ್ ಶೋ ಇಲ್ಲ ಎಂದಿದ್ದರು.
ಸುದೀಪ್ ಅವರ ಮನವೊಲಿಸಿ ಮುಂದಿನ ಸೀಸನ್ ಗೆ ಅವರನ್ನು ಖಂಡಿತವಾಗಿಯೂ ಕತೆಯರುತ್ತೇವೆ ಎಂದು ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರು ತಿಳಿಸಿದ್ದರು. ಅದೇ ರೀತಿ ಸತತವಾಗಿ ಸುದೀಪ್ ಅವರು ಮತ್ತೆ ಬಿಗ್ ಬಾಸ್ ಶೋ ಗೆ ಕರೆತರುವ ಪ್ರಯತ್ನ ಮಾಡಿ, ಕೊನೆಗೂ ಸುದೀಪ್ ಅವರನ್ನು ಒಪ್ಪಿಸಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಕೇಳಿ ಬಂದಿತ್ತು. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 12 ರ ನಿರೂಪಣೆ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಆದರೆ ಕೆಲವು ಕಂಡೀಷನ್ ಗಳನ್ನು ಸಹ ಹಾಕಿದ್ದಾರೆ. ಅದೆಲ್ಲವೂ ನಡೆದರೆ ಮಾತ್ರ ಬಿಗ್ ಬಾಸ್ ಶೋ ನಿರೂಪಣೆ ಮಾಡುವುದಾಗಿ ಹೇಳಿದ್ದಾರೆ ಎನ್ನುವ ವಿಷಯ ವೈರಲ್ ಆಗಿತ್ತು.
ಕಿಚ್ಚ ಸುದೀಪ್ ಅವರಿಗೆ ಕಳೆದ ಸೀಸನ್ ಬೇಸರ ಆಗಿತ್ತು ಎನ್ನುವ ವಿಷಯ ಗೊತ್ತೇ ಇದೆ. ಅದೇ ಕಾರಣಕ್ಕೆ ಸುದೀಪ್ ಅವರು ಈ ಶೋ ಇಂದ ಹೊರಗಡೆ ಬರುವ ನಿರ್ಧಾರ ಮಾಡಿರಬಹುದು ಎನ್ನುವ ಮಾತುಗಳು ಸಹ ಕೇಳಿಬಂದಿತ್ತು. ಆದರೆ ಕಿಚ್ಚ ಸುದೀಪ್ ಅವರು ತಮ್ಮ ಕಡೆಯಿಂದ ಬೇರೆ ಉತ್ತರವನ್ನು ಕೊಟ್ಟಿದ್ದರು. ಇನ್ನು ಸುದೀಪ್ ಕಂಡೀಷನ್ ಹಾಕಿದ್ದಾರೆ ಎನ್ನಲಾದ ವಿಚಾರಗಳು ಏನು ಎಂದರೆ.. ಹನ್ನೆರಡನೆಯ ಸೀಸನ್ ನಲ್ಲಿ ಬಿಗ್ ಬಾಸ್ ಮನೆ ತುಂಬಾ ಕಲರ್ ಫುಲ್ ಆಗಿರಬೇಕು, ಇಷ್ಟು ಸೀಸನ್ ಗಿಂತ ಮನೆ ಇನ್ನು ಕಲರ್ ಫುಲ್ ಆಗಿರಬೇಕು. ಕನ್ನಡಕ್ಕೆ ಮೊದಲ ಆದ್ಯತೆ ಕೊಡಬೇಕು, ಬಹುಶಃ ಎಲ್ಲಾ ಸ್ಪರ್ಧಿಗಳು ಕನ್ನಡದವರೇ ಆಗಿರಬೇಕು ಎನ್ನುವುದು ಈ ಕಂಡಿಷನ್ ಅರ್ಥವಿರಬಹುದು. ಕನ್ನಡ ಬಿಗ್ ಬಾಸ್ ನಲ್ಲಿ ಕನ್ನಡವೇ ವೇದಘೋಷ ಆಗಬೇಕು.

ಒಳ್ಳೇ ಲೀಗಲ್ ಟೀಮ್ ಇರಬೇಕು. ವಿವಾದಿತ ಸ್ಪರ್ಧಿಗಳನ್ನ ಸೆಲೆಕ್ಟ್ ಮಾಡಬಾರದು. ಹೆಚ್ಚಾಗಿ ವಿವಾದ ಸೃಷ್ಟಿಸಿಕೊಂಡಿರುವ ಸ್ಪರ್ಧಿಗಳನ್ನೇ ಬಿಗ್ ಬಾಸ್ ಗೆ ಕರೆಸಲಾಗುತ್ತದೆ. ಈ ಸೀಸನ್ ನಲ್ಲಿ ಆ ರೀತಿ ಆಗಬಾರದು ಎಂದು ಐದು ಕಂಡೀಷನ್ ಗಳನ್ನು ಸುದೀಪ್ ಅವರು ಹಾಕಿದ್ದಾರೆ ಎನ್ನಲಾಯಿತು. ಈ ವಿಷಯದ ಬಗ್ಗೆ ಚಾನೆಲ್ ಇಂದ ಮತ್ತು ಸುದೀಪ್ ಅವರಿಂದ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಇದೀಗ ಕಲರ್ಸ್ ಕನ್ನಡ ಮತ್ತು ಕಿಚ್ಚ ಸುದೀಪ್ ಅವರ ಕಡೆಯಿಂದ ಬಿಗ್ ಅಪ್ಡೇಟ್ ಸಿಕ್ಕಿದೆ. ಇಂದು ಕಲರ್ಸ್ ಕನ್ನಡ ವಾಹಿನಿ ಮತ್ತು ಬಿಗ್ ಬಾಸ್ ಟೀಮ್ ಕಡೆಯಿಂದ ತುರ್ತು ಪ್ರೆಸ್ ಮೀಟ್ ನಡೆಸಲಾಗಿದೆ. ಎಂಜಿ ರೋಡ್ ನಲ್ಲಿರುವ ತಾಜ್ ಹೋಟೆಲ್ ನಲ್ಲಿ ಬಿಗ್ ಬಾಸ್ ಸಂಬಂಧಿಸಿದ ಪ್ರೆಸ್ ಮೀಟ್ ನಡೆಸಲಾಗಿದ್ದು, ಅದಕ್ಕೆ ಕಿಚ್ಚ ಸುದೀಪ್ ಅವರು ಬಂದಿದ್ದಾರೆ.
ಕಲರ್ಸ್ ಕನ್ನಡ ವಾಹಿನಿ ಈಗಾಗಲೇ ತಿಳಿಸಿದ ಹಾಗೆ ಅಭಿಮಾನಿಗಳಿಗೆ ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಕಿಚ್ಚ ಸುದೀಪ ಅವರಿಲ್ಲದೇ ಬಿಗ್ ಬಾಸ್ ಇಲ್ಲ, ಅವರನ್ನು ಖಂಡಿತವಾಗಿ ಒಪ್ಪಿಸಿ ಕರೆತರುತ್ತೇವೆ ಎಂದಿತ್ತು ಕಲರ್ಸ್ ಕನ್ನಡ, ಅದೇ ರೀತಿ ಈಗ ಸುದೀಪ್ ಅವರನ್ನು ಒಪ್ಪಿಸಿ, ಮತ್ತೆ ಅವರನ್ನು ಬಿಗ್ ಬಾಸ್ ಶೋ ನಿರೂಪಣೆ ಮಾಡಲು ಕರೆತಂದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗುವ ಹೊಸ ಸೀಸನ್ ಅನ್ನು ಸುದೀಪ್ ಅವರೇ ನಿರೂಪಣೆ ಮಾಡುತ್ತಾರೆ ಎಂದು ಮಾಹಿತಿ ಸಿಕ್ಕಿದ್ದು, ಪ್ರೆಸ್ ಮೀಟ್ ನಲ್ಲಿ ಇದರ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ. ಇನ್ನು ಬಿಗ್ ಬಾಸ್ ಓಟಿಟಿ ಸೀಸನ್ ಮೊದಲು ಶುರುವಾಗುತ್ತಾ ಅಥವಾ ಟಿವಿ ಸೀಸನ್ ಶುರುವಾಗುತ್ತಾ ಎಂದು ಕಾದು ನೋಡಬೇಕಿದೆ. ಸುದೀಪ್ ಅವರು ನಿರೂಪಣೆ ಮಾಡುವುದು ಎಲ್ಲಾ ಫ್ಯಾನ್ಸ್ ಗೆ ಬಹಳ ಖುಷಿಯ ವಿಚಾರ ಆಗಿದೆ.
ಓಟಿಟಿ ಸೀಸನ್ 2 ವರ್ಷಗಳ ಹಿಂದೆ ನಡೆದಿತ್ತು, ಅದನ್ನು ಕೂಡ ಸುದೀಪ್ ಅವರೇ ನಿರೂಪಣೆ ಮಾಡಿದ್ದರು, 10ನೇ ಸೀಸನ್ ವೇಳೆ ಮತ್ತು 11ನೇ ಸೀಸನ್ ವೇಳೆ ಓಟಿಟಿ ಸೀಸನ್ ನಡೆದಿರಲಿಲ್ಲ. ಹಾಗಾಗಿ ಈ ವರ್ಷ ಮೊದಲು ಓಟಿಟಿ ಸೀಸನ್ ನಡೆಸಬೇಕು ಎಂದು ನಿರ್ಧರಿಸಿ ಬಳಿಕ ಟಿವಿ ಸೀಸನ್ ಶುರು ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.



