ನಟಿ ದಿವ್ಯ ಉರುಡುಗ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಿನಗಾಗಿ ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ರಚನಾ ಪಾತ್ರದ ಮೂಲಕ ಮತ್ತೊಮ್ಮೆ ಕಿರುತೆರೆಗೆ ಬಂದು ಜನರಿಗೆ ತುಂಬಾ ಹತ್ತಿರ ಆಗಿದ್ದಾರೆ. ದಿವ್ಯ ಉರುಡುಗ ಅವರ ಈ ಪಾತ್ರ ಹಾಗೂ ಧಾರಾವಾಹಿಯ ಕಥೆ ಜನರಿಗೆ ತುಂಬಾ ಹತ್ತಿರ ಅನ್ನಿಸಿದೆ. ಸೂಪರ್ ಸ್ಟಾರ್ ಪಾತ್ರ ದಿವ್ಯ ಅವರಿಗೆ ಹೇಳಿ ಮಾಡಿಸಿದ ಹಾಗಿದೆ ಅಂತಾರೆ ದಿವ್ಯ ಅವರ ಫ್ಯಾನ್ಸ್. ಈ ದಿವ್ಯ ಉರುಡುಗ ಅವರು ಈಗ ತುಂಬಾ ಖುಷಿಯಾಗಿದ್ದಾರೆ, ಅದಕ್ಕೆ ಕಾರಣ ಅವರ ಮನೆಗೆ ಬಂದಿರುವ ಹೊಸ ಫ್ಯಾಮಿಲಿ ಮೆಂಬರ್. ಆ ಮೆಂಬರ್ ಗೆ ಒಳ್ಳೇ ಹೆಸರು ಕೂಡ ಇಟ್ಟಿದ್ದಾರೆ ದಿವ್ಯ. ಹಾಗಿದ್ದಲ್ಲಿ ಅವರು ಯಾರು ಎಂದು ತಿಳಿಯೋಣ ಬನ್ನಿ..

ದಿವ್ಯ ಉರುಡುಗ ಅವರ ಮನೆಗೆ ಬಂದಿರುವ ಹೊಸ ಅತಿಥಿ ಮತ್ಯಾರು ಅಲ್ಲ, ದಿವ್ಯ ಅವರು ಇದೀಗ ಹೊಸ ಕಾರ್ ಖರೀದಿ ಮಾಡಿದ್ದಾರೆ. ದಿವ್ಯ ಅವರು ಟಾಟಾ ಕಂಪನಿಯ ನೆಕ್ಸನ್ ಕಾರ್ ಖರೀದಿ ಮಾಡಿದ್ದು, ತಮ್ಮ ಹೊಸ ಕಾರ್ ಗೆ ಬಘಿರಾ ಎಂದು ಹೆಸರನ್ನು ಇಟ್ಟಿದ್ದಾರೆ. ದಿವ್ಯ ಅವರು ಖರೀದಿ ಮಾಡಿರುವ ಈ ಕಾರ್ ನ ಬೆಲೆ 12 ಲಕ್ಷ ರೂಪಾಯಿ ಆಗಿದ್ದು, ಕಾರ್ ನ ಫೋಟೋವನ್ನು ತಾವು ಕಾರ್ ಜೊತೆಗಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ದಿವ್ಯ ಅವರ ಜೊತೆಗೆ ಅವರ ಕುಟುಂಬದ ಸದಸ್ಯರು ಹಾಗೂ ಅರವಿಂದ್ ಕೆ.ಪಿ ಅವರನ್ನು ಕಾಣಬಹುದು.
ದಿವ್ಯ ಅವರು ಹೊಸ ಕಾರ್ ಖರೀದಿ ಮಾಡಿರುವುದಕ್ಕೆ ನೆಟ್ಟಿಗರು ಹಾಗೂ ಅವರ ಅಭಿಮಾನಿಗಳು ದಿವ್ಯ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಇನ್ನು ಹೆಚ್ಚಿನ ಸಮೃದ್ಧಿ ದಿವ್ಯ ಅವರ ಜೀವನಕ್ಕೆ ಬರಲಿ ಎಂದು ಹಾರೈಸುತ್ತಿದ್ದಾರೆ. ದಿವ್ಯ ಅವರು ಅರವಿಂದ್ ಅವರನ್ನು ಜೊತೆಯಾಗಿ ನೋಡುವುದು ಎಲ್ಲರಿಗೂ ಸಂತೋಷ. ಅವರಿಬ್ಬರ ಅಭಿಮಾನಿಗಳು ಇಬ್ಬರ ಮದುವೆ ನೋಡಲು ಕಾಯುತ್ತಿದ್ದಾರೆ.. ಬೇಗ ಗುಡ್ ನ್ಯೂಸ್ ಕೊಡಿ ಎಂದು ದಿವ್ಯ ಅರವಿಂದ್ ಜೋಡಿಗೆ ಬೇಡಿಕೆಯನ್ನು ಇಡುತ್ತಿದ್ದಾರೆ. ಆದರೆ ಈ ಜೋಡಿ ಮಾತ್ರ ಮದುವೆಯ ಬಗ್ಗೆ ಇನ್ನು ಕೂಡ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡ ಹಾಗೆ ಕಾಣುತ್ತಿಲ್ಲ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ದಿವ್ಯ ಉರುಡುಗ ಅವರು ಪ್ರಸ್ತುತ ನಿನಗಾಗಿ ಧಾರಾವಾಹಿಯ ಮೂಲಕ ಪ್ರತಿದಿನ ತಮ್ಮ ಅಭಿಮಾನಿಗಳಿಗೆ ದರ್ಶನ ಕೊಡುತ್ತಿದ್ದಾರೆ. ಇದಕ್ಕಿಂತ ಮೊದಲು ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು ಸಹ, ದಿವ್ಯ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಬಿಗ್ ಬಾ ಶೋ. ಈ ಶೋನಲ್ಲಿ ಎಲ್ಲರಿಗೂ ಇಷ್ಟವಾಗಿದ್ದ ಸ್ಪರ್ಧಿ ಆಗಿದ್ದರು ದಿವ್ಯ. ಇವರು ಬಿಗ್ ಬಾಸ್ ಟೈಟಲ್ ಗೆದ್ದು, ವಿನ್ನರ್ ಆಗದೇ ಹೋದರು ಸಹ, ದಿವ್ಯ ಅವರಿಗೆ ಜನರ ಪ್ರೀತಿ ಸಿಕ್ಕಿತು. ಜನರು ಇವರೇ ವಿನ್ನರ್ ಆಗಬೇಕು ಎಂದು ಸಹ ಬಯಸಿದರು, ಆದರೆ ಅದು ಸಾಧ್ಯವಾಗದೆ ಹೋದಾಗ, ದಿವ್ಯ ಅವರಿಗೆ ಅಪರಿಮಿತ ಸಪೋರ್ಟ್ ಅನ್ನು ಅಂತೂ ನೀಡುತ್ತಾಳೆ ಇದ್ದಾರೆ.
ಬಿಗ್ ಬಾಸ್ ಶೋ ಇಂದಲೇ ದಿವ್ಯ ಅವರ ಬದುಕಿಗೆ ಅರವಿಂದ್ ಅವರ ಆಗಮನ ಆಗಿದ್ದು. ಬೈಕರ್ ಆಗಿರೋ ಅರವಿಂದ್, ದಿವ್ಯ ಅವರ ಸ್ನೇಹದಿಂದ ಬಹಳ ಸಂತೋಷವಾಗಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಇವರಿಬ್ಬರ ಬಾಂಡಿಂಗ್, ಸ್ನೇಹ ಪ್ರೀತಿ ಇದೆಲ್ಲವೂ ಜನರಿಗೆ ತುಂಬಾ ಇಷ್ಟವಾಗಿತ್ತು. ಇದ್ರೆ ಈ ಜೋಡಿ ಥರ ಪ್ರೀತಿ ಮಾಡಿಕೊಂಡು ಇರಬೇಕು ಎಂದು ಎಲ್ಲರೂ ಬಯಸಿದ್ದರು. ಇವರಿಬ್ಬರ ನಡುವೆ ಇದ್ದ ಸ್ನೇಹ ಪ್ರೀತಿ ಅಷ್ಟರ ಮಟ್ಟಿಗೆ ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿತ್ತು. ಬಿಗ್ ಬಾಸ್ ಇಂದ ಬಂದ ನಂತರ ಒಂದು ಬ್ರೇಕ್ ಪಡೆದಿದ್ದ ದಿವ್ಯ ಉರುಡುಗ ಈಗ ನಿನಗಾಗಿ ಧಾರಾವಾಹಿಯ ಮೂಲಕ ಮತ್ತೆ ಮನೆಮಾತಾಗಿದ್ದಾರೆ.