ಸೋಶಿಯಲ್ ಮೀಡಿಯಾದಲ್ಲಿ ಈಗ ಹಲವು ಸುದ್ದಿಗಳು ವೈರಲ್ ಆಗುತ್ತಲೇ ಇರುತ್ತದೆ. ಕೆಲವು ಸುದ್ದಿಗಳು ನಿಜವಾದರೆ, ಇನ್ನು ಕೆಲವು ಸುದ್ದಿಗಳು ಸುಳ್ಳು. ಜನರು ತಮಗೆ ಅನ್ನಿಸಿದ್ದನ್ನು ಹಿಂದೂ ಮುಂದು ಯೋಚ್ನೆ ಮಾಡದೆ ಏನೋ ಒಂದನ್ನು ಹೇಳಿಬಿಡುತ್ತಾರೆ. ಇಂಥ ಮಾತುಗಳು ಒಂದಾ ಎರಡಾ, ಬಹುತೇಕ ಸೆಲೆಬ್ರಿಟಿಗಳ ವಿಷಯದಲ್ಲಿ ಈ ಥರ ಒಂದಲ್ಲ ಒಂದು ಹೇಳಿಕೆಗಳು ವೈರಲ್ ಆಗುತ್ತಲೇ ಇರುತ್ತದೆ. ಅದರಲ್ಲೂ ಮದುವೆಯಾದವರ ಬಗ್ಗೆ ಅವರ ವೈಯಕ್ತಿಕ ಜೀವನದ ಬಗ್ಗೆ ಜನರು ತಮಗೆ ತೋಚಿದ ಹಾಗೆ ಮಾತನಾಡುವುದು ತಪ್ಪು. ಯಾವುದೇ ಗಂಡ ಹೆಂಡತಿ ದೂರ ಆಗುವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅಂದ್ರೆ ಅದು ಅವರ ವೈಯಕ್ತಿಕ ವಿಷಯ..

ಅವರಿಬ್ಬರ ನಡುವೆ ಏನು ನಡೆದಿದೆ ಅನ್ನೋದು ಅವರಿಗೆ ಮಾತ್ರ ಗೊತ್ತಿರುತ್ತದೆ. ಮನಸ್ತಾಪ ಏತಕ್ಕೆ ಬಂತು, ಜಗಳ ಏತಕ್ಕೆ ಆಯ್ತು.. ಈ ಥರದ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು? ಇದೆಲ್ಲವೂ ಅವರಿಬ್ಬರಿಗೆ ಮಾತ್ರ ಗೊತ್ತಿರುತ್ತದೆ. ಆದರೆ ಜನರು ಹಲವು ಸಾರಿ ಅವರ ದಾಂಪತ್ಯ ಜೀವನದ ಬಗ್ಗೆ ಅರಿವಿಲ್ಲದೇ, ಕೇವಲ ಸೋಶಿಯಲ್ ಮೀಡಿಯಾ ನೋಡಿ ಏನೋ ಇದೆ, ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲವೇನೋ ಎಂದು ತಾವು ಸರ್ಟಿಫಿಕೇಟ್ ಕೊಟ್ಟುಬಿಡುತ್ತಾರೆ. ಆದರೆ ಅಸಲಿ ವಿಷಯ ಬೇರೆಯೇ ಇರುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಅಂಥದ್ದೇ ಒಂದು ಘಟನೆ ಬಗ್ಗೆ ಇಂದು ನಿಮಗೆ ತಿಳಿಸಲಿದ್ದೇವೆ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕನ್ನಡದ ಮತ್ತೊಬ್ಬ ಸೆಲೆಬ್ರಿಟಿ ಜೋಡಿ ವಿಚ್ಛೇದನ ಪಡೆಯುವ ಸೂಚನೆ ಇದೆ ಎನ್ನುವ ಮಾತು ಕೇಳಿಬರುತ್ತಿದೆ. ಆ ಜೋಡಿ ಮಾಸ್ಟರ್ ಆನಂದ್ ಹಾಗು ಯಶಸ್ವಿನಿ ಜೋಡಿ. ಹೌದು, ಇವರಿಬ್ಬರ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಆನಂದ್ ಅವರು ತಮ್ಮ ಪತ್ನಿ ಯಶಸ್ವಿನಿ ಅವರನ್ನು ತುಂಬಾ ಪ್ರೀತಿಸುತ್ತಾರೆ. ಕಾರ್ಯಕ್ರಮಗಳಲ್ಲಿ ಅವರು ಪತ್ನಿಯ ಬಗ್ಗೆ ಪ್ರೀತಿಯಿಂದ ಮಾತನಾಡೋದನ್ನ ನಾವೆಲ್ಲರೂ ನೋಡಿದ್ದೇವೆ. ಆನಂದ್ ಹಾಗೂ ಯಶಸ್ವಿನಿ ಅವರ ಮಗಳು ವಂಶಿಕಾ ನನ್ನಮ್ಮ ಸೂಪರ್ ಸ್ಟಾರ್ ಶೋ ಇಂದ ಫೇಮಸ್ ಆದ ನಂತರ ಯಶಸ್ವಿನಿ ಸಹ ಫೇಮಸ್ ಆದರು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಯಶಸ್ವಿನಿ ಹಾಗೂ ವಂಶಿಕಾ ಅವರ ರೀಲ್ಸ್ ಹಾಗೂ ವಿಡಿಯೋಗಳು ಎಷ್ಟು ವೈರಲ್ ಆಗುತ್ತದೆ ಎಂದು ನಮಗೆಲ್ಲಾ ಗೊತ್ತೇ ಇದೆ. ಇವರಿಬ್ಬರು ಜೊತೆಯಾಗಿ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಯಶಸ್ವಿನಿ ಅವರು ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದು, ವರ್ಕೌಟ್ ಮಾಡುತ್ತಿರುವ ವಿಡಿಯೋಗಳನ್ನು ಸಹ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಅದೇ ರೀತಿ ಮಿನಿ ಸ್ಕರ್ಟ್ ಹಾಕಿ ರೀಲ್ಸ್ ಮಾಡಿರುವ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದರು. ಅದನ್ನು ನೋಡಿ ನೆಟ್ಟಿಗರೊಬ್ಬರು, ಇನ್ನೊಂದು ವಿಚ್ಛೇದನದ ಕೇಸ್ ರೆಡಿ. ಆಗೋ ದಾರಿಯಲ್ಲಿದೆ ಎಂದು ಕಾಮೆಂಟ್ಸ್ ಬರೆದಿದ್ದಾರೆ..
ಈ ಕಾಮೆಂಟ್ ಇಂದ ಹಲವರಿಗೆ ಅಚ್ಚರಿ ಅನ್ನಿಸಿದ್ದಂತೂ ನಿಜ. ಇದಕ್ಕೆ ಖುದ್ಧು ಯಶಸ್ವಿನಿ ಅವರೇ ಉತ್ತರ ಕೊಟ್ಟಿದ್ದು, ಖಂಡಿತ ಇಲ್ಲ ಮೇಡಂ, ನನಗೆ ನನ್ನ ಮಕ್ಕಳಿಗಿಂತ ಗಂಡನ ಮೇಲೆ ಪ್ರೀತಿ ಜಾಸ್ತಿ ಎಂದು ಬರೆದಿದ್ದಾರೆ. ಈ ಒಂದು ಕಾಮೆಂಟ್ ಇಂದ ಜನರ ಬಾಯಿ ಮುಚ್ಚಿಸಿದ್ದಾರೆ. ಯಶಸ್ಸಿನಿ ಅವರು ಮಿನಿ ಸ್ಕರ್ಟ್ ಹಾಕೊಳ್ಳೋದು ಆನಂದ್ ಅವರಿಗೆ ಏನು ಸಮಸ್ಯೆ ಇಲ್ಲ, ಅಂಥದ್ರಲ್ಲಿ ಜನರಿಗೆ ಏನು ಸಮಸ್ಯೆ ಎನ್ನುವ ಮಾತು ಕೇಳಿಬರುತ್ತಿದೆ. ಒಟ್ಟಿನಲ್ಲಿ ಜನರು ಹೀಗೆ ಸೆಲೆಬ್ರಿಟಿಗಳ ಬದುಕಿನ ಬಗ್ಗೆ ಬೇಡದ ಚರ್ಚೆಗಳನ್ನು ಮಾಡುತ್ತಾ ಕೂರುವ ಬದಲು, ತಮ್ಮ ಬದುಕಿನ ಕಡೆಗೆ ಗಮನ ಕೊಟ್ಟರೆ ಅವರು ಒಳ್ಳೆಯ ಸ್ಥಾನಕ್ಕೆ ತಲುಪಬಹುದು.



