ಚಂದನವನದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಮೊನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿಕೊಂಡರು. ರಾಜ್ಯಾದ್ಯಂತ ಫ್ಯಾನ್ಸ್ ತಮ್ಮ ನೆಚ್ಚಿನ ನಟನಿಗೆ ಶುಭಾಶಯಗಳನ್ನು ಕೋರಿದ್ದಾರೆ. ಈ ಎಲ್ಲಾ ಬ್ಯುಸಿ ಕೆಲಸಗಳ ನಡುವೆ ಆ್ಯಕ್ಷನ್ ಪ್ರಿನ್ಸ್ ತಮ್ಮ ಅಣ್ಣನ ಮಗ ರಾಯನ್ ಸರ್ಜಾಗೆ ಡ್ಯಾನ್ಸ್ ಹೇಳಿ ಕೊಟ್ಟಿದ್ದಾರೆ. ಧ್ರುವ ಸರ್ಜಾ ಮತ್ತು ರಾಯನ್ ಒಟ್ಟಿಗೆ ಸ್ಟೆಪ್ಸ್ ಹಾಕಿರುವ ಕ್ಯೂಟ್ ಡ್ಯಾನ್ಸ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

https://www.instagram.com/reel/CyD2iSrP9YM/?utm_source=ig_web_copy_link
ಮನೆಯಲ್ಲಿ ಧ್ರುವ ಸರ್ಜಾ ಅವರು ತಮ್ಮ ಅಣ್ಣ ಚಿರಂಜೀವಿ ಸರ್ಜಾ ಅವರ ಮಗ ರಾಯನ್ಗೆ ಡ್ಯಾನ್ಸ್ ಹೇಳಿಕೊಟ್ಟಿದ್ದಾರೆ. ಪೊಗರು ಸಿನಿಮಾದಲ್ಲಿರುವ ಕರಾಬು.. ಕರಾಬು ಸಾಂಗ್ನಲ್ಲಿ ಬರೋ ಸಿಗ್ನೇಚರ್ ಸ್ಟೆಪ್ಸ್ ಅನ್ನು ರಾಯನ್ಗೆ ಧ್ರುವ ಹೇಳಿ ಕೊಟ್ಟಿದ್ದಾರೆ. ಡ್ಯಾನ್ಸ್ ಮಾಡುವಾಗ ರಾಯನ್ ಫೋಟೋ ತೆಗೆಯುವಂತೆ ಹೇಳಿದ್ದು ಇದಕ್ಕೆ ಧ್ರುವ ತಕ್ಷಣ ರಾಯನ್ನನ್ನು ಎತ್ತಿಕೊಂಡು ಮೇಲಕ್ಕೆ ಹಾರಿಸಿ ಖುಷಿ ವ್ಯಕ್ತಪಡಿಸಿದ್ದಾರೆ. ಚಿಕ್ಕಪ್ಪ ಪ್ರೀತಿಯಲ್ಲಿ ರಾಯನ್ ಫುಲ್ ಖುಷಿಯಾಗಿದ್ದಾನೆ.
ವಿಡಿಯೋವನ್ನು ಮೇಘನಾ ರಾಜ್ ಅವರು ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ನೋಡಿ ಚಿಕ್ಕಪ್ಪನಿಂದ ರಾಯನ್ ಡ್ಯಾನ್ಸ್ ಅನ್ನು ಹೇಳಿಸಿಕೊಳ್ಳುತ್ತಿದ್ದಾನೆ, ಹ್ಯಾಪಿ ಬರ್ತ್ಡೇ ಚಿಕ್ಕಪ್ಪ ಎಂದು ಟ್ಯಾಗ್ ಲೈನ್ ಬರೆದಿದ್ದಾರೆ. ಇನ್ನು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಕೆ.ಡಿ ಹಾಗೂ ಮಾರ್ಟಿನ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದು,ಇದರೊಂದಿಗೆ ಹಲವು ಹೊಸ ಸಿನಿಮಾಗಳು ಘೋಷಣೆಯಾಗಿವೆ.