ಮಂಗಳವಾರವಷ್ಟೇ ನಮ್ಮ ಆರ್ಸಿಬಿ ತಂಡ ಐಪಿಎಲ್ ನಲ್ಲಿ ಕಪ್ ಗೆದ್ದಿತು. 18 ವರ್ಷಗಳ ಕಾಯುವಿಕೆ ನಂತರ ಬಂದ ಈ ಗೆಲುವು ಅಭಿಮಾನಿಗಳಲ್ಲಿ ಅತಿಹೆಚ್ಚು ಉತ್ಸಾಹವನ್ನು ತಂದಿತು. ಮೊನ್ನೆ ಅಹಮದಾಬಾದ್ ನಲ್ಲಿ ಪಂದ್ಯ ನಡೆದು ಕಪ್ ಗೆದ್ದ ನಂತರ, ನಿನ್ನೆ ಇಡೀ ತಂಡ ಬೆಂಗಳೂರಿಗೆ ಬಂದು ಅಭಿಮಾನಿಗಳ ಜೊತೆಗೆ ಸೆಲೆಬ್ರೇಟ್ ಮಾಡುವ ಪ್ಲಾನ್ ಹೊಂದಿತ್ತು. ಓಪನ್ ಬಸ್ ಪರೇಡ್ ಎಲ್ಲವೂ ಪ್ಲಾನ್ ಆಗಿತ್ತು. ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಅಭಿಮಾನಿಗಳ ಜೊತೆಗೆ ಸೆಲೆಬ್ರೇಟ್ ಮಾಡುವ ಪ್ಲಾನ್ ಹೊಂದಿತ್ತು, ಆದರೆ ನಡೆದಿದ್ದೆ ಬೇರೆ. ಆರ್ಸಿಬಿಯ ಇಡೀ ತಂಡ ಬೆಂಗಳೂರಿಗೆ ಬಂದು, ತಾಜ್ ವೆಸ್ಟನ್ಡ್ ಹೋಟೆಲ್ ನಲ್ಲಿ ಇದ್ದು, ಮಧ್ಯಾಹ್ನದ ವೇಳೆಗೆ ವಿಧಾನಸೌಧ ತಲುಪಿತು. ಅಲ್ಲಿ ಸಿಎಂ ಹಾಗೂ ಡಿಸಿಎಂ ಸೇರಿದಂತೆ ಎಲ್ಲರೂ ಆರ್ಸಿಬಿ ತಂಡದ ಆಟಗಾರರಿಗೆ ಸನ್ಮಾನಿಸಿದರು.
ಇಲ್ಲಿಯವರೆಗೂ ಎಲ್ಲವೂ ಚೆನ್ನಾಗಿಯೇ ನಡೆಯಿತು. ಆದರೆ ನಂತರ ನಡೆದಿದ್ದೆ ದುರಂತ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜನಸಾಗರವೇ ನೆರೆದಿತ್ತು. ಭಾರತದ ಎಲ್ಲೆಡೆ ಇಂದ ಅಭಿಮಾನಿಗಳು ಬಂದು, ಆಟಗಾರರನ್ನು ನೋಡಲು ಮತ್ತು ಕಪ್ ಅನ್ನು ಕಣ್ಣುತುಂಬಿಕೊಳ್ಳಲು ಕಾತುರರಾಗಿದ್ದರು, ಆದರೆ ನೂಕು ನುಗ್ಗಲಿನಲ್ಲಿ ದುರಂತವೇ ನಡೆದು ಹೋಯಿತು. ಸುಮಾರು 12 ಜನರು ಈ ಗಲಾಟೆಯಲ್ಲಿ ಪ್ರಾಣ ಕಳೆದುಕೊಂಡರು, 10 ಕ್ಕಿಂತ ಹೆಚ್ಚಿನ ಜನರು ಕೈಕಾಲು ಮುರಿದು ಕೊಂಡಿದ್ದಾರೆ, 50 ಕ್ಕಿಂತ ಹೆಚ್ಚು ಜನರಿಗೆ ಗಾಯಗಳಾಗಿವೆ. ಇದೆಲ್ಲವೂ ಆಗಿದ್ದಕ್ಕೆ ಕಾರಣ ಸರಿಯಾದ ವ್ಯವಸ್ಥೆ ಇಲ್ಲದೇ ಇದ್ದಿದ್ದು. ಹೌದು ಸರ್ಕಾರ ಆಗಲಿ, ಆರ್ಸಿಬಿ ಮ್ಯಾನೇಜ್ಮೆಂಟ್ ಆಗಲಿ ಅಭಿಮಾನಿಗಳು ಸ್ಟೇಡಿಯಂ ಗೆ ಬರುವ ಬಗ್ಗೆ ಸರಿಯಾದ ವ್ಯವಸ್ಥಿತ ಮಾರ್ಗವನ್ನು ನಿರ್ಮಿಸಲಿಲ್ಲ. ಎಲ್ಲರಿಗೂ ಉಚಿತ ಎಂಟ್ರಿ ಎಂದು ಹೇಳಿದ್ದು, ಜನರ ಖುಷಿಯನ್ನು ಹೆಚ್ಚಿಸಿತ್ತು..

ಲಕ್ಷಾಂತರ ಜನರು ಆರ್ಸಿಬಿ ತಂಡವನ್ನ ನೋಡಲು ಸ್ಟೇಡಿಯಂ ಬಳಿ ಬಂದಿದ್ದರು, ಆದರೆ ಯಾರಿಗೂ ಕೂಡ ಸರಿಯಾಗಿ ಹೋಗಲು ಆಗಲಿಲ್ಲ. ಸೆಲೆಬ್ರಿಟಿಗಳಿಗೆ ಕೂಡ ಸ್ಟೇಡಿಯಂ ಒಳಗೆ ಹೋಗುವುದಕ್ಕೆ ಕಷ್ಟವಾಗಿತ್ತು. ಅಲ್ಲಿನ ಭೀಕರ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ಅನೇಕ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಇದೀಗ ಸಂಗೀತ ಕಾರ್ಯಕ್ರಮದ ಮೂಲಕ ಫೇಮಸ್ ಆಗಿರುವ ಹಾಗೆಯೇ ಸೋಷಿಯಲ್ ಮೀಡಿಯಾ ಇಂದ ಹೆಸರು ಮಾಡಿರುವ ಗಣೇಶ್ ಕಾರಂತ್ ಅವರು ಅಂದು ನಡೆದ ಇನ್ನು ಕೆಲವು ಬೇಸರದ ಘಟನೆಗಳ ಬಗ್ಗೆ ತಿಳಿಸಿದ್ದು, ಇದೀಗ ಈ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಘಟನೆಗಳ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ್ದಾರೆ ಗಣೇಶ್ ಕಾರಂತ್. ಹೆಣ್ಣುಮಕ್ಕಳಿಗೆ ಆದ ತೊಂದರೆ ಬಗ್ಗೆ ತಿಳಿಸಿದ್ದಾರೆ..
ಮೊನ್ನೆ ಆದ ಕಾಲ್ತುಳಿತ, ಅದರಿಂದ ಆದ ತೊಂದರೆಗಳು, ನೋವು ಇದೆಲ್ಲವೂ ಒಂದು ಕಡೆ.. ಮತ್ತೊಂದು ಕಡೆ ಜನರು ಸರ್ಕಾರವನ್ನು, ಆರ್ಸಿಬಿ ಮ್ಯಾನೇಜ್ಮೆಂಟ್ ಅನ್ನು ಬಯ್ಯುತ್ತಿದ್ದಾರೆ. ಅಷ್ಟು ಆತುರದಲ್ಲಿ ಕಡಿಮೆ ಸಮಯದಲ್ಲಿ ಸೆಲೆಬ್ರೇಟ್ ಮಾಡುವ ಅವಶ್ಯಕತೆ ಏನಿತ್ತು? ಹಿಂದಿನ ದಿನ ರಾತ್ರಿ ಕಪ್ ಗೆದ್ದು, ಮರುದಿನ ಈ ಎಲ್ಲಾ ಸೆಲೆಬ್ರೇಷನ್ ಗಳು ಆಗಬೇಕು ಎಂದರೆ, ಪೊಲೀಸರಿಗೆ ಸಿಬ್ಬಂದಿಗಳಿಗೆ ಎಲ್ಲವನ್ನು ಪ್ರಿಪೇರ್ ಮಾಡಿಕೊಳ್ಳಲು ಸಾಕಷ್ಟು ಸಮಯ ಕೂಡ ಇರಲಿಲ್ಲ, 15 ಗಂಟೆ ಸಮಯದಲ್ಲಿ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಬೇಕಿತ್ತು. ಇನ್ನು ಕ್ರೇಜ್ ಹೊಂದಿದ್ದ ಜನರು, ಲಕ್ಷಗಟ್ಟಲೇ ಧಾವಿಸಿ ಬಂದರು ತಮ್ಮ ಮೆಚ್ಚಿನ ತಂಡವನ್ನು ನೋಡುವ ಸಲುವಾಗಿ..ಆದರೆ ಈ ರೀತಿಯ ಸೂತಕದ ಛಾಯೆ ಮೂಡಿದ್ದು ಬೇಸರದ ವಿಷಯ ಆಗಿದೆ. ಇಲ್ಲಿ ನಡೆದ ಘಟನೆಗಳ ಜೊತೆಗೆ ಶಾಕ್ ಆಗುವಂಥ ಕೆಲವು ಸನ್ನಿವೇಶಗಳು ಕೂಡ ನಡೆದಿದೆ..
Kannada baroru just keli
Listen this if u know kannada
Civic sense and common sense annodu joke eh country li pic.twitter.com/cS6H35yY55
— RAJEEV ಶ್ರೀVATSA (@Srivatsa_Tweetz) June 4, 2025ಗಣೇಶ್ ಕಾರಂತ್ ಅವರು ಅಂಥದ್ದೊಂದು ಘಟನೆ ಬಗ್ಗೆ ತಿಳಿಸಿದ್ದಾರೆ. ಅಷ್ಟಕ್ಕೂ ಆಗಿರುವುದು ಏನು ಎಂದರೆ.. ಗಣೇಶ್ ಕಾರಂತ್ ಅವರಿಗೆ ಆ ಘಟನೆ ನಡೆದ ದಿವಸ ಅವರ ಫ್ರೆಂಡ್ ಒಬ್ಬರು ಕಾಲ್ ಮಾಡಿ, ಒಂದು ವಿಷಯ ತಿಳಿಸಿದರು.. ಅದು ಏನು ಎಂದರೆ, ಅವರ ಸ್ನೇಹಿತರ ಸಂಬಂಧಿಕರ ಹುಡುಗಿ ಒಬ್ಬಳು, ಆರ್ಸಿಬಿ ತಂಡವನ್ನು ನೋಡುವ ಸಲುವಾಗಿ, ಸೆಲೆಬ್ರೇಷನ್ ನಲ್ಲಿ ಪಾಲ್ಗೊಳ್ಳಲು ಚಿನ್ನಸ್ವಾಮಿ ಸ್ಟೇಡಿಯಂ ಗೆ ಹೋದಾಗ, ಅಲ್ಲಿ ನಡೆಯುತ್ತಿದ್ದ ಗಲಭೆ ವೇಳೆ, ಕೆಲವು ಕೆಟ್ಟ ಮನಸ್ಸಿನ ಜನರು ಆ ಹುಡುಗಿಯ ಬಟ್ಟೆಯನ್ನು ಹರಿದು, ಮುಟ್ಟಬಾರದ ಜಾಗಗಳಲ್ಲಿ ಮುಟ್ಟಿ ತೊಂದರೆ ಕೊಟ್ಟಿದ್ದಾರಂತೆ. ಕೊನೆಗೆ ಆ ಹುಡುಗಿ ಅಳುತ್ತಾ ಮನೆ ತಲುಪಿದೆ. ಸಿಕ್ಕಿದ್ದೇ ಚಾನ್ಸ್ ಎಂದು ಈ ರೀತಿಯ ಕೆಲಸಗಳನ್ನು ಮಾಡೋ ಕೆಟ್ಟ ಮನಸ್ಸಿನ ವ್ಯಕ್ತಿಗಳು ಕೂಡ ಇದ್ದಾರೆ, ಇಂಥ ಘಟನೆಗಳು ನಡೆದಿದೆ ಎಂದು ಗಣೇಶ್ ಕಾರಂತ್ ತಿಳಿಸಿದ್ದಾರೆ.

ಮೊನ್ನೆ ನಡೆದ ಘಟನೆಯನ್ನು ಗಮನಿಸಿದರೆ ಎಲ್ಲಾ ಕಡೆ ಆ ವ್ಯವಸ್ಥೆಯೇ ತಾಂಡವ ಆಡುತ್ತಿದೆ ಎನ್ನಬಹುದು. 11 ಜನ ಪ್ರಾಣ ಕಳೆದುಕೊಂಡಿರುವುದು ಸಾಮಾನ್ಯವಾದ ವಿಷಯ ಅಥವಾ ಕಡೆಗಣಿಸುವ ಘಟನೆ ಅಂತೂ ಅಲ್ಲ. ಇದರ ಜೊತೆಗೆ ನಮ್ಮ ಜನರು ಕೂಡ ಬಹಳ ಹುಷಾರಾಗಿ ಇರಬೇಕು, ತಮ್ಮ ತಮ್ಮ ಪ್ರಾಣಕ್ಕಿಂತ ಇನ್ನೇನು ದೊಡ್ಡದಲ್ಲ, ಮನೆಯನ್ನು ತಮ್ಮ ಬಗ್ಗೆ ಯೋಚನೆ ಮಾಡುವ ಕುಟುಂಬದವರು ಇರುತ್ತಾರೆ ಅನ್ನೋದನ್ನ ಕೂಡ ಜನರು ಅರ್ಥ ಮಾಡಿಕೊಳ್ಳಬೇಕು. ಹುಚ್ಚು ಅಭಿಮಾನದಲ್ಲಿ ಹೀಗೆಲ್ಲಾ ಮಾಡಿಕೊಳ್ಳಬಾರದು. ಅಭಿಮಾನಿಗಳು ಮರದ ಮೇಲೆ ಹತ್ತುವುದು, ಕಂಬದ ಮೇಲೆ ಹತ್ತುವುದು ಇಂಥ ಹುಚ್ಚಾಟಗಳು ಸಹ ನಡೆದಿದೆ. ಈ ವರ್ತನೆ ಇದ್ದಾಗ ಪೊಲೀಸರು ತಾನೇ ಹೇಗೆ ಜನರನ್ನ ಕಂಟ್ರೋಲ್ ಮಾಡೋದಕ್ಕೆ ಸಾಧ್ಯ? ಆರ್ಸಿಬಿ ತಂಡ ಉಚಿತ ಎಂಟ್ರೆನ್ಸ್ ಎಂದು ಪೋಸ್ಟ್ ಹಾಕಿದ್ದು, ಹೆಚ್ಚು ಜನ ಬರುವ ಹಾಗೆ ಮಾಡಿತ್ತು.
36 ಸಾವಿರ ಜನರ ಕೆಪಾಸಿಟಿ ಇರುವ ಚಿನ್ನಸ್ವಾಮಿ ಸ್ಟೇಡಿಯಂಗೆ ಬುಧವಾರ ಬಂದಿದ್ದು 1 ಲಕ್ಷಕ್ಕಿಂತ ಹೆಚ್ಚು ಜನರ ದಂಡು. ಅಲ್ಲಿ ಏನೇ ನಡೆಯುತ್ತಿದ್ದರೂ, ಜನರಿಗೆ ಒಳಗಡೆ ಹೋಗಬೇಕು ಎನ್ನುವ ಮನಸ್ಥಿತಿ ಒಂದೇ ಇದ್ದಿದ್ದು, ಪಕ್ಕದಲ್ಲೇ ಮತ್ತೊಬ್ಬರಿಗೆ ತೊಂದರೆ ಆಗುತ್ತಿದ್ದರೂ ಸಹ, ಅದರ ಬಗ್ಗೆ ಯೋಚನೆ ಮಾಡುವ ತಲೆಕೆಡಿಸಿಕೊಳ್ಳುವ ತಾಳ್ಮೆ ಯಾರಲ್ಲಿಯೂ ಇರಲಿಲ್ಲ. ಒಳಗೆ ಹೋಗುವುದಕ್ಕೆ ನೂಕು ನುಗ್ಗಲಿನಲ್ಲಿ ಜನರು ಹೋರಾಟ ಮಾಡುವಂತಾಗಿತ್ತು. ಈ ಘಟನೆ ಮತ್ತೆ ಸಂಭವಿಸದ ಹಾಗೆ ನೋಡಿಕೊಳ್ಳುವುದು ಮಾತ್ರ ನಮ್ಮೆಲ್ಲರಲ್ಲಿ ಇರುವ ಹೊಣೆ ಆಗಿದೆ.



