ನಟ ಅರ್ಜುನ್ ಸರ್ಜಾ ಅವರು ಯಾರಿಗೆ ತಾನೇ ಇಷ್ಟವಿಲ್ಲ. ಇವರು ಚಿಕ್ಕ ಹುಡುಗ ಆಗಿದ್ದಾಗಿನಿಂದಲು ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ನಟಿಸಿ, ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿ ಹೀರೋ ಆಗಿ ಕೂಡ ನಟಿಸಿ, ಸೈ ಎನ್ನಿಸಿಕೊಂಡ ಇವರು ಹೆಚ್ಚು ಖ್ಯಾತಿ ಪಡೆದಿದ್ದು ತಮಿಳಿನಲ್ಲಿ. ತಮಿಳಿನ ಹಲವು ಸಿನಿಮಾಗಳಲ್ಲಿ ನಟಿಸಿ, ಹಿಟ್ ನೀಡಿ, ಅಲ್ಲಿನ ಸ್ಟಾರ್ ಆಗಿ ಮಿಂಚಿದ್ದಾರೆ. ಇವರ ಮಗಳು ಐಶ್ವರ್ಯ ಅರ್ಜುನ್ ಅವರು ಸಹ ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ಮಿಂಚಿದ್ದಾರೆ. ಇದೀಗ ಇವರಿಗೆ ಇನ್ಸ್ಟಾಗ್ರಾಮ್ ನಲ್ಲಿ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ..
ಹೌದು, ಅರ್ಜುನ್ ಸರ್ಜಾ ಅವರು ಎಂಥಾ ಅದ್ಭುತವಾದ ಕಲಾವಿದ ಎನ್ನುವ ವಿಷಯ ನಮಗೆಲ್ಲಾ ಗೊತ್ತೇ ಇದೆ. ಆಕ್ಷನ್ ಜಿಂಗ್ ಎಂದೇ ಇವರನ್ನು ಕರೆಯಲಾಗುತ್ತಿದೆ. ಕರಾಟೆ ಹಾಗೂ ಫಿಟ್ನೆಸ್ ಗೆ ಹೆಸರಿವಾಸಿ ಆಗಿದ್ದವರು ಅರ್ಜುನ್ ಸರ್ಜಾ. ಈಗಲೂ ಸಹ ಅದೇ ಫಿಟ್ನೆಸ್ ಮೆಂಟೇನ್ ಮಾಡಿದ್ದಾರೆ..ವಯಸ್ಸು 60 ದಾಟಿದ್ದರೂ ಸಹ ಅರ್ಜುನ್ ಸರ್ಜಾ ಅವರು ಯಾವುದೇ ಯುವನಾಯಕನಿಗೆ ಕಡಿಮೆ ಇಲ್ಲ ಎನ್ನುವ ಹಾಗಿದ್ದಾರೆ. ಇವರು ಕನ್ನಡದ ಖ್ಯಾತ ನಟ ರಾಜೇಶ್ ಅವರ ಮಗಳು ಆಶಾರಾಣಿ(ನಿವೇದಿತಾ) ಅವರೊಡನೆ ಮದುವೆಯಾದರು ಎನ್ನುವುದು ಗೊತ್ತಿರುವ ವಿಷಯ.

ನಿವೇದಿತಾ ಅವರು ಸಹ ನಟಿಯಾಗಿ ಗುರುತಿಸಿಕೊಂಡವರು. ಶಿವ ರಾಜ್ ಕುಮಾರ್ ಅವರ ಎರಡನೇ ಸಿನಿಮಾ ರಥಸಪ್ತಮಿಯ ನಾಯಕಿ. ಆ ಸಿನಿಮಾ ದೊಡ್ಡ ಯಶಸ್ಸು ಕಂಡ ನಂತರ ಅವರು ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದರು, ಬಳಿಕ ತಮಿಳು ಸಿನಿಮಾಗಳಲ್ಲಿ ಕೂಡ ನಟಿಸಿದರು. ಆದರೆ ಅರ್ಜುನ್ ಸರ್ಜಾ ಅವರನ್ನು ಮದುವೆಯಾದ ನಂತರ ನಟನೆಗೆ ಗುಡ್ ಬೈ ಹೇಳಿದರು. ಈ ಜೋಡಿಗೆ ಇಬ್ಬರು ಮಕ್ಕಳು. ಇವರ ಮೊದಲ ಮಗಳ ಹೆಸರು ಐಶ್ವರ್ಯ ಅರ್ಜುನ್. ಇವರು ಸಹ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಐಶ್ವರ್ಯ ಅವರು ಮೊದಲಿಗೆ 2013ರಲ್ಲಿ ತಮಿಳು ಸಿನಿಮಾ ಮೂಲಕ ನಟನೆ ಶುರು ಮಾಡಿದರು.
ಬಳಿಕ 2018ರಲ್ಲಿ ಅರ್ಜುನ್ ಸರ್ಜಾ ಅವರೇ ನಿರ್ದೇಶನ ಮಾಡಿದ ಪ್ರೇಮ ಬರಹ ಸಿನಿಮಾ ಮೂಲಕ ರೀಎಂಟ್ರಿ ಕೊಟ್ಟರು. ಪ್ರೇಮ ಬರಹ ಸಿನಿಮಾ ಕನ್ನಡ ಮತ್ತು ತಮಿಳು ಎರಡು ಭಾಷೆಗಳಲ್ಲಿ ತಯಾರಾಗಿ ಬಿಡುಗಡೆ ಆಯಿತು. ಆದರೆ ಅಷ್ಟೇನು ಯಶಸ್ಸು ಕಾಣಲಿಲ್ಲ. ಪ್ರೇಮ ಬರಹ ನಂತರ ಇನ್ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಇತ್ತೀಚೆಗೆ ಅರ್ಜುನ್ ಸರ್ಜಾ ಅವರು ಮತ್ತೊಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಅವರ ಮಗಳು ಐಶ್ವರ್ಯ ಹೀರೋಯಿನ್, ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಹೀರೋ ಆಗಿದ್ದಾರೆ. ಈ ಸಿನಿಮಾಗೆ ಸೀತಾ ಪಯಣ ಎಂದು ಟೈಟಲ್ ಇಡಲಾಗಿದೆ.
ಇನ್ನು ಐಶ್ವರ್ಯ ಅರ್ಜುನ್ ಅವರು ಇತ್ತೀಚಿಗೆ ತಮಿಳು ನಟ ಉಮಾಪತಿ ರಾಮಯ್ಯ ಅವರೊಡನೆ ಮದುವೆಯಾದರು. ಇವರ ಮದುವೆ ಚೆನ್ನೈನಲ್ಲಿ ಜೋರಾಗಿ ನಡೆಯಿತು. ಹಲವು ಸೆಲೆಬ್ರಿಟಿಗಳು ಇವರ ಮದುವೆಗೆ ಬಂದು ವಿಶ್ ಮಾಡಿದರು. ಈಗ ಐಶ್ವರ್ಯ ಅವರು ಪ್ಯಾರಿಸ್ ಗೆ ಟ್ರಿಪ್ ಗೆ ಹೋಗಿದ್ದಾರೆ. ಪ್ಯಾರಿಸ್ ನ ಕೆಲವು ಫೋಟೋಸ್ ಗಳನ್ನು ಶೇರ್ ಮಾಡಿದ್ದು, ಪ್ಯಾರಿಸ್ ಪ್ರಣಾಯ ಎಂದು ಕನ್ನಡದಲ್ಲಿ ಕ್ಯಾಪ್ಶನ್ ಬರೆದಿದ್ದರು. ಆದರೆ ಪ್ರಣಾಯ ಎಂದು ತಪ್ಪಾಗಿ ಬರೆಯಲಾಗಿದೆ ಎಂದು ನೆಟ್ಟಿಗರು ಸರಿಪಡಿಸಿದ್ದಾರೆ. ನೀವು ಕನ್ನಡದಲ್ಲಿ ಬರೆದಿರುವುದು ಖುಷಿ, ಆದರೆ ತಪ್ಪಿದೆ, ಪ್ರಣಯ ಪದ ಅದು ಎಂದು ಹೇಳಿದ್ದು, ಕೆಲವೇ ನಿಮಿಷಗಳಲ್ಲಿ ಐಶ್ವರ್ಯ ಅವರು ತಪ್ಪನ್ನು ಸರಿಪಡಿಸಿಕೊಂಡಿದ್ದಾರೆ.ರೆ.