ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರು ಸಹ ಹಲವು ವರ್ಷಗಳ ಕಾಲ ಪ್ರೀತಿಸಿ, ಮದುವೆಯಾಗಿ ಇಂದು ಸುಖ ಸಂಸಾರ ನಡೆಸುತ್ತಿರುವ ಸುಂದರವಾದ ಜೋಡಿ. ಲವ್ ಮಾಡಿ ಮದುವೆ ಆದವರಿಗೆ ಇವರಿಬ್ಬರು ಸ್ಪೂರ್ತಿಯಾಗಿ ಇರುತ್ತಾರೆ ಎಂದು ಹೇಳಿದರೆ ತಪ್ಪಲ್ಲ. ಎಲ್ಲರು ಅಷ್ಟರ ಮಟ್ಟಿಗೆ ಮೆಚ್ಚಿಕೊಂಡ ಜೋಡಿ ಇದು. ರಾಧಿಕಾ ಪಂಡಿತ್ ಅವರು ಕೆಲ ಸಮಯದ ನಂತರ ಇದೀಗ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿ ಯಾರೋ ಒಬ್ಬ ವ್ಯಕ್ತಿ ಯಶ್ ಅವರನ್ನು ನವೀನ್ ಎಂದು ಕರೆದಿದ್ದಕ್ಕೆ ಸ್ವಲ್ಪ ಖಾರವಾಗಿಯೇ ಉತ್ತರ ಕೊಟ್ಟಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..

ಯಶ್ ಅವರ ಮೂಲ ಹೆಸರು ನವೀನ್ ಕುಮಾರ್ ಗೌಡ. ಯಶ್ ಅವರು ಹುಟ್ಟಿದಾಗ ಅವರ ತಂದೆ ತಾಯಿ ಇಟ್ಟ ಹೆಸರು ನವೀನ್ ಕುಮಾರ್ ಗೌಡ, ಮೈಸೂರಿನಲ್ಲಿ ಯಶ್ ಅವರು ಇದ್ದಾಗ, ಚಿತ್ರರಂಗಕ್ಕೆ ಹೊಸದಾಗಿ ಎಂಟ್ರಿ ಕೊಟ್ಟು, ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುವಾಗ ಈ ಎಲ್ಲಾ ಸಮಯದಲ್ಲಿ ಯಶ್ ಅವರ ಹೆಸರು ನವೀನ್ ಕುಮಾರ್ ಗೌಡ ಎಂದೇ ಇತ್ತು. ಈಗಲೂ ಹಲವು ಜನರು ಇವರ ನಿಜವಾದ ಹೆಸರನ್ನು ಕರೆದು, ಅಲ್ಲಿಂದ ಇಲ್ಲಿಯವರೆಗೂ ಎಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದಾರೆ ಎಂದು ಸಂತೋಷ ಪಡುವವರು ಇದ್ದಾರೆ. ಆದರೆ ರಾಧಿಕಾ ಅವರು ಈ ಹೆಸರು ಕೇಳಿ ಖಾರವಾಗಿದ್ದಾರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ನಮಗೆಲ್ಲಾ ಗೊತ್ತಿರುವ ಹಾಗೆ ರಾಧಿಕಾ ಪಂಡಿತ್ ಅವರು ಹಲವು ವರ್ಷಗಳ ಕಾಲ ಯಶ್ ಅವರನ್ನು ಪ್ರೀತಿಸಿ, ಇಬ್ಬರು ಜೊತೆಯಾಗಿ ಕಷ್ಟಪಟ್ಟು ಚಿತ್ರರಂಗದಲ್ಲಿ ಬೆಳೆದು, ನಂತರ ಮದುವೆಯಾದರು. ಈ ಜೋಡಿಗೆ ಇಂದು 2 ಮುದ್ದಾದ ಮಕ್ಕಳು ಇದ್ದಾರೆ. ಸುಂದರವಾದ ಕುಟುಂಬ ಯಶ್ ಅವರದ್ದು. ರಾಧಿಕಾ ಪಂಡಿತ್ ಅವರು ಕನ್ನಡದ ಸ್ಟಾರ್ ಹೀರೋಯಿನ್ ಆಗಿದ್ದರೂ ಸಹ, ಮದುವೆಯಾದ ನಂತರ ವಿಶೇಷವಾಗಿ ಮಕ್ಕಳು ಜನಿಸಿದ ನಂತರ ನಟನೆ ಇಂದ ದೂರ ಉಳಿದರು. ತಮ್ಮ ಸಂಪೂರ್ಣ ಸಮಯವನ್ನು ಮನೆ ಮತ್ತು ಮಕ್ಕಳಿಗೆ ನೀಡಿದರು. ಈಗಲೂ ಸಹ ಮಾಧ್ಯಮಗಳ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ ರಾಧಿಕಾ.
ಆದರೆ ಇತ್ತೀಚೆಗೆ ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರು ಕೂಡ ಜೊತೆಯಾಗಿ ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಮೊನ್ನೆಯಷ್ಟೇ ರಾಧಿಕಾ ಅವರು ಜ್ಯುವೆಲರಿ ಶೋರೂಮ್ ಕಾರ್ಯಕ್ರಮ ಒಂದಕ್ಕೆ ಗೆಸ್ಟ್ ಆಗಿ ಬಂದಿದ್ದು, ಆ ಸಮಯದಲ್ಲಿ ಮೀಡಿಯಾದವರು, ಜರ್ನಲಿಸ್ಟ್ ಗಳು ಎಲ್ಲರೂ ಬಂದಿದ್ದರು. ಆ ವೇಳೆ ರಾಧಿಕಾ ಅವರ ಜೊತೆಗೆ ಮಾತನಾಡಿಸುವಾಗ ಒಬ್ಬರು ನವೀನ್ ಹೇಗಿದ್ದಾರೆ ಎಂದು ಕೇಳಿದರು. ಆಗ ಸ್ವಲ್ಪ ಖಾರವಾಗಿಯೇ ಉತ್ತರ ಕೊಟ್ಟ ರಾಧಿಕಾ ಪಂಡಿತ್, ಅವರು ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಲೀಗಲ್ ಆಗಿ ಹೆಸರು ಚೇಂಜ್ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಾರೆ ರಾಧಿಕಾ.
ಈ ಉತ್ತರ ಯಾರು ಕೂಡ ನಿರೀಕ್ಷೆ ಮಾಡದೇ ಇದ್ದ ಉತ್ತರವಾಗಿದೆ. ಕೆಲವರು ಈ ಮಾತನ್ನ ಕೇಳಿ, ಗಂಡನಿಗೆ ಹೇಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಹೇಳಿದರೆ, ಇನ್ನು ಕೆಲವರು ಅದೇ ಹೆಸರಿನ ಹುಡುಗನನ್ನೇ ಅಲ್ಲವೇ ನೀವು ಪ್ರೀತಿಸಿ ಮದುವೆಯಾಗಿದ್ದು, ಆದರೆ ಈಗ ನವೀನ್ ಅನ್ನೋ ಆ ಹೆಸರು ಬೇಡವಾಗಿ ಹೋಯಿತಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆ ರೀತಿ ಉತ್ತರ ಕೊಡುವಾಗ ರಾಧಿಕಾ ಪಂಡಿತ್ ಅವರ ಉದ್ದೇಶ ಏನಾಗಿತ್ತು ಎನ್ನುವ ವಿಚಾರ ಯಾರಿಗೂ ಗೊತ್ತಿಲ್ಲ, ಆದರೆ ರಾಧಿಕಾ ಅವರು ಈ ರೀತಿ ಹೇಳಿರುವ ವಿಡಿಯೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.



