ಇಂದು 4 ಮೇ 2025 ಭಾನುವಾರ. ವಿಶ್ವವಸು ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ. ಇಂದು ಸಂಜೆ 05:03 ರಿಂದ 06:32 ವರೆಗೆ ರಾಹುಕಾಲವಿರುತ್ತದೆ. ಮಧ್ಯಾಹ್ನ 11.55 ರಿಂದ 12.45ವರೆಗೆ ಅಭಿಜಿನ್ ಮುಹೂರ್ತವಿದೆ.
ಮೇಷ ರಾಶಿ
ಆರೋಗ್ಯದಲ್ಲಿ ಚೇತರಿಕೆ ಉಂಟಾಗಲಿದೆ, ಬಹಳ ದಿನಗಳಿಂದ ಏನಾದರೂ ಸಮಸ್ಯೆಗಳಿದ್ದರೆ ಅದು ಶೀಘ್ರದಲ್ಲೇ ಪರಿಹಾರವಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಜನರೊಂದಿಗೆ ಕಿರಿಕಿರಿಯಾಗಿ , ಮನಸ್ಸಿಗೆ ಬೇಸರ ಉಂಟಾಗುತ್ತದೆ, ಆದರೆ ಉತ್ತಮ ಲಾಭ ದೊರೆಯಲಿದೆ. ಆತ್ಮೀಯ ಸ್ನೇಹಿತರನ್ನು ಭೇಟಿ ಮಾಡುವುದರಿಂದ ಮನಸ್ಸಿಗೆ ಸಮಾಧಾನವಾಗುತ್ತದೆ.
ವೃಷಭ ರಾಶಿ
ಬಟ್ಟೆ, ಮಂಗಳದ್ರವ್ಯ ಬಿಸ್ನೆಸ್ ಮಾಡುವವರಿಗೆ ಲಾಭದಾಯಕ ದಿನವಾಗಿದೆ. ಹೊಸ ಕೆಲಸ ಆರಂಭಿಸಬೇಕು ಎನ್ನುವವರು ಇಂದು ಮುಂದಿನ ಹೆಜ್ಜೆ ಇಡಬಹುದು, ಇದರಿಂದ ಯಶಸ್ಸು ದೊರೆಯಲಿದೆ, ಮನೆಯವರು ಕೂಡಾ ನಿಮಗೆ ಸಹಕಾರ ನೀಡಲಿದ್ದಾರೆ. ಕೆಲಸದಲ್ಲಿ ಹೆಚ್ಚಿನ ಒತ್ತಡವಿರಲಿದೆ, ಭವಿಷ್ಯದಲ್ಲಿ ಸುಂದರ ಜೀವನ ಕಟ್ಟಿಕೊಳ್ಳಲು ಶ್ರಮ ವಹಿಸಲಿದ್ದೀರಿ. ಮಾಡುವ ಕೆಲಸಗಳಲ್ಲಿ ಒಳ್ಳೆ, ಲಾಭ ಹಾಗೂ ಕೀರ್ತಿಯನ್ನು ಅಪೇಕ್ಷಿಸಬಹುದು.
ಮಿಥುನ ರಾಶಿ
ಅಧಿಕ ಖರ್ಚು ಇರುತ್ತದೆ, ಆದಾಯಕ್ಕಿಂದ ವೆಚ್ಚವೇ ಹೆಚ್ಚಾಗಿರುತ್ತದೆ. ಕ್ಯಾಟರಿಂಗ್, ಹೋಟೆಲ್ ಬಿಸ್ನೆಸ್ ಮಾಡುವವರಿಗೆ ಒಳ್ಳೆ ಲಾಭ ದೊರೆಯುತ್ತದೆ. ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಇದ್ದರೂ ಮನಸ್ಸಿಗೆ ಸಮಧಾನ ಇರುವುದಿಲ್ಲ. ಕೆಲವರಿಗೆ ಸೋಮಾರಿತನ ಕಾಡುತ್ತದೆ. ಏಕಾಗ್ರತೆಯಿಂದ ಕೆಲಸ ಮಾಡಿದರೆ ಉತ್ತಮ ಲಾಭ ದೊರೆಯುತ್ತದೆ.
ಕಟಕ ರಾಶಿ:
ನಿನ್ನೆಗೆ ಹೋಲಿಸಿದರೆ ಇಂದು ಉತ್ಸಾಹದಿಂದ ಇರುತ್ತೀರಿ, ಮಾಡುವ ಕೆಲಸಗಳಲ್ಲಿ ಯಶಸ್ಸು ದೊರೆಯಲಿದೆ, ಇವೆಂಟ್ ಮ್ಯಾನೇಜ್ಮೆಂಟ್ ಬಿಸ್ನೆಸ್ ಮಾಡುವವರಿಗೆ , ಫೋಟೋಗ್ರಫಿಯಲ್ಲಿರುವವರಿಗೆ ಒಳ್ಳೆ ಲಾಭ, ಒಳ್ಳೆ ಹೆಸರು ದೊರೆಯಲಿದೆ, ಕೆಲವರಿಗೆ ಕೆಲಸದಲ್ಲಿ ಜನರ ವಿರೋಧ ಎದುರಾಗಬಹುದು. ಆದ್ದರಿಂದ ಜಾಗ್ರತೆಯಿಂದಿರಿ.
ಸಿಂಹ ರಾಶಿ
ಈ ದಿನ ಅನಾವಶ್ಯಕ ಖರ್ಚು ಹೆಚ್ಚಾಗಿರುತ್ತದೆ, ನೀವು ಮಾಡು ತಪ್ಪಿನಿಂದಲೇ ಮುಂದೆ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ, ಜಾಗ್ರತೆಯಿಂದಿರಿ. ಆಟೋ, ಕ್ಯಾಬ್ ಚಾಲಕರಿಗೆ ಇಂದು ದ್ವಿಗುಣ ಲಾಭವಿರುತ್ತದೆ. ಮನೆಯಲ್ಲಿ ಮಾತನಾಡುವಾಗ ಮಾತುಗಳ ಬಗ್ಗೆ ಎಚ್ಚರದಿಂದಿರಿ, ಇಲ್ಲದಿದ್ದರೆ ಮನಸ್ತಾಪ ಉಂಟಾಗುತ್ತದೆ.
ಕನ್ಯಾ ರಾಶಿ
ಮಾಡುವ ಪ್ರತಿ ಕೆಲಸದಲ್ಲೂ ವಿಳಂಬ ಉಂಟಾಗುತ್ತದೆ, ಆದರೆ ಧೈರ್ಯದಿಂದ ಇರಿ, ಏಕಾಗ್ರತೆಯಿಂದ ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ. ಒಳ್ಳೆ ಲಾಭ ದೊರೆಯುತ್ತದೆ. ಶುಭ ಸಮಾರಂಭದಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಖುಷಿ ಇರಲಿದೆ. ಹೊಸ ವ್ಯಾಪಾರ ಆರಂಭಿಸುವವರಿಗೆ ಶುಭ ದಿನ, ಭವಿಷ್ಯದಲ್ಲಿ ಒಳ್ಳೆ ಲಾಭ ಇರಲಿದೆ. ದೂರದ ಪ್ರಯಾಣ ಮಾಡುವ ಮುನ್ನ ಇಷ್ಟದೇವರ ಪ್ರಾರ್ಥನೆ ಮಾಡಿದರೆ ಅಡೆತಡೆಗಳು ದೂರಾಗುತ್ತದೆ.
ತುಲಾ ರಾಶಿ
ಮನೆಯವರೊಂದಿಗೆ ಉತ್ತಮ ಬಾಂಧವ್ಯ ಇರಲಿದೆ. ಎಲ್ಲರೊಂದಿಗೆ ಒಳ್ಳೆ ಸಮಯ ಕಳೆಯಲಿದ್ದೀರಿ, ಇದರಿಂದ ಮನಸ್ಸಿಗೆ ಸಮಾಧಾನವಿರುತ್ತದೆ. ಕೃಷಿಕರಿಗೆ ಒಳ್ಳೆ ಲಾಭ ದೊರೆಯುತ್ತದೆ. ಪಿತ್ರಾರ್ಜಿತ ಆಸ್ತಿ ವ್ಯಾಜ್ಯದಲ್ಲಿ ಸಿಲುಕಿರುವವರು ವಿವಾದದಿಂದ ಹೊರ ಬರಲು ಹೊಸ ದಾರಿ ಕಂಡುಕೊಳ್ಳಲಿದ್ದೀರಿ
ವೃಶ್ಚಿಕ ರಾಶಿ
ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಹೆಚ್ಚಾಗುತ್ತದೆ. ಹೊಸ ಕೆಲಸ ಆರಂಭಿಸಬೇಕು ಎನ್ನುವವರಿಗೆ ಹಿತೈಷಿಗಳೇ ವಿಘ್ನ ತಂದೊಡ್ಡಬಹುದು. ಆದ್ದರಿಂದ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಅಥವಾ ಗೌಪ್ಯವಾಗಿ ಕೆಲಸ ಆರಂಭಿಸಿ. ಈ ದಿನ ಚಿನ್ನ, ಬೆಳ್ಳಿಯನ್ನು ಖರೀದಿಸಿದರೆ ಲಕ್ಷ್ಮೀ ಅನುಗ್ರಹವಾಗಲಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಮಿಶ್ರಫಲ ದೊರೆಯಲಿದೆ. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಲಾಭದಾಯಕ ದಿನವಾಗಿದೆ.
ಧನು ರಾಶಿ
ಆರೋಗ್ಯ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು. ಮನಸ್ಸಿನಲ್ಲಿ ಯಾವುದೋ ವಿಚಾರವಾಗಿ ಚಿಂತೆ ಕಾಡಬಹುದು. ಆದರೆ ಏನೇ ಕೆಲಸ ಮಾಡುವುದಿದ್ದರೆ ಶ್ರಮ, ಏಕಾಗ್ರತೆ, ಪ್ರಾಮಾಣಿಕತೆಯಿಂದ ಪ್ರಯತ್ನ ಮಾಡಿದರೆ ಭವಿಷ್ಯ ವೃದ್ಧಿಯಾಗುತ್ತದೆ. ಶಾಲೆ, ಕಾಲೇಜು ಆರಂಭಿಸಬೇಕು ಎನ್ನುವವರಿಗೆ ಇಂದು ಒಳ್ಳೆ ದಿನ, ನಿಮ್ಮ ಕನಸನ್ನು ಈಡೇರಿಸಿಕೊಳ್ಳುವಲ್ಲಿ ಮೊದಲ ಹೆಜ್ಜೆ ಇಡಲಿದ್ದೀರಿ.
ಮಕರ ರಾಶಿ
ದಿನಸಿ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಭೂಮಿ ಖರೀದಿ ಯೋಗ ಇದೆ. ಇದರಿಂದ ಮನಸ್ಸಿಗೆ ಸಂತೋಷ ಇರಲಿದೆ. ಮನೆಯಲ್ಲಿ ಸಂತೋಷ, ನೆಮ್ಮದಿ ಇರಲಿದೆ. ಮಕ್ಕಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು ಜಾಗ್ರತೆಯಿಂದ ಮಾತನಾಡಿ.
ಕುಂಭ ರಾಶಿ
ಮಾಡುವ ಕೆಲಸಗಳಲ್ಲಿ ಮನಸ್ಸಿಗೆ ಸಮಾಧಾನ ಇರುತ್ತದೆ. ನಿಮ್ಮ ಜಾಣ್ಮೆಯಿಂದಲೇ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಿ. ಕೆಲಸದಲ್ಲಿ ಕಿರಿಕಿರಿ ಇದ್ದರೂ ಮುಂದಿನ ದಿನಗಳಲ್ಲಿ ಒಳ್ಳೆ ಲಾಭವಾಗುತ್ತದೆ. ನೀರಿನಿಂದ ಅಪಾಯ ಇದೆ, ಆದ್ದರಿಂದ ಬಹಳ ಎಚ್ಚರಿಕೆಯಿಂದ ಇರಿ.
ಮೀನ ರಾಶಿ
ಇಂದು ಮೀನ ರಾಶಿಯವರಿಗೆ ಉತ್ತಮ ದಿನ. ಜೀವನದ ದಿಕ್ಕು ಇಂದು ಬದಲಾಗಲಿದೆ, ಹೊಸ ವ್ಯಕ್ತಿಗಳ ಪರಿಚಯವಾಗಲಿದೆ, ಅವರಿಂದ ನಿಮಗೆ ಒಳಿತಾಗಲಿದೆ. ಕೆಲಸ ಕಾರ್ಯಗಳಲ್ಲಿ ಹಿತೈಷಿಗಳು ಸಹಕಾರ ನೀಡಲಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಚೇತರಿಕೆ ಕಾಣಲಿದೆ.
ಶ್ರೀ ದರ್ಶನ್ ದೀಕ್ಷಿತ್ ಗುರೂಜಿಯನ್ನು ನೇರವಾಗಿ ಭೇಟಿ ಮಾಡಲು 9902595318, 9041874187 ಮೊಬೈಲ್ ನಂಬರನ್ನು ಸಂಪರ್ಕಿಸಿ



