ಕೊರಗಜ್ಜನ ಪವಾಡಕ್ಕೆ ಶರಣಾಗದವರು ಯಾರಿದ್ದಾರೆ? ಈಗ ಇಡೀ ರಾಜ್ಯವೇ ಅಜ್ಜನ ಮಹಿಮೆಗೆ ತಲೆ ಬಾಗಿದ್ದಾರೆ. ಅದ್ರಲ್ಲಿ ಸ್ಯಾಂಡಲ್ ವುಡ್ ನಟ ನಟಿಯರು ಮುಂಚೂಣಿ ಅಲ್ಲಿದ್ದಾರೆ. ಒಬ್ಬರಾದ ಮೇಲೆ ಒಬ್ಬರಂತೆ ಅಜ್ಜನ ಆದಿ ಸ್ಥಳಕ್ಕೆ ಬಂದು ಹರಕೆ ಕಟ್ಟಿ ಕೊಳ್ಳುತ್ತಿದ್ದಾರೆ.. ಈ ಹಿಂದೆ ಶಿವಣ್ಣ ಗೀತಾ ದಂಪತಿ ಕೂಡ ಅಜ್ಜನ ಬಳಿ ಬಂದಿದ್ರು. ನಟಿ ಪ್ರೇಮಾ, ನಟಿ ರಕ್ಷಿತಾ ಹೀಗೆ ಒಬ್ಬರಾ ಇಬ್ಬರ ಸ್ಯಾಂಡಲ್ ವುಡ್ ನಾ ಅನೇಕ ಕಲಾವಿದರು ಅಜ್ಜನ ಬಲಿ ಬಂದು ವಿವಿಧ ಬೇಡಿಕೆಗಳ ಪಟ್ಟಿ ಸಲ್ಲಿಕೆ ಮಾಡುತ್ತಿದ್ದರು. ಸದ್ಯ ಆ ಸಾಲಿಗೆ ನಟಿ ಮಾಲಾಶ್ರೀ ಕೂಡ ಸೇರಿ ಕೊಂಡಿದ್ರು.

ಮಾಲಾಶ್ರೀ ಬೇಡಿಕೆ ಬಹಳ ಬೇಗನೇ ಈಡೇರಿಕೆ ಆಗಿದೆ. ಹೀಗಾಗಿ ಮತ್ತೆ ಅಜ್ಜನ ಬಳಿ ಬಂದ್ರೂ ಹರಕೆ ಈಡೇರಿಕೆ ಮಾಡಿದ್ದಾರೆ. ನಟಿ ಮಾಲಾಶ್ರೀ ಬೇಡಿಕೆ 3 ತಿಂಗಳಲ್ಲೇ ಈಡೇರಿಕೆ ಮಾಡಿದ ಕೊರಗಜ್ಜ.. ಕೊರಗಜ್ಜನ ಮಹಿಮೆಗೆ ತಲೆ ಬಾಗಿದ ಕನಸಿನ ರಾಣಿ ಮತ್ತೆ ಸಾನಿಧ್ಯಕ್ಕೆ ಬಂದು ಹರಕೆ ತೀರಿಸಿದ್ದಾರೆ. ಮಂಗಳೂರಿನ ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿ ಮೂರು ತಿಂಗಳ ಹಿಂದಷ್ಟೇ ಮಾಲಾಶ್ರೀ ಹರಕೆ ಕಟ್ಟಿಕೊಂಡಿದ್ದರು.. ಸದ್ಯ ಅವರ ಬೇಡಿಕೆ ಅಜ್ಜ ಅತೀ ಶೀಘ್ರದಲ್ಲಿ ಈಡೇರಿಕೆ ಮಾಡಿದ್ದಾರೆ.
ಹೀಗಾಗಿ ಮತ್ತೆ ಅಜ್ಜನ ಬಳಿ ಹರಕೆ ತೀರಿಸಲು ಮಾಲಾಶ್ರೀ ಬಂದಿದ್ದಾರೆ. ಮೂರೇ ತಿಂಗಳಲ್ಲಿ ಬೇಡಿಕೆ ಈಡೇರಿಸಿದ ಕೊರಗಜ್ಜನ ಕುತ್ತಾರು ಆದಿಸ್ಥಳಕ್ಕೆ ಬಂದು ಮಾಲಾಶ್ರೀ ಹರಕೆ ತೀರಿಸಿದ್ದಾರೆ. ಮಾಲಾಶ್ರೀ ಜೊತೆ ಅವರ ಪುತ್ರಿ ಅನನ್ಯಾ ಸಹ ಭೇಟಿ ನೀಡಿ ಹರಕೆ ತೀರಿಸಿದ್ದಾರೆ. ಈ ವೇಳೆ ಮಾತನಾಡಿ ಮಾಲಾಶ್ರೀ, ಮೂರು ತಿಂಗಳ ಹಿಂದಷ್ಟೇ ಕೊರಗಜ್ಜನ ಕಟ್ಟೆಗೆ ಬಂದು ಬೇಡಿಕೊಂಡಿದ್ದೆವು. ಎಲ್ಲವೂ ಅಂದುಕೊಂಡಂತೆ ನಡೆದಿದೆ. ಬಹಳಷ್ಟು ಪಾಸಿಟಿವ್ ಎನರ್ಜಿ ಕ್ಷೇತ್ರದಲ್ಲಿದೆ. ಒಳಗೆ ಹೋಗುವಾಗಲೇ ಸಾನಿಧ್ಯದ ಶಕ್ತಿ ಭಾಸವಾಗುತ್ತದೆ.
ಬೇಡಿಕೆ ಈಡೇರಿದ ಹಾಗೆ ಹರಕೆ ತೀರಿಸಿ ಮತ್ತೆ ಆಶೀರ್ವಾದ ಪಡೆಯುವ ಉದ್ದೇಶದಿಂದ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಬಂದಿದ್ದೇನೆ. ಮುಂದೆಯೂ ಬರುತ್ತೇನೆ ಎಂದು ಹೇಳಿದರು. ಈ ಸಂದರ್ಭ ಶ್ರೀಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಸಮಿತಿಯ ಟ್ರಸ್ಟಿಗಳು ನಟಿ ಮಾಲಾಶ್ರೀ ಅವರಿಗೆ ಸನ್ಮಾನ ಮಾಡಿದ್ರು. ಇನ್ನೂ ಕೊರಗಜ್ಜನ ಬಾಲಿವುಡ್ ಮಹಿಮೆ ತಿಳಿಸಲು ಸ್ಯಾಂಡಲ್ ವುಡ್ ನಟ ನಟಿಯರು ಅಭಿನಯ ಮಾಡುತ್ತಿರುವ ಬಹು ನಿರೀಕ್ಷಿತ ಅಜ್ಜನ ಮಹಿಮೆ ತಿಳಿಸುವ ಸಿನಿಮಾ ರೆಡಿ ಆಗ್ತಿದೆ. ಕೊರಗಜ್ಜನ ಮಹಿಮೆಯನ್ನು ಜಗತ್ತಿಗೆ ತಿಳಿಸಲೆಂದೇ ಸ್ಯಾಂಡಲ್ವುಡ್ನ ನಿರ್ದೇಶಕ ಸುಧೀರ್ ಅತ್ತಾವರ್ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಬಹುತೇಕ ಸಿನಿಮಾ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.



