ಇಂದು 5 ಮೇ 2025 ಸೋಮವಾರ. ವಿಶ್ವವಸು ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಆಶ್ಲೇಷ ನಕ್ಷತ್ರ. ಇಂದು ಬೆಳಗ್ಗೆ 07:37 ರಿಂದ 09:12 ವರೆಗೆ ರಾಹುಕಾಲವಿರುತ್ತದೆ. ಬೆಳಗ್ಗೆ 11.55 ರಿಂದ 12.45ವರೆಗೆ ಅಭಿಜಿನ್ ಮುಹೂರ್ತವಿದೆ.
ಮೇಷ ರಾಶಿ
ಆರೋಗ್ಯದಲ್ಲಿ ವೃದ್ಧಿ ಆಗಲಿದೆ, ಸರ್ಕಾರಿ ಕೆಲಸದಲ್ಲಿರುವವರಿಗೆ, ಸರ್ಕಾರಿ ಸೌಲಭ್ಯ ಪಡೆಯಲು ಕಾಯುತ್ತಿರುವವರಿಗೆ ಇಂದು ಶುಭದಿನವಾಗಲಿದೆ. ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು. ಹಣಕಾಸಿನ ಸಮಸ್ಯೆಗಳು ಎದುರಾಗಬಹುದು, ಜಾಗ್ರತೆಯಿಂದ ವ್ಯವಹರಿಸಿ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಒತ್ತಡದ ದಿನವಾಗಿದೆ. ವ್ಯಾಪಾರದಲ್ಲಿ ಲಾಭ ದೊರೆಯಲಿದೆ, ಆದರೆ ಕುಟುಂಬದಲ್ಲಿನ ಭಿನ್ನಾಭಿಪ್ರಾಯದಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಇಲ್ಲದಂತೆ ಆಗುತ್ತದೆ. ಎಣ್ಣೆ, ಹಾಲಿನ ಉತ್ಪನ್ನಗಳ ಕೈಗಾರಿಕೆ ನಡೆಸುತ್ತಿರುವವರಿಗೆ ಇಂದು ಲಾಭದಾಯಕ ದಿನವಾಗಿದೆ. ದೂರದ ಪ್ರಯಾಣ ಮಾಡುವಿರಿ, ಜೊತೆಗೆ ಯಾವುದಾದರೂ ತೀರ್ಥಕ್ಷೇತ್ರಕ್ಕೆ ಹೋಗಿ ಬಂದರೆ ನಿಮ್ಮ ಭವಿಷ್ಯ ಉತ್ತಮವಾಗಿರುತ್ತದೆ.
ಮಿಥುನ ರಾಶಿ
ಈ ದಿನ ಚಂಚಲ ಮನಸ್ಥಿತಿ ಇರುತ್ತದೆ. ಯಾವ ಕೆಲಸ ಮಾಡುವುದು, ಯಾವುದನ್ನು ಬಿಡುವುದು ಎಂದು ತಿಳಿಯದೆ ಗೊಂದಲಕ್ಕೆ ಒಳಗಾಗುತ್ತೀರಿ. ವ್ಯಾಪಾರದಲ್ಲಿ ಸ್ವಲ್ಪ ಮಟ್ಟಿಗೆ ಲಾಭ ಇರಲಿದೆ. ಗೃಹಿಣಿಯರಿಗೆ ಈ ದಿನ ಒತ್ತಡದ ದಿನವಾಗಿರುತ್ತದೆ. ಸೋದರರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಜಾಗ್ರತೆಯಿಂದ ಇರಿ. ನಿಮ್ಮ ಸ್ವಂತ ಲಾಭಕ್ಕೆ ಸಂಬಂಧವನ್ನು ಕಳೆದುಕೊಳ್ಳದಿರಿ. ಪೊಲೀಸ್ ಇಲಾಖೆ, ಸೇನೆಯಲ್ಲಿರುವವರಿಗೆ ಒತ್ತಡದ ದಿನವಾಗಿರುತ್ತದೆ, ಆರೋಗ್ಯದ ಕಡೆ ಗಮನ ಹರಿಸಿ.
ಕಟಕ ರಾಶಿ:
ಯಾವುದೇ ಕೆಲಸವಾದರೂ ಅದರಲ್ಲಿ ಕಷ್ಟವಿರುತ್ತದೆ. ಆದ್ದರಿಂದ ಶ್ರದ್ಧೆಯಿಂದ, ಇಷ್ಟಪಟ್ಟು ಕೆಲಸ ಮಾಡಿದರೆ ಲಾಭ ದೊರೆಯುತ್ತದೆ. ಕಾಯಕವೇ ಕೈಲಾಸ ಎಂಬುದನ್ನು ನೆನಪಿಡಿ. ವಿದ್ಯಾರ್ಥಿಗಳಿಗೆ ಇಂದು ಉತ್ತಮ ದಿನ, ಸರಸ್ವತಿ ಅನುಗ್ರಹ ದೊರೆಯಲಿದೆ. ಹೊಸ ವ್ಯಾಪಾರ ಮಾಡಲು ಯೋಜನೆ ಇರುವವರು ಈ ದಿನ ಮುಂದುವರೆಯಬಹುದು. ಹೊಸ ವ್ಯಕ್ತಿಗಳ ಪರಿಚಯ ನಿಮ್ಮನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಿದೆ. ನಿಮ್ಮ ಬುದ್ಧಿ ನಿಮ್ಮ ಕೈಯ್ಯಲ್ಲಿ ಇರಲಿ. ಮತ್ತೊಬ್ಬರ ಮೇಲೆ ಅವಲಂಬಿತವಾಗಬೇಡಿ.
ಸಿಂಹ ರಾಶಿ
ಪಾಲುದಾರಿಕೆ ಉದ್ಯೋಗ ಮಾಡುತ್ತಿರುವವರು ಅಥವಾ ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಲು ಯೋಚಿಸುತ್ತಿರುವವರು ಸ್ವಲ್ಪ ಜಾಗ್ರತೆಯಿಂದ ಇರಬೇಕು. ಮೋಸ ಹೋಗುವ ಸಾಧ್ಯತೆ ಇದೆ. ನಿಮ್ಮ ಮಾತುಗಳಿಂದಲೇ ಜನರ ವಿರೋಧ ಕಟ್ಟಿಕೊಳ್ಳಲಿದ್ದೀರಿ, ಮನಸ್ಸಿಗೆ ಖುಷಿ ಕೊಡುವಂತ ಘಟನೆಗಳು ನಡೆಯಲಿದೆ. ದೇವರ ಪ್ರಾರ್ಥನೆ ಮಾಡಿ, ಅನಾವಶ್ಯಕವಾಗಿ ಮಾತನಾಡದಿರಿ.
ಕನ್ಯಾ ರಾಶಿ
ಮನಸ್ಸಿನ ಇಷ್ಟಾರ್ಥಗಳು ಇಂದು ನೆರವೇರುತ್ತದೆ. ಕೆಲಸದಲ್ಲಿ ಅಭಿವೃದ್ಧಿ ಇರಲಿದೆ. ಇಡೀ ದಿನ ನೆಮ್ಮದಿಯಿಂದ ಇರುವಿರಿ, ವ್ಯಾಪಾರದಲ್ಲಿ ಲಾಭ ದೊರೆಯಲಿದೆ. ದಿನಗೂಲಿ ಕೆಲಸಗಾರರಿಗೆ ಒಳ್ಳೆ ಲಾಭ ದೊರೆಯಲಿದೆ. ಪ್ಲಾಸ್ಟಿಕ್, ಸ್ಟೀಲ್ ಬಿಸ್ನೆಸ್ ಮಾಡುವವರಿಗೆ ಕೂಡಾ ಯಥೇಚ್ಛ ಲಾಭ ದೊರೆಯಲಿದೆ.
ತುಲಾ ರಾಶಿ
ಬ್ಯಾಂಕಿಂಗ್ ಕ್ಷೇತ್ರದಲ್ಲಿರುವವರಿಗೆ ಇಂದು ಒತ್ತಡದ ದಿನವಾಗಿರುತ್ತದೆ. ತಲೆಗೆ ಪೆಟ್ಟಾಗುವ ಸಾಧ್ಯತೆ ಇದೆ. ಜಾಗ್ರತೆಯಿಂದ ಇರಿ. ಎಷ್ಟೇ ಶ್ರದ್ಧೆಯಿಂದ ಕೆಲಸ ಮಾಡಿದರೂ ಯಾರೂ ಗುರುತಿಸುವುದಿಲ್ಲ ಎಂಬ ನಿಮ್ಮ ಚಿಂತೆ ಇಂದು ದೂರವಾಗುತ್ತದೆ. ನಿಮ್ಮ ಪ್ರಾಮಾಣಿಕತೆಗೆ ಇಂದು ಫಲ ದೊರೆಯಲಿದೆ. ನಿಮ್ಮ ಕೆಲಸವನ್ನು ಹಿರಿಯ ಅಧಿಕಾರಿಗಳು ಗುರುತಿಸುತ್ತಾರೆ, ಇದರಿಂದ ಭವಿಷ್ಯದಲ್ಲಿ ನಿಮಗೆ ಉಪಯೋಗವಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆಯಿಂದಿರಿ.
ವೃಶ್ಚಿಕ ರಾಶಿ
ಕೆಲಸಗಳಲ್ಲಿ ಕಿರಿಕಿರಿ ಇರಲಿದೆ. ಮನೆಯವರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ, ಹೊಸ ಬಿಸ್ನೆಸ್ ಆರಂಭಿಸಬೇಕು, ಹೂಡಿಕೆ ಮಾಡಬೇಕು ಎಂದುಕೊಂಡಿರುವವರು ಬಹಳ ಜಾಗ್ರತೆಯಿಂದ ಇರಬೇಕು, ಇಲ್ಲದಿದ್ದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಐಸ್ಕ್ರೀಮ್, ತಂಪು ಪಾನೀಯ ಬಿಸ್ನೆಸ್ ಮಾಡುವವರಿಗೆ , ಕೃಷಿಕರಿಗೆ ಇಂದು ಉತ್ತಮ ಲಾಭವಾಗಲಿದೆ.
ಧನು ರಾಶಿ
ಅತಿಯಾದ ಚಿಂತೆಯಿಂದ ಉತ್ಸಾಹ ಕಡಿಮೆ ಆಗುತ್ತದೆ. ಕೆಲಸದ ಕಡೆ ಗಮನ ಇರುವುದಿಲ್ಲ. ಕೆಲಸದಲ್ಲಿ ಲಾಭ ಕಡಿಮೆ ಇರುತ್ತದೆ. ಸ್ನೇಹಿತರು ನಿಮಗೆ ಹುರಿದುಂಬಿಸಲಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಉತ್ತಮ ಲಾಭವಾಗಲಿದೆ, ಆದರೂ ಎಚ್ಚರಿಕೆಯಿಂದಿರಿ.
ಮಕರ ರಾಶಿ
ಕೆಲಸಗಳಲ್ಲಿ ಅಭಿವೃದ್ಧಿ ಇರಲಿದೆ. ಹಿತಶತ್ರುಗಳ ಕಾಟ ಹೆಚ್ಚಾಗುತ್ತದೆ. ಅಪಕೀರ್ತಿ ಉಂಟಾಗಬಹುದು ಎಚ್ಚರ, ಒತ್ತಡದ ದಿನವಾಗಲಿದೆ. ಆರೋಗ್ಯವನ್ನು ಕಡೆಗಣಿಸಬೇಡಿ. ಕಬ್ಬಿಣದ ವ್ಯಾಪಾರ ಮಾಡುವವರಿಗೆ ಇಂದು ದುಪ್ಪಟ್ಟು ಲಾಭ ದೊರೆಯುತ್ತದೆ.
ಕುಂಭ ರಾಶಿ
ಈ ದಿನ ಕೆಲಸದಲ್ಲಿ ನಿಮಗೆ ಪ್ರಶಂಸೆ ದೊರೆಯಲಿದೆ. ನಿಮ್ಮ ಕಷ್ಟಕ್ಕೆ ಪ್ರತಿಫಲ ದೊರೆಯುತ್ತದೆ. ನಿಮ್ಮ ಕೆಲಸವನ್ನು ಜನರು ಗುರುತಿಸಲಿದ್ದಾರೆ. ನಿಮ್ಮ ಮಾತುಗಳನ್ನು ಇಷ್ಟಪಟ್ಟು ಜನರು ಸ್ನೇಹ ಬಯಸಿ ಬರುತ್ತಾರೆ. ಟ್ರಾವೆಲ್ ಬಿಸ್ನೆಸ್ ಮಾಡುವವರಿಗೆ ಲಾಭ ದೊರೆಯಲಿದೆ. ಸಾಲದ ಸುಳಿಯಲ್ಲಿರುವವರು ಹಣಕಾಸಿನ ಸಮಸ್ಯೆಯಿಂದ ಹೊರಬರಲು ಹೊಸ ದಾರಿ ಕಂಡುಕೊಳ್ಳಲಿದ್ದೀರಿ.
ಮೀನ ರಾಶಿ
ಹೊಸ ಕೆಲಸ ಆರಂಭಿಸಲು ಕಾಯುತ್ತಿರುವವರಿಗೆ ಇಂದು ಕೆಲಸ ಕೈಗೂಡುತ್ತದೆ. ಕೆಲಸದಲ್ಲಿ ಮನಸ್ಸಿಗೆ ತೃಪ್ತಿ, ನೆಮ್ಮದಿ ಇರಲಿದೆ. ಉಳಿತಾಯ ಮಾಡಲಿದ್ದೀರಿ, ಖರ್ಚು ಕಡಿಮೆ ಮಾಡುವಿರಿ, ಇದರಿಂದ ಸಾಲವೂ ತೀರುತ್ತದೆ. ಮುಂದಿನ ದಿನಗಳಲ್ಲಿ ಒಳಿತಾಗಲಿದೆ. ಮಂಗಳದ್ರವ್ಯ, ಹೋಟೆಲ್ ಬಿಸ್ನೆಸ್ ಮಾಡುವವರಿಗೆ ಇಂದು ಲಾಭದಾಯಕ ದಿನ.
ಗೋವನ್ನು ಏಕೆ ಪೂಜಿಸಬೇಕು?
ಗೋವನ್ನು ತಾಯಿಗೆ ಹೋಲಿಸುತ್ತೇವೆ, ಜೊತೆಗೆ ಲಕ್ಷ್ಮೀ ಎಂದು ಪೂಜಿಸುತ್ತೇವೆ. ಗೋವಿನಲ್ಲಿ ಮುಕ್ಕೋಟಿ ದೇವತೆಗಳು ಇದ್ದಾರೆ ಎಂಬ ನಂಬಿಕೆ ಇದೆ. ಆದ್ದರಿಂದ ಗೃಹಪ್ರವೇಶ ಮಾಡುವ ಸಮಯದಲ್ಲಿ ಕೂಡಾ ಗೋವನ್ನು ಮನೆ ಒಳಗೆ ಕರೆಸಿ ಪೂಜೆ ಮಾಡುತ್ತೇವೆ. ಸಾಕ್ಷಾತ್ ಲಕ್ಷ್ಮೀಯೇ ಮನೆಗೆ ಪ್ರವೇಶಿಸಿದಳು ಎಂಬ ಭಕ್ತಿ, ಭಾವ ಉಂಟಾಗುತ್ತದೆ. ಪ್ರತಿ ಸೋಮವಾರ ತಟ್ಟೆಯಲ್ಲಿ ಅಕ್ಕಿ, ಬಾಳೆಹಣ್ಣು, ಬೆಲ್ಲವನ್ನು ಇಟ್ಟು ಹಸುಗೆ ತಿನ್ನಿಸಿ. ಕನಿಷ್ಠ 5-7 ಸೋಮವಾರಗಳು ಇದನ್ನು ಮುಂದುವರೆಸಿ. ಇದರಿಂದ ನಿಮ್ಮ ಬಹುತೇಕ ಸಮಸ್ಯೆಗಳು ಕಳೆಯುತ್ತದೆ. ಸಾಧ್ಯವಾದರೆ ಗೋಮಾತೆಗೆ ಅರಿಸಿನ, ಕುಂಕುಮ ಹಚ್ಚಿ, ಹೂವು ಇಟ್ಟು ಪೂಜೆ ಮಾಡಿದರೆ ಇನ್ನಷ್ಟು ಒಳಿತಾಗುತ್ತದೆ.
ಶ್ರೀ ದರ್ಶನ್ ದೀಕ್ಷಿತ್ ಗುರೂಜಿಯನ್ನು ನೇರವಾಗಿ ಭೇಟಿ ಮಾಡಲು 9902595318, 9041874187 ಮೊಬೈಲ್ ನಂಬರನ್ನು ಸಂಪರ್ಕಿಸಿ



