ನಟ ದರ್ಶನ್ ಅವರಿ ಕೆಲವೇ ದಿನಗಳ ಹಿಂದೆ ಕೋರ್ಟ್ ಇಂದ ಜಾಮೀನು ಪಡೆದು ರಿಲೀಸ್ ಆಗಿದ್ದಾರೆ. ಅದುವರೆಗೂ ಒಂದೂವರೆ ತಿಂಗಳ ಕಾಲ ಆಸ್ಪತ್ರೆಯಲ್ಲೇ ಇದ್ದ ದರ್ಶನ್ ಅವರು, ಬೆಂಗಳೂರಿನ ಬಿಜೆಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಾಮೀನು ಸಿಕ್ಕ ನಂತರ ರಿಲೀಸ್ ಆಗಿ, ಅಸ್ಪತ್ರೆ ಇಂದ ಡಿಸ್ಚಾರ್ಜ್ ಆಗಿ, ಪತ್ನಿ ವಿಜಯಲಕ್ಷ್ಮಿ ಅವರ ಮನೆಗೆ ತೆರಳಿದರು. ಆದರೆ ಈಗ ಅವರು ಮೈಸೂರಿನ ಫಾರ್ಮ್ ಹೌಸ್ ಗೆ ಶಿಫ್ಟ್ ಆಗಿದ್ದಾರೆ. ಪತ್ನಿ ಹಾಗು ಮಗನ ಜೊತೆಗೆ ಫಾರ್ಮ್ ಹೌಸ್ ನಲ್ಲೇ ಇದ್ದಾರೆ. ದರ್ಶನ್ ಅವರು ಈಗ ರೆಸ್ಟ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಡೆವಿಲ್ ಸಿನಿಮಾ ವಿಷಯ ಕೂಡ ಚರ್ಚೆಯಾಗುತ್ತಿದೆ.

ಮಿಲನಾ ಪ್ರಕಾಶ್ ಅವರ ನಿರ್ದೇಶನದಲ್ಲಿ ನಟ ದರ್ಶನ್ ಅವರು ಡೆವಿಲ್ ಎನ್ನುವ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಈ ಸಿನಿಮಾದ ಕೆಲ ಭಾಗದ ಚಿತ್ರೀಕರಣ ನಡೆದಿದ್ದು, ದರ್ಶನ್ ಅವರ ಪೋರ್ಶನ್ ಚಿತ್ರೀಕರಣ ಆಗಬೇಕಿದೆ. ಈ ಎಲ್ಲಾ ಘಟನೆಗಳು ನಡೆದ ಕಾರಣ ಚಿತ್ರೀಕರಣ ಮುಂದಕ್ಕೆ ಹೋಗಿದೆ. ದರ್ಶನ್ ಅವರಿಗೆ ಜಾ*ಮೀನು ಸಿಕ್ಕಿರುವ ಕಾರಣ, ಡೆವಿಲ್ ಶೂಟಿಂಗ್ ಕೂಡ ಶುರುವಾಗಬಹುದು ಎನ್ನುವ ಚರ್ಚೆ ನಡೆಯುತ್ತಿದ್ದು, ಸಧ್ಯಕ್ಕೆ ದರ್ಶನ್ ಅವರು ರೆಸ್ಟ್ ಮಾಡುತ್ತಿರುವ ಕಾರಣ, ಮುಂದಿನ ವರ್ಷ ದರ್ಶನ್ ಅವರ ಹುಟ್ಟುಹಬ್ಬದ ನಂತರ ಡೆವಿಲ್ ಚಿತ್ರೀಕರಣ ಮತ್ತೆ ಶುರುವಾಗಬಹುದು ಎಂದು ಹೇಳಲಾಗುತ್ತಿದೆ..
ಇದರ ಬೆನ್ನಲ್ಲೇ ಮತ್ತೊಂದು ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಅದು ಏನು ಎಂದರೆ, ದರ್ಶನ್ ಅವರು ಈಗ ತಮ್ಮ ಫಾರ್ಮ್ ಹೌಸ್ ನಲ್ಲಿದ್ದಾರೆ, ಇದ್ದಕ್ಕಿದ್ದಂತೆ ಅವರ ಫಾರ್ಮ್ ಹೌಸ್ ಸುತ್ತ ಕವರ್ ಹಾಕಿ ಮುಚ್ಚಲಾಗಿದೆ. ಒಳಗೆ ಏನಾಗುತ್ತಿದೆ ಎನ್ನುವ ವಿಷಯ ಯಾರಿಗೂ ಗೊತ್ತಾಗದ ಹಾಗೆ ಪೂರ್ತಿ ಕವರ್ ಮಾಡಲಾಗಿದೆ. ಈ ರೀತಿ ಫಾರ್ಮ್ ಹೌಸ್ ಪೂರ್ತಿ ಕವರ್ ಆಗಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗೆಯೇ ಈ ರೀತಿ ಮಾಡಿರೋದು ಯಾಕೆ ಎನ್ನುವ ಚರ್ಚೆ, ಊಹಾಪೋಹ ಎಲ್ಲವೂ ಶುರುವಾಗಿದೆ. ಕೆಲವರು ಹೇಳುವ ಪ್ರಕಾರ ರೇಣುಕಾಸ್ವಾಮಿ ಪತ್ನಿ ಮತ್ತು ತಂದೆ ಡಿಬಾಸ್ ಫಾರ್ಮ್ ಗೆ ಬಂದು ಭೇಟಿ ಮಾಡುತ್ತಾರೆ ಎನ್ನಲಾಗಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹೌದು, ನಟ ದರ್ಶನ್ ಅವರು ಈಗ ಫಾರ್ಮ್ ಹೌಸ್ ನಲ್ಲಿದ್ದು ಅವರನ್ನು ಭೇಟಿ ಮಾಡಲು ರೇಣುಕಾಸ್ವಾಮಿ ಅವರ ತಂದೆ ಹಾಗೂ ಪತ್ನಿ ಮಗು ಮೂವರು ಬರಬಹುದು ಅದೇ ಕಾರಣಕ್ಕೆ ಅವರು ಬರುವ ವಿಷಯ ಯಾರಿಗೂ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಫಾರ್ಮ್ ಹೌಸ್ ಅನ್ನು ಪೂರ್ತಿಯಾಗಿ ಕ್ಲೋಸ್ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಡಿಬಾಸ್ ದರ್ಶನ್ ಅವರ ಫ್ಯಾನ್ಸ್ ಮಾಡುತ್ತಿರುವ ಚರ್ಚೆ ಆಗಿದ್ದು, ಈ ಬಗ್ಗೆ ಯಾವುದೇ ಮೂಲಗಳಿಂದ ಅಧಿಕೃತ ಮಾಹಿತಿ ಯಾರಿಗೂ ತಿಳಿದು ಬಂದಿಲ್ಲ. ಒಟ್ಟಿನಲ್ಲಿ ಈ ರೀತಿ ಮಾಡಿರುವುದು ಬಹಳ ಕುತೂಹಲಕ್ಕೆ ಕಾರಣವಾಗಿದೆ.

ಒಳಗೆ ಏನಾಗುತ್ತಿದೆ ಎಂದು ಯಾರಿಗೂ ಗೊತ್ತಾಗಬಾರದು ಎಂದು ದರ್ಶನ್ ಅವರು ಈ ರೀತಿ ವ್ಯವಸ್ಥೆ ಮಾಡಿದ್ದಾರೆ. ಆದರೆ ಜನರಿಗೆ ಒಳಗೆ ಏನಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಇದೆ. ಒಟ್ಟಿನಲ್ಲಿ ನಟ ದರ್ಶನ್ ಅವರು ಒಳಗಿದ್ದಾಗ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದರು, ಈಗ ಹೊರಗಡೆ ಬಂದಮೇಲೆ ಇನ್ನೊಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದಾರೆ. ಇದೆಲ್ಲವೂ ಮುಂದೆ ಯಾವ ಹಂತ ತಲುಪುತ್ತದೆ ಎಂದು ಕಾದು ನೋಡಬೇಕಿದೆ. ಅಭಿಮಾನಿಗಳು ಮಾತ್ರ ದರ್ಶನ್ ಅವರನ್ನು ಬಿಟ್ಟುಕೊಡುವುದಿಲ್ಲ, ದರ್ಶನ್ ಅವರ ಬಗ್ಗೆ ಹೊಸ ಅಪ್ಡೇಟ್ ಗಾಗಿ ಕಾದು ಕುಳಿತಿದ್ದಾರೆ ಡಿಬಾಸ್ ಫ್ಯಾನ್ಸ್.