ಕರುನಾಡು ಕಂಡ ಪ್ರೀತಿಯ ಶಿವಣ್ಣ ಅವರಿಗೆ ನಿನ್ನೆಯಷ್ಟೇ ಅಮೆರಿಕಾದಲ್ಲಿ ಸರ್ಜರಿ ನಡೆದಿದೆ. ಅಭಿಮಾನಿಗಳು ಇಡೀ ಕರ್ನಾಟಕದಲ್ಲಿ ಅವರಿಗಾಗಿ ಪೂಜೆ, ಹೋಮ, ಅರ್ಚನೆ ಇದೆಲ್ಲವನ್ನು ಮಾಡಿಸಿದ್ದರು. ಇದೀಗ ಸಿಕ್ಕಿರುವ ಮಾಹಿತಿಯ ಅನುಸಾರ ಶಿವಣ್ಣ ಅವರ ಸರ್ಜರಿ ಸಕ್ಸಸ್ ಫುಲ್ ಆಗಿ ಮುಗಿದಿದೆ. ವೈದ್ಯರು ಮಾಧ್ಯಮದವರಿಯಾಗಿ ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದು, ಗೀತಕ್ಕ ಸಹ ಮಾತನಾಡಿದ್ದಾರೆ. ಈ ಎಲ್ಲಾ ಅಪ್ಡೇಟ್ ಗಳನ್ನು ಕೇಳಿದ ಬಳಿಕ ಈಗ ಅಭಿಮಾನಿಗಳಿಗೆ ಸಮಾಧಾನ ಉಂಟಾಗಿದ್ದು, ಈ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ, ಈ ಲೇಖನವನ್ನು ಸಂಪೂರ್ಣವಾಗಿ ಓದಿ..

ಶಿವಣ್ಣ ಅವರಿಗೆ ಕೆಲ ತಿಂಗಳುಗಳಿಂದ ಅನಾರೋಗ್ಯ ಉಂಟಾಗಿದೆ ಎನ್ನುವ ವಿಷಯ ಅಷ್ಟೇ ಗೊತ್ತಿತ್ತೆ ಹೊರತು ಏನಾಗಿದೆ ಎಂದು ಸ್ಪಷ್ಟವಾಗಿ ಗೊತ್ತಿರಲಿಲ್ಲ. ಶಿವಣ್ಣ ಅವರಿಗೆ ಕ್ಯಾನ್ಸರ್ ಆಗಿದೆ ಎನ್ನುವ ಸುದ್ದಿಗಳು ಹಬ್ಬಿದರು ಸಹ, ಅವರು ಬಹಿರಂಗವಾಗಿ ತಿಳಿಸಿರಲಿಲ್ಲ, ಅನಾರೋಗ್ಯ ಆಗಿದೆ, ಚಿಕಿತ್ಸೆ ನಡೆಯುತ್ತಿದೆ, ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತೇನೆ, ವೈದ್ಯರು ಪಾಸಿಟಿವ್ ಆಗಿದ್ದಾರೆ ನಾವು ಅವರನ್ನು ನಂಬಿದ್ದೇವೆ ಎಂದಷ್ಟೇ ಹೇಳಿದ್ದರು ಶಿವಣ್ಣ. ಈ ತಿಂಗಳು ಶಿವಣ್ಣ ಅವರು ಅಮೆರಿಕಾದ ಫ್ಲೋರಿಡಾದ ಮಿಯಾಮಿಯಲ್ಲಿರುವ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಗೆ ಸರ್ಜರಿಗಾಗಿ ಹೊರಡುವ ವೇಳೆ ಮಾಹಿತಿ ನೀಡಿದರು.
ಕ್ಯಾನ್ಸರ್ ಸರ್ಜರಿಗಾಗಿ ಹೋಗುತ್ತಿರುವುದಾಗಿ ತಿಳಿಸಿದರು ಶಿವಣ್ಣ. ಶಿವಣ್ಣ ಅವರಿಗೆ ಮೂತ್ರಪಿಂಡದ ಕ್ಯಾನ್ಸರ್ ಆಗಿದ್ದು, ಇಲ್ಲಿರುವಷ್ಟು ದಿವಸ ಅದಕ್ಕಾಗಿ ಚಿಕಿತ್ಸೆ ಪಡೆದರು, ಈಗ ಅಮೆರಿಕಾದಲ್ಲಿ ಸರ್ಜರಿ ನಡೆದಿದೆ. ಡಿಸೆಂಬರ್ 18ರಂದು ಭಾರತದಿಂದ ಮಿಯಾಮಿಗೆ ಹೊರಟರು ಶಿವಣ್ಣ. ನಿನ್ನೆ ಅವರಿಗೆ ಸರ್ಜರಿ ನಡೆದಿದ್ದು, ಕ್ಯಾನ್ಸರ್ ಆಗಿದ್ದ ಮೂತ್ರಪಿಂಡವನ್ನು ರಿಮೂವ್ ಮಾಡಲಾಗಿದೆ. ಈ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದು, ಸರ್ಜರಿ ಸಕ್ಸಸ್ ಫುಲ್ ಆಗಿ ನಡೆದಿದ್ದು, ಕ್ಯಾನ್ಸರ್ ಆಗಿದ್ದ ಭಾಗವನ್ನು ತೆಗೆದು ಹಾಕಿ, ಕರುಳಿನ ಸಹಾಯದಿಂದ ಕೃತಕ ಮೂತ್ರಪಿಂಡವನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ವಿಷಯ ಕೇಳಿ ಅಭಿಮಾನಿಗಳಿಗೆ ಈಗ ಸಮಾಧಾನ ಆಗಿದೆ. ಎಲ್ಲರಿಗೂ ಶಿವಣ್ಣ ಅವರ ಆರೋಗ್ಯದ ಬಗ್ಗೆ ಕಾಳಜಿ ಇತ್ತು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಶಿವಣ್ಣ ಈಗ ಆರೋಗ್ಯವಾಗಿದ್ದು, ಅವರನ್ನು ಬಹಳ ಕೇರ್ ತೆಗೆದುಕೊಂಡು ನೋಡಿಕೊಳ್ಳಲಾಗುತ್ತಿದೆ. ಅವರ ಆರೋಗ್ಯಕ್ಕೆ ಈಗ ಯಾವುದೇ ಸಮಸ್ಯೆ ಇಲ್ಲ, ಚೇತರಿಸಿಕೊಂಡು ಬೇಗ ವಾಪಸ್ ಬರುತ್ತಾರೆ ಎಂದು ತಿಳಿಸಿದ್ದಾರೆ. ಡಾ. ಮುರುಗೇಶ್ ಮನೋಹರನ್ ಅವರ ಮಾರ್ಗದರ್ಶನದಲ್ಲಿ ಸರ್ಜರಿ ಯಶಸ್ವಿಯಾಗಿ ನಡೆದಿದೆ. ಇನ್ನು ಗೀತಕ್ಕ ಸಹ ಮಾತನಾಡಿ, ಅಭಿಮಾನಿಗಳನ್ನು ನಾವು ಯಾವ ರೀತಿ ದೇವರು ಅಂತ ಕರೆಯುತ್ತೀವೋ, ಅದೇ ರೀತಿ ಡಾಕ್ಟರ್ ಗಳು ಕೂಡ ದೇವರು. ಎಲ್ಲರ ಪ್ರೀತಿ ಹಾರೈಕೆ, ಪ್ರಾರ್ಥನೆ ಇಂದ ಶಿವಣ್ಣ ಚೇತರಿಸಿಕೊಂಡಿದ್ದಾರೆ, ಆದಷ್ಟು ಬೇಗ ನಿಮ್ಮೆಲ್ಲರ ಜೊತೆಗೆ ಮಾತನಾಡುತ್ತಾರೆ ಎಂದು ಗೀತಕ್ಕ ತಿಳಿಸಿದ್ದಾರೆ..
ವೈದ್ಯರು ಪ್ರೆಸ್ ನೋಟ್ ಸಹ ಬಿಡುಗಡೆ ಮಾಡಿದ್ದು, ಶಿವಣ್ಣ ಅವರಿಗೆ ಸಮಸ್ಯೆ ಇಲ್ಲ ಅನ್ನೋದನ್ನ ಸ್ಪಷ್ಟವಾಗಿ ತಿಳಿಸಿದ್ದಾರೆ. ಶಿವಣ್ಣ ಅಮೆರಿಕಾಗೆ ಹೋದಾಗಿನಿಂದ ಸಹ ಇಲ್ಲಿ ಅಭಿಮಾನಿಗಳು ಆತಂಕದಲ್ಲಿದ್ದರು, ಶಿವಣ್ಣ ಅವರಿಗೆ ಸರ್ಜರಿ ಯಶಸ್ವಿಯಾಗಿ ನಡೆದು, ಅವರು ಬೇಗ ವಾಪಸ್ ಬರಲಿ, ಮೊದಲಿನ ಹಾಗೆ ಆಕ್ಟಿವ್ ಆಗಿರಲಿ ಎಂದು ಎಲ್ಲಾ ದೇವಸ್ಥಾನಗಳಲ್ಲಿ ಶಿವಣ್ಣ ಅವರಿಗೋಸ್ಕರ ಪೂಜೆ, ಅರ್ಚನೆ, ಹೋಮ ಎಲ್ಲವನ್ನು ಮಾಡಿಸುತ್ತಿದ್ದರು. ಇದೀಗ ಎಲ್ಲರ ಪ್ರಾರ್ಥನೆ, ಶಿವಣ್ಣ ಅವರ ವಿಲ್ ಪವರ್ ಎಲ್ಲವೂ ಫಲ ಕೊಟ್ಟಿದೆ. ಶಿವಣ್ಣ ಸರ್ಜರಿ ಮುಗಿಸಿದ್ದು, ಮುಂದಿನ ತಿಂಗಳು ಈ ಹೊತ್ತಿಗೆ ಕರ್ನಾಟಕಕ್ಕೆ ಮರಳಿ ಬರಲಿದ್ದಾರೆ.



