ತಮ್ಮ ಉತ್ತಮ ಅಭಿನಯದಿಂದಲೇ ಅಪಾರ ಜನ ಮನ್ನಣೆ ಗಳಿಸಿರುವ ಅಪ್ಪಟ ಕನ್ನಡದ ನಟಿ ಚೈತ್ರಾ ಆಚಾರ್ ವಿಶೇಷ ಪಾತ್ರಗಳ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಟಿ ಚೈತ್ರಾ ಆಚಾರ್, ಆಗಾಗ ಫೋಟೋ ವಿಡಿಯೋಗಳನ್ನು ಹಂಚಿಕೊಳ್ತಾರೆ. ಇತ್ತೀಚಿಗೆ ನಟಿ ಸಖತ್ ಸ್ಟೈಲಿಶ್ ಆಗಿ ಫೋಟೋಶೂಟ್ ಮಾಡಿಸಿದ್ದು, ಫೋಟೋಗಳು ಸಖತ್ ವೈರಲ್ ಆಗುತ್ತಿವೆ.


ಮಾರ್ಡನ್ ಡ್ರೆಸ್ನಲ್ಲಿ ಮಾದಕ ನೋಟ ಬೀರಿದ ಚೈತ್ರಾ ಆಚಾರ್ ಕಂಡು ಫ್ಯಾನ್ಸ್ ಶಾಕ್ ಆಗಿದ್ದಾರೆ. ಇದು ಟೋಬಿ ಜೆನ್ನಿನಾ? ಆಥವಾ ಮಾಡರ್ನ್ ಬೆಂಕಿನಾ? ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ನೆಟ್ಟಗ ಹೊಸ ಅವತಾರದಲ್ಲಿ ನಟಿ ಚೈತ್ರಾ ಆಚಾರ್ ಅವರನ್ನು ಕಂಡು ನೋಡಿ ನೋಡಿ ಕನ್ನಡದ ಆಲಿಯಾ ಉರ್ಫಿ ಜಾವೇದ್ ಆಗ್ತಿದ್ದಾರೆ’ ಎಂದಿದ್ದಾರೆ. ನೆಟ್ಟೆಡ್ ಡ್ರೆಸ್ ಧರಿಸಿ ಚೈತ್ರಾ ಆಚಾರ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಚೈತ್ರಾ ಜೆ ಆಚಾರ್ ಇತ್ತೀಚೆಗೆ ತೆರೆ ಕಂಡ ಟೋಬಿ ಚಿತ್ರದಲ್ಲಿ ನಟಿಸಿದ್ದಾರೆ. ಜೆನ್ನಿ ಪಾತ್ರದಲ್ಲಿ ಚೈತ್ರ ಗಮನ ಸೆಳೆದಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲೂ ನಟಿಸಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಪಾರ್ಟ್ 2ರಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ಇವುಗಳ ಜೊತೆ ಸ್ಟ್ರಾಬೆರಿ, ಮಿಟುಕಿಸಿ, ನನಗೆ ಜನ್ಮದಿನದ ಶುಭಾಶಯಗಳು ಸಿನಿಮಾಗಳಲ್ಲೂ ಚೈತ್ರಾ ಆಚಾರ್ ನಟಿಸಿದ್ದು, ಈ ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗಲಿವೆ.