ನಮ್ಮೆಲ್ಲರ ಪ್ರೀತಿಯ ಶಿವಣ್ಣ, ಶಿವ ರಾಜ್ ಕುಮಾರ್ ಅವರು ಇಂದು ರಾತ್ರಿ 8;30 ಕ್ಕೆ ಅಮೆರಿಕಾಗೆ ತೆರಳಲಿದ್ದಾರೆ. ಶಿವಣ್ಣ ಅವರಿಗೆ ಅನಾರೋಗ್ಯ ಉಂಟಾಗಿದ್ದು, ಸರ್ಜರಿ ಮಾಡಿಸಿಕೊಳ್ಳುವುದಕ್ಕಾಗಿ ಶಿವಣ್ಣ ಅಮರಿಕಾಗೆ ಹೋಗುತ್ತಿದ್ದಾರೆ. ಶಿವಣ್ಣ ಅವರ ಜೊತೆಗೆ ಅವರ ಪತ್ನಿ ಗೀತಾ ಶಿವ ರಾಜ್ ಕುಮಾರ್ ಅವರು ಸಹ ಅಮೆರಿಕಾಗೆ ತೆರಳಲಿದ್ದಾರೆ. ಶಿವಣ್ಣ ಅವರು ಇಂದು ಹೊರಡಲಿದ್ದು, ಅವರಿಗೆ ಧೈರ್ಯ ತುಂಬಿ ಕಳಿಸಿಕೊಡುವುದಕ್ಕೆ ಇಂದು ಸಾಕಷ್ಟು ಸೆಲೆಬ್ರಿಟಿಗಳು ಶಿವಣ್ಣ ಅವರ ಮನೆಗೆ ಹೋಗಿದ್ದಾರೆ. ಶಿವಣ್ಣ ಅವರು ಹುಷಾರಾಗಿ ಬೇಗ ವಾಪಸ್ ಬರಲಿ ಎನ್ನುವುದು ಎಲ್ಲರ ಕೋರಿಕೆ ಆಗಿದೆ. ಎಲ್ಲರೂ ಶಿವಣ್ಣನ ಜೊತೆಗೆ ನಿಂತಿದ್ದಾರೆ.

ಹೌದು, ಚಂದನವನದ ಆಧಾರ ಸ್ಥಂಭಗಳಲ್ಲಿ ಶಿವಣ್ಣ ಅವರು ಪ್ರಮುಖರು. ಸುಮಾರು 38 ವರ್ಷಗಳಿಂದ ಶಿವಣ್ಣ ಚಿತ್ರರಂಗದಲ್ಲಿದ್ದಾರೆ. ಡಾ. ರಾಜ್ ಕುಮಾರ್ ಅವರ ಮಗನಾಗಿ ಚಿತ್ರರಂಗ ಪ್ರವೇಶಿಸಿದ ಶಿವಣ್ಣ ಇಂದು ತಾವೇ ಒಂದು ಬ್ರ್ಯಾಂಡ್ ಆಗಿದ್ದಾರೆ ಎಂದರು ತಪ್ಪಲ್ಲ. ಈಗಲೂ ಶಿವಣ್ಣ ಅವರ ಎನರ್ಜಿ ಲೆವೆಲ್ ಗೆ ಯಾರು ಮ್ಯಾಚ್ ಮಾಡೋಕು ಆಗಲ್ಲ. ಎವರ್ ಯಂಗ್ ಅಂಡ್ ಎನರ್ಜಿಟಿಕ್ ಆಗಿರುತ್ತಾರೆ ಶಿವಣ್ಣ. ಇತ್ತೀಚೆಗೆ ಇವರ ಭೈರತಿ ರಣಗಲ್ ಸಿನಿಮಾ ತೆರೆಕಂಡು, ಎಷ್ಟು ದೊಡ್ಡ ಹಿಟ್ ಆಯಿತು ಎನ್ನುವ ವಿಷಯ ನಮಗೆಲ್ಲಾ ಗೊತ್ತೇ ಇದೆ. ಇದರ ನಡುವೆಯೇ ಶಿವಣ್ಣ ಅವರ ಆರೋಗ್ಯದ ವಿಷಯ ಸಹ ಚರ್ಚೆ ಆಗಿತ್ತು.
ಶಿವಣ್ಣ ಅವರಿಗೆ ಅನಾರೋಗ್ಯ ಉಂಟಾಗಿದೆ, ಚಿಕಿತ್ಸೆ ಪಡೆಯುತ್ತಿದ್ದಾರೆ, ಸರ್ಜರಿ ಆಗಬೇಕಿರುವ ಕಾರಣ ಶಿವಣ್ಣ ಅಮೇರಿಕಾಗೆ ಹೋಗುತ್ತಾರೆ ಎನ್ನಲಾಗಿತ್ತು. ಅದೇ ರೀತಿ ಇಂದು ಶಿವಣ್ಣ ಆಸ್ಪತ್ರೆಗೆ ತೆರಳಲಿದ್ದು, ಡಿಸೆಂಬರ್ 24ರಂದು ಅವರಿಗೆ ಸರ್ಜರಿ ನಡೆಯಲಿದೆ. ಒಂದು ತಿಂಗಳ ಕಾಲ ಅಲ್ಲಿಯೇ ವಿಶ್ರಾಂತಿ ಪಡೆಯಲಿರುವ ಶಿವಣ್ಣ, ಮುಂದಿನ ತಿಂಗಳ ಕೊನೆಗೆ ವಾಪಸ್ ಬರಲಿದ್ದಾರೆ. ನಟ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಬಗ್ಗೆ ಖುದ್ದು ಶಿವಣ್ಣ ಅವರೇ ಕೆಲವು ಕಾರ್ಯಕ್ರಮಗಳಲ್ಲಿ ಹೇಳಿಕೊಂಡರು. ಇಂದು ಸಂಜೆ ಶಿವಣ್ಣ ಹೊರಡಲಿದ್ದಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಈ ಸಮಯದಲ್ಲಿ ಶಿವಣ್ಣ ಅವರ ಜೊತೆಗೆ ಇಡೀ ಚಿತ್ರರಂಗ ಹಾಗೂ ಅಭಿಮಾನಿಗಳು ಎಲ್ಲರೂ ಇದ್ದಾರೆ. ಶಿವಣ್ಣ ಬೇಗ ಹುಷಾರಾಗಿ ಬಂದು, ಸಿನಿಮಾಗಳಲ್ಲಿ ನಟಿಸಲು ಶುರು ಮಾಡಲಿ ಎನ್ನುವುದೇ ಎಲ್ಲರ ಆಸೆ. ಶಿವಣ್ಣ ಅವರು ಇಂದು ಅಮೆರಿಕಾಗೆ ಹೊರಡಲಿರುವ ಕಾರಣ, ಅವರ ಮನೆಗೆ ಹಲವು ಗಣ್ಯ ವ್ಯಕ್ತಿಗಳು ಭೇಟಿ ನೀಡಿ, ನಿಮ್ಮೊಡನೆ ನಾವಿದ್ದೇವೆ ಎಂದು ಹೇಳಿದ್ದಾರೆ. ನಟ ಕಿಚ್ಚ ಸುದೀಪ್ ಅವರು ಶಿವಣ್ಣನಿಗೆ ಆಪ್ತರು, ಶಿವಣ್ಣನ ತಮ್ಮನ ಹಾಗೆ ಎಂದರು ತಪ್ಪಲ್ಲ. ಶಿವಣ್ಣ ಅವರು ಸುದೀಪ್ ಅವರು ಭೇಟಿ ನೀಡಿ, ಶಿವಣ್ಣನ ಜೊತೆಗೆ ಮಾತನಾಡಿ, ಧೈರ್ಯ ತುಂಬಿದ್ದಾರೆ. ಕನ್ನಡದ ನಟ ಹಾಗೂ ರಾಜಕಾರಣಿ ಆಗಿರುವ ಬಿ.ಸಿ ಪಾಟೀಲ್ ಅವರು ಸಹ ಶಿವಣ್ಣ ಅವರ ಮನೆಗೆ ಭೇಟಿ ನೀಡಿದ್ದಾರೆ.

ಹೌದು, ಶಿವಣ್ಣ ಅವರು ಎಲ್ಲರಿಗೂ ಆಪ್ತರು, ಬಿ.ಸಿ ಪಾಟೀಲ್ ಅವರ ಜೊತೆಗೆ ಕೂಡ ಅದೇ ಆಪ್ತತೆ ಹೊಂದಿದ್ದು, ಶಿವಣ್ಣ ಅವರ ಜೊತೆಗೆ ಸಮಯ ಕಳೆದು ಧೈರ್ಯ ತುಂಬಿದ್ದಾರೆ. ಸಚಿವರಾದ ಮಧು ಬಂಗಾರಪ್ಪ ಸಹ ಶಿವಣ್ಣ ಅವರ ಮನೆಗೆ ಹೋಗಿ ಭೇಟಿ ಮಾಡಿದ್ದಾರೆ. ಗೀತಕ್ಕ ಅವರ ಸಹೋದರ ಇವರು, ಹಾಗಾಗಿ ಹೋಗಿದ್ದಾರೆ. ಇನ್ನು ವಿನೋದ್ ರಾಜ್ ಅವರು ಸಹ ಶಿವಣ್ಣನ ಆರೋಗ್ಯದ ಬಗ್ಗೆ ವಿಚಾರಿಸುವ ಸಲುವಾಗಿ, ಮನೆಗೆ ಹೋಗಿದ್ದು, ಅವರ ತೋಟದಲ್ಲಿ ಬೆಳೆದ ತರಕಾರಿಗಳು ಮತ್ತು ಹಣ್ಣುಗಳನ್ನು ಶಿವಣ್ಣ ಅವರಿಗಾಗಿ ತೆಗೆದುಕೊಂಡು ಹೋಗಿದ್ದಾರೆ. ಶಿವಣ್ಣ ಅವರ ಸ್ವಲ್ಪ ಸಮಯ ಕಳೆದು ಧೈರ್ಯ ಹೇಳಿ, ನಗು ತಂದಿದ್ದಾರೆ. ನಮ್ಮ ಶಿವಣ್ಣ ಬೇಗ ಚಿಕಿತ್ಸೆ ಮುಗಿಸಿಕೊಂಡು ವಾಪಸ್ ಬರಲಿ.