ಇತ್ತೀಚೆಗೆ ಸಿನಿಮಾ ನಟಿಯರಂತೆ ಸಿರಿಯಲ್ ನಟಿಯರು ಕೂಡ ಬೋಲ್ಡ್ ಫೋಟೋಶೂಟ್ ನಡೆಸುವ ಟ್ರೆಂಡ್ ಶುರುವಾಗಿದೆ. ಇದೀಗ ‘ಅಗ್ನಿಸಾಕ್ಷಿ’ ಸಿರಿಯಲ್ ನಟಿ ಇಶಿತಾ ಬೋಲ್ಡ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಹಸಿಬಿಸಿ ಫೋಟೋಗಳನ್ನು ಕಂಡು ನೆಟ್ಟಿಗರು ‘ಈಕೆ ಫೈರ್ ಇಂಜಿನ್’ ಎನ್ನುತ್ತಿದ್ದಾರೆ.



ಕನ್ನಡದ ಅಗ್ನಿಸಾಕ್ಷಿ ಸಿರಿಯಲ್, ‘ರಾಜ ರಾಣಿ’ ಶೋ ಮೂಲಕ ಮೋಡಿ ಮಾಡಿರುವ ಚೆಲುವೆ ಇಶಿತಾ ವರ್ಷ, ಸಖತ್ ಗ್ಲ್ಯಾಮರಸ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಮಾಡ್ರನ್ ಉಡುಗೆಯಲ್ಲಿ ಮಸ್ತ್ ಆಗಿ ನಟಿ ಪೋಸ್ ನೀಡಿದ್ದಾರೆ. ಇಶಿತಾ ಲುಕ್ ಕಂಡಿರುವ ನೆಟ್ಟಿಗರು ಸೌಂದರ್ಯವನ್ನು ಹಾಡಿ ಹೊಗಳುತ್ತಿದ್ದಾರೆ. ಕಮೆಂಟ್ ಮೂಲಕ ನಟಿಯ ಅಂದವನ್ನು ಹೊಗಳುತ್ತಿದ್ದಾರೆ.
ಕೊರಿಯೋಗ್ರಾಫರ್ ಮುರುಗಾನಂದ ಜೊತೆ ಇಶಿತಾ ವರ್ಷ ಪ್ರೀತಿಸಿ ಮದುವೆಯಾದರು. ಇದೀಗ ಇಬ್ಬರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಮತ್ತು ಸೌತ್ನಲ್ಲಿ ಸಾಕಷ್ಟು ದೊಡ್ಡ ಕಲಾವಿದರ ಚಿತ್ರಕ್ಕೆ ಮುರುಗಾನಂದ ಡ್ಯಾನ್ಸ್ ಕೊರಿಯೋಗ್ರಾಫಿ ಮಾಡಿ ಸೈ ಎನಿಸಿಕೊಂಡಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಿಗ್ ಬಾಸ್ ಮನೆ ಸ್ಪರ್ಧಿಗಳ ಸಾಲಿನಲ್ಲಿ ಇಶಿತಾ ವರ್ಷ ಕೂಡ ಹೋಗಲಿದ್ದಾರೆ ಎನ್ನಲಾಗುತ್ತಿದೆ.