ಬಾಲಿವುಡ್ ಬೆಡಗಿ ನಟಿ ಪರಿಣಿತಿ ಚೋಪ್ರಾ ಹಾಗೂ ಆಪ್ ಸಂಸದ ರಾಘವ್ ಚಡ್ಡಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್ನಲ್ಲಿ ಸೆಪ್ಟೆಂಬರ್ 24ರಂದು ಅದ್ಧೂರಿಯಾಗಿ ಈ ನವಜೋಡಿ ಸಪ್ತಪದಿ ತುಳಿದಿದ್ದಾರೆ. ಇವರ ಮದುವೆಗೆ ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಇತರೆ ಕ್ಷೇತ್ರದ ದಿಗ್ಗಜರು ಆಗಮಿಸಿ ಶಭ ಹಾರೈಸಿದ್ದಾರೆ. ಇದೀಗ ಮದುವೆ ಮನೆಯಲ್ಲಿ ತಮ್ಮ ಪತಿಯನ್ನು ಕದ್ದಯ ಕದ್ದು ನೋಡಿ ಪರಿಣಿತಿ ಚೋಪ್ರಾ ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ.ಈ ವಿಡಿಯೋ ವೈರಲ್ ಆಗಿದೆ.
ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ಮದುವೆಗಾಗಿ ರಾಜಸ್ಥಾನದ ಉದಯಪುರದಲ್ಲಿರುವ ಲೀಲಾ ಪ್ಯಾಲೇಸ್ ಹೋಟೆಲ್ ಅನ್ನು ಬುಕ್ ಮಾಡಲಾಗಿತ್ತು. ಲೀಲಾ ಪ್ಯಾಲೇಸ್ ಸುತ್ತಮುತ್ತ ಭಾರಿ ಬಂದೋಬಸ್ತ್ ಮಾಡಲಾಗಿತ್ತು. ಇನ್ನೂ ಪರಿಣಿತಿ ಚೋಪ್ರಾ ಅವರ ಸಂಬಂಧಿ ನಟಿ ಪ್ರಿಯಾಂಕಾ ಚೋಪ್ರಾ ಅವರು ಮದುವೆಗೆ ವಿದೇಶದಿಂದ ಆಗಮಿಸಿದ್ದರು. ದಂಪತಿಗೆ ಶುಭ ಹಾರೈಸಿದ್ದಾರೆ. ಇನ್ನೂ, ಸಾಮಾಜಿಕ ಜಾಲತಾಣದಲ್ಲಿ ಪರಿಣಿತಿ ಚೋಪ್ರಾ ಅವರ ಮಾಂಗಲ್ಯ ಅವರ ಉಡುಪುಗಳ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು.
ನವಜೋಡಿ ಸೋಷಿಯಲ್ ಮೀಡಿಯಾದಲ್ಲಿಂದು ತಮ್ಮ ಅದ್ಧೂರಿ ಮದುವೆಯ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಹೊಸ ಜೀವನದ ಮದುರ ಕ್ಷಣಗಳು ಈ ವಿಡಿಯೋದಲ್ಲಿ ಸೆರೆಯಾಗಿವೆ. ಸಿಂಧೂರ ಹಚ್ಚುವುದು, ಡ್ಯಾನ್ಸ್ ಮಾಡುವುದು, ವಿಶೇಷ ಎಂದರೆ ನಟಿ ಪರಿಣಿತಿ ಚೋಪ್ರಾ ಅವರು ರಾಘವ್ ಚಡ್ಡಾರನ್ನು ಕದ್ದು ಕದ್ದು ನೋಡುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಇನ್ನೂ ನಟಿ ಪರಿಣಿತಿ ಚೋಪ್ರಾ ಅವರು ಓ ಪಿಯಾ ಎಂಬ ಸ್ಪೆಷಲ್ ಸಾಂಗ್ ಅನ್ನು ಸಂಸದ ರಾಘವ್ ಚಡ್ಡಾ ಅವರಿಗೆ ಅರ್ಪಿಸಿದ್ದಾರೆ. ಇನ್ನೂ ಈ ಓ ಪಿಯಾ ಹಾಡನ್ನು ಸ್ವತಃ ಪರಿಣಿತಿ ಅವರೇ ಪತಿ ರಾಘವ್ಗಾಗಿ ಹಾಡಿದ್ದಾರೆ.ಸದ್ಯ, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.



