ಬಿಗ್ ಬಾಸ್ ಶೋ ವಿನ್ನರ್ ಆದ ಬಳಿಕ ಹನುಮಂತ ಈಗ ಟಾಕ್ ಆಫ್ ದಿ ಟೌನ್ ಆಗಿದ್ದಾನೆ. ಎಲ್ಲಾ ಕಡೆ ಹನುಮಂತನದ್ದೇ ಮಾತು. ಹಳ್ಳಿ ಹುಡುಗ ಸರಿಗಮಪ ಮೂಲಕ ಫೇಮಸ್ ಆಗಿ ಇಂದು ಬಿಗ್ ಬಾಸ್ ಶೋ ಕೂಡ ಗೆದ್ದು ದೊಡ್ಡ ಸ್ಟಾರ್ ಆಗಿದ್ದಾರೆ. ಬಣ್ಣ ಬಣ್ಣದ ಮಾತುಗಳನ್ನಾಡದೇ, ಬಣ್ಣ ಬಣ್ಣದ ಡಿಸೈನರ್ ಬಟ್ಟೆಗಳನ್ನು ಧರಿಸದೇ, ಸರಳವಾಗಿದ್ದು ಜನರ ಮನಸ್ಸು ಗೆದ್ದ ಹುಡುಗ ಹನುಮಂತ. ಬಿಗ್ ಬಾಸ್ ಮನೆಯೊಳಗೆ ಇದ್ದ ಬೇರೆ ಎಲ್ಲಾ ಸ್ಪರ್ಧಿಗಳಿಗಿಂತ ಹನುಮಂತ ಯೋಚನೆ ಮಾಡುತ್ತಿದ್ದ ರೀತಿಯೇ ಬೇರೆ. ತನ್ನ ಆಟವನ್ನು ಬುದ್ಧಿವಂತಿಕೆ ಇಂದ ಆಡಿ, ಬಿಗ್ ಬಾಸ್ ವಿನ್ನರ್ ಪಟ್ಟ ಗಳಿಸಿದ್ದಾನೆ ಹನುಮಂತ. ಬಿಗ್ ಬಾಸ್ ಶೋ ವಿನ್ ಆಗಿದ್ದಾಯ್ತು, ಹನುಮಂತ ಮದುವೆ ಆಗೋದು ಯಾವಾಗ ಅನ್ನೋ ವಿಚಾರ ಈಗ ಚರ್ಚೆ ಆಗುತ್ತಿದೆ.. ಅವರ ಊರಿನ ಜನರು ಹನುಮಂತನ ಮದುವೆ ಬಗ್ಗೆ ಹೇಳೋದೇನು ಗೊತ್ತಾ?
ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ಸಣ್ಣ ಹಳ್ಳಿಯ ಹುಡುಗ ಹನುಮಂತ, ಬಣ್ಣದ ಲೋಕದ ಜರ್ನಿ ಶುರು ಮಾಡಿದ್ದು ಸರಿಗಮಪ ಕಾರ್ಯಕ್ರಮದ ಮೂಲಕ. ಈ ಶೋ ಹನುಮಂತನಿಗೆ ಅದ್ಭುತವಾದ ಪ್ಲಾಟ್ ಫಾರ್ಮ್ ಆಗಿತ್ತು, ಹಾಡುವುದನ್ನು ಯಾರಿಂದಲೂ ಕಲಿಯದೇ ಹೋದರು, ಆನ್ ದಿ ಸ್ಪಾಟ್ ಪದ ಕಟ್ಟಿ ಹಾಡುವ ಸಾಮರ್ಥ್ಯ ಇರುವ ಹನುಮಂತ ಸರಿಗಮಪ ಶೋ ಜಡ್ಜ್ ಗಳ ಮನಸೆಳೆದು, ಆಯ್ಕೆಯಾಗಿ, ಜನರಿಗೂ ಕೂಡ ತುಂಬಾ ಇಷ್ಟವಾಗಿದ್ದ. ಈ ಹುಡುಗನ ಮುಗ್ಧತೆ ಹಾಗೂ ಹಾಡುವ ಶೈಲಿ ಎಲ್ಲರಿಗೂ ತುಂಬಾ ಇಷ್ಟವಾಗಿತ್ತು. ಸರಿಗಮಪ ಶೋ ಹನುಮಂತನಿಗೆ ಬಹಳಷ್ಟು ಜನಪ್ರಿಯತೆ ತಂದುಕೊಟ್ಟಿತು. ವಿನ್ನರ್ ಸಹ ಆಗಿ ಹೆಸರುವಾಸಿಯಾದ ಹನುಮಂತ. ಆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಹನುಮಂತನ ಬಗ್ಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಿತ್ತು.

ಆದರೆ ಬಿಗ್ ಬಾಸ್ ಗೆ ಬಂದ ಬಳಿಕ ಹನುಮಂತನ ಬಗ್ಗೆ ಹೆಚ್ಚು ಚರ್ಚೆ ಶುರುವಾಯಿತು. ಹನುಮಂತ ಬಿಗ್ ಬಾಸ್ ಗೆ ಬಂದಿದ್ದು 3ನೇ ವಾರ, ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಹನುಮಂತ ಮನೆಯಲ್ಲಿ ಇರುವ ಎಲ್ಲರಿಗೂ ಒಂದು ರೀತಿ ಸರ್ಪ್ರೈಸ್ ಸ್ಪರ್ಧಿ ಆಗಿದ್ದ. ಆದರೆ ಇವನು ಟಾಸ್ಕ್ ಆಡುವ ರೀತಿ ಎಲ್ಲರಿಗೂ ಆಶ್ಚರ್ಯ ತಂದಿತ್ತು. ಹನುಮಂತ ಯೋಚನೆ ಮಾಡುವ ರೀತಿಯೇ ಬೇರೆ. ಎಲ್ಲರೂ ಕಪ್ ಗೆಲ್ಲಬೇಕು ಎಂದು ಪ್ರೆಶರ್ ತಗೊಂಡು ಯೋಚನೆ ಮಾಡಿದರೆ, ಹನುಮಂತ ಮಾತ್ರ, ಈ ಟಾಸ್ಕ್ ಗೆಲ್ಲೋದಕ್ಕೆ ಏನು ಮಾಡಬೇಕು ಅಂತ ವರ್ತಮಾನದಲ್ಲಿ ಯೋಚನೆ ಮಾಡುತ್ತಿದ್ದ. ಇವತ್ತಿನ ದಿನ, ಈ ಟಾಸ್ಕ್, ಈ ವೇಳೆ ಎಫರ್ಟ್ಸ್ ಹಾಕಿ, ಉತ್ತಮವಾದ ಪ್ರದರ್ಶನ ಕೊಡಬೇಕು ಎನ್ನುವುದನ್ನು ಮಾತ್ರ ಯೋಚಿಸುತ್ತಾ, ಒಳ್ಳೇ ದಾರಿಯಲ್ಲಿ ನಡೆದ ಹನುಮಂತ ವಿನ್ನರ್ ಆಗಿದ್ದಾನೆ.
ಸುದೀಪ್ ಅವರು ಸಹ ವೀಕೆಂಡ್ ಸಂಚಿಕೆಗಳಲ್ಲ ಹಲವು ಸಾರಿ ಹನುಮಂತ ಅವರು ಗೇಮ್ ಗಳನ್ನು ಅರ್ಥ ಮಾಡಿಕೊಳ್ಳುವ ರೀತಿ, ಅವರ ಪ್ಲಾನ್ ಗಳು ಇದೆಲ್ಲದರ ಬಗ್ಗೆ ಬಹಳ ಸಂತೋಷದಿಂದ ಮೆಚ್ಚುಗೆ ಸೂಚಿಸಿದ್ದು ಇದೆ. ಹೀಗೆ ಬುದ್ಧಿವಂತಿಕೆ ಮತ್ತು ಮುಗ್ಧತೆ ಇಂದ ಹೊರಗಿನ ಜನರಿಗೂ ತುಂಬಾ ಇಷ್ಟವಾಗಿದ್ದಾನೆ. ಹನುಮಂತ ಆಡುವ ಶೈಲಿಗೆ ಮನಸೋತಿರುವ ಜನರು, ಹನುಮಂತ ಗೆದ್ದರೆ ಮಾತ್ರ ಈ ಸೀಸನ್ ಗೆ ನ್ಯಾಯ ಸಿಕ್ಕ ಹಾಗೆ ಎಂದು ಹೇಳುತ್ತಿದ್ದರು. ಜನರ ಆಸೆಯಂತೆ ಹನುಮಂತ ಗೆದ್ದಿದ್ದಾನೆ, ಈತನ ಬಗ್ಗೆ ಹೆಮ್ಮೆ ಪಡುವ ಮತ್ತೊಂದು ವಿಷಯ ಏನು ಎಂದರೆ.. ಪಾಪ ಹನುಮಂತ ಎಂದಿಗೂ ತಾನು ಬಡವ, ತನಗೆ ಹಣದ ಅವಶ್ಯಕತೆ ಇದೆ ಎಂದು ಜನರ ಎದುರು ಅಥವಾ ಕ್ಯಾಮೆರಾ ಎದುರು ಸಿಂಪತಿ ಪಡೆಯುವ ಪ್ರಯತ್ನ ಮಾಡಲಿಲ್ಲ. ತನ್ನ ಆಟವನ್ನು ತಾನು ಆಡಿ ನ್ಯಾಯಯುತವಾಗಿ ಆಡಿ ಇಂದು ವಿನ್ನರ್ ಆಗಿದ್ದಾನೆ.

ಹನುಮಂತ ಹೊರಗಡೆ ಬರುತ್ತಿದ್ದ ಹಾಗೆಯೇ ಜನರು ಅವನಿಗೆ ಜನರಿಂದ ಪ್ರೀತಿಯ ಸ್ವಾಗತ ಸಿಕ್ಕಿದೆ. ಹೆಚ್ಚಿಗೆ ಇಂಟರ್ವ್ಯೂ ಗಳಲ್ಲಿ ಕಾಣಿಸಿಕೊಳ್ಳದೇ ಇದ್ದರೂ, ಕಾಣಿಸಿಕೊಂಡ ಕೆಲವು ಕಡೆಗಳಲ್ಲಿ ಹನುಮಂತ ಹೇಳಿದ ಮಾತುಗಳು ಜನರಿಗೆ ಬಹಳ ಜನರಿಗೆ ಇಷ್ಟವಾಗಿದೆ. ಜೀಕನ್ನಡ ನನಗೆ ತವರು ಮನೆ ಇದ್ದ ಹಾಗೆ, ಕಲರ್ಸ್ ಕನ್ನಡ ಗಂಡನ ಮನೆ ಇದ್ದ ಹಾಗೆ ,ನಾನು ಗಂಡನ ಮನೆಗೆ ಬಂದಿದ್ದೇನೆ ಎಂದು ಹೇಳಿದ್ದಾನೆ. ಹನುಮಂತನ ಈ ಮಾತು ತಾನು ನಡೆದುಬಂದ ಹಾದಿಯನ್ನು ಈ ಹುಡುಗ ಮರೆತಿಲ್ಲ ಎನ್ನುವುದಕ್ಕೆ ಸಾಕ್ಷಿ. ಈ ಒಳ್ಳೆತನವೇ ಹನುಮಂತನನ್ನು ಇಷ್ಟು ದೂರ ಕರೆದುಕೊಂಡು ಬಂದಿದೆ. ಹೊರಗಡೆ ಜನ ಮಾತ್ರವಲ್ಲ ಹನುಮಂತನ ಊರಿನ ಜನರು ಕೂಡ ಈತನ ಬಗ್ಗೆ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿದ್ದು ಸಂತೋಷದ ಮಾತುಗಳನ್ನು ಆಡಿದ್ದಾರೆ.
ಊರಿನ ಜನರಲ್ಲಿ ಕೆಲವರನ್ನು ಸಂದರ್ಶನ ಮಾಡಿದಾಗ, ನಮ್ಮ ಊರಿನ ಹುಡುಗ ಸ್ಟಾರ್ ಆಗಿದ್ದಾನೆ, ರಾಜ್ಯಕ್ಕೆ ಹೆಮ್ಮೆ ತಂದಿದ್ದಾನೆ ಎಂದು ಸಂತೋಷ ಪಟ್ಟಿದ್ದಾರೆ. ಮನೆಯಲ್ಲಿ ಬಡತನ ಇದ್ದರೂ ಅವರ ತಂದೆ ತಾಯಿ ಯಾರಾದರೂ ಮನೆಗೆ ಹೋದರೆ ತುಂಬಾ ಚೆನ್ನಾಗಿ ಮಾತನಾಡಿಸಿ ಆರೈಕೆ ಮಾಡುತ್ತಾರೆ. ಸರಿಗಮಪ ಕಾರ್ಯಕ್ರಮಕ್ಕೆ ಹೋದಾಗಿನಿಂದ ಹನುಮಂತ ನಮ್ಮ ಊರಿಗೆ ಒಳ್ಳೆಯ ಹೆಸರು ತಂದಿದ್ದ, ಬಿಗ್ ಬಾಸ್ ಗೆದ್ದು ಗೌರವ ಹೆಚ್ಚಿಸಿದ್ದಾನೆ ಎಂದಿದ್ದಾರೆ. ಇನ್ನು ಹನುಮಂತ ಬೆಳೆಯುವ ಸಮಯದಲ್ಲಿ ಊರಿನ ಜನರು ಆತನಿಗೆ ಸಹಾಯ ಮಾಡಿದ್ದಾರೆ. ಕಾರ್ಯಕ್ರಮಗಳಿಗೆ ಹೋಗುವ ಹಾಗಿದ್ದಾಗ ಕಾರ್ ನಲ್ಲಿ ಹೋಗು ಎಂದು ಕೊಡುತ್ತಿದ್ದರಂತೆ. ಸರಿಗಮಪ ಕಾರ್ಯಕ್ರಮ ಮುಗಿದ ಮೇಲೆ, ಹನುಮಂತ ಸ್ವಂತ ಕಾರ್ ಖರೀದಿ ಮಾಡಿದ್ದು ಎನ್ನಲಾಗಿದೆ. ಹಾಗೆಯೇ ಹನುಮಂತನ ಮದುವೆ ವಿಷಯ ಸಹ ಭಾರಿ ಚರ್ಚೆಗೆ ಒಳಗಾಗಿದೆ.

ಬಿಗ್ ಬಾಸ್ ಮನೆಯ ಒಳಗಿದ್ದಾಗ ಹನುಮಂತ ತಾನು ಹುಡುಗಿಯನ್ನು ನೋಡಿಕೊಂಡಿರುವುದಾಗಿ ಹೇಳಿದ್ದ. ಬಿಗ್ ಬಾಸ್ ಮುಗಿದ ಮೇಲೆ ಮದುವೆ ಆಗುತ್ತೇನೆ ಎಂದು ಸಹ ಹೇಳಿದ್ದ. ಫಿನಾಲೆ ಸಂಚಿಕೆಯಲ್ಲಿ ಸುದೀಪ್ ಅವರು ಸಹ ಹನುಮಂತನ ತಾಯಿಯ ಜೊತೆಗೆ ಮಾತನಾಡಿ, ತಾಯಿಯನ್ನು ಮದುವೆಗೆ ಒಪ್ಪಿಸಿದ್ದರು. ಹನುಮಂತ ಈಗಾಗಲೇ ಹುಡುಗಿಯನ್ನು ನೋಡಿಕೊಂಡಿದ್ದಾನೆ, ನೀವು ನೋಡಿ ಒಪ್ಪಿ ಮದುವೆ ಮಾಡಿಸಬೇಕು ಎಂದು ಹೇಳಿದರು. ಹನುಮಂತನ ತಾಯಿ ಒಪ್ಪಿಕೊಂಡಾಗ ತಾವು ಕೂಡ ಹನುಮಂತನ ಮದುವೆಗೆ ಬರುವುದಾಗಿ ಹೇಳಿದರು ಕಿಚ್ಚ. ಊರಿನ ಜನರನ್ನು ಈ ಬಗ್ಗೆ ಪ್ರಶ್ನೆ ಕೇಳಿದಾಗ, ಇನ್ನು 4 ತಿಂಗಳ ಒಳಗೆ ಹನುಮಂತನ ಮದುವೆ ನಡೆಯಬಹುದು ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಶೀಘ್ರದಲ್ಲೇ ಹನುಮಂತ ಗುಡ್ ನ್ಯೂಸ್ ಕೊಡೋದ್ರಲ್ಲಿ ಯಾವುದೇ ಸಂಶಯವಿಲ್ಲ.