ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸುತ್ತಿದೆ. ಆ ಸಂಭ್ರಮವನ್ನ ಅದ್ಧೂರಿಯಾಗಿ ಮಾಡಲು ಸರ್ಕಾರ ತೀರ್ಮಾನ ಮಾಡಿದೆ. ಎರಡು ವರ್ಷದ ಸಂಭ್ರಮದ ಬೆನ್ನಲ್ಲೇ ಈಗ ಸಚಿವ ಸಂಪುಟ ಪುನರ್ರಚನೆ ಕೂಗು ಕೂಡ ಹೆಚ್ಚಾಗುತ್ತಿದೆ. ಆಕಾಂಕ್ಷಿಗಳಿಗೆ ಸಚಿವರಾಗುವ ತವಕ ಹೆಚ್ಚಾದ್ರೆ, ನಿಷ್ಕ್ರಿಯ ಸಚಿವರಿಗೆ ಕ್ಯಾಬಿನೆಟ್ನಿಂದ ಗೇಟ್ಪಾಸ್ ಸಿಗುವ ಆತಂಕ ಶುರುವಾಗಿದೆ. ಸರ್ಕಾರದ ಎರಡು ವರ್ಷದ ಸಾಧನ ಸಮಾವೇಶದ ಬಳಿಕ ಸಂಪುಟ ಕಸರತ್ತು ಆರಂಭವಾಗುವ ಲಕ್ಷಣ ಕಾಣಿಸ್ತಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದೇ ಮೇ 20 ಕ್ಕೆ ಎರಡು ವರ್ಷ ತುಂಬಲಿದೆ. ಎರಡು ವರ್ಷ ಪೂರೈಸ್ತಿರುವ ಹೊಸ್ತಿಲಲ್ಲೇ ಸಚಿವ ಸಂಪುಟ ಪುನರ್ ರಚನೆ ಕೂಗು ಶುರುವಾಗ್ತಿದೆ. ಆಡಳಿತಕ್ಕೆ ಹೊಸತನ ತರುವುದು, ಚುರುಕು ಮುಟ್ಟಿಸುವ ದೃಷ್ಟಿಯಿಂದ ಸಚಿವ ಸಂಪುಟ ಪುನರ್ ರಚನೆ ಅನಿವಾರ್ಯ. ಅನೇಕ ಹಿರಿಯರಿಗೂ ಜವಬ್ದಾರಿ ಕೊಡಬೇಕು ಅನ್ನೋದು ಕೂಡ ಇದೆ. ಜೊತೆಗೆ ನಿಷ್ಕ್ರಿಯ ಸಚಿವರನ್ನು ಕೈಬಿಟ್ಟು ಕ್ರಿಯಾಶೀಲವಾಗಿ ಕೆಲಸ ಮಾಡುವವರಿಗೆ ರಚನೆ ಅದು ಹುಟ್ಟಿಕೊಂಡಿದ್ದೂ ಕೂಡ ಸಂಪುಟದ ಸಚಿವ ಮುನಿಯಪ್ಪ ಹೇಳಿಕೆಯಿಂದ. ಸಚಿವ ಸಂಪುಟ ಪುನರ್ರಚನೆ ವಿಚಾರಕ್ಕೆ ಕಿಡಿ ಹೊತ್ತಿಸಿದ್ದೇ ಈಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಹಿರಿಯರು ಕಿರಿಯರಿಗೆ ಅಧಿಕಾರ ಬಿಟ್ಟು ಕೊಡಬೇಕು, ಮುಂದೆ ಅಧಿಕಾರಕ್ಕೆ ಬರಬೇಕಾದರೆ ತ್ಯಾಗಕ್ಕೆ ಸಿದ್ಧ ಆಗಬೇಕು ಎಂದಿರುವ ಮುನಿಯಪ್ಪ ಸಚಿವಾಕಾಂಕ್ಷಿಗಳಿಗೆ ಭರವಸೆ ಮೂಡಿಸಿದ್ದಾರೆ. ಸಚಿವರು ತ್ಯಾಗ ಮಾಡುವ ಜೊತೆಗೆ ನಿಷ್ಕ್ರಿಯರನ್ನ ಬದಲಾಯಿಸುವುದು ಸೂಕ್ತ ಎನ್ನುವ ಅಭಿಪ್ರಾಯ ಮುನಿಯಪ್ಪ ಹೇಳಿಕೆಯಲ್ಲಿದೆ. ಇತ್ತ ಇದೇ ಅಭಿಪ್ರಾಯವನ್ನ ಸಚಿವ ಮುನಿಯಪ್ಪ ಹೇಳಿಕೆಯನ್ನ ಸಚಿವ ರಾಮಲಿಂಗಾ ರೆಡ್ಡಿ, ಸಚಿವ ದಿನೇಶ್ ಗುಂಡೂರಾವ್ ಸ್ವಾಗತಿಸಿದ್ದಾರೆ. ಹೈಕಮಾಂಡ್ ಇದನ್ನ ಗಮನಿಸಿ ತೀರ್ಮಾನ ಕೈಗೊಳ್ಳಬೇಕು ಎಂದಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಗಳು ಕೂಡ ಅವಕಾಶ ಸಿಕ್ಕಾಗೆಲ್ಲಾ ಸಚಿವ ಸ್ಥಾನಕ್ಕೆ ಬೇಡಿಕೆ ಇಡುತ್ತಲೇ ಬರ್ತಿದ್ದಾರೆ. ಶಾಸಕ ಕೋನ ರೆಡ್ಡಿ ಹಾಗೂ ಶಾಸಕ ಶಿವಲಿಂಗೇಗೌಡ ಕೂಡ ಸಚಿವರಾಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಎರಡು ವರ್ಷ ತುಂಬಿ ಸುಭದ್ರ ಸರ್ಕಾರವಾಗಿ ಉಳಿದಿದೆ ಯಾರೇ ಏನೇ ಬೊಮ್ಮಡಿ ಹೊಡೆದುಕೊಂಡರೂ ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ಅವರು ಆರ್ಥಿಕ ತಜ್ಞರ ರೀತಿ ನಡೆಸಿಕೊಂಡು ಹೋಗುತ್ತಿದ್ದಾರೆ.

ಮಂತ್ರಿ ಸ್ಥಾನ ಕೊಡ್ತಿವಿ ಅಂಥ ಪ್ರಾಮಿಸ್ ಮಾಡಿ ಜೆಡಿಎಸ್ನಿಂದ ಕಾಂಗ್ರೆಸ್ಗೆ ಕರೆದುಕೊಂಡು ಹೋದರು. ಅದರಲ್ಲಿ ಏನು ಮುಚ್ಚು ಮರೆ ಇಲ್ಲ. ಸಿದ್ದರಾಮಯ್ಯ ಅವರೇ ಸಚಿವ ಸ್ಥಾನ ಕೊಡ್ತಿವಿ ಅಂಥ ಹೇಳಿದ್ರು. ಈಗಲು ಎರಡುವರೆ ವರ್ಷ ಆದ ಮೇಲೆ ಸಚಿವ ಸ್ಥಾನ ಕೊಡ್ತಿನಿ ಅಂಥ ಎಲ್ಲರ ಮುಂದೆ, ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದಾರೆ. ಇನ್ನೂ ಸಂಪುಟ ಪುನರ್ರಚನೆ ಆಗಿಲ್ಲ, ಅದು ಆದಾಗ ಕೊಡ್ತಾರೆ ಎನ್ನುವ ಭಾವನೆ ನನಗೂ ಇದೆ ನಮ್ಮ ಜನಕ್ಕೂ ಇದೆ, ಅವರಿಗೂ ಇದೆ. ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವವರು ಒಬ್ಬನೇ ಶಾಸಕ. ಪಕ್ಷವನ್ನು ಬಲಪಡಿಸಬೇಕು ಎಂದರೆ ಮಂತ್ರಿ ಸ್ಥಾನ ಕೊಡಬೇಕು ಎನ್ನುವುದು ರಾಜಕೀಯ ಲೆಕ್ಕಾಚಾರ. ಕೊಡ್ತಾರೆ ಎಂದು ಭಾವಿಸಿಕೊಂಡಿದ್ದೇನೆ. ಹೈಕಮಾಂಡ್ ಯಾವಾಗ ಸಂಪುಟ ಪುನರ್ ರಚನೆ ಮಾಡುತ್ತೆ, ಆಗ ಕೊಡಬಹುದು ಎನ್ನುವುದು ನನ್ನ ಅನಿಸಿಕೆ ಎಂದಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ಗೆ ಎರಡು ವರ್ಷ ತುಂಬಿದ ಜೊತೆ ಜೊತೆಗೆ ಸಚಿವ ಸಂಪುಟ ಪುನರ್ರಚನೆ ಟೆನ್ಶನ್ ಕೂಡ ಶುರುವಾಗಿದೆ. ಸಂಪುಟ ಪುನರ್ರಚನೆ ಎಂಬ ಜೇನುಗೂಡಿಗೆ ಸಿಎಂ ಸಿದ್ದರಾಮಯ್ಯ ಕೈ ಹಾಕ್ತಾರಾ..? ಹೈಕಮಾಂಡ್ ಯಾವ ಹಂತದಲ್ಲಿ ಪುನರ್ರಚನೆ ಮಾಡ್ತಾರೆ ಎಂಬುದೇ ಕುತೂಹಲವಾಗಿ ಉಳಿದಿದೆ



