ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಶೋಗಳಲ್ಲಿ ಮಜಾ ಟಾಕೀಸ್ ಕೂಡ ಒಂದು. ಈ ಶೋ ಇಂದ ಜನರಿಗೆ ಸಂಪೂರ್ಣ ಮನರಂಜನೆ ಸಿಗುತ್ತಿತ್ತು, ಕಳೆದ ಒಂದೆರಡು ವರ್ಷಗಳಿಂದ ಮಜಾ ಟಾಕೀಸ್ ಶೋ ನಡೆದಿರಲಿಲ್ಲ. ಆದರೆ ಈಗ ಮತ್ತೆ ಮಜಾ ಟಾಕೀಸ್ ಶೋ ಮತ್ತೆ ಶುರುವಾಗುತ್ತದೆ ಎಂದಾಗ ವೀಕ್ಷಕರಲ್ಲಿ ಸಂತೋಷಕ್ಕಿಂತ ಬೇಜಾರಾಗಿದ್ದೇ ಜಾಸ್ತಿ. ಅದಕ್ಕೆ ಕಾರಣ ಅಪರ್ಣ ಅವರು ಇಲ್ಲ ಎನ್ನುವುದು. ಮಜಾ ಟಾಕೀಸ್ ಶೋ ಎಂದ ತಕ್ಷಣ ಎಲ್ಲರಿಗೂ ನೆನಪಾಗುತ್ತಾ ಇದ್ದಿದ್ದೇ ಅಪರ್ಣ ಅವರು. ಆದರೆ ಈ ವರ್ಷ ಅಪರ್ಣಾ ಅವರೇ ಇಲ್ಲದೇ ಶೋ ಶುರುವಾಯಿತು. ಅಷ್ಟೇ ಬೇಗ ಮುಗಿದು ಹೋಯಿತು. ಮಜಾ ಟಾಕೀಸ್ ಶೋ ಮುಗಿಯುವುದಕ್ಕಿಂತ ಮೊದಲೇ ತರಂಗ ವಿಶ್ವ ಶೋ ಇಂದ ಹೊರಗಡೆ ಬಂದರು, ಅದಕ್ಕೆ ಕಾರಣ ಏನು ಎಂದು, ಇತ್ತೀಚೆಗೆ ಒಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮಜಾ ಟಾಕೀಸ್ ಶೋ 10 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಶೋ. ಶುರು ಆದಾಗಿನಿಂದ ಕೂಡ ಈ ಶೋ ಬಹಳ ಜನಪ್ರಿಯತೆ ಪಡೆದುಕೊಂಡಿತು. ಅದಕ್ಕೆ ಕಾರಣ ಈ ಶೋನಲ್ಲಿ ಇದ್ದ ಕಲಾವಿದರು ಮತ್ತು ಒಳ್ಳೆಯ ಕಾಮಿಡಿ. ಶ್ವೇತಾ ಚೆಂಗಪ್ಪ, ಅಪರ್ಣಾ, ಕುರಿ ಪ್ರತಾಪ್, ಮಂಡ್ಯ ರಮೇಶ್, ತರಂಗ ವಿಶ್ವ ಇವರೆಲ್ಲರೂ ಶೋನಲ್ಲಿ ಒಳ್ಳೆಯ ಮನರಂಜನೆ ಕೊಡುತ್ತಿದ್ದರು. ಅದರಲ್ಲೂ ಅಪರ್ಣ ಅವರ ಒನ್ ಅಂಡ್ ಓನ್ಲಿ ವರಲಕ್ಷ್ಮಿ ಪಾತ್ರವನ್ನ ಯಾರು ಮರೆಯುವುದಕ್ಕೆ ಸಾಧ್ಯವಿಲ್ಲ. ಇನ್ನು ಸೃಜನ್ ಲೋಕೇಶ್ ಅವರ ನಿರೂಪಣೆ ಕೂಡ ಅಷ್ಟೇ ಅದ್ಭುತವಾಗಿ ಇರುತ್ತಿತ್ತು, ನೋಡುಗರಿಗೆ ಸೂಪರ್ ಮನರಂಜನೆ ಸಿಗುತ್ತಿತ್ತು. ಈ ಶೋ ಹೆಚ್ಚು ಜನರನ್ನು ತಲುಪಿದ್ದೇ ಈ ಕಾರಣಕ್ಕೆ. ಆದರೆ ಒಂದು ಬ್ರೇಕ್ ನಂತರ ಮತ್ತೆ ಈ ವರ್ಷ ಮಜಾ ಟಾಕೀಸ್ ಶೋ ಶುರುವಾಯಿತು.
ಈ ಬಾರಿ ಹಿಂದಿನ ಕಲಾವಿದರು ಇರಲಿಲ್ಲ, ಇಂದ್ರಜಿತ್ ಲಂಕೇಶ್ ಅವರು ಕೂಡ ಇರಲಿಲ್ಲ. ಶ್ವೇತಾ ಚೆಂಗಪ್ಪ, ಅಪರ್ಣ ಅವರು ಇವರ್ಯಾರು ಇಲ್ಲದೆಯೇ ಶೋ ಶುರುವಾಯ್ತು. ಅದೇ ರೀತಿ ಬಹಳ ಬೇಗ ಮಜಾ ಟಾಕೀಸ್ ಶೋ ಮುಗಿದು ಹೋಯ್ತು. ಇಷ್ಟು ಬೇಗ ಮಜಾ ಟಾಕೀಸ್ ಶೋ ಮುಗಿದಿದ್ದು ಇದೇ ಮೊದಲು ಎಂದು ಹೇಳಿದರೂ ತಪ್ಪಲ್ಲ. ಸೃಜನ್ ಲೋಕೇಶ್ ಅವರು ಕೆಲವೇ ಸಂಚಿಕೆಗಳಿಗೆ ಮಜಾ ಟಾಕೀಸ್ ಶೋ ಅನ್ನು ಮುಗಿಸಿಬಿಟ್ಟರು. ಆದರೆ ಶೋ ಮುಗಿಯುವುದಕ್ಕಿಂತ ಮಜಾ ಟಾಕೀಸ್ ಶೋ ಭಾಗವಾಗಿದ್ದ ತರಂಗ ವಿಶ್ವ ಶೋ ಇಂದ ಹೊರಬಂದಿದ್ದರು. ಪ್ರತಿ ಸೀಸನ್ ನಲ್ಲಿ ಮಜಾ ಟಾಕೀಸ್ ಶೋನಲ್ಲಿ ಇರುತ್ತಿದ್ದ ತರಂಗ ವಿಶ್ವ ಅವರು ಈ ಬಾರಿ ಹೊರಬಂದಿದ್ದು ಯಾಕೆ? ಆಗಿದ್ದೇನು? ಸೃಜನ್ ಲೋಕೇಶ್ ಅವರ ಜೊತೆ ಮನಸ್ತಾಪ ಇತ್ತ ಎನ್ನುವ ಒಂದು ಪ್ರಶ್ನೆ ಶುರುವಾಗಿದೆ. ಅದಕ್ಕೆ ಖುದ್ದು ತರಂಗ ವಿಶ್ವ ಅವರೇ ಉತ್ತರ ನೀಡಿದ್ದಾರೆ.

ಹೌದು, ತರಂಗ ವಿಶ್ವ ಅವರು ತಾವು ಈ ಶೋ ಇಂದ ಹೊರಗಡೆ ಬಂದಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದು, “ಮಜಾ ಟಾಕೀಸ್ ಶೋಗೆ ಈ ಬಾರಿ ಮಜಾ ಭಾರತ ಮತ್ತು ಗಿಚ್ಚಿ ಗಿಲಿ ಗಿಲಿ ಶೋ ಸ್ಪರ್ಧಿಗಳು ಬಂದರು. ಸ್ಕಿಟ್ ಗಳನ್ನು ನೋಡಿದರೆ ಇದು ಮಜಾ ಟಾಕೀಸಾ ಅಥವಾ ಗಿಚ್ಚಿ ಗಿಲಿ ಗಿಲಿನ ಎಂದು ಅನುಮಾನ ಬರುವ ಹಾಗಿತ್ತು. ಹೊರಗಡೆ ಹೋದರೆ ಜನರು ಕೂಡ ಅದೇ ರೀತಿ ಕೇಳುತ್ತಿದ್ದರು. ಮೊದಲೆಲ್ಲಾ ನಾವು ಒಂದೇ ಒಂದು ಡಬಲ್ ಮೀನಿಂಗ್ ಬರದೇ ಇರುವ ಹಾಗೆ ಸ್ಕ್ರಿಫ್ಟ್ ಗಳನ್ನು ರೆಡಿ ಮಾಡ್ತಾ ಇದ್ವಿ. ಆದರೆ ಈ ಸಾರಿ ಆ ರೀತಿ ಆಗಲಿಲ್ಲ. ಹೆಚ್ಚು ಡಬಲ್ ಮೀನಿಂಗ್ ಡೈಲಾಗ್ ಗಳೇ ಇದ್ದವು. ಅದ್ಯಾವುದು ಕೂಡ ನನಗೆ ಇಷ್ಟ ಆಗಲಿಲ್ಲ. ಮಾಡುವ ಕೆಲಸದಲ್ಲಿ ಒಂದು ಹಣ ಚೆನ್ನಾಗಿ ಸಿಗಬೇಕು ಅಥವಾ ಕೆಲಸ ಮಾಡೋದಕ್ಕೆ ಖುಷಿ ಸಿಗಬೇಕು. ಈ ಬಾರಿ ಎರಡು ಕೂಡ ಇರಲಿಲ್ಲ.
ಸೃಜನ್ ಲೋಕೇಶ್ ಜೊತೆಗೆ ನನಗೆ ಮನಸ್ತಾಪ ಏನೂ ಆಗಿಲ್ಲ. ಅವರ ಜೊತೆ ನಾನು ಚೆನ್ನಾಗಿಯೇ ಇದ್ದೀನಿ. ನಾನು ಅಜಾತಶತ್ರು, ನನಗೆ ಎಲ್ಲರೂ ಬೇಕು..” ಎಂದು ಸಂದರ್ಶನದಲ್ಲಿ ಅಸಲಿ ವಿಷಯ ಏನು ಎಂದು ತಿಳಿಸಿದ್ದಾರೆ ತರಂಗ ವಿಶ್ವ. ನೋಡುವ ವೀಕ್ಷಕರಿಗೆ ಕೂಡ ಇದೇ ರೀತಿ ಅನ್ನಿಸಿದೆ. ಗಿಚ್ಚಿ ಗಿಲಿ ಗಿಲಿ ಶೋ ರೀತಿಯಲ್ಲಿ ಇತ್ತೇ ಹೊರತು, ಮೊದಲೆಲ್ಲಾ ಮಜಾ ಟಾಕೀಸ್ ಇದ್ದ ಹಾಗೆ ಇರಲಿಲ್ಲ. ಮೊದಲಿದ್ದ ಕಲಾವಿದರು, ಅವರ ಮಾತು ಎಲ್ಲವೂ ನಗು ತರಿಸುತ್ತಿತ್ತೇ ಹೊರತು ಮುಜುಗರ ತರುವ ಹಾಗೆ ಇರಲಿಲ್ಲ. ಈ ಬಾರಿ ಹಾಗೆ ಆಗಿರುವ ಕಾರಣ ತರಂಗ ವಿಶ್ವ ಶೋ ಇಂದ ಹೊರಗಡೆ ಬಂದಿದ್ದಾರೆ. ಹಾಗೆಯೇ ಸೃಜನ್ ಲೋಕೇಶ್ ಅವರು ಕೂಡ ಮಜಾ ಟಾಕೀಸ್ ಶೋ ಅನ್ನು ಬಹಳ ಬೇಗ ಮುಗಿಸಿದ್ದಾರೆ. ಜಿ.ಎಸ್.ಟಿ ಸಿನಿಮಾ ಪ್ರೊಮೋಷನ್ ಜೊತೆಗೆ ಮಜಾ ಟಾಕೀಸ್ ಶೋಗೆ ಅಂತ್ಯ ಹಾಡಲಾಯಿತು..
ಇನ್ನು ತರಂಗ ವಿಶ್ವ ಅವರ ಬಗ್ಗೆ ಹೇಳುವುದಾದರೆ, ಇವರು ಬಹಳಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟಿನಾಗಿ ಗುರುತಿಸಿಕೊಂಡಿರುವ ಕಲಾವಿದ. ಈಗಾಗಲೇ ಇವರು 70 ಕ್ಕಿಂತ ಧಾರವಾಹಿಗಳಲ್ಲಿ ಮತ್ತು ಶೋಗಳಲ್ಲಿ ಹಾಗೆಯೇ 100ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಕಾಮಿಡಿಯನ್ ಆಗಿ ನಟಿಸಿದ್ದಾರೆ. ಇವರು ಮಜಾ ಟಾಕೀಸ್ ನಲ್ಲಿ ನಿರ್ವಹಿಸುತ್ತಿದ್ದ ಮುತ್ತು ಮಣಿ ಪಾತ್ರ ಸಹ ವಿಶ್ವ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು. ಆದರೆ ತಮಗೆ ಇಷ್ಟವಾಗದ ಕಾರಣ ಶೋ ಇಂದ ಹೊರಬಂದರು. ತರಂಗ ವಿಶ್ವ ಅವರಿಗೆ ಮುಂದೆ ಒಳ್ಳೆಯ ಪಾತ್ರಗಳು, ಅವಕಾಶಗಳು ಸಿಗಲಿ ಎಂದು ನಾವು ಕೂಡ ವಿಶ್ ಮಾಡೋಣ..



