ಜಗತ್ತಿನ ನಂ.1 ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿಸಿದ ಮೇಲೆ ಸಾಕಷ್ಟು ಬದಲಾವಣೆಗಳನ್ನು ತಂದಿದ್ದಾರೆ. ಇತ್ತೀಚೆಗಷ್ಟೇ ಟ್ವಿಟ್ಟರ್ ಹೆಸರನ್ನು ‘ಎಕ್ಸ್’ ಎಂದು ಬದಲಿಸಿದ್ದಾರೆ. ಇದೀಗ ಜನಪ್ರಿಯ ಚಾಟಿಂಗ್ ಆ್ಯಪ್ ಆಗಿರುವ ವಾಟ್ಸಾಪ್ ಗೆ ಪೈಪೋಟಿ ನೀಡಲು ಸಜ್ಜಾಗಿರುವ ಮಸ್ಕ್ ಟ್ವಿಟ್ಟರ್ ಅಥವಾ ಎಕ್ಸ್ ನಲ್ಲಿ ವಿಡಿಯೋ ಹಾಗೂ ಆಡಿಯೋ ಕಾಲ್ ಆರಂಭಿಸಲು ಸಜ್ಜಾಗಿದ್ದಾರೆ. ಸದ್ಯ, ಎಲಾನ್ ಮಸ್ಕ್ ಮಾಡಿರುವ ಟ್ವೀಟ್ ಸಕ್ಕತ್ ಸದ್ದು ಮಾಡುತ್ತಿದೆ.

X’ ಬಳಕೆದಾರರಿಗೆ ಹೊಸ ಫೀಚರ್ ಒದಗಿಸಲು ಎಲಾನ್ ಮಸ್ಕ್ ಕ್ರಮ ಕೈಗೊಂಡಿದ್ದಾರೆ. ಆದ್ದರಿಂದ ಬಳಕೆದಾರರ ಕ್ವಾಂಟ್ಯಾಕ್ಸ್ ಆದರ ಮೇಲೆ ಫೋನ್ ಕರೆ ಮಾಡಬಹುದಾಗಿದೆ. ಜೊತೆಗೆ ಬಳಕೆದಾರನ ಫೋನ್ ನಂಬರ್ ಯಾರಿಗೂ ಶೇರ್ ಆಗದೆ ಈ ಫೀಚರ್ ಕಾರ್ಯನಿರ್ವಹಿಸಲಾಗುತ್ತದೆ. ಎಲಾನ್ ಮಸ್ಕ್ ಈ ಬಗ್ಗೆ ಪೋಸ್ಟ್ ಮಾಡಿದ್ದು, ‘X’ ಗೆ ಬರುವ ವಿಡಿಯೋ ಮತ್ತು ಆಡಿಯೋ ಕರೆಗಳು- ಐಒಎಸ್, ಮ್ಯಾಕ್ ಮತ್ತು ಪಿಸಿಯಲ್ಲಿ ಕಾರ್ಯನಿರ್ವಹಿಸುತ್ತದೆ’ ಎಂದು ತಿಳಿಸಿದ್ದಾರೆ.
ಸದ್ಯ X ನಲ್ಲಿ ಬರಲಿರುವ ನೂತನ ಫೀಚರ್ ಬಗ್ಗೆ ಬಳಕೆದಾರರಿಗೆ ಸಾಕಷ್ಟು ಕುತೂಹಲವಿದೆ. ವಾಟ್ಸ್ಆ್ಯಪ್, ಟೆಲಿಗ್ರಾಂ ಸೇರಿದಂತೆ ಬಹುತೇಕ ಆ್ಯಪ್ಗಳಲ್ಲಿ ವಿಡಿಯೋ, ಆಡಿಯೋ ಕರೆಗಳನ್ನು ಮಾಡಬಹುದಾಗಿದೆ. ಈ ಫೀಚರ್ ಬಹಳ ಹಿಂದೆಯೇ ಬಂದಿದೆ. ಇದೀಗ ‘X’ನಲ್ಲೂ ಅದೇ ಫೀಚರ್ ಅಳವಡಿಸಲು ಎಲಾನ್ ಮಸ್ಕ್ ಮುಂದಾಗಿದ್ದಾರೆ. X ನಲ್ಲಿ ಮಾಡುವ ವಿಡಿಯೋ ಹಾಗೂ ಆಡಿಯೋ ಕಾಲ್ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.