ಕೋಟ್ಯಾಂತರ ಬಳಕೆದಾರರ ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ ಎನಿಸಿಕೊಂಡಿರುವ ವಾಟ್ಸಾಪ್ ವಾರಕ್ಕೊಂದರಂತೆ ನೂತನ ಫೀಚರ್ ಗಳನ್ನು ಪರಿಚಯಿಸುತ್ತಿದೆ.ಈ ರೀತಿ ಹೊಸ ಫೀಚರ್ ಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ವಾಟ್ಸಾಪ್ ತನ್ನ ಬಳಕೆದಾರರು ಕೈ ತಪ್ಪಿ ಹೋಗದಂತೆ ನೋಡಿಕೊಳ್ಳುತ್ತಿದೆ. ಇದೀಗ ಪಿನ್ ಮೆಸೆಜ್ ಡ್ಯುರೇಷನ್ ಎಂಬ ನೂತನ ಫೀಚರ್ ಬರುತ್ತಿದ್ದು, ಈ ಫೀಚರ್ ವಿಶೇಷತೆ ಏನು ಎಂಬುದನ್ನು ಈ ವರದಿಯಲ್ಲಿ ನೀವು ನೋಡಬಹುದಾಗಿದೆ.

ವಾಟ್ಸಾಪ್ ಪರಿಚಯಿಸುತ್ತಿರುವ ಈ ಪಿನ್ ಮೆಸೇಜ್ ಡ್ಯುರೇಷನ್ ಸಹಾಯದಿಂದ ಬಳಕೆದಾರರು ನಿರ್ದಿಷ್ಟ ಸಮಯದ ವರೆಗೆ ಮೆಸೆಜನ್ನು ಪಿನ್ ಮಾಡಿಟ್ಟರೆ ಆ ಸಮಯದ ಬಳಿಕ ಅದು ಆಟೋಮೆಟಿಕ್ ಆಗಿ ಪಿನ್ ಆಗುತ್ತದೆ. ಇದು ಮೂರು ಆವೃತ್ತಿಗಳಲ್ಲಿ ಬರುತ್ತಿದ್ದು ಇದರ ಮೂಲಕ 24 ಗಂಟೆ, 7ದಿನ ಹಾಗೂ 30 ದಿನಗಳ ವರೆಗೆ ಮೆಸೇಜ್ ಅನ್ನು ನೀವು ಪಿನ್ ಮಾಡಿ ಇಡಬಹುದಾಗಿದೆ.ಜೊತೆಗೆ ಇದು ಅನಗತ್ಯ ಎನಿಸಿದರೆ ನಿಗದಿತ ಸಮಯದ ಒಳಗೆ ಇದನ್ನು ಅನ್ ಪಿನ್ ಮಾಡಬಹುದಾಗಿದೆ.
ಇದರೊಂದಿಗೆ ಮೊನ್ನೆಯಷ್ಟೇ ವಾಟ್ಸಾಪ್ ಬಳಕೆದಾರರು ಖಾಸಗಿ ಮಾಹಿತಿಗಳ ರಕ್ಷಣೆಗಾಗಿ ಕಾಲ್ ಪ್ರೈವೆಸಿ ಫೀಚರ್ ತಂದಿದ್ದು ಇದರ ಸಹಾಯದಿಂದ ಅಪರಿಚಿತ ಕರೆಗಳಿಂದ ಮುಕ್ತಿ ಪಡೆಯಬಹುದಾಗಿದೆ. ಇದಕ್ಕಾಗಿ ಸೆಟ್ಟಿಂಗ್ ಕ್ಲಿಕ್ ಮಾಡಿ ಮತ್ತು ಅಲ್ಲಿ ಪ್ರೈವೆಸಿ ಆಯ್ಕೆ ಮಾಡಿಕೊಳ್ಳಬೇಕು ನಂತರ ಅಲ್ಲಿ ಸೈಲೆನ್ಸ್ ಅನೌನ್ ಕಾಲ್ ಆಯ್ಕೆ ಮಾಡಿದರೆ ನೀವು ಅಪರಿಚಿತ ಕರೆಗಳಿಂದ ತಪ್ಪಿಸಿಕೊಳ್ಳಬಹದು.



