ಭಾರತೀಯ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ಸಂಗೀತ ನಿರ್ದೇಶಕರಲ್ಲಿ ಒಬ್ಬರು ಎ.ಆರ್ ರೆಹಮಾನ್. ಇವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಭಾಷೆಯ ಹಂಗಿಲ್ಲದೇ ಎಲ್ಲರೂ ಇವರ ಸಂಗೀತಕ್ಕೆ ತಲೆದೂಗಿದವರೇ. ಎ.ಆರ್. ರೆಹಮಾನ್ ಅವರು ಕನ್ನಡ ಸಿನಿಮಾಗಳಲ್ಲಿ ಕೆಲಸ ಮಾಡಿದ್ದು ಬಹಳ ಕಡಿಮೆ. ಆದರೆ ಕನ್ನಡದಲ್ಲಿ ಸಹ ಇವಈ ಹಾಡುಗಳು ತುಂಬಾ ಫೇಮಸ್. ಆಸ್ಕರ್ ಅವಾರ್ಡ್ ಗೆದ್ದಿರುವ ಇವರು ಇದೀಗ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟಕ್ಕೂ ಎ. ಆರ್. ರೆಹಮಾನ್ ಅವರ ಆರೋಗ್ಯದಲ್ಲಿ ಏರುಪೇರಾಗಿರುವುದು ಯಾಕೆ? ಈಗ ಹೇಗಿದ್ದಾರೆ? ಅವರ ಹೆಲ್ತ್ ಅಪ್ಡೇಟ್ ಬಗ್ಗೆ ಪೂರ್ತಿ ಮಾಹಿತಿ ನೀಡುತ್ತೇವೆ ಈ ಲೇಖನವನ್ನು ಓದಿ..

ಎ. ಆರ್. ರೆಹಮಾನ್ ಅವರು 3 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿ ಇರುವವರು. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಎ.ಆರ್ ರೆಹಮಾನ್ ಅವರಿಗೆ ಒಲಿದಿದ್ದು ಸಂಗೀತ, ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಛಲ ತೊಟ್ಟು ಚಿತ್ರರಂಗಕ್ಕೆ ಬಂದ ರೆಹಮಾನ್ ಅವರು ಮೊದಲಿಗೆ ಇಳಯರಾಜ ಅವರೊಡನೆ ಕೆಲಸ ಮಾಡುತ್ತಿದ್ದರು. ಅವರ ತಂಡದ ಜೊತೆ ಸೇರಿ ಕೆಲಸ ಕಲಿತು, ನಂತರ ಇಂಡಿಪೆಂಡೆಂಟ್ ಮ್ಯೂಸಿಶಿಯನ್ ಆದರು. ರೆಹಮಾನ್ ಅವರ ಸಂಗೀತ ಕೇಳುಗರ ಕಿವಿಗೆ ಇಂಪು ನೀಡುತ್ತದೆ. ಇವರ ಹಾಡು ಕೇಳೋದು ಒಂದು ರೀತಿ ಥೆರಪಿ ಎಂದು ಹೇಳಿದರೂ ತಪ್ಪಲ್ಲ. ರೆಹಮಾನ್ ಅವರು ಬಹಳಷ್ಟು ಗಾಯಕರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ..

ಈಗಿನ ಗಾಯಕರು ರೆಹಮಾನ್ ಅವರ ಒಂದು ಹಾಡಿಗೆ ಧ್ವನಿ ನೀಡುವುದು ಅದೃಷ್ಟ ಎಂದು ಭಾವಿಸುತ್ತಾರೆ. ಒಂದೇ ಒಂದು ರೆಹಮಾನ್ ಅವರ ಹಾಡಿನಲ್ಲಿ ಹಾಡಿದರೆ, ಗಾಯಕರ ಕೆರಿಯರ್ ನ ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡು ಹೋಗುತ್ತದೆ ಎಂದು ಹೇಳಿದರೂ ತಪ್ಪಲ್ಲ. ಸಂಗೀತಗಾರರ ವಿಚಾರದಲ್ಲಿ ಕೂಡ ಅದೇ ರೀತಿ. ಸಂಗೀತ ಗಾರರು ಇವರ ಹಾಡುಗಳಿಗೆ ಕೆಲಸ ಮಾಡುವ ಮೂಲಕ, ಕೆಲಸ ಮಾಡಬೇಕು ಎಂದು ಬಯಸುತ್ತಾರೆ. ನೂರಾರು ಅವಾರ್ಡ್ ಗಳು, ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ಹೆಸರು, ಎಲ್ಲವನ್ನು ತಮ್ಮ ಟ್ಯಾಲೆಂಟ್ ಹಾಗೂ ಹಾರ್ಡ್ ವರ್ಕ್ ಮೂಲಕ ಗಳಿಸಿರುವವರು ಎ.ಆರ್. ರೆಹಮಾನ್. ಕಾಲಿವುಡ್ ಇಂದ ಬಾಲಿವುಡ್ ವರೆಗು ರೆಹಮಾನ್ ಅವರ ಹವಾ ಜೋರಾಗಿದೆ. ಹಲವು ಹಿಂದಿ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.

90ರ ದಶಕದ ರೋಜಾ, ಬಾಂಬೆ ಈ ಸಿನಿಮಾದ ಹಾಡುಗಳನ್ನ ನಾವು ಇವತ್ತಿಗೂ ಮರೆತಿಲ್ಲ, ಇವತ್ತಿಗೂ ಆ ಎಲ್ಲಾ ಹಾಡುಗಳು ವೈರಲ್ ಆಗುತ್ತದೆ ಅಂದರೆ ಅದಕ್ಕೆಲ್ಲ ಕಾರಣ ಎ. ಆರ್. ರೆಹಮಾನ್ ಅವರು. ಸಿನಿಮಾ ಒಂದು ಲೆವೆಲ್ ಆದರೆ, ಇವರ ಸಂಗೀತ ಆ ಸಿನಿಮಾವನ್ನು ಮತ್ತೊಂದು ಲೆವೆಲ್ ಗೆ ತೆಗೆದುಕೊಂಡು ಹೋಗುತ್ತದೆ. ಸಂಗೀತದ ಜಾದೂಗಾರ ಇವರು ಎಂದು ಹೇಳಿದರೆ ತಪ್ಪಲ್ಲ. ಇಂಥ ರೆಹಮಾನ್ ಅವರು ಕಳೆದ ಕೆಲವು ಸಮಯದಿಂದ ವೈಯಕ್ತಿಕ ಜೀವನದ ಕಾರಣಕ್ಕೆ ಬಹಳ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಇವರು ಪತ್ನಿ ಸೈರಾ ಬಾನು ಅವರಿಗೆ ವಿಚ್ಛೇದನ ಕೊಟ್ಟು, ಭಾರಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದರು. ಆದರೆ ಇದೀಗ ಆರೋಗ್ಯ ಸಮಸ್ಯೆ ಬಂದಿರುವ ಕಾರಣಕ್ಕೆ ರೆಹಮಾನ್ ಅವರು ಸುದ್ದಿಯಾಗಿದ್ದಾರೆ.

ಇಂದು ಬೆಳಗ್ಗೆ ಎ. ಆರ್ ರೆಹಮಾನ್ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿ, ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದೆ. ಬೆಳಗ್ಗೆ 7:30 ಕ್ಕೆ ಈ ರೀತಿ ಆಗಿದ್ದು, ತಕ್ಷಣವೇ ಎ. ಆರ್ ರೆಹಮಾನ್ ಅವರನ್ನು ಚೆನ್ನೈನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಬೆಳ್ಳಂಬೆಳಗ್ಗೆ ಈ ರೀತಿ ಆಗಿದ್ದು ಅವರ ಫ್ಯಾನ್ಸ್ ಗೆ ಬಹಳ ಬೇಸರ ತಂದಿದೆ. ರೆಹಮಾನ್ ಅವರ ಹೃದಯಕ್ಕೆ ಸಂಬಂಧಿಸಿದ ಜಾಗೆ ಸಮಸ್ಯೆ ಇದೆ ಎಂದು ವೈದ್ಯರು ತಿಳಿಸಿದ್ದು, ಅವರಿಗೆ ಈಗ 58 ವರ್ಷ. ಆಸ್ಪತ್ರೆಯಲ್ಲಿ ವೈದ್ಯರು ರೆಹಮಾನ್ ಅವರಿಗೆ ಇಸಿಜಿ, ಎಕೋಕಾರ್ಡಿಯೋಗ್ರಾಮ್ ಸೇರಿದಂತೆ ಇನ್ನು ಸಾಕಷ್ಟು ಟೆಸ್ಟ್ ಗಳನ್ನು ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ರೆಹಮಾನ್ ಅವರ ಆರೋಗ್ಯದ ಬಗ್ಗೆ ಪೂರ್ಣ ತಪಾಸಣೆ ನಡೆಸಿದ ವೈದ್ಯರು ಮುಂದಿನ ಟ್ರೀಟ್ಮೆಂಟ್ ಬಗ್ಗೆ ತಿಳಿಸಿದ್ದಾರೆ.

ಎ. ಆರ್ ರೆಹಮಾನ್ ಅವರಿಗೆ ಚಿಕಿತ್ಸೆ ಕೊಡಲಾಗುತ್ತಿದ್ದು, ಅವರಿಗೆ ಈಗ ಆಂಜಿಯೋಗ್ರಾಮ್ ಮಾಡಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಈಗ ರೆಹಮಾನ್ ಅವರಿಗೆ ಈ ರೀತಿ ಆಗಿದೆ, ಆದರೆ ಕೆಲವು ದಿನಗಳ ಹಿಂದೆಯಷ್ಟೇ ರೆಹಮಾನ್ ಅವರ ಪತ್ನಿ ಸೈರಾ ಬಾನು ಅವರಿಗು ಹೀಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಿ, ಎದೆನೋವು ಬಂದು ಅವರನ್ನು ಸಹ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಸೈರಾ ಬಾನು ಅವರ ಲಾಯರ್ ವಂದನಾ ಶಾ ಅವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ. ಆರ್ ರೆಹಮಾನ್ ಅವರಿಗೆ ಈ ರೀತಿ ಆಗಿರುವುದು ಅವರ ಫ್ಯಾನ್ಸ್ ಗೆ ಬಹಳ ಬೇಸರ ತಂದಿದ್ದು, ರೆಹಮಾನ್ ಅವರು ಆದಷ್ಟು ಬೇಗ ಹುಷಾರಾಗಿ ಬರಲಿ ಎಂದು ಅವರ ಫ್ಯಾನ್ಸ್ ದೇವರ ಮೊರೆ ಹೋಗಿದ್ದಾರೆ. ಆಂಜಿಯೋಗ್ರಾಮ್ ಪ್ರೋಸಿಜರ್ ಎಲ್ಲವೂ ಚೆನ್ನಾಗಿ ನಡೆಯಲಿ ಎಂದು ನಾವು ಕೂಡ ದೇವರಲ್ಲಿ ಪ್ರಾರ್ಥಿಸೋಣ.

ರೆಹಮಾನ್ ಅವರು ಇತ್ತೀಚೆಗೆ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಚೆನ್ನೈನಲ್ಲಿ ನಡೆದ ಎಡ್ ಶೀರನ್ ಅವರ ಕಾನ್ಸರ್ಟ್ ನಲ್ಲಿ ರೆಹಮಾನ್ ಸಹ ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ, ರೆಹಮಾನ್ ಅವರ ಕಾನ್ಸರ್ಟ್ ಕೂಡ ನಡೆದಿತ್ತು. ಒಂದೆರಡು ತಿಂಗಳ ಹಿಂದೆ ಛಾವ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮಗಳಲ್ಲಿ ಸಹ ಪಾಲ್ಗೊಂಡಿದ್ದರು. ಬಹಳ ಆಕ್ಟಿವ್ ಆಗಿಯೇ ಇದ್ದರು ರೆಹಮಾನ್, ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದರು. ಹಾಗಿದ್ದರೂ ಈ ರೀತಿ ಹೇಗಾಯಿತು ಎಂದು ಅವರ ಫ್ಯಾನ್ಸ್ ಗಳಲ್ಲಿ ಆತಂಕ ಮೂಡಿಸಿದೆ. ವಿಶ್ವ ಮಟ್ಟದಲ್ಲಿ ಸಾಧನೆ ಮಾಡಿರುವ ಎ. ಆರ್ ರೆಹಮಾನ್ ಅವರು ಆದಷ್ಟು ಬೇಗ ಹುಷಾರಾಗಿ ಬಂದರೆ ಸಾಕು ಎನ್ನುವುದು ಎಲ್ಲರ ಹಾರೈಕೆ ಆಗಿದೆ.