ಕರ್ನಾಟಕದ ನಂಬರ್ 1 ನಿರೂಪಕಿ ಎಂದು ಹೆಸರು ಮಾಡಿರುವವರು ಅನುಶ್ರೀ. ಇವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಇಂದು ಈ ಸ್ಥಾನದಲ್ಲಿರುವ ಅನುಶ್ರೀ ಅವರು ಇಲ್ಲಿಯವರೆಗೂ ಬಂದು ತಲುಪಲು ಪಟ್ಟಿರುವ ಕಷ್ಟಗಳು ಒಂದೆರಡಲ್ಲ. ಅನುಶ್ರೀ ಅವರು ಹುಟ್ಟಿ ಬೆಳೆದಿದ್ದು ಬಡತನದ ಕುಟುಂಬದಲ್ಲಿ, ಮಂಗಳೂರಿನ ಸಣ್ಣ ಲೋಕಲ್ ಚಾನೆಲ್ ನಲ್ಲಿ ನಿರೂಪಣೆ ಶುರು ಮಾಡಿದ ಅನುಶ್ರೀ, ಬೆಂಗಳೂರಿಗೆ ಬಂದು ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ, ಸಿಕ್ಕ ಅವಕಾಶಗಳ ಸದುಪಯೋಗ ಪಡಿಸಿಕೊಳ್ಳುತ್ತಾ ಇಂದು ರಾಜ್ಯದ ನಂಬರ್1 ನಿರೂಪಕಿಯಾಗಿ ಹೆಸರು ಮಾಡಿದ್ದಾರೆ. ಜೀಕನ್ನಡ ವಾಹಿನಿಯ ಕಾರ್ಯಕ್ರಮದಲ್ಲಿ ಅನುಶ್ರೀ ಅವರೇ ಇರಬೇಕು. ಈ ವಾಹಿನಿಯ ಬಹಳಷ್ಟು ಶೋಗಳಿಗೆ ಅನುಶ್ರೀ ಅವರೇ ನಿರೂಪಕಿ ಆಗಿರುತ್ತಾರೆ ಎನ್ನುವುದು ನಿಜ. ಜನರಿಗೂ ಕೂಡ ಅದು ಬಹಳ ಇಷ್ಟ. ಎಲ್ಲರೂ ಅನುಶ್ರೀ ಅವರ ಫ್ಯಾನ್ಸ್..

ಹೌದು, ಜೀಕನ್ನಡ ವಾಹಿನಿಯ ಸರಿಗಮಪ, ಡಿಕೆಡಿ ಈ ಎಲ್ಲಾ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವುದೇ ಅನುಶ್ರೀ ಅವರು. ಇವರು ಜಾಲಿಯಾಗಿ ಜೋಶ್ ಇಂದ ನಿರೂಪಣೆ ಮಾಡುವ ಶೈಲಿ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ. ಕಾರ್ಯಕ್ರಮ ನೋಡುತ್ತಿರುವ ವೀಕ್ಷಕರನ್ನು ತಮ್ಮ ಆಕರ್ಷಕವಾದ ಮಾತುಗಳ ಮೂಲಕ, ತಮಾಷೆಗಳ ಮೂಲಕ ಅನುಶ್ರೀ ಅವರು ಹಿಡಿದಿಟ್ಟುಕೊಳ್ಳುತ್ತಾರೆ. ಈ ಚಾಣಾಕ್ಷತೆ ಇರುವುದರಿಂದ ಜೀಕನ್ನಡ ವಾಹಿನಿಯ ಬಹುತೇಕ ಕಾರ್ಯಕ್ರಮಗಳಲ್ಲಿ ಅನುಶ್ರೀ ಅವರು ಇರಲೇಬೇಕು. ಅಷ್ಟೇ ಅಲ್ಲದೇ ಸಿನಿಮಾ ಕುರಿತು ನಡೆಯುವ ದೊಡ್ಡ ದೊಡ್ಡ ಈವೆಂಟ್ ಗಳಲ್ಲಿ ಸಹ ಅನುಶ್ರೀ ಅವರೇ ಇರುತ್ತಾರೆ. ಅವರಿಗೆ ಅಷ್ಟು ಬೇಡಿಕೆ ಇದೆ. ಸರಿಗಮಪ ಕಾರ್ಯಕ್ರಮ ಕಳೆಗಟ್ಟುವುದೇ ಇವರಿಂದ ಎಂದರು ತಪ್ಪಲ್ಲ.
ಜಡ್ಜ್ ಗಳಿಗೆ ಇವರು ಅಂದ್ರೆ ತುಂಬಾ ಇಷ್ಟ, ಸ್ಪರ್ಧಿಗಳ ಪ್ರೀತಿಯ ಅನುಶ್ರೀ ಅಕ್ಕ ಆಗಿ ಅನುಶ್ರೀ ಅವರು ಎಲ್ಲರ ಮೆಚ್ಚಿನ ವ್ಯಕ್ತಿ ಆಗಿದ್ದಾರೆ ಎಂದರು ತಪ್ಪಲ್ಲ. ಅನುಶ್ರೀ ಅವರು ಇಂದು ಕನ್ನಡದ ನಂಬರ್ 1 ಆಂಕರ್ ಆಗಿ ಸ್ಥಾನ ಪಡೆದಿದ್ದಾರೆ. ಆದರೆ ಈ ಜರ್ನಿ ಸುಲಭದ ಜರ್ನಿ ಅಂತೂ ಆಗಿರಲಿಲ್ಲ. ಅನುಶ್ರೀ ಅವರು ಈ ಸ್ಥಾನಕ್ಕೆ ಏರಲು ಬಹಳ ಕಷ್ಟಪಟ್ಟಿದ್ದಾರೆ. ಮೂಲತಃ ಮಂಗಳೂರಿನವರಾದ ಅನುಶ್ರೀ ಅಲ್ಲಿನ ಲೋಕಲ್ ಚಾನೆಲ್ ನಲ್ಲಿ ಸಣ್ಣದಾಗಿ ನಿರೂಪಣೆ ಶುರು ಮಾಡಿದ್ದರು, ನಂತರ ನಿರೂಪಕಿ ಆಗಬೇಕು ಎಂದು ಬೆಂಗಳೂರಿಗೆ ಬಂದರು. ಆದರೆ ಬಂದ ತಕ್ಷಣ ಇವರಿಗೆ ಒಳ್ಳೆಯ ಅವಕಾಶಗಳೇನು ಸಿಗಲಿಲ್ಲ. ಆಗಿನ ಈಟಿವಿ ಚಾನೆಲ್ ನ ಡಿಮ್ಯಾಂಡಪ್ಪೋ ಡಿಮ್ಯಾಂಡು ಕಾರ್ಯಕ್ರಮದಲ್ಲಿ ಮೊದಲಿಗೆ ನಿರೂಪಣೆ ಶುರು ಮಾಡಿದರು.

ಈ ಕಾರ್ಯಕ್ರಮ ಅನುಶ್ರೀ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಆಗ ಅನುಶ್ರೀ ಅವರಿಗೆ ಬೆಂಗಳೂರಿನ ಲೋಕಲ್ ಕನ್ನಡ ಸಹ ಸುಲಭವಾಗಿ ಅರ್ಥವಾಗುತ್ತಾ ಹೋಯಿತು. ಈ ಶೋ ನಂತರ ಸಿಕ್ಕ ಒಂದೊಂದೇ ಅವಕಾಶಗಳನ್ನು ಉಪಯೋಗಿಸಿಕೊಂಡು, ನಿರೂಪಣೆಯನ್ನು ಚೆನ್ನಾಗಿ ಕಲಿತು ಕೆಲಸ ಮಾಡುವುದಕ್ಕೆ ಶುರು ಮಾಡಿದರು ಅನುಶ್ರೀ. ಇದರಿಂದ ಇವರಿಗೆ ಒಂದೊಂದೇ ಒಳ್ಳೆಯ ಅವಕಾಶಗಳು ಶುರುವಾದವು. ಇದನ್ನೆಲ್ಲ ಚೆನ್ನಾಗಿ ಉಪಯೋಗಿಸಿಕೊಂಡು ಇಂದು ಈ ಹಂತಕ್ಕೆ ಬೆಳೆದು ನಿಂತಿದ್ದಾರೆ. ಕನ್ನಡದ ಬಹುತೇಕ ದೊಡ್ಡ ದೊಡ್ಡ ಈವೆಂಟ್ ಗಳಿಗೆ ಅನುಶ್ರೀ ಅವರನ್ನೇ ಆಂಕರಿಂಗ್ ಗೆ ಕರೆಯುತ್ತಾರೆ ಎನ್ನುವುದು ಕೂಡ ಗೊತ್ತಿರುವ ವಿಷಯ ಆಗಿದೆ. ಆ ಎತ್ತರಕ್ಕೆ ಬೆಳೆದು ನಿಂತಿದ್ದಾ ಅನುಶ್ರೀ ಅವರು. ಇನ್ನು ಇವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ದೊಡ್ಡ ಫ್ಯಾನ್ ಎಂದು ಗೊತ್ತೇ ಇದೆ.
ಅಪ್ಪು ಅವರು ಇದ್ದಾಗಲೂ ಅವರು ಹೋದಮೇಲು ತಾವು ಅಪ್ಪು ಅವರ ದೊಡ್ಡ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ, ಅದೇ ರೀತಿ ಇದ್ದಾರೆ ಕೂಡ. ಯೂಟ್ಯೂಬ್ ಚಾನೆಲ್ ಶುರು ಮಾಡಿದಾಗ, ಮೊದಲು ಸಂದರ್ಶನ ಮಾಡಿದ್ದು ಕೂಡ ಅಪ್ಪು ಅವರದ್ದೇ. ಅಪ್ಪು ಅವರ ಕುಟುಂಬಕ್ಕೆ, ಶಿವಣ್ಣ ಅವರ ಕುಟುಂಬಕ್ಕೆ ಅನುಶ್ರೀ ಬಹಳ ಆಪ್ತರು. ಅಶ್ವಿನಿ ಮೇಡಂ, ಶಿವಣ್ಣ , ಗೀತಕ್ಕ ಹೀಗೆ ಎಲ್ಲರೂ ಕೂಡ ಅನುಶ್ರೀ ಅವರ ಜೊತೆಗೆ ಬಹಳ ಕ್ಲೋಸ್ ಆಗಿದ್ದಾರೆ. ಅಪ್ಪು ಅವರು ಬಳಸುತ್ತಿದ್ದ ಸೈಕಲ್ ಅನ್ನು ಸಹ ಅನುಶ್ರೀ ಅವರಿಗೆ ಗಿಫ್ಟ್ ಆಗಿ ಕೊಟ್ಟಿದ್ದಾರೆ ಅಶ್ವಿನಿ ಮೇಡಂ. ಹೀಗೆ ಎಲ್ಲರ ಬಳಿ ಕೂಡ ಅನುಶ್ರೀ ಅವರು ಒಳ್ಳೆಯ ಹೆಸರನ್ನು ಮತ್ತು ಆತ್ಮೀಯತೆಯಂಮು ಕೂಡ ಹೊಂದಿದ್ದಾರೆ. ಇನ್ನು ಇವರ ಯೂಟ್ಯೂಬ್ ಚಾನೆಲ್ ಸಹ ಭಾರಿ ಬೇಡಿಕೆ ಇದೆ. ಹಲವು ಸಿನಿಮಾಗಳ ಪ್ರೊಮೋಷನ್ ಇವರ ಯೂಟ್ಯೂಬ್ ಚಾನೆಲ್ ನಲ್ಲಿ ನಡೆಯುತ್ತದೆ.

ಇದೆಲ್ಲದರ ಜೊತೆಗೆ ನಾವೆಲ್ಲರೂ ಕುತೂಹಲದಿಂದ ಕಾಯುತ್ತಿರುವ ಮತ್ತೊಂದು ವಿಷಯ ಅನುಶ್ರೀ ಮದುವೆ ಬಗ್ಗೆ. ಬಹಳ ವರ್ಷಗಳಿಂದ ಅನುಶ್ರೀ ಮದುವೆ ಯಾವಾಗ ಎನ್ನುವ ಪ್ರಶ್ನೆ. ಯಾರೊಡನೆ ಅನುಶ್ರೀ ಮದುವೆ ನಡೆಯುತ್ತದೆ ಎನ್ನುವ ಕುತೂಹಲ ಎಲ್ಲರಲ್ಲು ಇದೆ. ಈ ವರ್ಷ ಅಪ್ಪು ಅವರ ಹುಟ್ಟುಹಬ್ಬದ ದಿವಸ ಅನುಶ್ರೀ ತಾವು ಮದುವೆ ಆಗುವ ಹುಡುಗನ ಪರಿಚಯ ಮಾಡಬಹುದು ಎಂದು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಅದು ಕೂಡ ನಡೆಯಲಿಲ್ಲ. ಅನುಶ್ರೀ ಅವರಿಗೆ ವಯಸ್ಸು ಕೂಡ ಹೆಚ್ಚಾಗುತ್ತಿದೆ, ಮದುವೆ ಆಗೋದು ಯಾವಾಗ ಎನ್ನುವ ಕುತೂಹಲ ಅವರ ಫ್ಯಾನ್ಸ್ ಗಳಲ್ಲಿ ಹೆಚ್ಚಾಗಿದ್ದು, ಇದೀಗ ಇವರ ಮದುವೆ ಬಗ್ಗೆ ಮತ್ತೊಂದು ವಿಶೇಷವಾದ ಸುದ್ದಿ ಸಿಕ್ಕಿದೆ. ಅನುಶ್ರೀ ಮದುವೆ ಬಗ್ಗೆ ಸಿಕ್ಕಿರುವ ಬಿಗ್ ಅಪ್ಡೇಟ್ ಇದು.
ಹೌದು, ಸಧ್ಯಕ್ಕೆ ಸಿಕ್ಕಿರುವ ದೊಡ್ಡ ಅಪ್ಡೇಟ್ ನ ಅನುಸಾರ ಅನುಶ್ರೀ ಅವರ ಮದುವೆ ಈ ವರ್ಷ ಡಿಸೆಂಬರ್ ತಿಂಗಳ ಒಳಗೆ ನಡೆಯಬಹುದು ಎನ್ನಲಾಗಿದೆ. ಒಂದು ವೇಳೆ ಡಿಸೆಂಬರ್ ನಲ್ಲಿ ಆಗದೇ ಹೋದರೆ, 2026ರ ಮೇ ತಿಂಗಳ ಒಳಗೆ ಅನುಶ್ರೀ ಅವರ ಮದುವೆ ನಡೆಯಬಹುದು ಎಂದು ಮಾಹಿತಿ ಸಿಕ್ಕಿದೆ.. ಇದನ್ನು ತಿಳಿಸಿರುವುದು ಒಬ್ಬ ಜ್ಯೋತಿಷಿ. ಅವರ ಮಾತಿನ ಅನುಸಾರ ಶೀಘ್ರದಲ್ಲೇ ಅನುಶ್ರೀ ಮದುವೆ ನಡೆಯಲಿದ್ದು, ಒಂದು ವೇಳೆ ಇದು ನಿಜವೇ ಆದರೆ, ಅನುಶ್ರೀ ಯಾರೊಡನೆ ಮದುವೆ ಆಗುತ್ತಾರೆ ಎಂದು ಕಾದು ನೋಡಬೇಕಿದೆ.



