ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ಹೀರೋಯಿನ್ ಗಳಲ್ಲಿ ಸಾಯಿಪಲ್ಲವಿ ಅವರು ಸಹ ಒಬ್ಬರು. ಇವರು ಈಗ ಬಹುಬೇಡಿಕೆಯ ನಟಿ, ನಟನೆ ಇಂದ ಮಾತ್ರವಲ್ಲದೇ ಜನರು ಸಾಯಿಪಲ್ಲವಿ ಅವರನ್ನು ಹೆಚ್ಚು ಇಷ್ಟಪಡುವುದು ಅವರ ವ್ಯಕ್ತಿತ್ವ ಹಾಗೂ ಸರಳತೆ ಇಂದ. ಇವರನ್ನು ನೋಡಿದ ಕೂಡಲೇ ನಮ್ಮ ಮನೆ ಹುಡುಗಿ ಎಂದೇ ಅನ್ನಿಸಿಬಿಡುತ್ತದೆ. ಅದೇ ಕಾರಣಕ್ಕೆ ಹೆಚ್ಚು ಇಷ್ಟವಾಗುತ್ತಾರೆ ಸಾಯಿಪಲ್ಲವಿ. ಸಾಯಿಪಲ್ಲವಿ ಅವರು ವೃತ್ತಿಯಲ್ಲಿ ಡಾಕ್ಟರ್, ಜಾರ್ಜಿಯಾ ನಲ್ಲಿ ಮೆಡಿಸಿನ್ ಓದಿರುವ ಸಾಯಿಪಲ್ಲವಿ ಅವರು, ಭಾರತಕ್ಕೆ ಬಂದು ನಟಿ ಆಗಿದ್ದಾರೆ. ಮುಂದೆ ಮೆಡಿಸಿನ್ ವೃತ್ತಿ ಮುಂದುವರೆಸುವ ಆಸೆ ಕೂಡ ಅವರಿಗೆ ಇದೆ. ಸಾಯಿಪಲ್ಲವಿ ಅವರು ಅದ್ಭುತವಾದ ಡ್ಯಾನ್ಸರ್. ಇವರ ಡ್ಯಾನ್ಸ್ ಜನರಿಗೆ ತುಂಬಾ ಇಷ್ಟ. ಯಾರಿಂದಲೂ ನೃತ್ಯ ಕಲಿತಿಲ್ಲ.

ಸ್ವಯಂ ಪ್ರಯತ್ನದಿಂದ ಟಿವಿಯಲ್ಲಿ ಹೀರೋಯಿನ್ ಗಳು ಡ್ಯಾನ್ಸ್ ಮಾಡುವ ರೀತಿ ನೋಡಿ, ಅವರಿಗೂ ಡ್ಯಾನ್ಸ್ ನಲ್ಲಿ ಆಸಕ್ತಿ ಇದ್ದ ಕಾರಣ, ಸ್ವತಃ ಡ್ಯಾನ್ಸ್ ಕಲಿತಿದ್ದು ಸಾಯಿ ಪಲ್ಲವಿ. ಹೆಚ್ಚಾಗಿ ಐಶ್ವರ್ಯ ರೈ ಮತ್ತು ಮಾಧುರಿ ದೀಕ್ಷಿತ್ ಅವರ ಹಾಡುಗಳನ್ನು ನೋಡಿ ಡ್ಯಾನ್ಡ್ ಮಾಡೋದನ್ನ ಕಲಿತರಂತೆ. ಇವರೊಬ್ಬ ಅದ್ಭುತವಾದ ಡ್ಯಾನ್ಸರ್ ಮತ್ತು ನಟಿ ಎರಡು ಸಹ ಹೌದು. ಸಾಯಿಪಲ್ಲವಿ ಅವರು ನಟನೆ ಶುರು ಮಾಡಿದ್ದು ಮಲಯಾಳಂ ಭಾಷೆಯ ಪ್ರೇಮಂ ಸಿನಿಮಾ ಮೂಲಕ. ಆ ಒಂದು ಸಿನಿಮಾ ಇವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟ ಕಾರಣ ಪಲ್ಲವಿ ಅವರಿಗೆ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಒಳ್ಳೆಯ ಅವಕಾಶಗಳು ಬರುವುದಕ್ಕೆ ಶುರುವಾಯಿತು. ಇವರು ಆಯ್ಕೆ ಮಾಡಿಕೊಳ್ಳುವ ಎಲ್ಲಾ ಪಾತ್ರಗಳು ಸಹ, ಮನಸ್ಸಿಗೆ ತುಂಬಾ ಹತ್ತಿರ ಎನ್ನಿಸುತ್ತದೆ.
ಹಾಗೆಯೇ ಇವರ ನಟನೆ ಕೂಡ ಅಷ್ಟೇ ಅದ್ಭುತವಾಗಿರುತ್ತದೆ. ಇತ್ತೀಚೆಗೆ ತೆರೆಕಂಡ ಅಮರನ್ ಸಿನಿಮಾದಲ್ಲಿ ತಮ್ಮ ನ್ಯಾಚುರಲ್ ಅಭಿನಯದ ಮೂಲಕ ಎಲ್ಲರಿಗೂ ತುಂಬಾ ಇಷ್ಟ ಆಗಿ, ಹಲವು ಅವಾರ್ಡ್ಸ್ ಗಳನ್ನು ಪಡೆದುಕೊಂಡರು ಸಾಯಿಪಲ್ಲವಿ. ಇನ್ನು ನಾಗಚೈತನ್ಯ ಜೊತೆಗೆ ಅಭಿನಯಿಸಿದ ತಂಡೆಲ್ ಸಿನಿಮಾ ಸಹ ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ನಿನ್ನೆಯಷ್ಟೇ ಸಾಯಿಪಲ್ಲವಿ ಅವರ ಹುಟ್ಟುಹಬ್ಬ ನಡೆದಿದೆ. 1992 ರ ಮೇ 9ರಂದು ಸಾಯಿಪಲ್ಲವಿ ಜನಿಸಿದರು. ಈಗ ಇವಫಿಗೆ 33 ವರ್ಷ ತುಂಬಿದೆ. ಆದರೆ ಇನ್ನೂ ಕೂಡ ಸಾಯಿಪಲ್ಲವಿ ಅವರು ಮದುವೆಯಾಗಿಲ್ಲ, ಮದುವೆ ವಿಚಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎಂದು ಸಹ ಇತ್ತೀಚಿನ ಸಂದರ್ಶನ ಒಂದರಲ್ಲಿ ಹೇಳಿದ್ದರು.. ತಂಗಿಯ ಮದುವೆ ಆಗಿದ್ದರೂ ಸಾಯಿಪಲ್ಲವಿ ಇನ್ನೂ ಮದುವೆಯಾಗಿಲ್ಲ.

ಇದೆಲ್ಲವೂ ಒಂದು ಕಡೆಯಾದರೆ ಮತ್ತೊಂದು ಕಡೆ ಸಾಯಿಪಲ್ಲವಿ ಅವರ ಬಗ್ಗೆ ಅನೇಕ ಆಸಕ್ತಿಕರ ವಿಚಾರಗಳು ಇದೆ.. ಮೊದಲನೆಯದು ಎಲ್ಲಾ ಹೀರೋಯಿನ್ ಗಳ ಹಾಗೆ ಸಾಯಿಪಲ್ಲವಿ ಅವರು ಬಣ್ಣಕ್ಕೆ ಬ್ಯೂಟಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟವರಲ್ಲ, ನ್ಯಾಚುರಲ್ ಆಗಿರಬೇಕು ಎಂದು ಬಯಸುವವರು. ಕಾಲೇಜು ದಿನಗಳಲ್ಲಿ ಜಾಸ್ತಿ ಪಿಂಪಲ್ ಇದೆ ಎಂದು ಅವರಿಗೆ ಆತಂಕ ಆಗಿದ್ದು ಇದೆ, ಪ್ರೇಮಮ್ ಸಿನಿಮಾ ಮಾಡುವಾಗ ಪಿಂಪಲ್ ಇದೆ, ನಾನು ಹೇಗಿದ್ದೀನಿ ಜನರು ನನ್ನನ್ನು ನಟಿಯಾಗಿ ಒಪ್ಪಿಕೊಳ್ಳುತ್ತಾರಾ ಎನ್ನುವ ಆತಂಕ ಇತ್ತಂತೆ. ಆದರೆ ಪ್ರೇಮಮ್ ಬಿಡುಗಡೆ ಆದ ನಂತರ ಸಾಯಿಪಲ್ಲವಿ ಎಲ್ಲರ ಕ್ರಶ್ ಆಗಿದ್ದರು. ಈ ರೀತಿಯಾಗಿ ಅವರಲ್ಲಿದ್ದ ಭಯ ಕೂಡ ಕಡಿಮೆ ಆಯಿತು ಎಂದು ಒಂದು ಸಂದರ್ಶನದಲ್ಲಿ ತಿಳಿಸಿದರು. ಅಷ್ಟೇ ಅಲ್ಲ ಇನ್ನೂ ಅನೇಕ ವಿಚಾರಗಳಿವೆ..
ಸಾಯಿಪಲ್ಲವಿ ಅವರು ಎಲ್ಲಿಯೂ ಹೋಗಿ ಡ್ಯಾನ್ಸ್ ಕಲಿಯವರಲ್ಲ. ಮನೆಯಲ್ಲೇ ತಾವೇ ಸ್ವತಃ ಡ್ಯಾನ್ಸ್ ಕಲಿತು, ಆಗಿನ ಎರಡು ರಿಯಾಲಿಟಿ ಶೋಗಳಲ್ಲಿ ಸಹ ಭಾಗವಹಿಸಿದ್ದರು, ಆದರೆ ಆ ಶೋಗಳಲ್ಲಿ ಗೆಲ್ಲಲಿಲ್ಲ, ಆದರೆ ಜೀವನದಲ್ಲಿ ಹೀರೋಯಿನ್ ಆಗಿ ದೊಡ್ಡ ಮಟ್ಟದಲ್ಲಿ ಗೆಲುವು ಸಿಕ್ಕಿತು. ಪಲ್ಲವಿ ಅವರು ಎರಡು ತಮಿಳು ಸಿನಿಮಾಗಳಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದರು. ಬಳಿಕ ಓದುವ ಕಡೆಗೆ ಗಮನ ಹರಿಸಿದರು, ಪ್ರೇಮಮ್ ಸಿನಿಮಾ ಮೂಲಕ ನಾಯಕಿ ಆದರು. ಬಳಿಕ ಇವರು ಹಿಂದಿರುಗಿ ನೋಡಿದ್ದೇ ಇಲ್ಲ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ಸೂಪರ್ ಹಿಟ್ ಹೀರೋಗಳ ಸಿನಿಮಾದಲ್ಲಿ ನಟಿಸಿದರು, ಆದರೆ ಸಾಯಿಪಲ್ಲವಿ ಅವರು ಶೈನ್ ಆಗೋದಂತೂ ಗ್ಯಾರೆಂಟಿ. ಇನ್ನು ಇವರು ಜಾರ್ಜಿಯಾದಲ್ಲಿ ಓದುವಾಗ ಟ್ಯಾಂಗೋ ಡ್ಯಾನ್ಸ್ ಸಹ ಕಲಿತಿದ್ದರು.

ಪಲ್ಲವಿ ಅವರ ಬಗ್ಗೆ ತಿಳಿಸುಗ ಮತ್ತೊಂದು ಪ್ರಮುಖವಾದ ವಿಚಾರ ಏನು ಎಂದರೆ ಸಾಯಿಪಲ್ಲವಿ ಅವರು ಯಾವುದೇ ಜಾಹೀರಾತುಗಳಲ್ಲಿ ನಟಿಸುವುದಿಲ್ಲ. ಫೇರ್ ಅಂಡ್ ಲವ್ಲಿ ಜಾಹೀರಾತಿಗೆ ಬರೋಬ್ಬರಿ 2 ಕೋಟಿ ರೂಪಾಯಿ ಆಫರ್ ಬಂದಿತ್ತು.. ಆದರೆ ಇದು ನಮ್ಮ ಭಾರತೀಯರ ಬಣ್ಣ, ಹೊರದೇಶದವರ ಬಳಿ ಹೋಗಿ ನಾವು ಯಾಕೆ ಇಷ್ಟು ಬೆಳ್ಳಗಿದ್ದೀರಾ ಎಂದು ಹೇಳುವುದಿಲ್ಲ. ನಮ್ಮ ಬಗ್ಗೆ ನಾವೇ ಹಾಗೆ ಅಂದುಕೊಳ್ಳಬಾರದು, ಅವರು ಕೊಡೋ ಹಣದಲ್ಲಿ ನಾನು ಏನು ಮಾಡಲಿ, ದಿನಾ ನಾನು ತಿನ್ನೋದೆ 2 ಅಥವಾ 3 ಚಪಾತಿ ಅಷ್ಟೇ ಎಂದು ಹೇಳಿ, ಜಾಹೀರಾತುಗಳಲ್ಲಿ ನಟಿಸುವುದಿಲ್ಲ ಎಂದು ನಿರ್ಧಾರ ಮಾಡಿದ್ದರು ಸಾಯಿಪಲ್ಲವಿ. ಇನ್ನೊಂದು ವಿಷಯ ಏನು ಎಂದರೆ, ಇವರು ವೃತ್ತಿಯಲ್ಲಿ ಡಾಕ್ಟರ್, ನಟನೆ ಮತ್ತು ಡ್ಯಾನ್ಸ್ ಬಗ್ಗೆ ಇರುವ ಆಸಕ್ತಿ ಇಂದ ನಟಿಸುತ್ತಿದ್ದಾರೆ..
ಒಳ್ಳೆಯ ಅವಕಾಶ ಸಿಗದ ಹೊರತು ಪಲ್ಲವಿ ಅವರು ನಟಿಸುವುದಿಲ್ಲ. ನಟನೆಯಲ್ಲಿ ಅವಕಾಶ ಸಿಗದೇ ಹೋದರೆ, ಆಸ್ಪತ್ರೆ ಶುರು ಮಾಡಿ ಜನರಿಗೆ ಟ್ರೀಟ್ಮೆಂಟ್ ಕೊಡಬೇಕು, ಆ ರೀತಿಯಲ್ಲಿ ಜನರ ಸೇವೆ ಮಾಡಬೇಕು ಎಂದು ಕನಸು ಕಂಡಿದ್ದಾರೆ ಇದೆಲ್ಲವನ್ನು ನೋಡಿದರೆ ಸಾಯಿಪಲ್ಲವಿ ಅವರು ಬೇರೆ ನಟಿಯರಿಗಿಂತ ಬಹಳ ಭಿನ್ನ ಎಂದರೆ ತಪ್ಪಲ್ಲ. ಇಲ್ಲಿಯವರೆಗೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಫೇಮಸ್ ಆಗಿದ್ದ ಪಲ್ಲವಿ ಅವರು, ಈಗ ರಾಮಾಯಣ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್ ಗೆ ಸಹ ಎಂಟ್ರಿ ಕೊಡುತ್ತಿದ್ದಾರೆ. ಅಲ್ಲಿ ಸಹ ಇವರಿಗೆ ಯಶಸ್ಸು ಮತ್ತು ಗೌರವ ಸಿಗಲಿ ಎಂದು ನಾವು ಸಹ ಹಾರೈಸೋಣ.



