ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಈಗ ಬಹಳ ಕಠಿಣವಾದ ಹಂತದಲ್ಲಿ ಇದ್ದಾರೆ. ಫಿನಾಲೆ ತಲುಪಲು ಇರುವುದು ಕೆಲವೇ ಕೆಲವು ವಾರಗಳು ಮಾತ್ರ. ಈ ವಾರಾಂತ್ಯದಲ್ಲಿ ಎಲಿಮಿನೇಟ್ ಆಗುವ ಸ್ಪರ್ಧಿ ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಈ ವಿಷಯಕ್ಕೆ ಉತ್ತರ ಸಿಕ್ಕಿದ್ದು. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ ಇಂದು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಗಡೆ ಬರುವ ಸ್ಪರ್ಧಿ ಐಶ್ವರ್ಯ ಸಿಂಧೋಗಿ ಎಂದು ಮಾಹಿತಿ ಸಿಕ್ಕಿದೆ. ಹೌದು, ಈ ವಾರ ಕಡಿಮೆ ವೋಟ್ಸ್ ಪಡೆದು, ಎಲಿಮಿನೇಟ್ ಆಗಿ ಹೊರ ಬಂದಿರುವವರು ನಟಿ ಐಶ್ವರ್ಯ ಸಿಂಧೋಗಿ. ಈ ಎಲಿಮಿನೇಷನ್ ಒಂದು ರೀತಿ ಆಶ್ಚರ್ಯ ತಂದಿದೆ..

ಐಶ್ವರ್ಯ ಸಿಂಧೋಗಿ ಅವರು ಬಿಗ್ ಬಾಸ್ ಮನೆಯ ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು, ಇಷ್ಟು ವಾರಗಳ ಕಾಲ ಉತ್ತಮವಾಗಿ ಆಡಿಕೊಂಡು ಬಂದಿದ್ದರು, ಏನೇ ಇದ್ದರೂ ನೇರವಾಗಿ ಮಾತನಾಡಿ, ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದರು. 2 ವಾರಗಳ ಹಿಂದೆ ಇವರ ಬಗ್ಗೆ ಟಾರ್ಗೆಟ್ ನಾಮಿನೇಷನ್ ಎನ್ನುವ ವಿಷಯ ಬಂದು, ವಿಡಿಯೋ ನೋಡಿದ ಬಳಿಕ ಕೆಲವರು ಐಶ್ವರ್ಯ ಬಗ್ಗೆ ನೆಗಟಿವ್ ಆಗಿ ಮಾತನಾಡಿದ್ದರು. ಇವರನ್ನು ಟಾರ್ಗೆಟ್ ಮಾಡುವುದಕ್ಕೆ ಸಹ ಶುರು ಮಾಡಿದ್ದರು. ಚೈತ್ರಾ ಹಾಗೂ ಐಶ್ವರ್ಯ ನಡುವೆ ಬಹಳ ವಾದ ವಾಗ್ವಾದಗಳು ಸಹ ನಡೆದು ಹೋಗಿದ್ದವು. ಇದೆಲ್ಲವೂ ಒಂದು ಕಡೆಯಾದರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಮತ್ತೊಂದು ಕಡೆ ಭವ್ಯ ಕೂಡ ಐಶ್ವರ್ಯ ಸಿಂಧೋಗಿ ಅವರನ್ನು ಟಾರ್ಗೆಟ್ ಮಾಡಿ, ಅದು ಇದು ಎಂದು ಹೇಳಿದ್ದರು. ಎಲ್ಲವೂ ಸಹ ವರ್ಕ್ ಆಗಿದ್ದು, ಇದೀಗ ಐಶ್ವರ್ಯ ಸಿಂಧೋಗಿ ಅವರು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಐಶ್ವರ್ಯ, ಹನುಮಂತ, ಧನರಾಜ್, ಮೋಕ್ಷಿತಾ ಮತ್ತು ಚೈತ್ರಾ ಇವರೆಲ್ಲರೂ ನಾಮಿನೇಟ್ ಆಗಿದ್ದರು. ಇವರುಗಳ ಪೈಕಿ ನಿನ್ನೆಯ ಸಂಚಿಕೆಯಲ್ಲಿ ಧನರಾಜ್ ಹಾಗೂ ಹನುಮಂತ ಇವರಿಬ್ಬರನ್ನು ಸೇವ್ ಮಾಡಿದ್ದರು ಕಿಚ್ಚ. ಇಂದಿನ ಸಂಚಿಕೆಯಲ್ಲಿ ಬೇರೆ ಸ್ಪರ್ಧಿಗಳು ಸೇವ್ ಆಗಲಿದ್ದು, ಐಶ್ವರ್ಯ ಅವರು ಎಲಿಮಿನೇಟ್ ಆಗಲಿದ್ದಾರೆ. ಐಶ್ವರ್ಯ ಅವರ ಫ್ಯಾನ್ಸ್ ಗೆ ಇದು ಬೇಸರದ ವಿಷಯ.

ಹೌದು, ಐಶ್ವರ್ಯ ಅವರು ಬಹಳ ಕಷ್ಟಪಟ್ಟು ಇಲ್ಲಿಯವರೆಗೂ ಬೆಳೆದು ಬಂದಿರುವ ಹುಡುಗಿ. ಕೆಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಐಶ್ವರ್ಯ ಅವರಿಗೆ ಒಳ್ಳೇ ಹೆಸರು ಮತ್ತು ಜನಪ್ರಿಯತೆ ಸಿಕ್ಕಿದ್ದು ಧಾರಾವಾಹಿಗಳ ಮೂಲಕ. ಕಿರುತೆರೆಯಲ್ಲಿ ಇವರು ಬಹಳ ಪಾಪ್ಯುಲರ್ ಆಗಿದ್ದು, ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಂದೆ ತಾಯಿ ಇಲ್ಲದೇ ಬದುಕುತ್ತಿರುವ ಹುಡುಗಿ ಇವರು. ತಾಯಿಯನ್ನು ಕಣ್ಣೆದುರೇ ಕಳೆದುಕೊಂಡಿದ್ದಾರೆ, ಇಂಥ ಐಶ್ವರ್ಯ ಅವರಿಗೆ ಬಿಗ್ ಬಾಸ್ ಒಂದು ದೊಡ್ಡ ಪ್ಲಾಟ್ ಫಾರ್ಮ್ ಆಗಿತ್ತು, ಇಷ್ಟು ವಾರಗಳ ಕಾಲ ಐಶ್ವರ್ಯ ಅವರು ಉತ್ತಮವಾದ ಪ್ರದರ್ಶನ ನೀಡಿ, ಟಾಸ್ಕ್ ಆಡಿಕೊಂಡು ಬಂದಿದ್ದರು.
ಆದರೆ ಇವತ್ತಿಗೆ ಐಶ್ವರ್ಯ ಸಿಂಧೋಗಿ ಅವರ ಬಿಗ್ ಬಾಸ್ ಪ್ರಯಾಣ ಮುಕ್ತಾಯ ಆಗಿದೆ. ಇವರು ಫಿನಾಲೆ ವರೆಗು ತಲುಪಬೇಕು, ಐಶ್ವರ್ಯ ಅವರು ವಿನ್ನರ್ ಆಗಬೇಕು ಎಂದು ಅವರ ಅಭಿಮಾನಿಗಳು ಆಸೆ ಇಟ್ಟುಕೊಂಡಿದ್ದರು. ಆದರೆ ಅದು ನಿಜ ಆಗಲಿಲ್ಲ. ಇದೀಗ ಐಶ್ವರ್ಯ ಎಲಿಮಿನೇಟ್ ಆಗಿದ್ದಾರೆ. ಇನ್ನು ಕೆಲವೇ ವಾರಗಳಲ್ಲಿ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಯಾರು ವಿನ್ನರ್ ಆಗಬಹುದು ಎಂದು ಕಾದು ನೋಡಬೇಕಿದೆ. ಇನ್ನು ಇದು ಸುದೀಪ್ ಅವರು ನಿರೂಪಣೆ ಮಾಡುವ ಕೊನೆಯ ಸೀಸನ್ ಎನ್ನುವುದು ಮತ್ತೊಂದು ಬೇಸರದ ವಿಷಯ ಆಗಿದೆ.