ಟಾಲಿವುಡ್ ಸ್ಟಾರ್ ನಟ ಅಕ್ಕಿನೇನಿ ನಾಗಚೈತನ್ಯ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಮೊದಲನೇ ಮಗ ನಾಗಚೈತನ್ಯ 2ನೇ ಮದುವೆ ಆಗುತ್ತಿದ್ದಾರೆ. ಸುಮಾರು 2 ವರ್ಷಗಳ ಹಿಂದೆ ನಾಗಚೈತನ್ಯ ತಮ್ಮ ಮೊದಲ ಪತ್ನಿ ಸಮಂತಾಗೆ ಡಿವೋರ್ಸ್ ನೀಡಿದ್ದರು. ಈ ವಿಚ್ಛೇದನದ ಸುದ್ದಿ ವೈರಲ್ ಆಗುತ್ತಿದ್ದಂತೆ ಎಲ್ಲರೂ ಸಮಂತಾದೇ ತಪ್ಪು ಎಂದು ಬೆರಳು ತೋರಿದ್ದರು. ಆದರೆ ಸಮಂತಾ ಮಾತ್ರ ಸೈಲೆಂಟ್ ಆಗೇ ಇದ್ದರು. ನಾಗಚೈತನ್ಯ, ನಟಿ ಶೋಭಿತಾ ಧೂಲಿಪಾಲ ಜೊತೆ ಅಫೇರ್ನಲ್ಲಿದ್ದಾರೆ. ಇದೇ ಕಾರಣಕ್ಕೆ ಸಮಂತಾ ಆ ಸಂಬಂಧದಿಂದ ಹೊರ ಬಂದಿದ್ದು ಎಂದು ಸಮಂತಾ ಅಭಿಮಾನಿಗಳು ನಾಗಚೈತನ್ಯನನ್ನು ದೂರಿದ್ದರು. ಆಗ ಇದೆಲ್ಲಾ ಗಾಸಿಪ್ ಎಂದೇ ಹೇಳಲಾಗಿತ್ತು. ಆದರೆ ಯಾವಾಗ ನಾಗಚೈತನ್ಯ 2ನೇ ಬಾರಿ ಎಂಗೇಜ್ಮೆಂಟ್ ಮಾಡಿಕೊಂಡರೋ ಸಮಂತಾಗೆ ಡಿವೋರ್ಸ್ ನೀಡಿದ್ದು ಇದೇ ಕಾರಣಕ್ಕೆ ಅನ್ನೋದು ಎಲ್ಲರಿಗೂ ಪಕ್ಕಾ ಆಗಿದೆ.

ಅಷ್ಟೇ ಅಲ್ಲ, ನಟ ಅಕ್ಕಿನೇನಿ ನಾಗಾರ್ಜುನ ತಮ್ಮ ಬಿಸ್ನೆಸ್ ಉಳಿಸಿಕೊಲ್ಳುವ ಸಲುವಾಗ ಸೊಸೆ ಸಮಂತಾರನ್ನು ಪ್ರಭಾವಿ ರಾಜಕೀಯ ಮುಖಂಡನ ಜೊತೆ ಕಮಿಟ್ಮೆಂಟ್ ಮಾಡಿಕೊಳ್ಳುವುದಾಗಿ ಕೇಳಿದ್ದರು. ಇದೂ ಕೂಡಾ ಸಮಂತಾ ಆ ಫ್ಯಾಮಿಲಿಯಿಂದ ಹೊರ ಬರಲು ಕಾರಣವಾಯ್ತು ಎಂದು ಇತ್ತೀಚೆಗೆ ಸಚಿವೆಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದೀಗ ನಾಗಚೈತನ್ಯ 2ನೇ ಮದುವೆಗೆ ರೆಡಿ ಆಗುತ್ತಿದ್ದಾರೆ. ಆಗಸ್ಟ್ 8 ರಂದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಡಿಸೆಂಬರ್ 4 ರಂದು ನಾಗಚೈತನ್ಯ ಹಾಗೂ ಶೋಭಿತಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆಗೆ ಎಲ್ಲಾ ಸಿದ್ದತೆ ನಡೆಯುತ್ತಿದೆ. ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲೇ ಈ ಮದುವೆ ಅದ್ದೂರಿಯಾಗಿ ನೆರವೇರುತ್ತಿದೆ. ಮದುವೆಗೆ ಬರುವವರು ಮದು ಮಕ್ಕಳ ಫೋಟೋ, ವಿಡಿಯೋ ತೆಗೆಯುವಂತಿಲ್ಲ ಎಂದು ಅಕ್ಕಿನೇನಿ ಕುಟುಂಬ ಕಂಡಿಷನ್ ಮಾಡಿದೆ. ಏಕೆಂದರೆ ಇವರ ಮದುವೆ ವಿಡಿಯೋವನ್ನು ನೆಟ್ಫ್ಲಿಕ್ಸ್ ಖರೀದಿಸಿದ್ದು ಮದುವೆ ನಂತರ ಪ್ರಸಾರ ಮಾಡಲಿದೆ.

ಅಕ್ಕಿನೇನಿ ನಾಗಾರ್ಜುನ ಮೊದಲ ಮಗನ ಕಥೆ ಹೀಗಾದರೆ ಎರಡನೇ ಮಗ ಅಖಿಲ್ ಅಕ್ಕಿನೇನಿ ಕೂಡಾ ಮದುವೆಗೆ ತಯಾರಾಗುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಅಖಿಲ್ ಅಕ್ಕಿನೇನಿಗೆ ಸುಮಾರು 7 ವರ್ಷಗಳ ಹಿಂದೆ ಶ್ರಿಯಾ ಭೂಪಾಲ್ ಎಂಬುವರೊಂದಿಗೆ ಎಂಗೇಜ್ಮೆಂಟ್ ಆಗಿತ್ತು. ಆದರೆ ಮದುವೆ ಮುನ್ನವೇ ಈ ನಿಶ್ಚಿತಾರ್ಥ ಮುರಿದುಬಿತ್ತು. ಇದಾದ ನಂತರ ಅಖಿಲ್, ಸಿನಿಮಾಗಳಲ್ಲಿ ಬ್ಯುಸಿ ಆದರು. ಇವರ ಸಿನಿಮಾಗಳು ಕೂಡಾ ಅಖಿಲ್ಗೆ ಹೇಳಿಕೊಳ್ಳುವಂಥ ಹೆಸರು ತಂದುಕೊಡಲಿಲ್ಲ. ಅಖಿಲ್ 2 ವರ್ಷಗಳಿಂದ ಜೈನಬ್ ರವ್ಜಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದು ಈ ಜೋಡಿ ಈಗಾಗಲೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರಂತೆ.
ಶೋಭಿತಾ ಹಾಗೂ ನಾಗಚೈತನ್ಯ ಎಂಗೇಜ್ಮೆಂಟ್ ಮುಗಿಯುತ್ತಿದ್ದಂತೆ ಅಕ್ಕಿನೇನಿ ನಾಗಾರ್ಜುನ 2ನೇ ಮಗ ಅಖಿಲ್ಗೆ ಕೂಡಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿದ್ದಾರಂತೆ. ನಾಗಚೈತನ್ಯ 2ನೇ ಮದುವೆ ಮುಗಿಯುತ್ತಿದ್ದಂತೆ, ಮುಂದಿನ ವರ್ಷ ಅಖಿಲ್ ಹಾಗೂ ಜೈನಬ್ಗೆ ಮದುವೆ ಮಾಡಲಿದ್ದಾರೆ ಎಂದು ಟಾಲಿವುಡ್ ಮಾತನಾಡಿಕೊಳ್ಳುತ್ತಿದೆ. ಇತ್ತ ಸಮಂತಾ ಅಭಿಮಾನಿಗಳು ನೀವು ಒಬ್ಬಂಟಿಯಾಗಿರಬೇಡಿ, ದಯವಿಟ್ಟು ನೀವೂ ಒಂದೊಳ್ಳೆ, ನಿಮ್ಮನ್ನು ಪ್ರೀತಿಸುವ ಹುಡುಗ ಸಿಕ್ಕರೆ ದಯವಿಟ್ಟು ಮದುವೆ ಆಗಿ ಎಂದು ಮನವಿ ಮಾಡುತ್ತಿದ್ದಾರೆ. ಅಭಿಮಾನಿಗಳ ಆಸೆಯನ್ನು ಸಮಂತಾ ಪೂರೈಸುತ್ತಾರಾ ಕಾದು ನೋಡಬೇಕು.



