ನಟಿ ಶ್ರೀಲೀಲಾ ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್ ರೀತಿಯಲ್ಲಿ ಬೆಳೆಯುತ್ತಿದ್ದಾರೆ. ಕನ್ನಡದ ಸಿನಿಮಾ ಮೂಲಕ ಇವರು ನಾಯಕಿಯಾಗಿ ಹೆಸರು ಮಾಡಿ, ಒಳ್ಳೆಯ ಲಾಂಚ್ ಪಡೆದು, ಈಗ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ತೆಲುಗಿನಲ್ಲಿ ಇವರಿಗೆ ಭಾರಿ ಬೇಡಿಕೆ ಇದೆ. ಒಂದರ ನಂತರ ಒಂದು ಸೂಪರ್ ಹಿಟ್ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಇವರಿಗೆ ಹೆಚ್ಚಿನ ಅವಕಾಶಗಳು ಕೂಡ ಸಿಗುತ್ತಲೇ ಇದೆ. ಶ್ರೀಲೀಲಾ ಅವರು ಒಬ್ಬ ನಟಿಯಾಗಿ, ಒಳ್ಳೆಯ ಡ್ಯಾನ್ಸರ್ ಆಗಿ ಎಲ್ಲರಿಗೂ ಪರಿಚಯ ಇದ್ದಾರೆ, ಆದರೆ ಇದೀಗ ಶ್ರೀಲೀಲಾ ಅವರು ಮದುವೆಗೆ ರೆಡಿ ಆಗಿದ್ದಾರಾ ಎನ್ನುವ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಕಾರಣ ಶ್ರೀಲೀಲಾ ಅವರು ಶೇರ್ ಮಾಡಿರುವ ಒಂದು ಪೋಸ್ಟ್.. ಅರಿಶಿನ ಶಾಸ್ತ್ರ ಮಾಡಿಕೊಂಡಿರುವ ರೀತಿಯಲ್ಲಿ ಫೋಟೋ ಶೇರ್ ಮಾಡಿದ್ದಾರೆ..

ನಟಿ ಶ್ರೀಲೀಲಾ ಬಹಳ ಚಿಕ್ಕ ವಯಸ್ಸಿಗೆ ನಟನೆ ಶುರು ಮಾಡಿದವರು. ಕನ್ನಡದ ಕಿಸ್ ಸಿನಿಮಾ ಮೊದಲ ಬಾರಿಗೆ ಇವರು ನಟಿಸಿದ್ದು. ಕಿಸ್ ಸಿನಿಮಾ ಶ್ರೀಲೀಲಾ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಕಿಸ್ ನಂತರ ಶ್ರೀಲೀಲಾ ಅವರು ಕನ್ನಡದಲ್ಲಿ ಬೈ ಟು ಲವ್ ಎನ್ನುವ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾ ಸಹ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಇಂದು ಶ್ರೀಲೀಲಾ ಅವರು ಬಹಳ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಶ್ರೀಲೀಲಾ ಅವರು ಇಂದು ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಕಾರ್ತಿಕ್ ಆರ್ಯನ್ ಅವರೊಡನೆ ಹೀರೋಯಿನ್ ಆಗಿ ನಟಿಸುವ ಮೂಲಕ ಬಾಲಿವುಡ್ ಗೆ ಕೂಡ ಎಂಟ್ರಿ ಕೊಡಲಿದ್ದಾರೆ. ಇನ್ನು ತೆಲುಗು ಮತ್ತು ತಮಿಳಿನಲ್ಲಿ ಶ್ರೀಲೀಲಾ ಅವರು ಈಗಾಗಲೇ ಸಿನಿಮಾ ಮಾಡಿದ್ದು, ಅಲ್ಲಿ ಸಹ ಇವರಿಗೆ ಒಳ್ಳೆಯ ಹೆಸರು ಸಿಕ್ಕಿದೆ.
ಶ್ರೀಲೀಲಾ ಅವರು ಸಿನಿಮಾ ಜೊತೆಗೆ ಡ್ಯಾನ್ಸ್ ಇಂದ ಹೆಚ್ಚು ಗುರುತಿಸಿಕೊಂಡಿರುವ ನಟಿ. ಅದರಲ್ಲೂ ತೆಲುಗಿನಲ್ಲಿ ಶ್ರೀಲೀಲಾ ಅವರ ಡ್ಯಾನ್ಸ್ ಗೆ ಭಾರಿ ಬೇಡಿಕೆ ಇದೆ. ಶ್ರೀಲೀಲಾ ಅವರು ಪುಷ್ಪ2 ಸಿನಿಮಾದ ಐಟಂ ಸಾಂಗ್ ನಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ದೊಡ್ಡ ಮಟ್ಟದಲ್ಲಿಯೇ ಹೆಸರು ಸಿಕ್ಕಿತು. ಜೊತೆಗೆ ಜನರಿಂದ ಒಳ್ಳೆಯ ಕಾಮೆಂಟ್ಸ್ ಸಹ ಸಿಕ್ಕಿತು. ಕಿಸಿಕ್ ಹಾಡು ಸಿಕ್ಕಾಪಟ್ಟೆ ವೈರಲ್ ಸಹ ಆಗಿತ್ತು. ಪುಷ್ಪ1 ನಲ್ಲಿ ಸಮಂತಾ ರುತ್ ಪ್ರಭು ಅವರು ಮೋಡಿ ಮಾಡಿದ ಹಾಗೆ ಶ್ರೀಲೀಲಾ ಅವರು ಕಿಸಿಕ್ ಹಾಡಿನ ಮೂಲಕ ಸಖತ್ ಫೇಮಸ್ ಆದರು. ಇನ್ನು ಶ್ರೀಲೀಲಾ ಅವರು ಈ ಸಿನಿಮಾ ಇಂದ ಯಶಸ್ಸು ಗಳಿಸಿದರು, ಜೊತೆಗೆ ಇನ್ನಷ್ಟು ಅವಕಾಶಗಳನ್ನು ಸಹ ಗಳಿಸಿಕೊಂಡರು. ಇದೀಗ ಇವರು ಮತ್ತೊಂದು ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಅದು ಶ್ರೀಲೀಲಾ ಅವರು ಮದುವೆಗೆ ರೆಡಿ ಆಗಿದ್ದಾರಾ ಎನ್ನುವ ಪ್ರಶ್ನೆ ಶುರುವಾಗಿದೆ.
ಶ್ರೀಲೀಲಾ ಅವರು ಸೋಷಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಸ್ ಗಳನ್ನು ಶೇರ್ ಮಾಡಿದ್ದಾರೆ, ಅದರಲ್ಲಿ ಅವರಿಗೆ ಅರಿಶಿನ ಶಾಸ್ತ್ರ ಮಾಡುತ್ತಿರುವ ಹಾಗಿರುವ ಕೆಲವು ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದನ್ನು ನೋಡಿದ ಅಭಿಮಾನಿಗಳು, ಶ್ರೀಲೀಲಾ ಅವರಿಗೆ ಮದುವೆ ಫಿಕ್ಸ್ ಆಗಿದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ. ಶ್ರೀಲೀಲಾ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರೊಡನೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ಇದೆ. ಬಹುಶಃ ಅವರೊಡನೆ ಮದುವೆ ಅಗೋದಕ್ಕೆ ರೆಡಿ ಆಗಿದ್ದಾರಾ ಎನ್ನುವ ವಿಚಾರ ಒಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆದರೆ ಈ ಫೋಟೋಸ್ ಗಳು ಅವರ ಮದುವೆಗೆ ಸಂಬಂಧಿಸಿದ ಫೋಟೋಸ್ ಗಳಲ್ಲ. ಬದಲಾಗಿ ಶ್ರೀಲೀಲಾ ಬರ್ತ್ ಡೇ ಗಿಂತ ಮೊದಲು ಸೆಲೆಬ್ರೇಟ್ ಮಾಡಿರುವ ಕೆಲವು ಫೋಟೋಸ್ ಆಗಿದೆ. ಇದನ್ನು ನೋಡಿದರೆ ಎಲ್ಲರಿಗೂ ಗೊಂದಲ ಅನ್ನಿಸೋದು ನಿಜ..
ಹೌದು, ಈ ಫೋಟೋಸ್ ಮದುವೆಯ ಅರಿಶಿನ ಶಾಸ್ತ್ರದ ಫೋಟೋಗಳಲ್ಲ. ಬದಲಾಗಿ ಶ್ರೀಲೀಲಾ ಅವರ ಬರ್ತ್ ಡೇ ಗಿಂತ ಮೊದಲು ಸೆಲೆಬ್ರೇಟ್ ಮಾಡಿರುವ ಫೋಟೋಸ್ ಆಗಿದೆ. ಶ್ರೀಲೀಲಾ ಅವರ ತಾಯಿ ಈ ಒಂದು ಸರ್ಪ್ರೈಸ್ ಅನ್ನು ಮಗಳಿಗಾಗಿ ಪ್ಲಾನ್ ಮಾಡಿದ್ದರು. ಅದನ್ನು ಶ್ರೀಲೀಲಾ ಅವರು ಬಹಳ ಎಂಜಾಯ್ ಮಾಡಿದ್ದಾರೆ. ಶ್ರೀಲೀಲಾ ಅವರು ಚಿಕ್ಕ ವಯಸ್ಸಿನಲ್ಲಿ ಇದೇ ರೀತಿ ಬರ್ತ್ ಡೇ ಸೆಲೆಬ್ರೇಟ್ ಮಾಡುತ್ತಿದ್ದರಂತೆ. ಅದೇ ರೀತಿ ಈಗಲೂ ಅವರ ತಾಯಿ ಪ್ಲಾನ್ ಮಾಡಿದ್ದಾರೆ. ಶ್ರೀಲೀಲಾ ಅವರ ಹುಟ್ಟುಹಬ್ಬ ಇರೋದು ಜೂನ್ 14ರಂದು, ಇದು ಪ್ರೀ ಬರ್ತ್ ಡೇ ಸೆಲೆಬ್ರೇಷನ್ಸ್ ಆಗಿದೆ. ಶ್ರೀಲೀಲಾ ಅವರ ಫ್ಯಾಮಿಲಿ ಇದರಲ್ಲಿ ಇನ್ವಾಲ್ವ್ ಆಗಿದ್ದು, ಬಹಳ ಸುಂದರವಾಗಿ ಸೆಲೆಬ್ರೇಟ್ ಮಾಡಿ, ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ಮದುವೆ ಅಲ್ಲ ಎಂದು ಗೊತ್ತಾಗಿ ಅವರ ಫ್ಯಾನ್ಸ್ ಗೆ ಅಂತೂ ಸಮಾಧಾನ ಆಗಿದೆ.

ನಟಿ ಶ್ರೀಲೀಲಾ ಅವರ ಬರ್ತ್ ಡೇ ಗೆ ಇನ್ನು 2 ವಾರ ಸಮಯ ಇರುವಾಗಲೇ ಇಷ್ಟು ಚೆನ್ನಾಗಿ ಶ್ರೀಲೀಲಾ ಅವರ ತಾಯಿ ಪ್ಲಾನ್ ಮಾಡಿ, ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಇನ್ನು ಜೂನ್ 14ರಂದು ಅವರ ಹುಟ್ಟುಹಬ್ಬವನ್ನು ಯಾವ ರೀತಿ ಆಚರಣೆ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ಈ ಥರ ಬರ್ತ್ ಡೇ ಸೆಲೆಬ್ರೇಟ್ ಮಾಡೋದನ್ನ ಯಾರು ಕೂಡ ನೋಡಿರಲಿಲ್ಲ, ನಿರೀಕ್ಷೆಯನ್ನು ಮಾಡಿರಲಿಲ್ಲ ಎಂದು ಹೇಳಬಹುದು. ಇನ್ನು ಶ್ರೀಲೀಲಾ ಅವರು ಈ ವರ್ಷ ಹುಟ್ಟುಹಬ್ಬವನ್ನು ಇದೇ ರೀತಿ ಸ್ಪೆಷಲ್ ಆಗಿ ಆಚರಣೆ ಮಾಡಿಕೊಳ್ಳುವುದರಲ್ಲಿ ಯಾವುದೇ ಸಂಶಯ ಅಂತೂ ಇಲ್ಲ. ಇನ್ನು ಇವರ ಬಗ್ಗೆ ಹೇಳೋದಾದರೆ, ಶ್ರೀಲೀಲಾ ಸ್ಟಾರ್ ಹೀರೋಗಳ ಸಿನಿಮಾದಲ್ಲಿ ಈಗ ನಟಿಸುತ್ತಿದ್ದಾರೆ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಸಹ ನಟಿಸಿ ಹೆಸರು ಮಾಡಿದ್ದಾರೆ.
ಇನ್ನು ಶ್ರೀಲೀಲಾ ಅವರು ಒಬ್ಬ ಒಳ್ಳೆಯ ನಟಿ ಎನ್ನುವುದರ ಜೊತೆಗೆ ಒಳ್ಳೆಯ ಹುಡುಗಿ ಸಹ ಹೌದು. ಶ್ರೀಲೀಲಾ ಅವರು ಬಹಳ ಚಿಕ್ಕ ವಯಸ್ಸಿಗೆ ಇಬ್ಬರು ಮಕ್ಕಳನ್ನು ದತ್ತು ಪಡೆದು, ಅವರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಇದು ಹೆಚ್ಚಿನ ಜನರಿಗೆ ಗೊತ್ತಿರದ ವಿಚಾರ. ಶ್ರೀಲೀಲಾ ಅವರು ಬಹಳ ಚಿಕ್ಕ ವಯಸ್ಸಿಗೆ ಇಷ್ಟೆಲ್ಲಾ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಮಾದರಿ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಹೀಗೆ ಇವರು ಚೆನ್ನಾಗಿರಲಿ ಎಂದು ನಾವೆಲ್ಲರೂ ವಿಶ್ ಮಾಡೋಣ. ಶ್ರೀಲೀಲಾ ಅವರು ಇನ್ನು ಹಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಲಿ.



