ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಸಕ್ಕತ್ ಸುದ್ದಿಯಲ್ಲಿರುವ ಮತ್ತು ಹೆಚ್ಚು ಟ್ರೋಲ್ ಆಗುತ್ತಿರುವ ಚಿತ್ರ ಎಂದರೆನಟ ಅದು ಓ ರಾವತ್ ನಿರ್ದೇಶನದ ‘ಆದಿಪುರುಷ್’. ಬಿಡುಗಡೆಯಾದ ದಿನದಿಂದಲೂ ಒಂದಿಲ್ಲೊಂದು ವಿಚಾರಕ್ಕೆ ಟೀಕೆಗೆ ಒಳಗಾಗುತ್ತಲೇ ಇರುವ ಈ ಚಿತ್ರದಲ್ಲಿ ಪ್ರಭಾಸ್, ಕೃತಿ ಸನನ್, ಸೈಫ್ ಅಲಿ ಖಾನ್ ನಟಿಸಿದ್ದರು. ಇದೀಗ ಮತ್ತೆ ಈ ಚಿತ್ರತಂಡ ನೀಡಿರುವ ಹೇಳಿಕೆಯಿಂದ ದೇಶದಾದ್ಯಂತ ವಿವಾದದ ಕಿಡಿ ಹೊತ್ತಿಸಿದೆ.ಮುಂದಿನ ದಿನಗಳಲ್ಲಿ ಈ ವಿವಾದಾತ್ಮಕ ಹೇಳಿಕೆ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.

ಈಗಾಗಕೇ ಆದಿಪುರುಷ್ ಚಿತ್ರದ ಸಂಭಾಷಣೆಯ ಬಗ್ಗೆ ದೇಶದಾದ್ಯಂತ ತೀವ್ರ ಆಕ್ರೋಶ ಭುಗಿಲೆದ್ದಿದೆ. ಈ ನಡುವೆ ಚಿತ್ರದ ಸಂಭಾಷಣೆಕಾರ ಮನೋಜ್ ಮುಂತಾಶಿರ್ ಸಂಧರ್ಶನವೊಂದರಲ್ಲಿ ಭಾಗಿಯಾಗಿ, ‘ಭಜರಂಗಬಲಿ ಹನುಮಂತ ದೇವರಲ್ಲ. ಹನುಮಂತ ಕೇವಲ ಭಕ್ತ. ಆತ ತನ್ನ ಅಗಾಧವಾದ ಭಕ್ತಿಯಿಂದ ಜನರಿಗೆ ಭಗವಾನ್ ಆಗಿ ಕಾಣುತ್ತಿದ್ದಾನೆ’ ಎಂದಿದ್ದಾರೆ. ಈ ಹೇಳಿಕೆ ಸೋಶಿಯಲ್ ಮಿಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಹನುಮಾನ್ ಭಕ್ತರು ಆಕ್ರೋಶಗೊಂಡು. ಹೇಳಿಕೆ ನೀಡಿದ ಮುಂತಾಶೀರ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಿಡುಗಡೆಯಾದ ದಿನದಿಂದಲೂ ವಿವಾದದ ಸುಳಿಯಲ್ಲಿದ್ದ ಆದಿಪುರ್ ತಂಡಕ್ಕೆ ಮನೋಜ್ ಮುಂತಾಶಿರ್ ನೀಡಿರುವ ಹೇಳಿಕೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.ಈ ವಿವಾದಾತ್ಮಕ ಹೇಳಿಕೆಯಿಂದ ಕೋಪಗೊಂಡಿರುವ ಹನುಮ ಭಕ್ತರು ‘ಇಂತವರು ಸಂದರ್ಶನ ನೀಡುವುದನ್ನು ನಿಲ್ಲಿಸಬೇಕು. ಇಂತವರಿಂದ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಪದೇ ಪದೆ ಘಾಸಿ ಉಂಟಾಗುತ್ತಿದೆ. ಇಂತಹ ಅತಿರೇಕದ ವರ್ತನೆಯನ್ನು ನಾವು ಇನ್ನು ಅಹಿಸುವುಸಿಲ್ಲ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.