ಬಿರು ಬೇಸಗೆ ಕಳೆದು ಮಳೆಗಾಲ ಆರಂಭವಾಗಿದೆ. ಆದರೆ ಮಳೆಯೊಂದಿಗೆ ರೋಗಗಳೂ ಕೂಡ ಬರುತ್ತವೆ ಎಂಬುದನ್ನು ಮರೆಯಬಾರದು. ಮಳೆಗಾಲದಲ್ಲಿ ಹೆಚ್ಚಾಗಿ ಪುಟ್ಟ ಮಕ್ಕಳು ಖಾಯಿಲೆಗಳಿಗೆ ತುತ್ತಾಗುತ್ತಾರೆ. ಈ ಋತುವಿನಲ್ಲಿ ಹೆಚ್ಚಾಗಿ ಕೆಮ್ಮು, ಶೀತ, ಜ್ವರ, ಉಸಿರಾಟದ ಸಮಸ್ಯೆ, ಶಿಲೀಂಧ್ರಗಳ ಸೋಂಕು ಹಾಗೂ ಹೊಟ್ಟೆಯ ಸೋಂಕುಗಳು ಕಂಡು ಬರುತ್ತವೆ ಮತ್ತು ಮಕ್ಕಳನ್ನು ಅತಿಯಾಗಿ ಬಾಧಿಸುತ್ತವೆ. ಆದ್ದರಿಂದ ಮಕ್ಕಳ ತಜ್ಞರು ‘ಮಳೆಗಾಲದಲ್ಲಿ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು?’ ಎಂಬ ಬಗ್ಗೆ ಪೋಷಕರಿಗೆ ಕೆಲವು ಟಿಪ್ಸ್ ಗಳನ್ನು ನೀಡಿದ್ದು, ಅವುಗಳು ಈ ಕೆಳಗಿನಂತಿವೆ.

1.ಮಕ್ಕಳನ್ನು ಕಾಲಕ್ಕನುಗುಣವಾಗಿ ನೀಡುವ ಲಸಿಕೆಗಳಿಂದ ತಪ್ಪಿಸಬೇಡಿ. ಪ್ರತಿ ವರ್ಷ ಇನ್ಫುಯೆಂಜಾ ಲಸಿಕೆ ನೀಡಿ.
2.ರಸ್ತೆ ಬದಿಯಲ್ಲಿ ಸಿಗುವ ಕರಿದ ಜಂಕ್ ಫುಡ್ ಗಳಿಂದ ಮಕ್ಕಳನ್ನು ದೂರವಿಡಿ.
- ಮಳೆಗಾಲದಲ್ಲಿ ಮಕ್ಕಳಿಗೆ ಕುದಿಸಿ ಆರಿಸಿದ ನೀರನ್ನು ಕುಡಿಯಲು ನೀಡಿ.
4.ಸೊಳ್ಳೆಗಳಿಂದ ಹರಡುವ ಡೆಂಗಿ ಹಾಗೂ ಮಲೇರಿಯಾ ರೋಗಗಳಿಂದ ಮಕ್ಕಳನ್ನು ರಕ್ಷಿಸಲು ನಿಮ್ಮಮನೆಯ ಸುತ್ತಮುತ್ತ ಸ್ವಚ್ಚವಾಗಿಟ್ಟುಕೊಳ್ಳಿ.
5.ಶಿಲೀಂಧ್ರಗಳ ಸೋಂಕಿನಿಂದ ಮಕ್ಕಳನ್ನು ರಕ್ಷಿಸಲು ಒದ್ದೆ ಬಟ್ಟೆ ಹಾಗೂ ಶೂ, ಚಪ್ಪಲಿಗಳನ್ನು ಮನೆಯ ಒಳಗೆ ತರಬೇಡಿ.

6.ಊಟ-ತಿಂಡಿ ಮಾಡುವ ಮುನ್ನ ಮಕ್ಕಳು ಚೆನ್ನಾಗಿ ಕೈ ತೊಳೆಯುತ್ತಾರಾ ಗಮನಿಸಿ.
7.ಮಳೆಗಾಲದಲ್ಲಿ ಮಕ್ಕಳು ಒಳಾಂಗಣ ಕ್ರೀಡೆಗಳಾದ ಟೇಬಲ್ ಟೆನ್ನಿಸ್, ಸ್ಕಿಪ್ಪಿಂಗ್ ಗಳಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲರಾಗಿರುವಂತೆ ನೋಡಿಕೊಳ್ಳಿ.
- ತೇವಾಂಶ ಉಳಿಯುವ ಬಟ್ಟೆ,ಒಳ ಉಡುಪುಗಳನ್ನು ಮಕ್ಕಳಿಗೆ ಧರಿಸಬೇಡಿ.
- ಮಕ್ಕಳ ಆಹಾರದಲ್ಲಿ ಬಾಸಿಲ್, ದಾಲ್ಚಿನ್ನಿ, ಶುಂಠಿ ಇರುವಂತೆ ನೋಡಿಕೊಳ್ಳಿ. ಇವುಗಳು ಮಕ್ಕಳನ್ನು ಜ್ವರದಿಂದ ರಕ್ಷಿಸುತ್ತವೆ.
10.ಕಾರ್ಪೆಟ್, ಕರ್ಟನ್, ಬೆಡ್ ಶೀಟ್ ಗಳನ್ನು ಆಗಾಗ ತೊಳೆಯುತ್ತಿರಿ. ಇಲ್ಲವಾದಲ್ಲಿ ಇವುಗಳಲ್ಲಿರುವ ಸೂಕ್ಷ್ಮಾಣು ಜೀವಿಗಳಿಂದ ಸೋಂಕುಹರಡಬಹುದು.
- ಅನಾರೋಗ್ಯ ಪೀಡಿತ ಮಕ್ಕಳೊಂದಿಗೆ ಸೇರದಂತೆ ನಿಮ್ಮ ಮಕ್ಕಳನ್ನು ನೋಡಿಕೊಳ್ಳಿ.
- ಕತ್ತರಿಸಿಟ್ಟ ಹಣ್ಣ, ತರಕಾರಿ ಅಥವಾ ಬಾಯಿ ತೆರೆದಿಟ್ಟ ಆಹಾರಗಳನ್ನು ಮಕ್ಕಳಿಗೆ ನೀಡಬೇಡಿ.
13.ಟೇರೆಸ್, ಮೈದಾನ, ಅಂಗಳದಲ್ಲಿ ನಿಂತಿರುವ ಕಲುಷಿತ ನೀರಿನಿಂದ ಮಕ್ಕಳನ್ನುದೂರವಿಡಿ.
13.ಹೊರಗಡೆಯಿಂದ ಮಕ್ಕಳು ಬಂದ ಕೂಡಲೆ ಬಿಸಿ ನೀರಿನಿಂದ ಚೆನ್ನಾಗಿ ಸ್ನಾನ ಮಾಡಿಸಿ.
- ಮಕ್ಕಳು ಮಳೆಯಲ್ಲಿ ನೆನೆಯದಂತೆ ಜಾಗೃತೆ ವಹಿಸಿ.
ಈ ಎಲ್ಲಾ ಟಿಪ್ಸ್ ಗಳನ್ನು ಅನುಸರಿಸಿದರೆ ನಿಮ್ಮ ಮಕ್ಕಳು ಈ ಮಳೆಗಾಲದಲ್ಲಿ ನೆಮ್ಮದಿಯಿಂದ ಮತ್ತು ಆರೋಗ್ಯವಂತರಾಗಿ ಜೀವಿಸಬಹುದು.



