ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಆಗ್ಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಬಿಗ್ ಬಾಸ್ ಗೆ ಹೋಗುವ ಮುಂಚೆಯೂ ಈತ ಹಲವಾರು ರಾಜಕಾರಣಿಗಳು ಸೆಲಿಬ್ರಿಟಿಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿ ವೈರಲ್ ಆಗಿದ್ದರು. ತಮ್ಮದೇ ಆದ ಒಂದು ಸಂಘ ಕಟ್ಟಿಕೊಂಡು ಓಡಾಡ್ತಾ ಇದ್ದ ಈತನನ್ನ ಬಿಗ್ ಬಾಸ್ ಟೀಂ ಆಯ್ಕೆ ಮಾಡಿತ್ತು. ಅಲ್ಲೂ ಸುಮ್ಮನಿರದೆ ಬಡಿದಾಟ ಮಾಡಿಕೊಂಡು ಶೋನಿಂದ ಹೊರ ಬಿದ್ದರು. ಅಲ್ಲಿಗೆ ಸುಮ್ಮನಾಗದ ಇವರು ನಟ ಸುದೀಪ್ ನಿಂದ ಹಿಡಿದು ಬಿಗ್ ಬಾಸ್ ಶೋ ವರೆಗೂ ಮಾತನಾಡಿ ಮತ್ತೆ ಸುದ್ದಿಯಾದರು.
ಇದು ಇಷ್ಟಕ್ಕೆ ನಿಲ್ಲಲಿಲ್ಲ. ಮೂರು ತಿಂಗಳ ಹಿಂದೆ ನಗರದ ಕೂಡಿಗೇಹಳ್ಳಿ ಸಮೀಪ ಅಣ್ಣಾಮ್ಮ ದೇವಿ ಉತ್ಸವದ ವೇಳೆ ಸ್ಥಳೀಯರೊಂದಿಗೆ ಗಲಾಟೆ ಮಾಡಿದ್ದು, ಆ ವೇಳೆ ಸ್ಥಳೀಯರು ಹಾಗೂ ಲಾಯರ್ ಜಗದೀಶ್ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಹೊಡೆದಾಟವೇ ಆಗಿತ್ತು. ಈ ಗಲಾಟೆ ವೇಳೆ ಲಾಯರ್ ಜಗದೀಶ್ ಅವರ ಬಾಡಿ ಗಾರ್ಡ್ ಕಾನೂನು ಬಾಹಿರವಾಗಿ ಗುಂಡು ಹಾರಿಸಿದ್ದರು ಎಂದು ಹೇಳಲಾಗಿತ್ತು. ಅದನ್ನು ಇಲ್ಲಿ ಬಳಕೆ ಮಾಡಿದ್ದಕ್ಕೆ ಹಾಗೂ ಗಲಾಟೆ ಮಾಡಿದ್ದ ಸಂಬಂಧ ಲಾಯರ್ ಜಗದೀಶ್ ಬಂಧಿಸಲಾಗಿತ್ತು. ಸತತ ಮೂರು ತಿಂಗಳ ಬಳಿಕ ಲಾಯರ್ ಜಗದೀಶ್ ಬಿಡುಗಡೆಯಾಗಿದೆ.

ಬಿಡುಗಡೆ ಬಳಿಕನಾದ್ರೂ ಸುಮ್ಮನೆ ಇರ್ತಾರಾ ಅಂದರೆ ಈಗಲೂ ಅವರು ಸುಮ್ಮನ್ನಿಲ್ಲ. ಜೈಲಿನಿಂದ ಹೊರ ಬಂದ ಕೂಡಲೇ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ನನ್ನನ್ನ ಜೈಲಿಗೆ ಹಾಕಿಸಿದ್ದೇ ಡಿಕೆ ಶಿವಕುಮಾರ್, ಹಾಗೂ ಬೇಲ್ ಸಿಗದಂತೆ ಮಾಡಿದ್ದೇ ಇವರು ಎಂದಿದ್ದಾರೆ.
ಹಿಂದೆಯೂ ನಾನು ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಮಾತನಾಡಿದ್ದೆ ಆಗ ಇದೇ ಡಿಕೆ ಶಿವಕುಮಾರ್ ನನ್ನನ್ನ ಮನೆಗೆ ಕರೆಯಿಸಿ ಮಾತನಾಡಿದ್ದರು. ಒಂದು ಬಾರಿ ಅಲ್ಲ ಮೂರ್ನಾಲ್ಕು ಬಾರಿ ಕರಸಿದ್ದರು. ಈ ಹೋರಾಟ ಮಾಡ್ತಾ ಇದ್ದೀರ ಸರಿ ಇದೆ. ಹೋರಾಟ ಮುಂದುವರೆಸಿ. ಅದಕ್ಕೆ ಬೇಕಾದ ಬೆಂಬಲ ನಾನು ಕೊಡ್ತೀನಿ. ಹಣದ ಸಹಾಯ ಕೂಡ ಮಾಡ್ತೀನಿ ಎಂದಿದ್ದರು. ಅಂದು ಆ ನನ್ನ ಹೋರಾಟವನ್ನ ಅವರ ಬೇಳೆ ಬೆಳೆಯಿಸಿಕೊಂಡರು. ಅಂದು ಅವರಿಗೆ ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಂಡರು ಎಂದು ಹೇಳಿದ್ದಾರೆ. ಅಂದು ರಾಜಕೀಯ ಏನು ಅಂತ ನನಗೆ ಗೊತ್ತಿರಲಿಲ್ಲ. ಆದರೆ ಅಂದು ಅವರು ನನ್ನ ಅವರಿಗಾಗಿ ಬಳಸಿಕೊಂಡರು ಎಂದು ಕಿಡಿ ಕಾರಿದ್ದಾರೆ. ಡಿಕೆ ಶಿವಕುಮಾರ್ ಬಣ್ಣ ಬಣ್ಣದ ಮಾತನಾಡಿದರು, ರಾಜಕೀಯಕ್ಕೆ ಬಳಸಿಕೊಂಡರು ಅದಕ್ಕೆ ತಕ್ಕ ಉತ್ತರ ನಮ್ಮದೆ ಆದ ಸಮಯದಲ್ಲಿ ಕೊಡ್ತೀನಿ ಎಂದಿದ್ದಾರೆ.

ರಮೇಶ್ ಜಾರಕಿಹೊಳಿಗೂ ಡಿಕೆ ಶಿವಕುಮಾರ್ ಗೂ ಮೊದಲಿನಿಂದಲೂ ಕೂಡ ಗಲಾಟೆ ಇದೆ. ಈ ಗಲಾಟೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈ ಗದ್ದಲ ಯಾಕೆ ಅಂದರೆ ಒಂದು ವಸ್ತುವಿಗಾಗಿ ಅಷ್ಟೆ. ನನಗೂ ಜಾರಿಹೊಳಿಗೂ ಏನೂ ಸಂಬಂಧ ಇಲ್ಲ. ರಮೇಶ್ ಜಾರಕಿಹೊಳಿ ಸುದ್ದಿಗೋಷ್ಟಿ ಮಾಡಿದ ಸಂದರ್ಭದಲ್ಲಿ ಬೈದಿದ್ದು ಯಾರಿಗೆ, ನನಗಂತೂ ಅಲ್ಲ. ಅವರ ದ್ವೇಷ ಯಾರಿಗಾಗಿ ಎಂದು ಪ್ರಶ್ನೆ ಮಾಡಿದರು.
೪೦ ಪರ್ಸೆಂಟ್ ಅಂತ ಬಿಜೆಪಿ ಮೇಲೆ ಹೇಳಿ ಸರ್ಕಾರ ಮಾಡಿದ್ರಿ. ಹಾಗಾದ್ರೆ ನೀವೇನು ಮಾಡ್ತಾ ಇದ್ದೀರಾ. ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆದುಕೊಂಡು ಹೋದರು ಯಾಕೆ ಅಂದ್ರೆ ಪ್ರಧಾನಿ ಆಗಬೇಕು ಅಂತ. ಆದರೆ ಅದು ಸಾಧ್ಯ ಆಗಲಿಲ್ಲ. ಅಂದು ಅವರೂ ಕೂಡ ಆರೋಪ ಮಾಡಿದ್ದು ಪರ್ಸೆಂಟೇಜ್ ವಿಚಾರನೇ. ಆದರೆ ಜನರಗೆ ಮಂಕುಬೂದಿ ಎರಚಿ ಸರ್ಕಾರ ಅಧಿಕಾರಕ್ಕೆ ತಂದರು ಎಂದು ಕಿಡಿ ಕಾರಿದ್ದಾರೆ.



