ನಟಿ ಮೋಕ್ಷಿತಾ ಪೈ ಜೀಕನ್ನಡ ವಾಹಿನಿಯ ಪಾರು ಪಾತ್ರದ ಮೂಲಕ ಕರ್ನಾಟಕದ ಕಿರುತೆರೆ ವೀಕ್ಷಕರಿಗೆ ಬಹಳ ಇಷ್ಟವಾದ ನಟಿ. ಪಾರು ಪಾತ್ರದಲ್ಲಿ ಇವರ ನೈಜ ಹಾಗೂ ಮುಗ್ಧ ಅಭಿನಯ ಎಲ್ಲರಿಗೂ ಮೆಚ್ಚುಗೆಯಾಗಿತ್ತು ಎಂದರೆ ತಪ್ಪಲ್ಲ. ಇದೀಗ ಈ ನಟಿ ಬಿಗ್ ಬಾಸ್ ಶೋಗೆ ಬಂದಿದ್ದಾರೆ. ಆರಂಭದಲ್ಲಿ ಬಹಳ ಸೈಲೆಂಟ್ ಆಗಿದ್ದ ಮೋಕ್ಷಿತಾ, ಕಳೆದ ವಾರ ಬಾಟನ್ 2 ಇಂದ ಸೇವ್ ಆದ ಬಳಿಕ ವರಸೆ ಬದಲಾಯಿಸಿಕೊಂಡಿದ್ದಾರೆ.

ಬಹಳ ಸ್ಟ್ರಾಂಗ್ ಆಗಿದ್ದು, ತ್ರಿವಿಕ್ರಂ ಗೆ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ. ಇನ್ಮುಂದೆ ಇರೋ ಮೋಕ್ಷಿತಾ ಬೇರೆ ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ಇನ್ಮೇಲೆ ಇನ್ನು ಸ್ಟ್ರಾಂಗ್ ಆಗಿ ಆಡುತ್ತಾರೆ ಎಂದು ತಿಳಿಸಿದ್ದಾರೆ. ಮೋಕ್ಷಿತಾ ಅವರಿಗೆ ಈಗ 29 ವರ್ಷ ವಯಸ್ಸು, ಆದರೆ ಇನ್ನು ಕೂಡ ಇವರಿಗೆ ಮದುವೆಯಾಗಿಲ್ಲ. ಇದೀಗ ಇವರು ತಾವು ಯಾಕೆ ಇನ್ನು ಮದುವೆಯಾಗಿಲ್ಲ ಎಂದು ತಿಳಿಸಿದ್ದಾರೆ. ಬಿಗ್ ಬಾಸ್ ಎದುರು ಮನಸ್ಸಿನ ಭಾವನೆ ಹೇಳಿಕೊಂಡು, ಕಣ್ಣೀರು ಹಾಕಿದ್ದಾರೆ ಮೋಕ್ಷಿತಾ.

ಮೋಕ್ಷಿತಾ ಅವರ ತಂದೆ ತಾಯಿಗೆ 2 ಇಬ್ಬರು, ಒಬ್ಬರು ಮೋಕ್ಷಿತಾ ಹಾಗೂ ಅವರ ತಮ್ಮ. ಮೋಕ್ಷಿತಾ ಅವರ ತಮ್ಮ ಫಿಸಿಕಲಿ ಹಾಗೂ ಮೆಂಟಲಿ ಎರಡು ರೀತಿಯಲ್ಲಿ ಚಾಲೆಂಜ್ಡ್. ತಮ್ಮನನ್ನ ಸ್ವಂತ ಮಗನ ಹಾಗೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಮೋಕ್ಷಿತಾ. ಮನೆಯ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಬರಬೇಕು ಎನ್ನುವುದು ಮೋಕ್ಷಿತಾ ಅವರ ತಾಯಿಯ ಕನಸಾಗಿದ್ದು, ಅಮ್ಮನ ಆಸೆಯನ್ನು ಪೂರೈಸಲು ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿ ಬಂದಿದ್ದಾರೆ ಮೋಕ್ಷಿತಾ.
ಮೋಕ್ಷಿತಾ ಅವರಿಗೆ ಮದುವೆ ಮಾಡಿಕೊ ಎಂದು ಮನೆಯಲ್ಲಿ ಅಪ್ಪ ಅಮ್ಮ ಇಬ್ಬರು ಫೋರ್ಸ್ ಮಾಡುತ್ತಿದ್ದಾರಂತೆ. ಆದರೆ ಮೋಕ್ಷಿತಾ ಅವರಿಗೆ ಸಧ್ಯಕ್ಕೆ ಮದುವೆ ಆಗುವುದಕ್ಕೆ ಆಸಕ್ತಿ ಇಲ್ಲವಂತೆ. ಮದುವೆ ಆದಮೇಲೆ ತಂದೆ ತಾಯಿಯನ್ನ ಮತ್ತು ತಮ್ಮನನ್ನು ನೋಡಿಕೊಳ್ಳುವುದು ಹೇಗೆ ಎನ್ನುವ ಭಯ ಅವರಲ್ಲಿದೆ. ಮದುವೆಯಾಗುವ ಹುಡುಗ ಅಪ್ಪ ಅಮ್ಮನಿಂದ ಮತ್ತು ತಮ್ಮನಿಂದ ತನ್ನನ್ನು ದೂರ ಮಾಡಿದರೆ ಎನ್ನುವ ಆತಂಕ ಮತ್ತು ಭಯ ಎರಡು ಇರುವ ಕಾರಣ ಮದುವೆ ಆಗುವುದಕ್ಕೆ ಭಯ ಆಗಿದೆಯಂತೆ.
ಆದರೆ ತಂದೆ ತಾಯಿ ಇಬ್ಬರೂ ಕೂಡ ಮದುವೆ ಮಾಡಿಕೊ ಎನ್ನುತ್ತಾರಂತೆ. ಇನ್ನು ಮೋಕ್ಷಿತಾ ಅವರು ಅಷ್ಟೇನು ಎಕ್ಸ್ಪ್ರೆಸಿವ್ ಅಲ್ಲ, ಈ ಸಮಯದಲ್ಲಿ ಅವರಿಗೆ ತಾಯಿಯ ಜೊತೆ ಮಾತನಾಡಬೇಕು ಎಂದು ಅನ್ನಿಸುತ್ತಿದೆಯಂತೆ. ಈ ವಿಚಾರವನ್ನೆಲ್ಲಾ ಬಿಗ್ ಬಾಸ್ ಜೊತೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ ಮೋಕ್ಷಿತಾ. ಇಷ್ಟು ಒಳ್ಳೆ ಮನಸ್ಸಿರುವವರಿಗೆ ಒಳ್ಳೆಯದಾಗಬೇಕು ಕಣ್ರೀ.