ನಟ ದರ್ಶನ್ ಅವರು ಇಂದು ಸ್ವಲ್ಪ ಕೆಟ್ಟ ಟೈಮ್ ಅನುಭವಿಸುತ್ತಿರಬಹುದು ಆದರೆ ಇವರ ಫ್ಯಾನ್ಸ್ ಮಾತ್ರ ಇವರ ಆರಾಧನೆ ಬಿಟ್ಟಿಲ್ಲ. ಅಭಿಮಾನಿಗಳ ಪಾಲಿಗೆ ಡಿಬಾಸ್ ಯಾವಾಗಲೂ ರಾಜನ ಹಾಗೆ. ದರ್ಶನ್ ಅವರನ್ನು ಕಂಡರೆ ಅವರ ಫ್ಯಾನ್ಸ್ ಗೆ ಅಷ್ಟು ಪ್ರೀತಿ. ನಟ ದರ್ಶನ್ ಅವರು ಕಳೆದ ವರ್ಷ ಬಹಳ ಕಷ್ಟ ಅನುಭವಿಸಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿಗೆ ಹೋಗಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದ ಘಟನೆ ಇಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ, ಅಲ್ಲಿ ಒಂದಷ್ಟು ದಿನಗಳ ಕಾಲ ಇದ್ದು, ಬಳಿಕ ಜಾಮೀನು ಪಡೆದು ಹೊರಗಡೆ ಬಂದರು ನಟ ದರ್ಶನ್. ಮೊದಲ ಜಾಮೀನು ಸಿಕ್ಕಿದ್ದು ಆರೋಗ್ಯದ ಕಾರಣದಿಂದ. ಎರಡನೇ ಬಾರಿ ಅಂದರೆ 2024ರ ಅಂತ್ಯದ ವೇಳೆಗೆ ಪೂರ್ಣ ಪ್ರಮಾಣದ ಜಾಮೀನು ಸಿಕ್ಕಿದೆ. ಡಿಬಾಸ್ ಹೊರಗಡೆ ಬರುತ್ತಿದ್ದ ಹಾಗೆ ಅವರ ಫ್ಯಾನ್ಸ್ ಸಿನಿಮಾಗಾಗಿ ಕಾಯುತ್ತಿದ್ದಾರೆ.
ಖ್ಯಾತ ನಿರ್ದೇಶಕ ಮಿಲನಾ ಪ್ರಕಾಶ್ ಹಾಗೂ ದರ್ಶನ್ ಅವರ ಕಾಂಬಿನೇಷನ್ ನಲ್ಲಿ ಡೆವಿಲ್ ಸಿನಿಮಾ ಈಗಾಗಲೇ ಶುರುವಾಗಿದ್ದು, ಫಸ್ಟ್ ಲುಕ್ ಟೀಸರ್ ಇಂದ ಜನರಲ್ಲಿ ಭಾರಿ ಕುತೂಹಲ ಸೃಷ್ಟಿಸಿತ್ತು. ಈ ಹಿಂದೆ ದರ್ಶನ್ ಹಾಗೂ ಪ್ರಕಾಶ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದ ತಾರಕ್ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಜನರಿಗೆ ಇಷ್ಟವಾಗಿದೆ ಎಂದು ಗೊತ್ತೇ ಇದೆ. ಈ ಸಿನಿಮಾದಲ್ಲಿ ದರ್ಶನ್ ಅವರ ಅಭಿನಯ, ಆ ಕಥೆ ಎಲ್ಲವು ಜನರಿಗೆ ತುಂಬಾ ಇಷ್ಟವಾಗಿತ್ತು. ಆದರೆ ಡೆವಿಲ್ ನಲ್ಲಿ ಇರುವ ಕಥೆಯೇ ಇದಕ್ಕೆ ತದ್ವಿರುದ್ಧವಾಗಿತ್ತು. ಟೀಸರ್ ನಲ್ಲಿ ದರ್ಶನ್ ಅವರ ಡೈಲಾಗ್, ಅವರ ಲುಕ್ ಎಲ್ಲವೂ ಅಭಿಮಾನಿಗಳ ಕ್ರೇಜ್ ಹೆಚ್ಚಿಸಿತ್ತು. ದರ್ಶನ್ ಅವರು ಈಗ ಹೊರಗಡೆ ಬಂದಿದ್ದು, ಡೆವಿಲ್ ಸಿನಿಮಾ ಶೂಟಿಂಗ್ ಬೇಗ ಶುರುವಾಗಲಿ, ಸಿನಿಮಾ ಈ ವರ್ಷವೇ ತೆರೆಕಾಣಲಿ ಎನ್ನುವುದು ಅಭಿಮಾನಿಗಳ ಆಸೆ.

ಈ ತಿಂಗಳು ದರ್ಶನ್ ಅವರ ಹುಟ್ಟುಹಬ್ಬವಿದೆ, ಹಾಗಾಗಿ ಅಭಿಮಾನಿಗಳು ಡಿಬಾಸ್ ಬರ್ತ್ ಡೇ ದಿವಸ ಡೆವಿಲ್ ಸಿನಿಮಾ ಬಗ್ಗೆ ಅಪ್ಡೇಟ್ ಸಿಗಬಹುದು ಎಂದು ಕಾಯುತ್ತಿದ್ದಾರೆ. ಈ ವರ್ಷ ದಸರಾ ಹಬ್ಬದ ವೇಳೆಗೆ ಅಥವಾ ಕ್ರಿಸ್ಮಸ್ ಹಬ್ಬದ ವೇಳೆ ಡೆವಿಲ್ ಸಿನಿಮಾ ತೆರೆಕಂಡರೆ ಚೆನ್ನಾಗಿರುತ್ತದೆ ಎನ್ನುವುದು ಅಭಿಮಾನಿಗಳ ಆಸೆ. ಅದೆಲ್ಲವೂ ಅಭಿಮಾನಿಗಳು ಅಂದುಕೊಂಡ ಹಾಗೆ ನಡೆಯುತ್ತಾ ಎನ್ನುವುದು ಗೊತ್ತಿಲ್ಲ. ಆದರೆ ಈಗ ದರ್ಶನ್ ಅವರ ಫ್ಯಾನ್ಸ್ ಗೆ ಒಂದು ಬೇಸರದ ಸುದ್ದಿ ಕೇಳಿಬಂದಿದೆ. ಅದು ಏನು ಎಂದರೆ, ಡಿವಿಲ್ ಸಿನಿಮಾ ಹೊರತುಪಡಿಸಿ ಬೇರೆ ಸಿನಿಮಾಗಾಗಿ ದರ್ಶನ್ ಅವರು ಪಡೆದಿದ್ದ ಅಡ್ವಾನ್ಸ್ ಹಣವನ್ನು ಪ್ರೊಡ್ಯುಸರ್ ಗೆ ಹಿಂದಿರುಗಿಸಿದ್ದಾರಂತೆ. ಹೌದು, ಡೆವಿಲ್ ಬಳಿಕ ಸುರಪ್ಪ ಬಾಬು ಅವರ ನಿರ್ಮಾಣದ ಸಿನಿಮಾ ಒಂದರಲ್ಲಿ ದರ್ಶನ್ ಅವರು ನಟಿಸಬೇಕಿತ್ತು, ಆದರೆ ಆ ಸಿನಿಮಾಗಾಗಿ ಪಡೆದ ಹಣವನ್ನು ವಾಪಸ್ ನೀಡಿದ್ದಾರಂತೆ.
ದರ್ಶನ್ ಅವರು ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣ ಏನು ಎಂದು ತಿಳಿದುಬಂದಿಲ್ಲ. ಒಟ್ಟಿನಲ್ಲಿ ಹಣವನ್ನು ಹಿಂದಿರುಗಿಸಿದ್ದಾರೆ ಎನ್ನುವ ವಿಚಾರ ಮಾತ್ರ ವೈರಲ್ ಆಗಿದೆ. ಸೂರಪ್ಪ ಬಾಬು ಅವರ ಸಿನಿಮಾ ಹಣವನ್ನು ವಾಪಸ್ ನೀಡಿದ್ದಾರೆ. ಆದರೆ ದರ್ಶನ್ ಅವರು ಕೆವಿಎನ್ ಸಂಸ್ಥೆಯ ಜೊತೆಗೆ ಒಂದು ಸಿನಿಮಾವನ್ನು ಒಪ್ಪಿಕೊಂಡಿದ್ದರು, ಈ ಸಿನಿಮಾವನ್ನು ಜೋಗಿ ಪ್ರೇಮ್ ಅವರು ನಿರ್ದೇಶನ ಮಾಡಬೇಕಿತ್ತು. ಕರಿಯ ಸಿನಿಮಾ ಬಳಿಕ ಜೋಗಿ ಪ್ರೇಮ್ ಹಾಗೂ ದರ್ಶನ್ ಅವರ ಕಾಂಬಿನೇಷನ್ ನಲ್ಲಿ ಸಿನಿಮಾ ಬರಲಿದೆ ಎಂದು ಅಭಿಮಾನಿಗಳು ಸಹ ಥ್ರಿಲ್ ಆಗಿದ್ದರು. ಆದರೆ ಈಗ ದರ್ಶನ್ ಅವರು ಸೂರಪ್ಪ ಬಾಬು ಅವರಿಗೆ ಹಣ ವಾಪಸ್ ಕೊಟ್ಟಿರುವುದರಿಂದ ದರ್ಶನ್ ಅವರು ಕೆವಿಎನ್ ಸಂಸ್ಥೆಯ ಪ್ರಾಜೆಕ್ಟ್ ಇಂದಲೂ ಹೊರಬಂದಿದ್ದಾರಾ ಎನ್ನುವ ಅನುಮಾನ ಶುರುವಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ..

ನಟ ದರ್ಶನ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಇದ್ದ ಕಾರಣ ಅವರಿಗೆ ಸರ್ಜರಿ ಮಾಡಿಸಬೇಕಿತ್ತು. ಆದರೆ ಸರ್ಜರಿ ಮಾಡಿಸಲು ಆಗದೇ, ಫಿಸಿಯೋಥೆರಪಿ ಇಂದ ಹುಷಾರಾಗುತ್ತಿದ್ದಾರೆ ನಟ ದರ್ಶನ್. ಪ್ರಸ್ತುತ ಡಿಬಾಸ್ ಅವರು ತಮ್ಮ ಸಂಪೂರ್ಣ ಸಮಯವನ್ನು ಫ್ಯಾಮಿಲಿಗಾಗಿ ಮೀಸಲಾಗಿ ಇಟ್ಟಿದ್ದಾರೆ. ಹಬ್ಬಗಳನ್ನು ಪತ್ನಿ ಮತ್ತು ಮಗನ ಜೊತೆಗೆ ಆಚರಿಸಿದ್ದಾರೆ. ಹಾಗೆಯೇ ತಮ್ಮನ ಸಿನಿಮಾ ನೋಡಿ ಭಾವುಕರಾಗಿದ್ದರು. ಹೊರಗಡೆ ಬಂದ ಬಳಿಕ ದರ್ಶನ್ ಅವರು ಪೂರ್ತಿಯಾಗಿ ಬದಲಾಗಿರುವ ಹಾಗೆ ಕಾಣುತ್ತಿದೆ. ಇದೇ ರೀತಿ ಅವರು ಕುಟುಂಬದ ಜೊತೆಗಿದ್ದರೆ ಏನು ತೊಂದರೆ ಆಗುವುದಿಲ್ಲ ಎನ್ನುವುದು ಅವರ ಅಭಿಮಾನಿಗಳ ಆಸೆ. ಇವರ ಸಿನಿಮಾ ಅಪ್ಡೇಟ್ ಗಾಗಿ ಈಗ ಫ್ಯಾನ್ಸ್ ಕಾಯುತ್ತಿದ್ದಾರೆ. ಬರ್ತ್ ಡೇ ದಿವಸ ನಟ ದರ್ಶನ್ ಅವರು ಏನಾದರೂ ಗುಡ್ ನ್ಯೂಸ್ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ.