ಹುಟ್ಟಿ ಸಾಯುವ ಮುನ್ನ ಹೇಗಾದರು ಮಾಡಿ ಏನಾದರೂ ಸಾಧನೆ ಮಾಡಬೇಕು ಎಂದು ಎಲ್ಲರೂ ಯೋಚಿಸುತ್ತಾರೆ. ಇದಕ್ಕಾಗಿ ಕೆಲವೊಬ್ಬರು ಎಂತಹಾ ರಿಸ್ಕ್ ತೆಗೆದುಕೊಳ್ಳಲೂ ಕೂಡ ರೆಡಿ ಇರುತ್ತಾರೆ. ಅಂತಹ ಕಠಿಣ ಸಾಧನೆಗಳ ಮೂಲಕ ವಿಶ್ವದಾಖಲೆ ಬರೆದ ಸಾವಿರಾರು ಸಾಧಕರಿದ್ದಾರೆ. ಇದೀಗ ಯುವತಿಯೊಬ್ಬಳು ಹಗ್ಗದಲ್ಲಿ ಏನೇತಾಡುತ್ತಾ ಬೆಂಕಿಯ ಬಳೆಗಳನ್ನು ಸೊಂಟದಲ್ಲಿ ತಿರುಗಿಸಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾಳೆ. ಈ ವೈರಲ್ ವಿಡಿಯೋ ನೋಡಿದ್ರೆ ಜೀವ ಬಾಯಿಗೆ ಬರೋದಂತು ಗ್ಯಾರಂಟಿ!

https://www.instagram.com/reel/Ck6DmyFO6OT/?utm_source=ig_web_copy_link
ಬೆಂಕಿಯಾಟ, ಗಾಳಿಯಾಟ, ಬಳೆಯಾಟಗಳಿಂದ ಹಾಗೂ ದೇಹ ಸಮತೋಲನದ ಅದ್ಭುತ ಪ್ರದರ್ಶನಗಳಿಂದ ಅಪಾರ ಜನಮನ್ನಣೆ ಗಳಿಸಿರುವ ಗ್ರೇಸ್ ಹುಡ್ ಎನ್ನುವ 30 ವರ್ಷದ ಯುವತಿ ಇದೀಗ ಏಕಕಾಲದಲ್ಲಿ ಅತಿಹೆಚ್ಚು ಬೆಂಕಿಯಬಳೆಗಳನ್ನು ಸೊಂಟದಲ್ಲಿ ತಿರುಗಿಸುವ ಹಾಗೂ ಉರುಳುತ್ತಿರುವ ಬೃಹತ್ ಗ್ಲೋಬ್ ಮೇಲೆ ಸಮತೋಲನ ಸಾಧಿಸುವ ಮೂಲಕ ಎರಡು ಹೊಸ ವಿಶ್ವದಾಖಲೆಗಳನ್ನು ಬರೆದಿದ್ದಾರೆ.
ತನ್ನ ವಿಶ್ವದಾಖಲೆಯ ಅಸಾಧಾರಣ ಪ್ರದರ್ಶನದ ವಿಡಿಯೋ ಹಂಚಿಕೊಂಡಿರುವ ಗ್ರೇಸ್ ಹುಡ್, ‘ದೊಡ್ಡ ಕನಸುಗಳನ್ನು ಕಾಣುವುದನ್ನು ಎಂದಿಗೂ ಬಿಡಬೇಡಿ’ ಎಂದು ತಮ್ಮ ಅಭಿಮಾನಿಗಳಿಗೆ instagram ಮೂಲಕ ಸಂದೇಶ ಕಳಿಸಿದ್ದಾರೆ. ಅಂತರಿಕ್ಷದ ತಾರಾಮಂಡಲಗಳನ್ನು ಹತ್ತಿರದಿಂದ ಕಾಣಲಾಗದಿದ್ದರೂ ಭುವಿಯ ಮೇಲಿನ ಗ್ರೇಸ್ ಎಂಬ ತಾರೆಯ ಮಂಡಲವನ್ನು ನೋಡಲು ಮರೆಯದಿರಿ’ ಎಂದು ಗ್ರೇಸ್ ಬರೆದುಕೊಂಡಿದ್ದು, ಸದ್ಯ ಆಕೆಯ ವಿಶ್ವದಾಖಲೆಯ ವಿಡಿಯೋ ಸಕ್ಕತ್ ವೈರಲ್ ಆಗುತ್ತಿದೆ.



