ಕಾಶ್ಮೀರ ನೋಡುಗರ ಸ್ವರ್ಗವಾಗಿತ್ತು. ಅದನ್ನ ಕ್ಷಣ ಮಾತ್ರದಲ್ಲೇ ನರಕ ಮಾಡಿ, ಭಾರತೀಯರ ರಕ್ತ ಕುದಿಯುವಂತೆ ಮಾಡಿದ್ದರು ಪಾಕಿಸ್ತಾನ ಉಗ್ರರು. ಪ್ರವಾಸಿಗರ ಮೇಲೆ ತಮ್ಮ ಬಲಾಡ್ಯ ತೋರಿಸಿದ್ದ ಈ ಪಾಪಿಗಳಿಗೆ ಭಾರತ ಈಗ ಸರಿಯಾದ ಪ್ರತ್ಯುತ್ತರ ನೀಡುವ ಮೂಲಕ ಭಾರತದ ತಾಕತ್ ಏನು ಅಂತ ತೋರಿಸಿದೆ. ಅಷ್ಟೆ ಅಲ್ಲ ಆ ಹೆಣ್ಣು ಮಕ್ಕಳ ಕುಂಕುಮ ವರೆಸಿದ್ದವರಿಗೆ ದಾಳಿಯ ಮೂಲಕ ಉತ್ತರ ನೀಡಿದೆ.

ಹೌದು, ಮಧ್ಯರಾತ್ರಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ ಕೆಲವು ಭಾಗಗಳಲ್ಲಿ ದಾಳಿ ಮಾಡಿದೆ ಭಾರತೀಯ ಸೇನೆ. ಇಡೀ ದೇಶವೇ ಇಂತಹದೊಂದು ದಿನಕ್ಕಾಗಿ ಕಾದಿತ್ತು. ಮೋದಿ ಸರ್ಕಾರದ ಮೇಲೆ ನಂಬಿಕೆ ಇಟ್ಟು ಇಂತಹದೊಂದು ದಾಳಿಗಾಗಿ ಎದುರು ನೋಡಿದ್ದರು. ಅದರಂತೆ ಈಗ ಈ ದಾಳಿ ನಡೆಸಿರೋ ಭಾರತೀಯ ಸೇನೆ, ಕುಂಕುಮ ಅಳಿಸಿದವರ ಹೆಡೆಮುರಿ ಕಟ್ಟುವ ಕೆಲಸ ಮಾಡಿದ್ದಾರೆ.
ಪಾಕಿಸ್ತಾನದ ಮೇಲೆ ಯಾವಾಗ ಬೇಕಾದ್ರೂ ಯುದ್ಧ ಸಾರಬಹುದು, ಯುದ್ಧ ಆಗಬಹುದು ಎಂಬುದಿತ್ತು. ಅಷ್ಟೆ ಅಲ್ಲ ಈ ಪಾಪಿ ಪಾಕಿಸ್ತಾನ ಗಡಿಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿಯನ್ನ ಆಗಿಂದಾಗ್ಲೇ ನಡೆಸುತ್ತಲೇ ಇದ್ದರು. ಇದಕ್ಕೂ ಉತ್ತರ ಕೊಡ್ತಾ ಇದ್ದ ನಮ್ಮ ಸೈನಿಕರು ಈಗ ಒಂದೆಜ್ಜೆ ಮುಂದೆ ಹೋಗಿದ್ದಾರೆ.ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದ 9 ಕಡೆಗಳಲ್ಲಿ ದಾಳಿ ನಡೆಸಿದೆ. ಬೆಳಗಿನ ಜಾವ ಸುಮಾರು 1 ಗಂಟೆ ಸುಮಾರಿಗೆ ಈ ದಾಳಿ ನಡೆಸಿದ್ದು, ಹಲವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ಆಪರೇಷನ್ ಸಿಂಧೂರ ಅನ್ನೋ ಹೆಸರನ್ನ ಇಟ್ಟಿದ್ದೆ ನರೇಂದ್ರ ಮೋದಿ ಎಂದು ಹೇಳಲಾಗುತ್ತಿದೆ. ಈ ಹೆಸರಿನಲ್ಲೇ ಈ ದಾಳಿ ಆಗಲಿ ಎಂಬುದು ಅವರ ಆಶಯವಾಗಿತ್ತು. ಇನ್ನು ಅಜಿತ್ ಧೋವೆಲ್ ಬಳಿ ನರೇಂದ್ರ ಮೋದಿ ಮಾಹಿತಿ ಪಡೆದಿದ್ದಾರೆ ಎನ್ನಲಾಗುತ್ತಿದೆ. ಸಿಂಧೂರ ಕಿತ್ತುಕೊಂಡಿದ್ದ ಈ ಪಾಪಿ ಪಾಕಿಸ್ತಾನ ಈಗ ತಂದೂರಿಯಾಗಿದೆ. ಸುಖಾ ಸುಮ್ಮನೆ ಭಾರತವನ್ನ ಕೆಣಕಿದ ಇವರಿಗೆ ಮೋದಿ ಪ್ರತ್ಯತ್ತರ ನೀಡಿದ್ದಾರೆ.
ಇನ್ನು ದಾಳಿಯ ಸಂಧರ್ಭದಲ್ಲಿ ಸುಮಾರು ೫೦ ಜನ ಪಾಕಿಸ್ತಾನದ ಸೈನಿಕರು ಟೆಂಟ್ ನಲ್ಲಿ ಇದ್ದರು ಎಂದು ಹೇಳಲಾಗಿದೆ. ಈ ಮಿಡ್ ನೈಟ್ ಸ್ಟ್ರೈಕ್ ನಲ್ಲಿ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಮಧ್ಯಾಹ್ನದ ವೇಳೆಗೆ ಗೊತ್ತಾಗಲಿದೆ. ಇತ್ತ ಈ ದಾಳಿಗೆ ಬೆದರಿರೋ ಪಾಕಿಸ್ತಾನ ಈಗೇನು ಮಾಡ್ತಾರೋ ಕಾದು ನೋಡಬೇಕು. ಆದರೆ ಭಾರತವನ್ನ ಕೆಣಕಿದ್ರೆ ಏನಾಗುತ್ತದೆ ಎಂಬುದನ್ನ ಸದ್ಯ ಮೋದಿ ತೋರಿಸಿ ಕೊಟ್ಟಿದ್ದಾರೆ.



