ವಿಕಲಚೇತನ ಅಥವಾ ಅಂಗವೈಕಲ್ಯ ದೊಂದಿಗೆ ಹುಟ್ಟುವ ಮಕ್ಕಳಲ್ಲಿ ವೈದ್ಯಕೀಯ ಲೋಕಕ್ಕೆ ಸದಾ ಸವಾಲಾಗುವುದೆಂದರೆ ಸಯಾಮಿ ಅವಳಿಗಳು. ಈ ಸಯಾಮಿ ಅವಳಿಗಳು ಎಂದರೆ ಎರಡು ಜೀವ ಒಂದೇ ದೇಹ ಎಂಬಂತೆ ಹುಟ್ಟುತ್ತಾರೆ. ಪರಸ್ಪರ ದೇಹವೂ ಕೂಡಿಗೊಂಡಿರುತ್ತದೆ. ಈ ರೀತಿ ಹುಟ್ಟಿದ ಮಕ್ಕಳನ್ನು ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸುವುದು ಬಹುದೊಡ್ಡ ಸವಾಲಿನ ಕೆಲಸ. ಆದರೆ ದೆಹಲಿಹ ಏಮ್ಸ್ ಆಸ್ಪತ್ರೆಯ ವೈದ್ಯರು ಸದ್ಯ ಸತತ 12 ಗಂಟೆಗಳ ಚಿಕಿತ್ಸೆಯ ಮೂಲಕ ಆ ಸಾಹಸದಲ್ಲಿ ಯಶಸ್ವಿಯಾಗಿದ್ದಾರೆ.

2022ರ ಜುಲೈ 7ರಂದು ಉತ್ತರಪ್ರದೇಶದ ಬರೇಲಿಯಲ್ಲಿ ಎದೆ ಸೇರಿ ದೇಹದ ಮೇಲ್ಬಾಗ ಪೂರ್ತಿಯಾಗಿ ಕೂಡಿಕೊಂಡ ಸಯಾಮಿ ಅವಳಿ ಹೆಣ್ಣುಮಕ್ಕಳ ಜನನವಾಗಿತ್ತು. ಸಯಾಮಿಗಳಾಗಿದ್ದ ಮಕ್ಕಳನ್ನು ಬಳಿಕ 5 ತಿಂಗಳ ಕಾಲ ಐಸಿಯುವಿನಲ್ಲಿ ಇರಿಸಲಾಗಿತ್ತು. ಇದೀಗ ರಿದ್ದಿ ಮತ್ತು ಸಿದ್ದಿ ಮಕ್ಕಳಿಗೆ 11 ತಿಂಗಳಾಗಿದ್ದು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಶಸ್ತ್ರಚಿಕಿತ್ಸೆ ಮುಖ್ಯಸ್ಥ ಡಾ.ಮಿನು ಬಜೈ ಸ್ಪಷ್ಟನೆ ನೀಡಿದ್ದಾರೆ.
ಸಯಾಮಿ ಮಕ್ಕಳಾದ ರಿದ್ದಿ ಹಾಗೂ ಸಿದ್ದಿ ಸಯಾಮಿ ಅವಳಿ ಹೆಣ್ಣು ಮಕ್ಕಳು ಹುಟ್ಟುವಾಗ ಮಕ್ಕಳ ಪಕ್ಕೆಲುಬುಗಳು, ಯಕೃತ್ ಹಾಗೂ ಎರಡು ಹೃದಯಗಳು ಪರಸ್ಪರ ಹತ್ತಿರವಿದ್ದವು. ಶಸ್ತ್ರಚಿಕಿತ್ಸೆ9 ಗಂಟೆಗಳಲ್ಲಿ ಮುಗಿದಿದ್ದರೂ, ಅರವಳಿಕೆ ಪ್ರಕ್ರಿಯೆಗೆ 3 ತಾಸು ಬೇಕಾಗಿತ್ತು. ಹೀಗಾಗಿ ಪೂರ್ಣ ಚಿಕಿತ್ಸೆ ಮುಗಿಯಲು 12 ಗಂಟೆ 30 ನಿಮಿಷ ಬೇಕಾಯಿತು. ಸದ್ಯ, ವೈದ್ಯಕೀಯ ಲೋಕದ ಐತಿಹಾಸಕ್ಕೆ ಏಮ್ಸ್ ವೈದ್ಯರ ತಂಡ ಸಾಕ್ಷಿಯಾಗಿದೆ. ಜೊತೆಗೆ ಚೇತರಿಸಿಕೊಂಡಿರುವ ಮಕ್ಕಳ ಮೊದಲ ವರ್ಷದ ಹುಟ್ಟು ಹಬ್ಬ ಆಚರಿಸಿ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.