ತಂದೆ ತಾಯಿ ಅದವರಿಗೆ ಮಕ್ಕಳು ಚೆನ್ನಾಗಿರುವುದು, ಬದುಕಿನಲ್ಲಿ ಏನನ್ನಾದರೂ ಸಾಧಿಸುವುದು, ಅವರು ನಗುನಗುತ್ತಾ ಇರುವುದನ್ನು ನೋಡುವುದು.. ಇದಕ್ಕಿಂತ ಸಂತೋಷ ಮತ್ತೊಂದಿಲ್ಲ ಎಂದು ಹೇಳಿದರೆ ತಪ್ಪಲ್ಲ. ತಂದೆ ತಾಯಿಗಳು ಬಡವರೆ ಆಗಲಿ, ಶ್ರೀಮಂತರೆ ಆಗಲಿ, ಒಳ್ಳೆಯ ಸ್ಥಾನದಲ್ಲಿ ಇರುವವರೆ ಆಗಲಿ… ಭಾವನೆ ಎನ್ನುವುದು ಎಲ್ಲರಲ್ಲೂ ಒಂದೇ ಆಗಿರುತ್ತದೆ. ಎಲ್ಲಾ ತಂದೆ ತಾಯಿಯರಿಗೂ ಮಕ್ಕಳ ಮೇಲೆ ಇರುವುದು ಒಂದೇ ರೀತಿಯ ಭಾವನೆ, ಪ್ರೀತಿ. ಇದೀಗ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ತಮ್ಮ ಮಗಳ ವಿಚಾರದಲ್ಲಿ ಹೀಗೆ ಭಾವುಕರಾಗಿದ್ದಾರೆ. ಈ ಸಂತೋಷದ ವಿಚಾರವನ್ನು ಇಂದು ಪೂರ್ತಿಯಾಗಿ ತಿಳಿಯೋಣ..
ಹೌದು, ಮಕ್ಕಳು ಹುಟ್ಟಿದಾಗ ತಂದೆ ತಾಯಿಯರ ಪ್ರಪಂಚವೇ ಬದಲಾಗಿ ಹೋಗುತ್ತದೆ. ಅದೇ ಮಕ್ಕಳು ಬೆಳೆಯುತ್ತಿದ್ದ ಹಾಗೆ, ಅವರ ರೆಕ್ಕೆ ಬೆಳೆದು, ಆಕಾಶದೆತ್ತರಕ್ಕೆ ಹಾರಲು ಬಯಸುತ್ತಾರೆ.. ಆಗ ತಂದೆ ತಾಯಿಯರು ಮಕ್ಕಳ ಬೆನ್ನೆಲುಬಾಗಿ ನಿಂತರೆ ಮಾತ್ರ, ಮಕ್ಕಳು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಸಾಧ್ಯ. ತಂದೆ ತಾಯಿ ಅದವರು ಮಕ್ಕಳಿಗಾಗಿಯೇ ಬದುಕುವ ಜೀವಿಗಳು. ಅದೇ ರೀತಿ ಮಕ್ಕಳು ಕೂಡ ಇರಬೇಕು. ಮಕ್ಕಳು ಒಳ್ಳೆಯ ರೀತಿಯಲ್ಲಿ ಬೆಳೆದು, ಉತ್ತಮ ಜೀವನ ಕಟ್ಟಿಕೊಂಡರೆ, ತಂದೆ ತಾಯಿಯ ಬದುಕು ಅವರಿಗೆ ಸಾರ್ಥಕ ಅನ್ನಿಸುತ್ತದೆ.

ಇದೀಗ ನಮ್ಮ ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಸಹ ಇದೇ ರೀತಿ ಬಹಳ ಸಂತೋಷದಲ್ಲಿದ್ದಾರೆ. ಇದಕ್ಕೆ ಕಾರಣ ವಿಜಯ್ ಪ್ರಕಾಶ್ ಅವರ ಮಗಳು ಕಾವ್ಯ, ಪದವಿ ಪೂರ್ಣಗೊಳಿಸಿದ್ದಾರೆ. ಪದವಿ ಕಾರ್ಯಕ್ರಮಕ್ಕೆ ವಿಜಯ್ ಪ್ರಕಾಶ್ ಅವರು ಮತ್ತು ಅವರ ಪತ್ನಿ ಇಬ್ಬರೂ ಕೂಡ ಹೋಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮಗಳ ಬಗ್ಗೆ ಬಹಳ ಸಂತೋಷದಿಂದ ಪೋಸ್ಟ್ ಮಾಡಿದ್ದಾರೆ ವಿಜಯ್ ಪ್ರಕಾಶ್. ಅವರ ಬರೆದಿರುವ ಸಾಲುಗಳನ್ನು ಓದಿ, ನೆಟ್ಟಿಗರು ಸಂತೋಷದಿಂದ ಕಾಮೆಂಟ್ಸ್ ಬರೆದಿದ್ದಾರೆ. ವಿಜಯ್ ಪ್ರಕಾಶ್ ಅವರು ಈ ರೀತಿ ಬರೆದಿದ್ದಾರೆ.
“ಪ್ರೀತಿಯ ಕಾವ್ಯ..ನನ್ನ ಮುದ್ದಿನ ಮಗಳೇ.. 22 ವರ್ಷಗಳ ಹಿಂದೆ ಮೊದಲ ಸಾರಿ ನಿನ್ನನ್ನು ನನ್ನ ಕೈಗೆ ನೀಡಿದಾಗ, ನನ್ನ ಹೃದಯ ಬಡಿತ ಒಂದು ಕ್ಷಣ ಏರುಪೇರಾಗಿತ್ತು. ಇಂದು ನೀನು ಪದವಿ ಪಡೆದಿದ್ದನ್ನು ನೋಡಿ, ನನ್ನ ಮನಸ್ಸಿಗೆ ತುಂಬಾ ಸಂತೋಷವಾಗಿದೆ. ಇಂದು ನೀನು ಬುದ್ಧಿವಂತ, ಹೃದಯಶಾಲಿ, ಸುಂದರವಾದ ಹೆಣ್ಣಾಗಿ ಬೆಳೆದಿದ್ದೀಯಾ.. ನಾವಿಬ್ಬರೂ ಜೊತೆಯಾಗಿ ಕಳೆದಿರುವ ಪ್ರತಿಯೊಂದು ಕ್ಷಣವೂ ನನ್ನ ನೆನಪಿನಲ್ಲಿರೆ. ನನ್ನ ಮಡಿಲಲ್ಲಿ ಮಗುವಾಗಿ ಆ ಪುಟ್ಟ ಮಗು ನನಗಿನ್ನೂ ನೆನಪಿದೆ. ಇಂದು ನಿನಗೆ ರೆಕ್ಕೆಗಳು ಬೆಳೆದಿದೆ, ನಿನ್ನ ಪ್ರಪಂಚಕ್ಕೆ ಹಾರಲು ಸಿದ್ಧವಾಗಿದ್ದೀಯ..
ಇದಕ್ಕಿಂತ ಹೆಮ್ಮೆಯ ವಿಷಯ ಇನ್ನೊಂದಿಲ್ಲ. ಅಭಿನಂದನೆಗಳು ನಿನಗೆ ಸ್ವೀಟಿ..ನಿನ್ನ ಶ್ರಮಕ್ಕೆ ಈಗ ತಕ್ಕ ಪ್ರತಿಫಲ ಸಿಕ್ಕಿದೆ. ನಿನ್ನನ್ನು ಎಷ್ಟು ಪ್ರೀತಿಸ್ತೀನಿ ಅಂತ ಪದಗಳಲ್ಲಿ ವರ್ಣಿಸೋಕೆ ಆಗಲ್ಲ.. ನಿನ್ನ ಅಪ್ಪ..” ಎಂದು ಮಗಳ ಬಗ್ಗೆ ಬಹಳ ಸಂತೋಷದಿಂದ ಬರೆದುಕೊಂಡಿದ್ದಾರೆ. ವಿಜಯ್ ಪ್ರಕಾಶ್ ಅವರ ಮಗಳು ಕಾವ್ಯ ಅವರು ವಿದೇಶದಲ್ಲಿ, ನೆದರ್ಲ್ಯಾನ್ಡ್ಸ್ ನಲ್ಲಿ ಓದುತ್ತಿದ್ದಾರೆ. ಇದೀಗ ಪದವಿ ಮುಗಿಸಿರುವ ಕಾವ್ಯ ಅವರು, ಭಾರತಕ್ಕೆ ಬರುತ್ತಾರಾ ಅಥವಾ ವಿದೇಶದಲ್ಲೇ ಮುಂದಿನ ಜೀವನ ರೂಪಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.