ಕನ್ನಡ ಚಿತ್ರರಂಗಕ್ಕೆ ಈಗ ಹಿರಿಯ ನಟ, ಎಲ್ಲರ ಜೊತೆಗೂ ಒಳ್ಳೆಯ ಸಂಬಂಧ ಇಟ್ಟುಕೊಂಡಿರುವ ನಟ ಎಂದರೆ ದೊಡ್ಮನೆ ಮಗ, ಶಿವ ರಾಜ್ ಕುಮಾರ್. ನಮ್ಮೆಲ್ಲರ ಪ್ರೀತಿಯ ಶಿವಣ್ಣ ಅವರು. ಶಿವಣ್ಣ ಅವರು ಸ್ಯಾಂಡಲ್ ವುಡ್ ನ ಎವರ್ ಯಂಗ್ ಅಂಡ್ ಎನರ್ಜಿಟಿಕ್ ನಟ. ಚಂದನವನದಲ್ಲಿ ಶಿವಣ್ಣ ಅವರಿಗೆ ಇರುವ ಬೇಡಿಕೆ ಮಾತ್ರ ಎಂದೆಂದಿಗೂ ಕಡಿಮೆ ಆಗಿಯೇ ಇಲ್ಲ. ಈಗಲೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡು, ಸಿಕ್ಕಾಪಟ್ಟೆ ಬ್ಯುಸಿ ಆಗಿರುವವರು ಶಿವಣ್ಣ. ಆದರೆ ಇದೀಗ ಶಿವಣ್ಣ ಅವರ ಆರೋಗ್ಯದ ಬಗ್ಗೆ ಒಂದು ಶಾಕಿಂಗ್ ಸುದ್ದಿ ಕೇಳಿಬಂದಿದೆ. ಅಷ್ಟಕ್ಕೂ ಅವರಿಗೆ ಏನಾಗಿದೆ? ಹೊರದೇಶಕ್ಕೆ ಯಾಕೆ ಹೋಗಬೇಕು?
ಈ ಶುಕ್ರವಾರ ಅಂದರೆ ನವೆಂಬರ್ 15ರಂದು ಶಿವಣ್ಣ ಅಭಿನಯದ ಬಹು ನಿರೀಕ್ಷಿತ ಭೈರತಿ ರಣಗಲ್ ಸಿನಿಮಾ ತೆರೆಕಾಣಲಿದೆ. ಈ ಸಿನಿಮಾವನ್ನು ತೆರೆಮೇಲೆ ನೋಡಲು ಎಲ್ಲಾ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಉಳಿದಿರುವುದು ಇನ್ನು 4 ದಿನಗಳು ಮಾತ್ರ. ಹಾಗಾಗಿ ಶಿವಣ್ಣ ಅವರು ಸಹ ಪ್ರೊಮೋಷನ್ ಕೆಲಸಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದಾರೆ. ಹಲವು ಇಂಟರ್ವ್ಯೂಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸುತ್ತಿದ್ದಾರೆ. ಈ ವೇಳೆ ಶಿವಣ್ಣ ಅವರ ಆರೋಗ್ಯದ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿದೆ..

ಹೌದು, ಕೆಲವರು ಶಿವಣ್ಣ ಅವರಿಗೆ ಕ್ಯಾನ್ಸರ್ ಆಗಿದೆ, ಅದಕ್ಕಾಗಿ ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ ಎನ್ನುವ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಆದರೆ ಇದ್ಯಾವುದು ನಿಜವಲ್ಲ, ಶಿವಣ್ಣ ಅವರಿಗೆ ಆರೋಗ್ಯದ ಸಮಸ್ಯೆ ಉಂಟಾಗಿರುವುದು ನಿಜ. ಆದರೆ ಅವರಿಗೆ ಕ್ಯಾನ್ಸರ್ ಆಗಿಲ್ಲ. ಶಿವಣ್ಣ ಅವರಿಗೆ ಏನಾಗಿದೆ ಎನ್ನುವುದನ್ನು ಖುದ್ದು ಶಿವಣ್ಣ ಅವರೇ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಭೈರತಿ ರಣಗಲ್ ಸಿನಿಮಾ ಬಗ್ಗೆ ಮಾತನಾಡುವುದರ ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಹಾಗೆಯೇ ಮುಂದಿನ ವರ್ಷದ ವೇಳೆಗೆ ಫುಲ್ ಫಾರ್ಮ್ ನಲ್ಲಿ ಇರುವುದಾಗಿ ತಿಳಿಸಿದ್ದಾರೆ ಶಿವಣ್ಣ.
ಹೌದು, ಶಿವಣ್ಣ ಅವರಿಗೆ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಇರುವುದು ನಿಜ, ಅದಕ್ಕಾಗಿ ಅವರು ಟ್ರೀಟ್ಮೆಂಟ್ ಪಡೆಯುತ್ತಿರುವುದು ಕೂಡ ನಿಜ. ಆದರೆ ಹೆದರಿಕೊಳ್ಳುವಂಥ ಸಮಸ್ಯೆ ಇಲ್ಲ ಎಂದಿದ್ದಾರೆ ಶಿವಣ್ಣ. ಈಗಾಗಲೇ ಟ್ರೀಟ್ಮೆಂಟ್ ಶುರುವಾಗಿದ್ದು, 2 ಸೆಷನ್ ಮುಗಿದಿದೆಯಂತೆ. ಮಂದಿನ ಟ್ರೀಟ್ಮೆಂಟ್ ಗಾಗಿ ಅಮೆರಿಕಾಗೆ ಹೋಗುವುದಾ ಅಥವಾ ಇಲ್ಲೇ ತೆಗೆದುಕೊಳ್ಳುವುದಾ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಅಮೆರಿಕಾಗೆ ಟ್ರೀಟ್ಮೆಂಟ್ ಗಾಗಿ ಹೋದರೆ, ಒಂದು ತಿಂಗಳ ಕಾಲ ಅಲ್ಲಿಯೇ ಇರಬೇಕಾಗುತ್ತದೆಯಂತೆ. ಈ ಬಗ್ಗೆ ಶಿವಣ್ಣ ಇನ್ನು ತೀರ್ಮಾನ ಮಾಡಬೇಕಿದೆ.
ಒಂದು ವೇಳೆ ಅಮೆರಿಕಾಗೆ ಹೋದರೆ, 2025ರ ಹೊಸ ವರ್ಷದ ವೇಳೆಗೆ ಫುಲ್ ಫಾರ್ಮ್ ನಲ್ಲಿ ವಾಪಸ್ ಬರುತ್ತೇನೆ ಎಂದು ಹೇಳಿದ್ದಾರೆ ಶಿವಣ್ಣ. ಅಭಿಮಾನಿಗಳಿಗೆ ಶಿವಣ್ಣನ ಆರೋಗ್ಯದ ಬಗ್ಗೆ ಆತಂಕ ಆಗಿರುವುದು ನಿಜ. ಆದರೆ ಯಾರೂ ಭಯ ಪಡುವ ಅಗತ್ಯವಿಲ್ಲ. ಶಿವಣ್ಣ ಬಹಳ ಬೇಗ ಆರೋಗ್ಯವನ್ನು ಸುಧಾರಿಸಿಕೊಂಡು, ಚೇತರಿಸಿಕೊಂಡು ಬರಲಿದ್ದಾರೆ. ಇನ್ನು ಹಲವು ಸಿನಿಮಾಗಳಲ್ಲಿ ನಟಿಸಬೇಕಿದೆ ಶಿವಣ್ಣ. ನವೆಂಬರ್ 15ರಂದು ಭೈರತಿ ರಣಗಲ್ ಸಿನಿಮಾ ಬಿಡುಗಡೆಯಾದ ನಂತರ ಶಿವಣ್ಣ ಅವರ ಟ್ರೀಟ್ಮೆಂಟ್ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ.



