ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಹೊಸ ತಿರುವು 717ರ ಎಪಿಸೋಡ್ ಕಥೆ ಇಲ್ಲಿದೆ. ಕೆಲಸ ಕಳೆದುಕೊಂಡಿದ್ದರೂ ಮಗಳ ಆಸೆ ನೆರವೇರಿಸಲು ಭಾಗ್ಯಾ, ಸಂಜೆ ಖಂಡಿತ ನಿನ್ನ ಹುಟ್ಟುಹಬ್ಬ ಆಚರಿಸೋಣ ಎಂದು ಮಗಳಿಗೆ ಪ್ರಾಮಿಸ್ ಮಾಡಿ ಕೆಲಸ ಹುಡುಕಲು ಹೋಗುತ್ತಾಳೆ. ತನ್ವಿ ಕೂಡಾ ಸಂಜೆ ಪಾರ್ಟಿ ಆಚರಿಸುವ ಖುಷಿಯಿಂದಲೇ ಕಾಲೇಜಿಗೆ ಹೋಗುತ್ತಾಳೆ. ಆದರೆ ತಾಂಡವ್ ಹಾಗೂ ಶ್ರೇಷ್ಠಾ ಬಂದು ಇಡೀ ಕಾಲೇಜಿಗೆ ಸಿಹಿ ಹಂಚಿ ತನ್ವಿಗೆ ಸರ್ಪೈಸ್ ನೀಡುತ್ತಾರೆ. ಇದರಿಂದ ತನ್ವಿ ಬಹಳ ಖುಷಿಯಾಗುತ್ತಾಳೆ. ಭಾಗ್ಯಲಕ್ಷ್ಮೀ ಧಾರಾವಾಹಿ ಹೊಸ ತಿರುವಿನಲ್ಲಿ ಈ ಅತಿರೇಕದ ಸರ್ಪ್ರೈಸ್ ನಂತರ ಏನಾಗಲಿದೆ? ನಿರೀಕ್ಷೆಯ ಹೊಸ ಮರುಳಿಗೆ ತಯಾರಾಗಿ!
ಕಾಲೇಜಿಗೆ ಸಿಹಿ ಹಂಚಿದ್ದು ಮಾತ್ರವಲ್ಲದೆ ಇಂದು ಪಾರ್ಟಿ ಮಾಡೋಣ, ನಿನಗೆ ದೊಡ್ಡ ಸರ್ಪ್ರೈಸ್ ಇದೆ ಎಂದು ತಾಂಡವ್ ಹೇಳುತ್ತಾನೆ. ಶ್ರೇಷ್ಠಾ, ತಾಂಡವ್ ಹಾಗೂ ತನ್ವಿ ಒಂದು ರೆಸಾರ್ಟ್ಗೆ ಬರುತ್ತಾರೆ. ರೆಸಾರ್ಟ್ ಓನರ್ ಮೂವರನ್ನೂ ಸ್ವಾಗತಿಸುತ್ತಾನೆ. ಇಷ್ಟು ವರ್ಷಗಳು ಇಷ್ಟು ದೊಡ್ಡ ಮಟ್ಟಿಗೆ ಪಾರ್ಟಿ ಮಾಡಲಿಲ್ಲ, ಅದರೆ ಈಗ ಈ ರೀತಿ ಅರೇಂಜ್ ಮಾಡುತ್ತಿರುವ ಉದ್ದೇಶವೇನು ಎಂದು ತನ್ವಿ, ಅಪ್ಪನನ್ನು ಕೇಳುತ್ತಾಳೆ. ನನಗೆ ಯಾವಾಗಲೂ ಇದೇ ರೀತಿ ನಿನ್ನ ಬರ್ತ್ಡೇ ಆಚರಿಸಲು ಇಷ್ಟ, ಆದರೆ ಅದಕ್ಕೆ ಅಜ್ಜಿ ಅವಕಾಶ ಮಾಡಿಕೊಡುತ್ತಿರಲಿಲ್ಲ ಎಂದು ತಾಂಡವ್, ಸುಳ್ಳು ಹೇಳಿ ತನ್ವಿ ಮಾತು ಮರೆಸುತ್ತಾನೆ. ನಾನು ಮನೆಯಲ್ಲಿ ಯಾರಿಗೂ ಹೇಳದೆ ಬಂದಿದ್ದೇನೆ. ಇಲ್ಲಿಗೆ ಬಂದಿರುವ ವಿಚಾರ ಗೊತ್ತಾದರೆ ಅಜ್ಜಿ ಬೈಯ್ಯುತ್ತಾರೆ ಎಂದು ತನ್ವಿ ಭಯಗೊಳ್ಳುತ್ತಾಳೆ. ಅಜ್ಜಿಗೆ ಫೋನ್ ಮಾಡು, ಅವರು ನಿನಗೆ ಬೈದರೆ ನಾನು ಮಾತನಾಡುತ್ತೇನೆ ಎನ್ನುತ್ತಾನೆ.
ತಾಂಡವ್ ಫೋನ್ನಿಂದಲೇ ತನ್ವಿ, ಅಜ್ಜಿ ಕುಸುಮಾಗೆ ಫೋನ್ ಮಾಡುತ್ತಾಳೆ. ಅಪ್ಪನೊಂದಿಗೆ ಹೊರಗೆ ಬಂದಿದ್ದೇನೆ ಎಂದು ತನ್ವಿ ಹೇಳುತ್ತಾಳೆ. ಅದನ್ನು ಕೇಳಿ ಕುಸುಮಾಗೆ ಖುಷಿ ಆದರೂ ಅದನ್ನು ವ್ಯಕ್ತಪಡಿಸುವುದಿಲ್ಲ, ನನಗೆ ಒಂದು ಮಾತೂ ಹೇಳದೆ ನೀನು ಹೇಗೆ ಹೋದೆ ಎಂದು ಕೇಳುತ್ತಾಳೆ. ಅಷ್ಟರಲ್ಲಿ ತಾಂಡವ್ ತನ್ವಿ ಕೈಯಿಂದ ಮೊಬೈಲ್ ತೆಗೆದುಕೊಂಡು ಅಮ್ಮ, ನೀನು ಏನು ಬೈಯ್ಯುವುದಿದ್ದರೂ ನನಗೆ ಬೈಯ್ಯಿ. ತನ್ವಿ ನನ್ನ ಮಗಳು, ಅವಳ ಮೇಲೆ ನನಗೆ ಅಧಿಕಾರ ಇದೆ. ಅವಳ ಹುಟ್ಟುಹಬ್ಬ ಆಚರಿಸಬೇಕು ಎಂದು ನಾನು ಕರೆದುಕೊಂಡು ಬಂದಿದ್ದೇನೆ, ಪಾರ್ಟಿ ಮುಗಿದ ನಂತರ ನಾನೇ ಅವಳನ್ನು ಕರೆತರುತ್ತೇನೆ ಎನ್ನುತ್ತಾನೆ.
ಇತ್ತ ಕೆಲಸ ಹುಡುಕುತ್ತಾ ಹೊರಟ ಭಾಗ್ಯಾಗೆ ರೆಸಾರ್ಟ್ನಲ್ಲಿ ಕೆಲಸ ದೊರೆಯುತ್ತದೆ. ವಿಪರ್ಯಾಸ ಎಂದರೆ ಅದೇ ರೆಸಾರ್ಟ್ನಲ್ಲಿ ತನ್ವಿ ಬರ್ತ್ಡೇ ಪಾರ್ಟಿ ನಡೆಯುತ್ತಿರುತ್ತದೆ. ಬಿಡುವಿನಲ್ಲಿ ಭಾಗ್ಯಾ, ಪೂಜಾಗೆ ಕರೆ ಮಾಡಿ, ಹತ್ತಿರದ ಅಂಗಡಿಯಿಂದ ಬರ್ತ್ಡೇ ಆಚರಣೆಗೆ ಏನು ಬೇಕೋ ಅದನ್ನು ತೆಗೆದುಕೊಂಡು ಬಾ, ದುಡ್ಡು ನಂತರ ಕೊಡುತ್ತೇನೆ ಎಂದು ಹೇಳು ಎಂದು ಮನವಿ ಮಾಡುತ್ತಾಳೆ. ದುಡ್ಡು ಹೇಗೆ ಕೊಡುತ್ತೀಯ? ಯಾವುದಾದರೂ ಕೆಲಸ ಸಿಕ್ತಾ ಎಂದು ಕೇಳುತ್ತಾಳೆ. ಹೌದು ಒಂದು ಕಡೆ ಕೆಲಸ ಸಿಕ್ಕಿದೆ ಎಂದು ಭಾಗ್ಯಾ ಹೇಳುತ್ತಾಳೆ. ಎಲ್ಲಿ, ಏನು ಕೆಲಸ ಎಂದು ಪೂಜಾ ಕುತೂಹಲದಿಂದ ಕೇಳುತ್ತಾಳೆ. ಅಷ್ಟರಲ್ಲಿ ರೆಸಾರ್ಟ್ ಓನರ್, ಕೆಲಸದ ಸಮಯದಲ್ಲಿ ಫೋನ್ ಬಳಸಬಾರದು ಎಂದು ಮೊದಲೇ ಹೇಳಿದ್ದೆ ತಾನೇ ಎಂದು ಬೈಯ್ಯುತ್ತಾನೆ. ಭಾಗ್ಯಾ ಅವನಿಗೆ ಕ್ಷಮೆ ಕೇಳಿ ಕೆಲಸಕ್ಕೆ ಎದ್ದು ಹೊರಡುತ್ತಾಳೆ.
ತನ್ವಿ ತನ್ನ ತಂದೆ ಕೊಡಿಸಿದ ಹೊಸ ಡ್ರೆಸ್ ತೊಟ್ಟು ಬರುತ್ತಾಳೆ. ಅವಳನ್ನು ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಇಷ್ಟು ಮುದ್ದಾಗಿ ಕಾಣುತ್ತಿದ್ದೀಯ ಎಂದು ತಾಂಡವ್, ಮಗಳನ್ನು ಹೊಗಳುತ್ತಾನೆ. ಈ ರೀತಿ ಡ್ರೆಸ್ ಹಾಕಬೇಕೆಂಬುದು ನನ್ನ ಕನಸಾಗಿತ್ತು, ಇಂದು ಆ ಆಸೆ ನೆರವೇರಿದೆ, ಥ್ಯಾಂಕ್ಸ್ ಅಪ್ಪಾ ಎಂದು ತಂದೆಗೆ ಧನ್ಯವಾದ ಹೇಳುತ್ತಾಳೆ. ತಾಂಡವ್ ಹಾಗೂ ತನ್ವಿ ಫೋಟೋಶೂಟ್ ಮಾಡಿಸುತ್ತಾರೆ. ಅದನ್ನು ನೋಡಿ ಶ್ರೇಷ್ಠಾ ಸಿಟ್ಟಾದರೂ , ತೋರ್ಪಡಿಸುವುದಿಲ್ಲ. ಇದೇ ಕೊನೆ, ಮುಂದಿನ ಹುಟ್ಟುಹಬ್ಬಕ್ಕೆ ನೀನು ಇವರ ಜೊತೆ ನೀನು ಇರುವುದಿಲ್ಲ. ನೀನು ನನ್ನವನಾಗಿ ಮಾತ್ರ ಇರುವೆ ಎಂದು ಮನಸಿನಲ್ಲೇ ಲೆಕ್ಕಾಚಾರ ಮಾಡುತ್ತಾಳೆ.
ತಾಂಡವ್ ಸರ್ಪೈಸ್ ಮೇಲೆ ಸರ್ಪ್ರೈಸ್ ಕೊಡುತ್ತಿರುವುದನ್ನು ನೋಡಿ ತನ್ವಿ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಇದೇನು ಮಹಾ, ನಿನಗೆ ಇನ್ನೂ ಸರ್ಪ್ರೈಸ್ ಇದೆ ಎಂದು ತಾಂಡವ್ ಹೇಳುತ್ತಾನೆ. ರೆಸಾರ್ಟ್ ಓನರ್, ಭಾಗ್ಯಾ ಕೈಯಲ್ಲೇ ಕೇಕ್ ಕೊಟ್ಟು ಕಳಿಸುತ್ತಾನೆ. ಅಲ್ಲಿ ಹೋಗುವವರೆಗೂ ಕೇಕ್ನಿಂದ ಮುಖ ಮುಚ್ಚಿಕೊಳ್ಳಬೇಕು. ನಂತರ ಬರ್ತ್ಡೇ ಸಾಂಗ್ ಹಾಡಬೇಕು ಎಂದು ಸೂಚಿಸುತ್ತಾನೆ. ಭಾಗ್ಯಾ ಹುಮ್ಮಸ್ಸಿನಿಂದಲೇ ಕೇಕ್ ಪಡೆದು ಅಲ್ಲಿಂದ ಪಾರ್ಟಿ ನಡೆಯುತ್ತಿದ್ದ ಕಡೆಗೆ ಬರುತ್ತಾಳೆ. ಹ್ಯಾಪಿ ಬರ್ತ್ಡೇ ಹೇಳುತ್ತಾಳೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವವರ ಹೆಸರು ಕೇಳಲೇ ಇಲ್ಲವಲ್ಲ, ಕೇಕ್ ಮೇಲೆ ಇರುತ್ತದೆ ನೋಡೋಣ ಎಂದುಕೊಂಡು ಹೆಸರು ನೋಡುತ್ತಾಳೆ. ತನ್ವಿ ಎಂಬ ಹೆಸರು ನೋಡಿ ಶಾಕ್ ಆಗುತ್ತಾಳೆ. ನಂತರ ಸ್ಟೇಜ್ ಬಳಿ ತಾಂಡವ್ ಹಾಗೂ ಶ್ರೇಷ್ಠಾ ಮಧ್ಯದಲ್ಲಿ ತನ್ನ ಮಗಳು ತನ್ವಿ ಇರುವುದನ್ನು ನೋಡುತ್ತಾಳೆ. ಭಾಗ್ಯಾಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಭಾಸವಾಗುತ್ತದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಹೊಸ ತಿರುವು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯ 717ರ ಎಪಿಸೋಡ್ ಕುತೂಹಲ ಹೆಚ್ಚಿಸಿದೆ. ಕೆಲಸ ಕಳೆದುಕೊಂಡಿದ್ದರೂ ಮಗಳ ಹುಟ್ಟುಹಬ್ಬ ಆಚರಿಸಲು ಭಾಗ್ಯಾ ಪ್ರಾಮಿಸ್ ಮಾಡಿದ್ದು, ಅದನ್ನು ಈಡೇರಿಸಲು ಜೋಕರ್ ವೇಷದಲ್ಲಿ ಕೆಲಸ ಮಾಡುತ್ತಿದೆ. ಈ ನಡುವೆ ಜೋಕರ್ ವೇಷದಲ್ಲಿರುವ ಭಾಗ್ಯಾಳನ್ನು ಎಲ್ಲರೂ ಕಂಡುಹಿಡಿಯುತ್ತಾರಾ? ಓನರ್ ಸೂಚನೆಯಂತೆ ಭಾಗ್ಯಾ ಕೇಕನ್ನು ತನ್ವಿ ಬಳಿ ಹೋಗಿ ತಲುಪಿಸುತ್ತಾಳಾ? ಇವೆಲ್ಲವೂ ಮುಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ. ಧಾರಾವಾಹಿಯ ಈ ಹೊಸ ತಿರುವು ಅಭಿಮಾನಿಗಳನ್ನು ನಿರೀಕ್ಷೆಯ ಮಡಿಲಿಗೆ ಎಸೆಯುತ್ತಿದೆ!



