ಬಿಗ್ ಬಾಸ್ ಕನ್ನಡ ಸೀಸನ್ 11 ಹಲವು ಕಾರಣಗಳಿಂದ ಹೈಲೈಟ್ ಆಗುತ್ತಿದೆ. ಇದೀಗ ಚೈತ್ರ ಕುಂದಾಪುರ ಅವರು ಸುದ್ದಿಯಲಿದ್ದಾರೆ. ಇತ್ತೀಚೆಗೆ ಚೈತ್ರ ಅವರು ಅನಾರೋಗ್ಯದ ಕಾರಣಕ್ಕೆ ಮನೆಯಿಂದ ಹೊರಗೆ ಬಂದು, ಆಸ್ಪತ್ರೆಯಲ್ಲಿ ಒಂದು ದಿನ ಇದ್ದು ಹೋದರು. ಆದರೆ ಇದೀಗ ಹಳೆಯ ಕೇಸ್ ವಿಚಾರವಾಗಿ ಕೋರ್ಟ್ ಗೆ ಬಂದಿದ್ದಾರೆ ಚೈತ್ರಾ ಕುಂದಾಪುರ. ಚೈತ್ರಾ ಅವರ ಮೇಲೆ ಕೇಸ್ ಇತ್ತೋ, ಇಲ್ಲವೋ ಎನ್ನುವ ವಿಷಯ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಈ ಕೇಸ್ ರೀಓಪನ್ ಆಗಿದ್ದು ಯಾಕೆ? ಅಷ್ಟಕ್ಕೂ ಚೈತ್ರ ಅವರು ಹೊರಗಡೆ ಬಂದಿರೋದು ಯಾಕೆ? ಆ ಕೇಸ್ ಆದರು ಏನು? ಪೂರ್ತಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..
ಚೈತ್ರ ಕುಂದಾಪುರ ಅವರು ಬಿಗ್ ಬಾಸ್ ಮನೆಯೊಳಗೆ ಅನೇಕ ವಿಚಾರಗಳಿಂದ ಸುದ್ದಿ ಆಗುತ್ತಲೇ ಇದ್ದಾರೆ. ಸುಳ್ಳು ಹೇಳಿದ್ದಕ್ಕೆ, ಆಸ್ಪತ್ರೆಗೆ ಹೋಗಿ ಡಾಕ್ಟರ್ ನರ್ಸ್ ಗಳ ಜೊತೆಗೆ ಬಿಗ್ ಬಾಸ್ ಬಗ್ಗೆ ಮಾತಾಡಿದ್ದಕ್ಕೆ, ಸ್ಪರ್ಧಿಗಳಿಗೆ ಅದು ಇದು ಹೇಳಿದ್ದಕ್ಕೆ, ಹೀಗೆ ಅನೇಕ ಕಾರಣಗಳಿಗೆ ಚೈತ್ರ ಅವರು ಸುದ್ದಿಯಾಗುತ್ತಾ, ಸುದೀಪ್ ಅವರಿಂದ ಕೂಡ ಹಲವು ಸಾರಿ ಬೈಸಿಕೊಂಡಿದ್ದಾರೆ. ಆದರೆ ಚೈತ್ರಾ ಅವರು ಇದೀಗ ಬೇರೆ ಕಾರಣಕ್ಕೆ ಮನೆಯಿಂದ ಹೊರಬಂದಿದ್ದಾರೆ. ಈ ಬಾರಿ ಸೀರಿಯಸ್ ವಿಚಾರಕ್ಕೆ ಚೈತ್ರ ಅವರು ಹೊರಬಂದಿದ್ದು, ಅವರ ಮೇಲೆ ಇದ್ದ ಹಳೆಯ ಕೇಸ್ ವಿಚಾರಕ್ಕೆ ಚೈತ್ರ ಅವರು ಕೋರ್ಟ್ ಗೆ ಹಾಜರಾಗಬೇಕಿತ್ತು, ಈ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದು, ಕೋರ್ಟ್ ಗೆ ಹಾಜರಾಗಿದ್ದಾರೆ ಚೈತ್ರಾ ಕುಂದಾಪುರ.

ಅಷ್ಟಕ್ಕೂ ಚೈತ್ರ ಅವರ ಬಗ್ಗೆ ಹಾಕಿರುವ ಕೇಸ್ ಯಾವುದು ಎಂದು ನೋಡುವುದಾದರೆ, ಇರು ವಂ$₹#ಚನೆಯ ಕೇಸ್ ಆಗಿದೆ. ಕೆಲ ಸಮಯದ ಒಬ್ಬ ವ್ಯಕ್ತಿಯ ಬಳಿ ಎಲೆಕ್ಷನ್ ನಲ್ಲಿ ಬಿಜೆಪಿ ಇಂದ ಸೀಟ್ ಕೊಡಿಸುತ್ತೇನೆ ಎಂದು ನಂಬಿಸಿದ ಚೈತ್ರಾ ಅವರು ಕೋಟಿಗಟ್ಟಲೆ ಹಣವನ್ನು ಅವರಿಂದ ಪಡೆದುಕೊಂಡಿದ್ದರಂತೆ. ಆದರೆ ಸೀಟ್ ಕೂಡ ಕೊಡಿಸಿಲ್ಲ ಜೊತೆಗೆ ಹಣವನ್ನು ವಾಪಸ್ ಕೊಟ್ಟಿಲ್ಲ. ಈ ರೀತಿಯಾಗಿ ದುಡ್ಡು ಪಡೆದ ವ್ಯಕ್ತಿಗೆ ಮೋ#ಸ ಮಾಡಿದ ಕಾರಣಕ್ಕೆ ಚೈತ್ರ ಅವರ ಮೇಲೆ ಕೇಸ್ ಹಾಕಲಾಗಿತ್ತು, ಇದರಿಂದ ಚೈತ್ರಾ ಅವರು ಜೈ*ಲಿಗೆ ಕೂಡ ಹೋಗಿ ಬಂದಿದ್ದರು. ಇದೇ ಕೇಸ್ ವಿಚಾರಣೆಗೆ ಸಂಬಂಧಿಸಿದ ಹಾಗೆ ಚೈತ್ರಾ ಅವರು ಇಂದು ಕೋರ್ಟ್ ಗೆ ಹಾಜರಾಗಿದ್ದಾರೆ. ಆದರೆ ಕೇಸ್ ನ ತೀವ್ರತೆ ಎಷ್ಟಿದೆ ಎಂದು ಇನ್ನು ಕೂಡ ತಿಳಿದುಬಂದಿಲ್ಲ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಚೈತ್ರಾ ಕುಂದಾಪುರ ಅವರು ಎಲಿಮಿನೇಟ್ ಆಗಿ ಹೊರಬಂದಿದ್ದಾರಾ ಅಥವಾ ಇಂದು ಕೋರ್ಟ್ ನಲ್ಲಿ ವಿಚಾರಣೆ ಎಲ್ಲವೂ ಮುಗಿದ ನಂತರ ಮತ್ತೆ ಬಿಗ್ ಬಾಸ್ ಮನೆಗೆ ವಾಪಸ್ ಹೋಗುತ್ತಾರಾ? ಈ ಒಂದು ಪ್ರಶ್ನೆಗೆ ಇನ್ನು ಕೂಡ ಉತ್ತರ ಸಿಕ್ಕಿಲ್ಲ. ಚೈತ್ರಾ ಅವರು ಬಿಗ್ ಬಾಸ್ ರೂಲ್ಸ್ ನ ಪ್ರಕಾರ ಮಾಧ್ಯಮದವರ ಜೊತೆಗೆ ಮಾತನಾಡುವ ಹಾಗಿಲ್ಲ, ಹಾಗಾಗಿ ಎಷ್ಟು ಸಮಯ ಚೈತ್ರಾ ಅವರು ಹೊರಗಡೆ ಇರುತ್ತಾರೆ ಅಥವಾ ವಿಚಾರಣೆ ಮುಗಿಸಿಕೊಂಡು ಇವತ್ತೇ ವಾಪಸ್ ಬಿಗ್ ಬಾಸ್ ಮನೆಗೆ ಹೋಗುತ್ತಾರಾ? ಈ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದರೆ ಇನ್ನು ಸ್ವಲ್ಪ ಸಮಯ ಕಾಯಬೇಕಿದೆ. ಮುಂದಿನ ಅಪ್ಡೇಟ್ಸ್ ಶೀಘ್ರದಲ್ಲೇ ಸಿಗಲಿದೆ.
ಒಂದೆರಡು ವಾರಗಳ ಹಿಂದೆ ಹುಷಾರಿಲ್ಲದೇ ಚೈತ್ರಾ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದು, ಇಲ್ಲ ಸಲ್ಲದ ವಿಷಯಗಳನ್ನು ಮಾತನಾಡಿ, ಆ ವಾರದ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಅವರು ಚೈತ್ರಾ ಅವರಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದರು, ಚೈತ್ರಾ ಅವರು ಸಹ ಕ್ಷ್ಮಮೆ ಕೇಳಿದ್ದರು. ಅವೆಲ್ಲವೂ ನಡೆದ ನಂತರ ತಮ್ಮನ್ನು ತಾವು ಬದಲಾಯಿಸಿಕೊಂಡು, ಉತ್ತಮವಾಗಿ ಟಾಸ್ಕ್ ಗಳಲ್ಲಿ ಸಹ ಪಾಲ್ಗೊಂಡಿದ್ದರು ಚೈತ್ರಾ. ಆದರೆ ಇದೀಗ ಕೇಸ್ ವಿಚಾರವಾಗಿ ಚೈತ್ರಾ ಅವರು ಕೋರ್ಟ್ ಗೆ ಬಂದಿದ್ದು, ಈ ಕೇಸ್ ಎಷ್ಟು ಸಮಯ ಹಿಡಿಯಲಿದೆ. ಇನ್ನು ಎಷ್ಟು ಸಮಯ ಚೈತ್ರಾ ಅವರು ಇಲ್ಲೇ ಇರಬೇಕಾಗುತ್ತದೆ ಎಂದು ಕಾದು ನೋಡಬೇಕಿದೆ.



