ಬಿಗ್ ಬಾಸ್ ಶೋ ಎಲ್ಲಾ ಸ್ಪರ್ಧಿಗಳಿಗೂ ಒಳ್ಳೆಯದನ್ನೇ ಮಾಡುತ್ತದೆ ಎಂದು ಹೇಳೋಕೆ ಆಗೋದಿಲ್ಲ. ಕೆಲವರ ಬದುಕಿಗೆ ತೊಂದರೆಯನ್ನು ತರಬಹುದು. ಈ ತೊಂದರೆ ಅನ್ನೋದು ಬಿಗ್ ಬಾಸ್ ಇಂದ ಮಾತ್ರ ಆಗುತ್ತದೆ ಎಂದು ಸಹ ಹೇಳೋದು ಕಷ್ಟ. ಒಂದು ಕುಟುಂಬದಲ್ಲಿ ಆ ಸದಸ್ಯರ ನಡುವೆ ಇರಬೇಕಾದ ಬಾಂಧವ್ಯ, ಪ್ರೀತಿ, ನಂಬಿಕೆ ಇದೆಲ್ಲವೂ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಅದರಲ್ಲೂ ದಂಪತಿಗಳ ಜೀವನ ಅಂದ್ರೆ ಅವರ ನಡುವೆ ನಂಬಿಕೆ, ಪಾರದರ್ಶಕತೆ ಇರೋದು ಬಹಳ ಮುಖ್ಯ. ಅದು ಇಲ್ಲದೇ ಹೋದರೆ, ಆ ಸಂಬಂಧದಲ್ಲಿ ಭಿನ್ನಾಭಿಪ್ರಾಯಗಳು ಬಿರುಕುಗಳು ಮೂಡುವುದಕ್ಕೆ ಶುರುವಾಗುತ್ತದೆ. ಇದರಿಂದ ಜೀವನವೇ ಬೇರೆ ಹಾದಿಗೆ ಹೋಗಿಬಿಡುತ್ತದೆ. ಇದೀಗ ಈ ರೀತಿ ಆಗಿರುವುದು ಒಬ್ಬ ಬಿಗ್ ಬಾಸ್ ಸ್ಪರ್ಧಿಯ ಜೀವನದಲ್ಲಿ. ಆಕೆ ಈಗ ಗಂಡನಿಂದ ದೂರ ಆಗಿದ್ದಾರೆ ಎನ್ನುವ ವಿಚಾರ ವೈರಲ್ ಆಗಿದೆ.
ಒಬ್ಬ ಸೆಲೆಬ್ರಿಟಿಯ ಬದುಕು ಎಂದರೆ ಹಾಗೆ.. ಜನರಿಗೆ ಸಿನಿಮಾ ಧಾರಾವಾಹಿ ಕಲಾವಿದರು ಅವರ ವೈಯಕ್ತಿಕ ಬದುಕು ಇವುಗಳ ಬಗ್ಗೆ ತಿಳಿದುಕೊಳ್ಳೋ ಕುತೂಹಲ ಜಾಸ್ತಿ ಇರುತ್ತದೆ. ಅವರ ಬಗ್ಗೆ ಸುದ್ದಿಗಳು ಹರಡುವ ಪ್ರಯತ್ನ ಸಹ ನಡೆಯುತ್ತಲೇ ಇರುತ್ತದೆ. ಇದೆಲ್ಲವೂ ಕಲಾವಿದರ ಜೀವನದ ಮೇಲೆ ಪರಿಣಾಮ ಬೀರುವುದು ಸಹ ಹೌದು. ಅದರಲ್ಲೂ ಒಬ್ಬರ ಬಗ್ಗೆ ನೆಗಟಿವ್ ಸುದ್ದಿಗಳು ಕೇಳಿ ಬರುತ್ತವೆ ಎಂದರೆ, ಅಂಥಾ ಸುದ್ದಿಗಳು ಬಹಳ ಬೇಗ ಎಲ್ಲಾ ಕಡೆ ಹರಡುತ್ತದೆ. ಈ ಮಾಜಿ ಬಿಗ್ ಬಾಸ್ ಸ್ಪರ್ಧಿಯ ವೈಯಕ್ತಿಕ ಜೀವನದ ವಿಷಯದಲ್ಲಿ ಸಹ ನಡೆದಿರುವುದು ಅದೇ ರೀತಿ. ಇವರು ಗಂಡನಿಂದ ದೂರ ಆಗಿದ್ದಾರೆ, ಬಿಗ್ ಬಾಸ್ ಮನೆಯ ಒಳಗೆ ಮತ್ತೊಬ್ಬ ವ್ಯಕ್ತಿಯ ಸ್ನೇಹ ಆಗಿದ್ದೇ ಇದೆಲ್ಲದಕ್ಕೂ ಕಾರಣ ಎನ್ನುವ ಸುದ್ದಿಗಳು ವೈರಲ್ ಆಗಿವೆ.

ಈ ಎಲ್ಲಾ ಸುದ್ದಿಗಳಿಗೆ ಈಗ ಈ ನಟಿಯೇ ಸ್ಪಷ್ಟನೆ ನೀಡಿದ್ದಾರೆ. ಇವರ ಹೆಸರು ವೀಣಾ ನಾಯರ್. ಇವರು ಮಲಯಾಳಂ ಬಿಗ್ ಬಾಸ್ ಸೀಸನ್ 2ರಲ್ಲಿ ಸ್ಪರ್ಧಿಸಿದ್ದರು. ವೀಣಾ ಅವರು ನಟನೆ ಶುರು ಮಾಡಿದ್ದು ಕಿರುತೆರೆಯ ಮೂಲಕ. ಮಲಯಾಳಂ ನಲ್ಲಿ ಕೆಲವು ಧಾರಾವಾಹಿಗಳಲ್ಲಿ ನಟಿಸಿರುವ ಇವರಿಗೆ ಬೇಡಿಕೆ ಇತ್ತು, ಧಾರಾವಾಹಿಗಳಲ್ಲಿ ನಟಿಸಿದ ಜನಪ್ರಿಯತೆ ಇಂದ ಕೆಲವು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಹ ಇವರಿಗೆ ಸಿಕ್ಕಿ, ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಅದೇ ರೀತಿ ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಹೋಗಿದ್ದರು ವೀಣಾ ನಾಯರ್. ಅಲ್ಲಿ ಸಹ ಇವರಿಗೆ ಒಳ್ಳೆಯ ಹೆಸರು ಜನಪ್ರಿಯತೆ ಎಲ್ಲವೂ ಸಿಕ್ಕಿದೆ. ಆದರೆ ಬಿಗ್ ಬಾಸ್ ಮನೆಯ ಒಳಗೆ ಮತ್ತೊಬ್ಬ ಸ್ಪರ್ಧಿಯ ಜೊತೆಗೆ ಸ್ನೇಹದಿಂದ ಇದ್ದಿದ್ದು, ಇವರ ಜೀವನ ಹಾಳಾಗುವುದಕ್ಕೆ ಕಾರಣ ಆಯಿತು ಎನ್ನುವ ಮಾತು ಕೇಳಿಬರುತ್ತಿದೆ..
ವೀಣಾ ನಾಯರ್ ಅವರಿಗೆ ಮದುವೆಯಾಗಿ ಒಬ್ಬ ಮಗ ಇದ್ದಾನೆ. ಬಿಗ್ ಬಾಸ್ ಶೋಗೆ ಹೋಗಿ, ಅಲ್ಲಿ ಇನ್ನೊಬ್ಬ ವ್ಯಕ್ತಿಯ ಜೊತೆಗೆ ಇವರು ಅತ್ಯಂತ ಸ್ನೇಹದಿಂದ ಇದ್ದ ಕಾರಣಕ್ಕೆ, ಗಂಡನ ಜೊತೆಗೆ ವೈಮನಸ್ಸು ಉಂಟಾಗಿದೆ, ಇದರಿಂದ ಇಬ್ಬರು ವಿಚ್ಛೇದನ ಪಡೆದು ದೂರವಾಗಿದ್ದಾರೆ. ಇವರ ಬದುಕು ಹಾಳಾಗಿದೆ, ಮಗ ಇದರಿಂದ ಬಡವಾಗಿದ್ದಾನೆ. ಆ ಮಗುವಿನ ಜೀವನ ಹಾಳಾಗಿದೆ. ವೀಣಾ ನಾಯರ್ ಅವರ ಲೈಫ್ ಇನ್ನು ಮುಗಿದ ಹಾಗೆ ಎನ್ನುವ ಕೆಲವೊಂದಷ್ಟು ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಇದೀಗ ಆ ಎಲ್ಲಾ ವಿಷಯಗಳಿಗೂ ನಟಿ ವೀಣಾ ನಾಯರ್ ಅವರೇ ಉತ್ತರ ಕೊಟ್ಟಿದ್ದು, ಜನರು ಅಂದುಕೊಂಡಿರೋ ಹಾಗೆ ಏನು ನಡೆದಿಲ್ಲ, ತಾವು ಗಂಡನಿಂದ ವಿಚ್ಛೇದನ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಇವರು ಹೇಳಿರುವುದು ಏನು ಎಂದರೆ..

ಇತ್ತೀಚೆಗೆ ವೀಣಾ ಅವರು ಒಂದು ಆನ್ಲೈನ್ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು, ಆಗ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಉತ್ತರಿಸಿ.. “ನಾನು ನನ್ನ ಮಗ ಇಬ್ಬರು ಕೂಡ ತುಂಬಾ ಖುಷಿಯಾಗಿದ್ದೀವಿ. ಅವನು ನನ್ನ ಜೊತೆಗಿದ್ದಾನೆ ಹಾಗೆಂದ ಮಾತ್ರಕ್ಕೆ ತಂದೆಯನ್ನು ಮಿಸ್ ಮಾಡಿಕೊಳ್ಳುವ ಪರಿಸ್ಥಿತಿ ಬಂದಿಲ್ಲ. ಅವರ ತಂದೆ ಬಂದಾಗ ಅವರ ಜೊತೆ ಹೋಗಿ ಬರುತ್ತಾನೆ. ನನ್ನ ಮಗನಿಗೆ ತಾಯಿಯಾಗಿ, ತಾಯಿಯ ಪ್ರೀತಿಯನ್ನು ಮಾತ್ರ ಕೊಡೋದಕ್ಕೆ ನನ್ನಿಂದ ಸಾಧ್ಯ ಆಗುತ್ತದೆ, ತಂದೆ ಪ್ರೀತಿಯನ್ನು ನಾನು ಕೊಡೋಕೆ ಆಗೋದಿಲ್ಲ. ಅಪ್ಪನ ಪ್ರೀತಿಯನ್ನು ಅವರ ತಂದೆಯೇ ಕೊಡುತ್ತಿದ್ದಾರೆ. ನನ್ನ ಮಗ ನಮ್ಮಿಬ್ಬರನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ.. ನನ್ನ ಹಾಗೂ ನನ್ನ ಪತಿಯ ನಡುವೆ ಸಮಸ್ಯೆ ಇದೆ ಹಾಗಾಗಿ ನಾವು ಪ್ರತ್ಯೇಕವಾಗಿ ಜೀವಿಸುತ್ತಿದ್ದೇವೆ. ಇದೆಲ್ಲ ನನ್ನ ಮಗನ ಮೇಲೆ ಪರಿಣಾಮ ಬೀರೋದು ನನಗೆ ಇಷ್ಟವಿಲ್ಲ. ಹಾಗೆ ಆಗೋಕು ಬಿಡೋದಿಲ್ಲ..” ಎಂದು ಇರುವ ವಿಷಯವನ್ನು ತಿಳಿಸಿದ್ದಾರೆ ನಟಿ ವೀಣಾ ನಾಯರ್.
ಇವರು ಹೇಳಿರುವ ಮಾತಿನ ಅನುಸಾರ ವೀಣಾ ನಾಯರ್ ಅವರು ಹಾಗೂ ಅವರ ಗಂಡ ಇಬ್ಬರು ಸಹ ಬೇರೆ ಬೇರೆಯಾಗಿ ವಾಸ ಮಾಡುತ್ತಿರುವುದು ನಿಜ, ಮಗ ಇವರ ಜೊತೆಯಲ್ಲೇ ಇದ್ದಾನೆ. ಆದರೆ ಗಂಡನಿಂದ ಇವರು ಕಾನೂನಾತ್ಮವಾಗಿ ಇನ್ನು ಕೂಡ ವಿಚ್ಛೇದನ ಪಡೆದಿಲ್ಲ. ಹಾಗಾಗಿ ಜನರು ಅವರಿಗೆ ಇಷ್ಟಬಂದ ಹಾಗೆ ತಮ್ಮ ಬದುಕಿನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು ಎಂದಿದ್ದಾರೆ ನಟಿ ವೀಣಾ. ಹಾಗೆಯೇ ಅವರಿಬ್ಬರ ನಡುವೆ ಇರುವ ಸಮಸ್ಯೆಗೆ ಬಿಗ್ ಬಾಸ್ ಶೋ ಕಾರಣವಲ್ಲ ಎಂದು ಕೂಡ ಸ್ಪಶ್ಟನೆ ನೀಡಿದ್ದಾರೆ. ಮುಂದೆ ಅವರ ಬದುಕು ಹೇಗೆ ಬೇಕಾದರು ಆಗಬಹುದು. ಹಾಗಾಗಿ ಜನರು ಯಾವುದೇ ವ್ಯಕ್ತಿಯ ವೈಯಕ್ತಿಕ ಜೀವನದ ಬಗ್ಗೆ ಯಾರೇ ಆದರೂ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಗೊತ್ತಿಲ್ಲದ ವಿಷಯಗಳ ಬಗ್ಗೆ ಮಾತನಾಡುವುದು ತಪ್ಪು, ಅವರ ಬದುಕಿನಲ್ಲಿ ಏನಾಗಿರುತ್ತದೆ ಎನ್ನುವುದು ಅವರಿಗೆ ಮಾತ್ರ ಗೊತ್ತಿರುತ್ತದೆ.

ವಿಚ್ಛೇದನದ ವದಂತಿ ಬಗ್ಗೆ ಮಾತ್ರವಲ್ಲದೇ, ತಮಗೆ ಬರುವ ಬಾಡಿ ಶೇಮಿಂಗ್ ಕಾಮೆಂಟ್ಸ್ ಗಳ ಬಗ್ಗೆ ಕೂಡ ವೀಣಾ ಅವರು ಮಾತನಾಡಿದ್ದಾರೆ. ಕೆಲವು ಜನರು ತಮ್ಮ ದೇಹದ ತೂಕ ಹೆಚ್ಚಾಗಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೇರವಾಗಿ ಪ್ರಶ್ನೆ ಮಾಡುತ್ತಾರೆ, ಅದರ ಬಗ್ಗೆ ಬೇರೆ ರೀತಿಯಲ್ಲಿ ಕೇಳೋದು, ಮಾತನಾಡೋದು ಮಾಡುತ್ತಾರೆ, ನನಗೆ ಇದು ಮೊದಲಲ್ಲ ಈ ಹಿಂದೆ ಕೂಡ ನನ್ನ ದೇಹದ ತೂಕದ ಬಗ್ಗೆ ಮಾತನಾಡಿದ್ದಾರೆ, 20 ಕೆಜಿ ಸಣ್ಣ ಆದಾಗಲು ಮಾತನಾಡಿದ್ದಾರೆ. ನಾನು ದಪ್ಪ ಇದ್ದೆ ಎಂದು ಸ್ಕೂಲ್ ನಲ್ಲಿ ಓದುವಾಗ ಕೂಡ ನನ್ನ ಬಗ್ಗೆ ತಮಾಷೆ ಮಾಡುತ್ತಿದ್ದರು. ಮಾತನಾಡೋರು ಮಾತನಾಡಲಿ ಬಿಡಿ ಎಂದು ಹೇಳಿದ್ದಾರೆ ನಟಿ ವೀಣಾ ನಾಯರ್. ಒಟ್ಟಿನಲ್ಲಿ ಬಣ್ಣದ ಬದುಕಿನಲ್ಲಿ ಇರುವವರ ಬಗ್ಗೆ ಎಲ್ಲರೂ ಸುಲಭವಾಗಿ ಮಾತನಾಡುತ್ತಾರೆ.