ಇತ್ತೀಚೆಗೆ ಕೆಲವು ತಿಂಗಳುಗಳಿಂದ “ರಣಬೀರ್ ಹಾಗೂ ಅಲಿಯಾ ಭಟ್” ಅವರದ್ದೇ ಸುದ್ದಿ. ತಮ್ಮ ಮದುವೆಯನ್ನು ತಮ್ಮ ಮನೆಯಲ್ಲಿ ನಿರವೇರಿಸಿ ಕೊಂಡ ದಿನದಿಂದಲು ನಂತರ ಕೇವಲ ಎರಡು ತಿಂಗಳಿಗೆ ರಣಬೀರ್ ಹಾಗೂ ಅಲಿಯಾ ತಮ್ಮ ಬಾಳಿನಲ್ಲಿ ಹೊಸ ಅತಿಥಿಯ ಅಗಮನವಾಗುತ್ತಿರುವ ವಿಚಾರ ಖುಷಿಯ ಜೊತೆಗೆ ಅಚ್ಚರಿ ಕೂಡ ವ್ಯಕ್ತಪಡಿಸಿದ್ದರು.ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅಲಿಯಾ ಭಟ್ ತಮ್ಮ ಮಗಳ ಲಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲಿಯಾ ಹಾಗೂ ರಣಬೀರ್ ನಟನೆಯ “ಬ್ರಹ್ಮಸ್ತಾ” ಚಿತ್ರ ಕೂಡ ದೊಡ್ಡ ಮಟ್ಟದ ಗೆಲವು ಪಡೆದುಕೊಂಡಿತ್ತು.ಅದಾದ ನಂತರ ಸದ್ಯದಲ್ಲಿ ರಣಬೀರ್ ಕಪೂರ್ ಸದ್ಯದಲ್ಲಿ “ರಶ್ಮಿಕಾ ಮಂದಣ್ಣ” ಅವರೊಟ್ಟಿಗೆ ನಟಿಸುತ್ತಿರುವ ‘ಅನಿಮಲ್’ ಚಿತ್ರದ ಶೂಟಿಂಗ್ ಬೈಸಿಯಲ್ಲಿ ಇದ್ದಾರೆ.ಈ ವಿಚಾರವನೆಲ್ಲಾ ಹೊರತು ಪಡಿಸಿ ರಣಬೀರ್ ಇದೀಗ ಮತ್ತೊಂದು ವಿಚಾರದಲ್ಲಿ ಬಹಳ ಸದ್ದು ಮಾಡುತ್ತಿದ್ದಾರೆ.ಆ ವಿಚಾರ ಯಾವುದೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.

ರಣಬೀರ್ ಹಾಗೂ ಅಲಿಯಾ ತಮ್ಮ ನೂತನ ಜೀವನಕ್ಕಾಗಿ “ಮುಂಬೈನ ಪಾಲಿ ಹಿಲ್ಸ್ನಲ್ಲಿ” ಹೊಸದೊಂದು ಮನೆ ಕಟ್ಟಿಸುತ್ತಿದ್ದು ಆಗಾಗ್ಗೆ ಸೈಟ್ ನತ್ತಾ ಆಗಾಗ ತೆರಳುತ್ತಿರುತ್ತಾರೆ.ಹೀಗೆ ತಮ್ಮ ಬಿಡುವಿನ ಸಮಯದಲ್ಲಿ ಮೊನ್ನೆಯಷ್ಟೇ ತಮ್ಮ ಮನೆಯನ್ನು ವೀಕ್ಷಿಸಲು ಹೋದ ರಣಬೀರ್ ಕಪೂರ್ ಅವರ ವ್ಯವಸ್ಥೆ ಎಲ್ಲರ ಉಬ್ಬೇರಿಸುವಂತೆ ಮಾಡಿದೆ.ಅಷ್ಟಕ್ಕೂ ಅಲ್ಲಿ ಏನಾಯಿತು ಎಂದು ನಿಮ್ಮಲ್ಲಿ ಹಲವಾರು ಪ್ರಶ್ನೆ ಮೂಡುತ್ತಿದೆ ಎಂದು ನಮಗೆ ತಿಳಿದಿದೆ.ನಿಮೇಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆಯಲು ಮುಂದಿನ ಸಾಲುಗಳನ್ನು ಓದಿ.
ಸೆಲಬ್ರೆಟಿ ಎಂದ ಕೂಡಲೇ ಎಲ್ಲವೂ ದುಬಾರಿ.ದುಬಾರಿಯಾದ ವಸ್ತು ಎಲ್ಲವನ್ನು ನಾವು ಸೆಲಬ್ರೆಟಿ ಮನೆಯಲ್ಲಿ ನಾವು ನೋಡಬಹುದು.ಕೇವಲ ಬಟ್ಟೆ ಗಳಿಗೆ ಸಾವಿರಕ್ಕೂ ಹೆಚ್ಚು ಖರ್ಚು ಮಾಡುವ ಈ ಸೆಲಬ್ರೆಟಿಗಳು ಎಷ್ಟು ದುಬಾರಿ ಎಂದು ನಾವು ಸಂಶಿಪ್ತವಾಗಿ ವಿವರಿಸಬೇಕಾಗಿಲ್ಲ.ಇದೀಗ ಅಂತಹದ್ದೇ ಒಂದು ವಿಚಾರಕ್ಕೆ ರಣಬೀರ್ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸುದ್ದಿಯಾಗುತ್ತಿದ್ದಾರೆ. ತಮ್ಮ ಮನೆಯನ್ನು ವೀಕ್ಷಿಸಲು ಪ್ರತಿ ಬಾರಿ ದುಬಾರಿ ಕಾರಿನಲ್ಲಿ ಬರುತ್ತಿದ್ದ ರಣಬೀರ್ ಈ ಬಾರಿ ಸೈಕಲ್ ನಲ್ಲಿ ಬಂದಿದ್ದಾರೆ.
ಇ-ಸೈಕಲ್ನಲ್ಲಿಯೇ ಸೈಟ್ಗೆ ರಣ್ಬೀರ್ ಕಪೂರ್ ಹೊಸ ಮನೆಯ ಬಳಿ ಬಂದಿದ್ದಾಗ ಫೋಟೊಗ್ರಾಫರ್ಗಳ ಕಣ್ಣಿಗೆ ಬಿದ್ದಿದ್ದಾರೆ. ಜೀನ್ಸ್, ಟಿ-ಶರ್ಟ್ ಹಾಗೂ ನೀಲಿ ಬಣ್ಣದ ಟೋಪಿ ತೊಟ್ಟು ಫಂಕಿ ಲುಕ್ನಲ್ಲಿ ಸೈಕಲ್ ಮೇಲೆ ಬಂದಿದ್ದ ರಣ್ಬೀರ್ ಕಪೂರ್ ಫ್ಯಾಷನ್ ಪ್ರಿಯರ ಗಮನ ಸೆಳೆದಿದ್ದರು. ಆದರೆ ಎಲ್ಲಕ್ಕಿಂತಲೂ ಹೆಚ್ಚು ಗಮನ ಸೆಳೆದಿದ್ದು ರಣ್ಬೀರ್ ಕಪೂರ್ರ ಇ-ಸೈಕಲ್.ಇನ್ನು ಈ ಸೈಕಲ್ ನ ಬೆಲೆ ಬರೋಬ್ಬರಿ 1ಲಕ್ಷಕ್ಕೂ ಅಧಿಕವಾಗಿದ್ದು.ಈ ಸೈಕಲ್ ಗಾಡಿಗಳಂತೆ ದೊಡ್ಡ ಟಯರ್ ಹೊಂದಿದ್ದು.ಈ ಸೈಕಲ್ನನ್ನು ಮಡಚಿ ಕೂಡ ಇಡಬಹುದಾಗಿದೆ.ಈ ಬೆಲೆಗೆ ನಮ್ಮ ಭಾರತದಲ್ಲಿ ಮೋಟಾರ್ ಗಳು ಬರುತ್ತಿದ್ದವು ಎಂದು ಸಾಕಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



