ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿರುವವರು ನಟ ರಮೇಶ್ ಅರವಿಂದ್. 80ರ ದಶಕದ ಕೊನೆಯ ಸಮಯದಿಂದಲು ಸಹ ರಮೇಶ್ ಅರವಿಂದ್ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಕನ್ನಡ, ತಮಿಳು, ತೆಲುಗು ಈ ಮೂರು ಭಾಷೆಗಳಲ್ಲಿ ಸಹ ರಮೇಶ್ ಅರವಿಂದ್ ಅವರು ನಟನಾಗಿ ಗುರುತಿಸಿಕೊಂಡಿದ್ದು, ಇವರಿಗೆ ಇವತ್ತಿಗೂ ಸಹ ಚಿತ್ರರಂಗದಲ್ಲಿ ಇರುವ ಕ್ರೇಜ್ ಕಡಿಮೆ ಆಗಿಲ್ಲ. ರಮೇಶ್ ಅರವಿಂದ್ ಅವರು ಸ್ಟಾರ್ ಹೀರೋ, ಒಬ್ಬ ನಟನಾಗಿ ಇವರ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ರಮೇಶ್ ಅರವಿಂದ್ ಅವರ ಕುಟುಂಬ ಹೇಗಿದೆ? ಅವರ ಪತ್ನಿ ಮತ್ತು ಮಕ್ಕಳು ಯಾರು ಗೊತ್ತಾ?

ನಟ ರಮೇಶ್ ಅರವಿಂದ್ ಅವರು ಚಂದನವನದ ಸ್ಟಾರ್ ಹೀರೋ, ಇವರ ಬಗ್ಗೆ ಗೊತ್ತಿಲ್ಲದವರು ಇರುವುದಿಲ್ಲ. ಎಲ್ಲಾ ಜೆನೆರೇಷನ್ ನವರು ಕೂಡ ಮೆಚ್ಚಿಕೊಳ್ಳುವ ಹೀರೋ ರಮೇಶ್ ಅರವಿಂದ್ ಅವರು. ಒಬ್ಬ ನಟನಾಗಿ ಮಾತ್ರವಲ್ಲದೇ, ನಿರ್ದೇಶಕನಾಗಿ, ಬರಹಗಾರನಾಗಿ, ಅಷ್ಟೇ ಅಲ್ಲದೇ ಒಂದು ಕಾರ್ಯಕ್ರಮದ ನಿರೂಪಕರಾಗಿ ಈ ರೀತಿ ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಇವರು ಒಬ್ಬ ಮೋಟಿವೇಶನಲ್ ಸ್ಪೀಕರ್ ಕೂಡ ಹೌದು. ಹೀಗೆ ಹಲವು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಹ ಹೆಸರು ಮಾಡಿ, ಸಕ್ಸಸ್ ಕಂಡಿದ್ದಾರೆ ನಟ ರಮೇಶ್ ಅರವಿಂದ್..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇನ್ನು ಇವರ ಎವರ್ ಗ್ರೀನ್ ಸಿನಿಮಾಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸುಂದರ ಸ್ವಪ್ನಗಳು, ನಮ್ಮೂರ ಮಂದಾರ ಹೂವೆ, ಪಂಚಮವೇದ, ಅರಗಿಣಿ, ಅಮೃತವರ್ಷಿಣಿ, ಶ್ರೀಗಂಧ, ಅನುರಾಗ ಸಂಗಮ, ಹೂಮಳೆ ಹೀಗೆ ಒಂದಾ ಎರಡಾ ಹತ್ತು ಹಲವು ಸಿನಿಮಾಗಳಿವೆ ಲಿಸ್ಟ್ ನಲ್ಲಿ. ಈ ಸಿನಿಮಾಗಳನ್ನು ಇವತ್ತಿಗೂ ಸಹ ಯಾರು ಕೂಡ ಮರೆತಿಲ್ಲ. ಟಿವಿಯಲ್ಲಿ ಬಂದಾಗಲೂ ಕೂಡ ಮಿಸ್ ಮಾಡದೇ ನೋಡುತ್ತಾರೆ. ರಮೇಶ್ ಅರವಿಂದ್ ಅವರು ನಿರ್ದೇಶಕನಾಗಿ ಕೂಡ ಕೆಲವು ಸಿನಿಮಾಗಳನ್ನು ನಿರ್ದೇಶಿಸಿ ಹೆಸರು ಮಾಡಿದ್ದಾರೆ. ರಾಮ ಶಾಮ ಭಾಮ ಸಿನಿಮಾದಲ್ಲಿ ಕಮಲ್ ಹಾಸನ್ ಅವರನ್ನು ಕನ್ನಡಕ್ಕೆ ಕರೆತಂದು, ಅವರಿಂದ ಕನ್ನಡದಲ್ಲಿ ಡಬ್ಬಿಂಗ್ ಮಾಡಿಸಿದ್ದರು.

ತಮಿಳಿನಲ್ಲಿ ಉತ್ತಮ ವಿಲ್ಲನ್ ಎನ್ನುವ ಸಿನಿಮಾವನ್ನು ಕೂಡ ನಿರ್ದೇಶನ ಮಾಡಿದರು. ಹಾಗೆಯೇ ಕೆಲವು ಸಿನಿಮಾಗಳಲ್ಲಿ ಬರಹಗಾರರಾಗಿ ಕೂಡ ಕೆಲಸ ಮಾಡಿದ್ದಾರೆ. ಇನ್ನು ರಮೇಶ್ ಅರವಿಂದ್ ಅವರು ಈಗಲೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳದೇ, ಮುಖ್ಯ ಪಾತ್ರಗಳಲ್ಲಿ ಹೀರೋ ಆಗಿಯೇ ನಟಿಸುತ್ತಿರುವುದು ಮತ್ತೊಂದು ವಿಶೇಷ. ಅವರ ವಯಸ್ಸಿನ ಕಲಾವಿದರಿಗೆ ಹೆಚ್ಚಾಗಿ ಸಿಗುವುದು ಪೋಷಕ ಪಾತ್ರಗಳು ಆದರೆ ಇವರಿಗೆ ಈಗಲೂ ಒಳ್ಳೊಳ್ಳೆಯ ಕಥಾಪಾತ್ರಗಳೇ ಸಿಗುತ್ತಿದೆ. ಆ ರೀತಿ ತಮ್ಮ ಇಮೇಜ್ ಅನ್ನು ಬೆಳೆಸಿಕೊಂಡು, ಉಳಿಸಿಕೊಂಡು ಬಂದಿದ್ದಾರೆ ನಟ ರಮೇಶ್ ಅರವಿಂದ್.
ಒಬ್ಬ ಕಲಾವಿದನಾಗಿ ಎಲ್ಲರಿಗೂ ಇವರ ಬಗ್ಗೆ ಗೊತ್ತಿದೆ.. ಆದರೆ ಇವರ ಕುಟುಂಬದ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ರಮೇಶ್ ಅರವಿಂದ್ ಅವರದ್ದು ಲವ್ ಮ್ಯಾರೇಜ್, ಅವರು ಮದುವೆ ಆಗಿರುವವರ ಹೆಸರು ಅರ್ಚನಾ. ಈ ಜೋಡಿ ಹಲವು ವರ್ಷಗಳಿಂದ ಸುಂದರವಾದ ದಾಂಪತ್ಯ ಜೀವನ ನಡೆಸುತ್ತಾ ಬಂದಿದ್ದಾರೆ. ಇವರಿಗೆ ಇಬ್ಬರು ಮಕ್ಕಳು ಒಬ್ಬ ಮಗ ಹಾಗೂ ಒಬ್ಬಳು ಮಗಳು. ಇತ್ತೀಚಿನ ವರ್ಷಗಳಲ್ಲಿ ಮಗಳಿಗೆ ಮದುವೆಯನ್ನು ಸಹ ಮಾಡಿದರು ನಟ ರಮೇಶ್ ಅರವಿಂದ್. ಇವರ ಮಕ್ಕಳಾಗಲಿ, ಪತ್ನಿಯಾಗಲಿ ಹೆಚ್ಚಾಗಿ ಮಾಧ್ಯಮದ ಎದುರು ಕಾಣಿಸಿಕೊಳ್ಳುವುದಿಲ್ಲ. ಬಹಳ ಒಳ್ಳೆಯ ಕುಟುಂಬ ರಮೇಶ್ ಅರವಿಂದ್ ಅವರದ್ದು.