ಸೋಷಿಯಲ್ ಮೀಡಿಯಾದಲ್ಲಿ ನಟ ಯುವರಾಜ್ ಕುಮಾರ್ಗೆ ಸಂಬಂಧಿಸಿದ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಮತ್ತು ಯುವ ಅಭಿಮಾನಿಗಳು ಏನಾಯ್ತು ಅಂತ ತಲೆ ಕೆಡಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ವೈರಲ್ ವಿಡಿಯೋದಲ್ಲಿರುವುದೇನು.? ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

ಹತ್ತಾರು ಪೊಲೀಸರು ನಡುರಸ್ತೆಯಲ್ಲೇ ಯುವ ರಾಜ್ಕುಮಾರ್ ಅವರನ್ನ ಎಳೆದುಕೊಂಡು ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಈ ವೇಳೆ ಯುವ ಮೈ ರಕ್ತಸಿಕ್ತವಾಗಿದ್ದನ್ನು ಕಾಣಬಹುದು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿ ಯುವ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ.
ಈ ವೈರಲ್ ವಿಡಿಯೋ ಯುವ 2 ಶೂಟಿಂಗ್ ವೇಳೆ ತೆಗೆದ ವಿಡಿಯೋ ಎಂದು ಹೇಳಲಾಗುತ್ತಿದೆ.. ಇತ್ತೀಚಿಗೆ ಪಿಆರ್ಕೆ ಪ್ರೊಡಕ್ಷನ್ನಲ್ಲಿ ಯುವನ ಎರಡನೇ ಚಿತ್ರ ಮೂಡಿ ಬರುತ್ತಿದೆ. ಆಯುಧ ಪೂಜೆಯ ಶುಭ ಸಂದರ್ಭ ಯುವ ರಾಜ್ಕುಮಾರ್ ಎರಡನೇ ಸಿನಿಮಾದ ಅಪ್ಡೇಟ್ ಹೊರ ಬಿದ್ದಿತ್ತು..
ಪಿಆರ್ಕೆ ಬ್ಯಾನರ್ ಜೊತೆ ಕೆ.ಆರ್.ಜಿ ಸ್ಟುಡಿಯೋದ ಕಾರ್ತಿಕ್, ಯೋಗಿ ಜಿ.ರಾಜ್ ಹಾಗೂ ನಿರ್ಮಾಪಕ ಜಯಣ್ಣ ಯುವ 2ಗೆ ಕೈ ಜೋಡಿಸಿದ್ದಾರೆ. ಅಲ್ಲದೆ, ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಪೋಸ್ಟರ್ ಸಹ ಕುತೂಹಲ ಹುಟ್ಟಿಸಿತ್ತು.. ಇದೀಗ ಯುವ 2 ಚಿತ್ರದ ಶೂಟಿಂಗ್ ವೇಳೆ ತೆಗೆದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ