ಬಿಗ್ ಬಾಸ್ ಕನ್ನಡ ಸೀಸನ್ 11 ಇದೀಗ ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಫಿನಾಲೆ ಸಂಚಿಕೆ ನಡೆಯಲಿದ್ದು, ಈ ಸೀಸನ್ ನಲ್ಲಿ ವಿನ್ನರ್ ಆಗೋದು ಯಾರು ಎನ್ನುವ ಕುತೂಹಲ ಶುರುವಾಗಿದೆ. ಅದೇ ರೀತಿ ಈ ಸೀಸನ್ ನಲ್ಲಿ ಹೆಚ್ಚು ಜನಪ್ರಿಯತೆ ಪಡೆದು, ಮನೆಯವರಿಗೆ ಮಾತ್ರವಲ್ಲದೇ ಹೊರಗಿನ ಜನಕ್ಕೆ ಸಹ ಬಹಳ ಹತ್ತಿರ ಆದ ಸ್ಪರ್ಧಿಗಳಲ್ಲಿ ಐಶ್ವರ್ಯ ಸಿಂಧೋಗಿ ಮೊದಲಿಗರು ಎಂದರೆ ತಪ್ಪಲ್ಲ. ಇವರು ಬಿಗ್ ಬಾಸ್ ಮನೆಯಿಂದ ಹೊರಬರುವಾಗ ಬಿಗ್ ಬಾಸ್ ಇಂದ ಅವರಿಗೆ ಸಿಕ್ಕ ಬೀಳ್ಕೊಡುಗೆ, ಜನರಿಂದ ಸಿಕ್ಕ ಪ್ರೀತಿ ಇದೆಲ್ಲವೂ ಸಹ ಮರೆಯುವಂಥದ್ದಲ್ಲ. ಜನರು ಸಹ ಐಶ್ವರ್ಯ ಅವರಿಗೆ ಅಷ್ಟೇ ಪ್ರೀತಿ ಕೊಡುತ್ತಿದ್ದಾರೆ..

ಹಾಗೆಯೇ ಐಶ್ವರ್ಯ ಸಿಂಧೋಗಿ ಅವರು ಹೊರಗಡೆ ಬಂದ ನಂತರ ಅವರಿಗೆ ಜನರ ಪ್ರೀತಿ ಸಹ ಹೆಚ್ಚಾಗಿ ಸಿಗುತ್ತಿದೆ. ತಂದೆ ತಾಯಿ ಇಬ್ಬರನ್ನು ಕಳೆದುಕೊಂಡು ಒಂಟಿಯಾಗಿರುವ ಐಶ್ವರ್ಯ ಅವರನ್ನು ಇಡೀ ಕರ್ನಾಟಕದ ಜನತೆ ತಮ್ಮ ಮನೆಯ ಮಗಳು ಐಶ್ವರ್ಯ ಎಂದು ಅಪ್ಪಿ ಒಪ್ಪಿಕೊಂಡಿದ್ದಾರೆ. ಇದರಿಂದ ಐಶ್ವರ್ಯ ಅವರಿಗೆ ಇಡೀ ಕುಟುಂಬ ಸಿಕ್ಕ ಹಾಗೆ ಆಗಿದೆ ಎಂದು ಹೇಳಬಹುದು. ಬಿಗ್ ಬಾಸ್ ಇಂದ ಅವರಿಗೆ ಕುಟುಂಬವೇ ಸಿಕ್ಕ ಹಾಗೆ ಆಗಿದೆ. ಇನ್ನು ಹೊರಗಡೆ ಬಂದ ಮೇಲೆ ಐಶ್ವರ್ಯ ಅವರು ಇಂಟರ್ವ್ಯೂಗಳಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಒಳ್ಳೇ ಕೆಲಸಗಳನ್ನು ಸಹ ಮಾಡುತ್ತಿದ್ದಾರೆ.
ಈ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಐಶ್ವರ್ಯ. ವೃದ್ಧಾಶ್ರಮಕ್ಕೆ ಭೇಟಿ ನೀಡಿ, ಅಲ್ಲಿ ಎಲ್ಲಾ ಹಿರಿಯರಿಗೆ ಊಟ ಬಡಿಸಿ, ಅವರ ಜೊತೆಗೆ ಸಮಯ ಕಳೆದಿದ್ದಾರೆ. ಆಸರೆ ವೃದ್ಧಾಶ್ರಮದಲ್ಲಿ ಐಶ್ವರ್ಯ ಅವರು ಹೊಸ ವರ್ಷದ ಆಚರಣೆ ಮಾಡಿದ್ದಾರೆ. ಅದೇ ದಿನ ಗೋಲ್ಡ್ ಸುರೇಶ್ ಅವರು ಸಹ ಬಂದಿದ್ದು, ಐಶ್ವರ್ಯ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ. ಇಬ್ಬರು ಸಹ ಸಂತೋಷದಿಂದ ಹೊಸ ವರ್ಷ ಆಚರಣೆ ಮಾಡಿದ್ದಾರೆ. ಆಶ್ರಮದಲ್ಲಿ ಕೇಕ್ ಕಟ್ ಮಾಡಿ, ತೃಪ್ತಿಯ ಜೊತೆಗೆ ಹೊಸ ವರ್ಷದ ಆಚರಣೆ ಮಾಡಲಾಗಿದೆ. ಜೊತೆಗೆ ಅಲ್ಲಿನ ಸಿಬ್ಬಂದಿಗಳು ಸಹ ಐಶ್ವರ್ಯ ಅವರಿಗೆ ಮತ್ತು ಸುರೇಶ ಅವರಿಗೆ ಸನ್ಮಾನ ಮಾಡಿದ್ದಾರೆ.

ಜೊತೆಗೆ ಐಶ್ವರ್ಯ ಅವರಿಗೆ ಬಾಗಿನ ನೀಡಿ ಮನೆಯ ಮಗಳ ಹಾಗೆ ನೋಡಿಕೊಳ್ಳಲಾಗಿದೆ. ಬಿಗ್ ಬಾಸ್ ಇಂದ ಹೊರಗಡೆ ಬಂದ ನಂತರ ಐಶ್ವರ್ಯ ಅವರಿಗೆ ಇದು ಹೊಸ ಬದುಕು ಎಂದು ಹೇಳಬಹುದು. ಸಿನಿಮಾ ಧಾರಾವಾಹಿ ಇದೆಲ್ಲವೂ ಜನಪ್ರಿಯತೆ ತಂದುಕೊಟ್ಟಿತು, ಆದರೆ ನಿಜವಾದ ಪ್ರೀತಿ ಜನರಿಂದ ಸಿಗುತ್ತಿರುವುದು ಬಿಗ್ ಬಾಸ್ ಇಂದ ಎಂದರೆ ತಪ್ಪಲ್ಲ. ಐಶ್ವರ್ಯ ಅವರಿಗೆ ಅಷ್ಟು ಪ್ರೀತಿ, ವಿಶ್ವಾಸ, ಪ್ರೋತ್ಸಾಹ ಎಲ್ಲವನ್ನು ಈ ಶೋ ತಂದು ಕೊಟ್ಟಿದೆ. ಖುದ್ಧು ಬಿಗ್ ಬಾಸ್ ಕೂಡ ತವರು ಮನೆಯಿಂದ ಮಗಳನ್ನು ಕಳಿಸಿ ಕೊಡುತ್ತಿರುವುದಾಗಿ ಹೇಳಿ, ವಿಶೇಷ ಪತ್ರ ಬರೆದು ಐಶ್ವರ್ಯ ಅವರನ್ನು ಕಳಿಸಿ ಕೊಟ್ಟರು..

ಐಶ್ವರ್ಯ ಅವರಿಗೆ ಸಹ ಬಿಗ್ ಬಾಸ್ ಬಗ್ಗೆ ಮತ್ತು ಸುದೀಪ್ ಅವರ ಬಗ್ಗೆ ಅಷ್ಟೇ ಪ್ರೀತಿ ವಿಶ್ವಾಸ ಇದೆ. ಬಿಗ್ ಬಾಸ್ ಮನೆ ದೇವಸ್ಥಾನ, ನೀವು ಮತ್ತು ಬಿಗ್ ಬಾಸ್ ಇಬ್ಬರು ನನಗೆ ದೇವರ ಹಾಗೆ ಎಂದು ಸುದೀಪ್ ಅವರ ಎದುರು ಹೇಳಿದರು ಐಶ್ವರ್ಯ. ಒಂಟಿಯಾಗಿದ್ದ ಹುಡುಗಿಗೆ ಈಗ ಇಡೀ ರಾಜ್ಯವೇ ಆಕೆಯನ್ನು ಮಗಳ ಹಾಗೆ ನೋಡಿಕೊಳ್ಳುತ್ತಿದೆ. ಇನ್ನು ಮುಂದೆ ಅವರಿಗೆ ಒಳ್ಳೆಯ ಧಾರಾವಾಹಿ ಅವಕಾಶಗೂ ಮತ್ತು ಸಿನಿಮಾ ಅವಕಾಶಗಳು ಸಿಕ್ಕಿ, ಐಶ್ವರ್ಯ ಅವರಿಗೆ ಎಲ್ಲವೂ ಒಳ್ಳೆಯದಾಗಲಿ ಎನ್ನುವುದು ಜನರ ಆಸೆ ಆಗಿದೆ. ಐಶ್ವರ್ಯ ಅವರ ಮುಂದಿನ ಜೀವನ, ಭವಿಷ್ಯ ಅದ್ಭುತವಾಗಿ ಇರಲಿ..



