ಕಿರುತೆರೆ ಇತಿಹಾಸದಲ್ಲಿ ನಾಡಿನ ಜನ ಹೆಚ್ಚು ಮೆಚ್ಚಿಕೊಂಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಕಿಚ್ಚಾ ಸುದೀಪ್ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಮಾಡುತ್ತಾರೆ. ಈ ಕಾರ್ಯಕ್ರಮದಲ್ಲಿ ತೆರೆ ಮೇಲೆ ಕಂಡ ರೀಲ್ ಸ್ಟಾರ್ ಗಳ ರೀಯಲ್ ಜೀವನ, ಸಂಬಂಧ, ಗಲಾಟೆ, ವಿವಿಧ ಟಾಸ್ಕ್ ,ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಜನ ಕಾತುರರಾಗಿರುತ್ತಾರೆ. ಇದೀಗ ಬಿಗ್ ಬಾಸ್ ಒಟಿಟಿ ಸೀಸನ್-2 ಆರಂಭವಾಗಲಿದೆ. ಈ ಬಾರಿ ಯಾವೆಲ್ಲ ಸೆಲೆಬ್ರಿಟಿಗಳು ಸ್ಪರ್ಧಿಸಲಿದ್ದಾರೆ ಗೊತ್ತಾ?

ಬಿಗ್ ಬಾಸ್ ಒಟಿಟಿ ಸೀಸನ್-2 ಇದೇ ಸೆಪ್ಟೆಂಬರ್ 30 ರಿಂದ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.ಇನ್ನು ಬಿಗ್ ಬಾಸ್ ಸೀಸನ್ 10 ಕೂಡ ಆದಷ್ಟು ಬೇಗ ಆರಂಭವಾಗಲಿದ್ದು ಇದಕ್ಕೂ ಕೂಡ ಸೂಕ್ತ ಸ್ಪರ್ಧಿಗಳನ್ನು ಹುಡುಕಲಾಗುತ್ತಿದೆಯಂತೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರ ಬಂದಿಲ್ಲ.
ಈ ಬಾರಿಯ ಬಿಗ್ ಬಾಸ್ ಒಟಿಟಿ ಸೀಸನ್-2ರಲ್ಲಿ ‘ರಾಬರ್ಟ್’ ಚಿತ್ರದ ನಾಯಕಿ ಆಶಾ ಭಟ್, ‘ಹುಚ್ಚ’ ಸಿನಿಮಾ ನಟಿ ರೇಖಾ, ರೀಲ್ಸ್ ಮಾಡಿ ಖ್ಯಾತಿ ಗಳಿಸಿದ ಭೂಮಿಕ ಬಸವರಾಜ್ ಸೇರಿದಂತೆ ಹಲವು ಸ್ಪರ್ಧಿಗಳು ಸ್ಪರ್ಧಿಸಲಿದ್ದಾರಂತೆ. ಆದರೆ ಕಲರ್ಸ್ ಕನ್ನಡ ವಾಹಿನಿ ಇನ್ನೂ ಕೂಡ ಅಧಿಕೃತವಾಗಿ ಸ್ಪರ್ಧಿಗಳ ಹೆಸರು ಅಥವಾ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ ಕಾರ್ಯಕ್ರಮ ಸೆ.30ಕ್ಕೆ ಆರಂಭವಾಗುವುದು ಪಕ್ಕಾ ಎನ್ನಲಾಗುತ್ತಿದೆ.