ದೇಹ ಫಿಟ್ ಆಗಿದ್ದರೆ ಮಾತ್ರ ಕ್ರಿಕೆಟಿಗರಿಗೆ ಭವಿಷ್ಯ ಎಂಬುದು ಜಾಗತೀಕ ಕ್ರಿಕೆಟ್ ವಲಯದಲ್ಲಿ ಅದೆಷ್ಟೋ ಬಾರಿ ಸಾಬೀತಾಗಿದೆ. ಟೀಂ ಇಂಡಿಯಾದ ರನ್ ಮಷಿನ್, ಕಿಂಗ್ ಕೊಹ್ಲಿಯಂತೂ ಫಿಟ್ನೆಸ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಮೈದಾನದಲ್ಲಿರುವಂತೆಯೇ ಕೊಹ್ಲಿ ಫಿಟ್ನೆಸ್ ವಿಚಾರದಲ್ಲೂ ಕಟ್ಟುನಿಟ್ಟಾಗಿರುತ್ತಾರೆ. ವಾರದ 5 ದಿನ ಕಿಂಗ್ ವರ್ಕೌಟ್ ಮಿಸ್ ಮಾಡೊದಿಲ್ಲ.

ಕೊಹ್ಲಿ ವರ್ಕೌಟ್ ರಹಸ್ಯ!
ವಾರ್ಮಪ್ ರನ್ನಿಂಗ್ ಮೂಲಕ ವರ್ಕೌಟ್ ಶುರು ಮಾಡುವ ಕೊಹ್ಲಿ ದೇಹ ಬಿಸಿ ಏರಿದ ಬಳಿಕ ವೇಟ್ಲಿಫ್ಟಿಂಗ್, ಪವರ್ ಸ್ನ್ಯಾಚ್, ಪವರ್ ಕ್ಲೀನ್, ಸ್ಟಾರ್ಟರ್ ಲೆವೆಲ್ನಂತಹ ವರ್ಕೌಟ್ ನಡೆಸ್ತಾರೆ. ಆ ಬಳಿಕ ಬ್ಯಾಂಡೆಡ್ ಸ್ಕ್ವಾಟ್ಸ್, ಫ್ಲಾಟ್ ಬೆಂಚ್ ಪ್ರೆಸ್, ಸಿಟ್ಟೆಡ್ ಲೆಗ್ ಎಕ್ಸ್ಟೆಂಕ್ಷನ್ ನಂಥಹ ವಿವಿಧ ರೀತಿಯ ವರ್ಕೌಟ್ಗಳನ್ನ ವಾರಕ್ಕೆ ಐದು ದಿನ ಕಟ್ಟುನಿಟ್ಟಾಗಿ ಮಾಡ್ತಾರೆ.
ಏನೇನ್ ತಿಂತಾರೆ ಗೊತ್ತಾ ಕೊಹ್ಲಿ!
ಮಸಾಲೆ ಮುಕ್ತ ಪೌಷ್ಟಿಕಾಂಶ ಆಹಾರವನ್ನೇ ಕೊಹ್ಲಿ ಸೇವಿಸುತ್ತಾರೆ. ಬೆಳಗ್ಗಿನ ಹೊತ್ತು ಬೇಯಿಸಿದ ತರಕಾರಿ, ಹಣ್ಣುಗಳು, ಆಮ್ಲೆಟ್, ಮೊಟ್ಟೆ, ಸಲಾಡ್, ಪನ್ನಿರ್ ಸಲಾಡ್, ಚೀಸ್ ತಿನ್ನುವ ಕೊಹ್ಲಿ. ಮಧ್ಯಾಹ್ನ ಪ್ರೊಟೀನ್ ಶೇಕ್, ನಟ್ಸ್, ತರಕಾರಿ, ಬ್ರೌನ್ ಬ್ರೆಡ್, ಫ್ರೂಟ್ಸ್ & ವೆಜಿಟೆಬಲ್ ಸಲಾಡ್ ಹಾಗೂ ರಾತ್ರಿ ದಾಲ್, ರೊಟ್ಟಿ, ಸಬ್ಜಿ, ಬ್ಲ್ಯಾಕ್ ಕಾಫಿ ಸೇವಿಸುತ್ತಾರೆ. ಜೊತೆಗೆ
ವರ್ಕೌಟ್ ಬಳಿಕ ಪ್ರೊಟಿನ್ ಶೇಕ್, ಸೋಯಾ ಮಿಲ್ಕ್ ಹಾಗೂ ದಿನಕ್ಕೆ 3-4 ಕಪ್ ಗ್ರೀನ್ ಟೀ ಸೇವಿಸುವುದು ಕೊಹ್ಲಿಯ ನಿರಂತರ ಅಭ್ಯಾಸ.
ಹಲವು ವರ್ಷಗಳಿಂರ ಕೊಹ್ಲಿ ಈ ಫಿಟ್ನೆಸ್ ಮಂತ್ರವನ್ನು ಜಪಿಸುತ್ತಿದ್ದು, ಯಾವುದೇ ಕಾರಣಕ್ಕೂ ಫಿಟ್ನೆಸ್ ವಿಚಾರದಲ್ಲಿ ರಾಜಿಯಾಗುವುದಿಲ್ಲ. ಅದೇ ಕಾರಣಕ್ಕೆ ಕೊಹ್ಲಿ ಇಂದಿಗೂ ಮೈದಾನದಲ್ಲಿ ಕಿಂಗ್. ಇಷ್ಟೇ ಅಲ್ಲದೇ ಟೀಂ ಇಂಡಿಯಾದ ಎಲ್ಲಾ ಆಟಗಾರರಿಗೂ ಕಟ್ಟುನಿಟ್ಟಾಗಿ ವರ್ಕೌಟ್ ಮಾಡುವಂತೆ ಕೊಹ್ಲಿ ಯಾವಾಗಲು ಎಚ್ಚರಿಸುತ್ತಲೇ ಇರುತ್ತಾರೆ. ಸದ್ಯ, ಟೀಂ ಇಂಡಿಯಾ ಮುಂದಿನ ಟೆಸ್ಟ್ ಪಂದ್ಯಕ್ಕಾಗಿ ಕಾಯುತ್ತಿದ್ದು, ಇದೇ ಹೊತ್ತಿಗೆ ಕೊಹ್ಲಿ ತಮ್ಮ ವರ್ಕೌಟ್ ವಿಡಿಯೋ ಹಂಚಿಕೊಂಡಿದ್ದಾರೆ.