ಟ್ವಿಟರ್ ಸಂಸ್ಥೆಯ ಮಾಜಿ ಸಿಇಒ ಜಾಕ್ ಡಾರ್ಸೆಯವರು ಬ್ಲೂ ಸ್ಕೈ ಎಂಬ ಹೊಸ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಅನ್ನು ತರುತ್ತಿದ್ದಾರೆ. ಟ್ವಿಟರ್ ಅಪ್ಲಿಕೇಶನ್ ಅನ್ನು ಜಾಕ್ ಡಾರ್ಸೆ ಅವರು ಪ್ರಾರಂಭಿಸಿದಾಗ ಟ್ವಿಟರ್ 180 ಪದಗಳ ಮಿತಿಯನ್ನು ಹೊಂದಿದೆ ಹಾಗೂ ಇದು ಹೆಚ್ಚು ಪ್ರಸಿದ್ಧಿಯನ್ನು ಪಡೆಯುವುದಿಲ್ಲ ಎಂದು ಹೇಳಲಾಗುತ್ತಿತ್ತು ಆದರೆ ಜಾಕ್ ಡಾರ್ಸೆ ಅವರು ಟ್ವಿಟರ್ ಅನ್ನು ಉತ್ತಮ ರೀತಿಯಲ್ಲಿ ಮುಂದುವರೆಸಿದರು.ನಂತರ ಇದೀಗ ಟ್ವಿಟರ್ ಅನ್ನು ವಿಶ್ವದ ಅಗರ್ಭ ಶ್ರೀಮಂತ ಎಲಾನ್ ಮಸ್ಕ್ ಅವರು ಸುಮಾರು 3.62 ಲಕ್ಷ ಕೋಟಿ ರೂ ಗೆ ಖರೀದಿಸಿದ್ದಾರೆ. ಇದೀಗ ಟ್ವಿಟರ್ ಗೆ ಪ್ರತಿಸ್ಪರ್ಧಿಯಾಗಿ ಬ್ಲೂ ಸ್ಕೈ ಎಂಬ ಹೊಸ ಅಪ್ಲಿಕೇಶನ್ ಪ್ರಾರಂಭವಾಗುತ್ತಿದೆ. ಅಕ್ಟೋಬರ್ 18ರಂದು ಜಾನ್ ಡಾರ್ಸೆ ಯವರು ಬ್ಲೂ ಸ್ಕೈ ಹೆಸರಿನ ಸಾಮಾಜಿಕ ಮಾಧ್ಯಮದ ಕುರಿತು ಟ್ವೀಟ್ ಮಾಡಿದ್ದರು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲದಿದ್ದರೂ ಇದು ಇತರ ಅಪ್ಲಿಕೇಶನ್ಗಳಿಗಿಂತ ಭಿನ್ನವಾಗಿರಬಹುದು ಎನ್ನಲಾಗುತ್ತಿದೆ .

ಬ್ಲೂ ಸ್ಕೈ, ಟ್ವಿಟರ್ ಹಾಗೂ ಫೇಸ್ಬುಕ್ ಗಳಿಗೆ ಪರ್ಯಾಯವಾಗಿ ರಚಿಸಲಾಗಿದೆ. ಈ ಹೊಸ ಜಾಲತಾಣದ ಬೀಟಾ ಅಥವಾ ಪ್ರಾಯೋಗಿಕ ಈಗಾಗಲೇ ಬಿಡುಗಡೆಗೊಂಡಿದೆ. ಜಾಕ್ ಡಾರ್ಸೆ ಯವರು ಟ್ವಿಟರ್ ನ ಸಹ ಸಂಸ್ಥಾಪಕರಾಗಿದ್ದರು ಹಾಗೂ ನವೆಂಬರ್ 2021 ರಲ್ಲಿ ಟ್ವಿಟ್ಟರ್ ಸಿಇಒ ಹುದ್ದೆಯನ್ನು ತೊರೆದರು.ಇದಾದ 6 ತಿಂಗಳಲ್ಲಿ ನಿರ್ದೇಶಕ ಮಂಡಳಿ ಹುದ್ದೆಯಿಂದಲೂ ಕೆಳಗಿಳಿದರು. ನಂತರ ಟ್ವಿಟರ್ ಗೆ ಭಾರತೀಯ ಮೂಲದ ಪರಾಗ್ ಅಗರ್ವಾಲ್ ಅವರು ಸಿಇಒ ಆಗಿ ಆಯ್ಕೆಯಾಗಿದ್ದರು.
ಇವರು ಸಿಇಒ ಆಗಿ ಒಂದು ವರ್ಷವನ್ನು ಪೂರ್ಣಗೊಳಿಸುವುದಕ್ಕಿಂತ ಮುಂಚೆಯೇ ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು ಖರೀದಿಸಿದ್ದಾರೆ. ಬ್ಲೂ ಸ್ಕೈ ಎಂಬ ಹೊಸ ವಿಕೇಂದ್ರಿತ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಅನ್ನು ಬೀಟಾ ಟೆಸ್ಟ್ ಗಳಿಗಾಗಿ ಬಿಡುಗಡೆ ಮಾಡಲಾಗಿದೆ ಹಾಗೂ ಆಸಕ್ತರು ನೋಂದಣಿ ಮಾಡಿಕೊಳ್ಳಬಹುದು. ಬ್ಲೂ ಸ್ಕೈ ಅಪ್ಲಿಕೇಶನ್ ಅನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿದ ನಂತರ ಬೃಹತ್ ಬಿಡುಗಡೆ ಯೋಜನೆಗೆ ಜಾಕ್ ಡಾರ್ಸೆ ಯೋಚಿಸಿದ್ದಾರೆ ಎನ್ನಲಾಗಿದೆ.
ಎಲಾನ್ ಮಸ್ಕ್ ನ ಟ್ವಿಟರ್ ಖರೀದಿಯ ನಂತರ ಸಂಸ್ಥೆಯ ಅನೇಕ ಉನ್ನತ ಉದ್ಯೋಗಿಗಳಿಗೆ ನಿರ್ಗಮನವನ್ನು ನೀಡಲಾಗಿದೆ. ಟ್ವಿಟರ್ ನಲ್ಲಿ ಇನ್ನೂ ಹಲವು ಬದಲಾವಣೆಗಳು ಆಗಬಹುದು ಎಂದು ಊಹಿಸಲಾಗಿದೆ. ಹಾಗೂ ಟ್ವಿಟ್ಟರ್ ಪರಿಶೀಲನೆಗಾಗಿ ತಿಂಗಳಿಗೆ ಗೆ 20 ಡಾಲರ್ ಅಂದರೆ ಸುಮಾರು 1600 ರೂ ಶುಲ್ಕ ವಿಧಿಸುವ ಯೋಜನೆ ಇದೆ ಎಂಬ ಮಾಹಿತಿ ಇದೆ.