ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ಸಮಂತಾ ಅವರ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸಮಂತಾ ಅವರು ಹಲವು ಶೋಗಳು ಇಂಟರ್ವ್ಯೂಗಳಲ್ಲಿ ಪಾಲ್ಗೊಳ್ಳುತ್ತಾರೆ, ಇವರ ಸಿಟಾಡೆಲ್ ವೆಬ್ ಸೀರೀಸ್ ಸೂಪರ್ ಹಿಟ್ ಆಗಿ, ಸಮಂತಾ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಇದೆಲ್ಲ ಒಂದು ಕಡೆಯಾದರೆ, ಸಮಂತಾ ಅವರ ವೈಯಕ್ತಿಕ ಜೀವನದ ಬಗ್ಗೆ ಆಗುವ ಚರ್ಚೆಗಳು ಮತ್ತೊಂದು ಕಡೆ. ಸಮಂತಾ ಅವರು ವಿಚ್ಛೇದನ ಪಡೆದು 3 ವರ್ಷದ ಮೇಲಾಗಿದೆ. ಅವರ ಮಾಜಿ ಪತಿ ನಾಗಚೈತನ್ಯ ಈಗಾಗಲೇ ಮತ್ತೊಂದು ಮದುವೆ ಆಗಿದ್ದಾರೆ. ಆದರೆ ಇವರಿಬ್ಬರ ಬಗ್ಗೆ ಈಗಲು ಚರ್ಚೆಗಳು ನಡೆಯುತ್ತದೆ.

ಸಮಂತಾ ಹಾಗೂ ನಾಗಚೈತನ್ಯ ಇಬ್ಬರು ಸಹ ಪ್ರೀತಿಸಿ ಮದುವೆಯಾದರು. ಐದಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಈ ಜೋಡಿ, ಹೆಚ್ಚು ಸಮಯ ಜೊತೆಯಾಗಿ ಇರಲಿಲ್ಲ. ಮದುವೆಯಾಗಿ 4 ವರ್ಷ ತುಂಬುವುದರ ಒಳಗೆ ಇಬ್ಬರು ವಿಚ್ಛೇದನ ಪಡೆದರು. ಇವರಿಬ್ಬರು ದೂರವಾಗಲು ಕಾರಣ ಏನು ಎಂದು ಅವರಿಗೆ ಮಾತ್ರ ಗೊತ್ತಿರುತ್ತದೆ. ಆದರೆ ನೆಟ್ಟಿಗರು ಮತ್ತು ಅವರ ಅಭಿಮಾನಿಗಳು ಇದಕ್ಕೆ ಕಾರಣ ಏನಿರಬಹುದು ಎಂದು ಚರ್ಚೆ ಮಾಡುತ್ತಲೇ ಇರುತ್ತಾರೆ. ನಾಗಚೈತನ್ಯ ಸಮಂತಾ ಅವರ ಜೊತೆಗೆ ಇದ್ದಾಗಲೇ ಶೋಭಿತಾ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದರು, ಅದೇ ಕಾರಣಕ್ಕೆ ಇಬ್ಬರು ದೂರ ಆಗಿರೋದು ಎನ್ನಲಾಗುತ್ತಿದೆ.

ಆದರೆ ಅಸಲಿ ವಿಷಯ ಏನು ಎನ್ನುವುದು ಅವರಿಗೆ ಮಾತ್ರ ಗೊತ್ತಿರುತ್ತದೆ. ಇಬ್ಬರು ಬೇರೆ ಆಗಿದ್ದು ಆಯಿತು, ಶೋಭಿತಾ ಅವರ ಜೊತೆಗೆ ನಾಗಚೈತನ್ಯ ಮದುವೆ ಆಗಿದ್ದು ಆಯಿತು. ಅವರಿಬ್ಬರು ಈಗ ಚೆನ್ನಾಗಿಯೇ ಇದ್ದಾರೆ. ಆದರೆ ಸಮಂತಾ ಅವರು ನೋವಿನಲ್ಲೇ ಇದ್ದಾರೆ. ಸಮಂತಾ ಅವರು ತಂದೆಯನ್ನು ಕಳೆದುಕೊಂಡರು, ಅವರ ಆರೋಗ್ಯದಲ್ಲಿ ಕೂಡ ಕೆಲ ಸಮಸ್ಯೆ ಇದೆ. ಏನೇ ಆದರು ಅವರವರ ಜೀವನವನ್ನು ಅವರವರೆ ನೋಡಿಕೊಳ್ಳುತ್ತಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಇದೀಗ ಸಮಂತಾ ಅವರ ಬಗ್ಗೆ ಮತ್ತೊಂದು ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದು ಅವರ ಕೈಯಲ್ಲಿರುವ ಟ್ಯಾಟೂ ಬಗ್ಗೆ.
ಸಮಂತಾ ಅವರಿಗೆ ಟ್ಯಾಟೂ ಅಂದರೆ ತುಂಬಾ ಇಷ್ಟ, ಸಾಕಷ್ಟು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಚೈತನ್ಯ ಅವರ ಜೊತೆಗಿದ್ದಾಗ ಇಬ್ಬರೂ ಒಂದೇ ರೀತಿಯ ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದರು. ಅದು Arrow shape ಇರುವ ಟ್ಯಾಟೂ ಆಗಿತ್ತು, ಈ ಟ್ಯಾಟೂ ಗೆ ಪ್ಲೇ ನೆಕ್ಸ್ಟ್ ಸಿಂಬಲ್ ಎಂದು ಕರೆಯುತ್ತಾರೆ. ಈ ಸಿಂಬಲ್ ಬಗ್ಗೆ ಚೈತನ್ಯ ಒಂದು ಇಂಟರ್ವ್ಯೂ ನಲ್ಲಿ ತಿಳಿಸಿದ್ದರು. ಇದು ಒಂದು ರೋಮನ್ ಸಿಂಬಲ್ ನಮ್ಮ ರಿಯಾಲಿಟಿಯನ್ನು ನಾವೇ ಕಂಡುಕೊಳ್ಳಬೇಕು ಎನ್ನುವುದು ಈ ಟ್ಯಾಟೂ ಅರ್ಥ ಎಂದು ತಿಳಿಸಿದ್ದರು. ಇಬ್ಬರು ತಮ್ಮ ಕೈಗಳಲ್ಲಿ ಈ ಸಿಂಬಲ್ ಟ್ಯಾಟೂ ಹಾಕಿಸಿಕೊಂಡಿದ್ದರು, ಆಗ ಬಹಳ ಪ್ರೀತಿ, ಸಂತೋಷ ಎಲ್ಲವೂ ಇತ್ತು. ಆದರೆ ಚೈತನ್ಯ ಅವರಿಂದ ದೂರವಾದ ಬಳಿಕ ಈ ಟ್ಯಾಟೂ ಇದೆಯಾ ಎನ್ನುವ ಒಂದು ಪ್ರಶ್ನೆ ನೆಟ್ಟಿಗರಲ್ಲಿ ಇತ್ತು.
ಅದಕ್ಕೆ ಈಗ ಉತ್ತರ ಸಿಕ್ಕಿದೆ. ಸಮಂತಾ ಅವರು ಮೊನ್ನೆಯಷ್ಟೇ ಒಂದು ಹೊಸ ಪೋಸ್ಟ್ ಶೇರ್ ಮಾಡಿದ್ದಾರೆ. ಆ ಪೋಸ್ಟ್ ನಲ್ಲಿರುವ ಫೋಟೋ ಒಂದರಲ್ಲಿ ಸಮಂತಾ ಅವರ ಕೈಯಲ್ಲಿದ್ದ ಆ ಟ್ಯಾಟೂ ಇದ್ದ ಹಾಗೆ ತೋರುತ್ತಿಲ್ಲ. ಹಾಗಾಗಿ ಅಭಿಮಾನಿಗಳು ಸಮಂತಾ ಅವರು ಚೈ ಅವರ ನೆನಪಿನಿಂದ ಹೊರಬರಲು ಆ ಟ್ಯಾಟೂವನ್ನು ತೆಗೆಸಿರಬಹುದು. ಪ್ರೀತಿಸಿದವರ ನೆನಪಿನಿಂದ ಹೊರಬರುವುದು ತುಂಬಾ ಕಷ್ಟ ಎನ್ನುತ್ತಿದ್ದಾರೆ ನೆಟ್ಟಿಗರು. ಆದರೆ ನಿಜಕ್ಕೂ ಸಮಂತಾ ಅವರು ಟ್ಯಾಟೂ ತೆಗೆಸಿದ್ದಾರಾ? ಇನ್ನು ಕೂಡ ಚೈತನ್ಯ ಅವರ ನೆನಪಿನಲ್ಲಿ ಕಷ್ಟಪಡುತ್ತಿದ್ದಾರ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಖುದ್ದು ಸಮಂತಾ ಅವರೇ ಈ ಬಗ್ಗೆ ತಿಳಿಸಿಕೊಡಬೇಕು.

ಇನ್ನು ಕೆಲವು ದಿನಗಳಿಂದ ಸಮಂತಾ ಅವರ ಬಗ್ಗೆ ಬೇರೆಯದೇ ಒಂದು ರೂಮರ್ ಕೇಳಿ ಬರುತ್ತಿದೆ. ಸಮಂತಾ ಅಭಿನಯಿಸಿದ ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರೀಸ್ ನಿರ್ದೇಶಕ ರಾಜ್ ಅವರೊಡನೆ ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಯಾರಿಗು ಗೊತ್ತಾಗದ ಹಾಗೆ ಕದ್ದು ಮುಚ್ಚಿ ಭೇಟಿ ಮಾಡುತ್ತಿದ್ದಾರೆ. ಇವರಿಬ್ಬರ ನಡುವೆ ಕುಚ್ ಕುಚ್ ಶುರುವಾಗಿದೆ ಎನ್ನುವ ಸುದ್ದಿಯೊಂದು ವೈರಲ್ ಆಗಿದೆ. ಆದರೆ ಸಮಂತಾ ಅವರಾಗಲಿ, ನಿರ್ದೇಶಕ ರಾಜ್ ಅವರಾಗಲಿ ಈ ಬಗ್ಗೆ ಎಲ್ಲಿಯು ಮಾತನಾಡಿಲ್ಲ. ಸಮಂತಾ ಹಾಗೂ ರಾಜ್ ಇಬ್ಬರು ಕೂಡ ಒಂದು ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆಗಿನಿಂದಲೂ ಈ ಸುದ್ದಿ ವೈರಲ್ ಆಗುತ್ತಿದೆ.

ಇವೆಲ್ಲದರ ಜೊತೆಗೆ ಸಮಂತಾ ಅವರು ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇಷ್ಟು ದಿವಸ ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು, ಇನ್ನುಮುಂದೆ ನಿರ್ಮಾಪಕಿ ಸಹ ಆಗಿದ್ದಾರೆ. ತ್ರಲಾಲ ಮೂವಿಂಗ್ ಪಿಕ್ಚರ್ಸ್ ಹೆಸರಿನಲ್ಲಿ ಸಮಂತಾ ಅವರು ಹೊಸ ಪ್ರೊಡಕ್ಷನ್ ಕಂಪನಿ ಶುರು ಮಾಡಿದ್ದು, ಮೊದಲ ಸಿನಿಮಾ ನಿರ್ಮಾಣ ಹಂತದಲ್ಲಿದೆ. ಸಮಂತಾ ಅವರು ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ಹೆಸರು ಶುಭಂ. ಸಿನಿಮಾದ ಮುಹೂರ್ತ ಸಹ ನೆರವೇರಿದೆ. ಈ ಸಿನಿಮಾದ ಎಲ್ಲಾ ಕಲಾವಿದರಿಗೆ ಸಮಂತಾ ಅವರು ಸಮಾನವಾಗಿ ಒಂದೇ ರೀತಿಯ ಸಂಭಾವನೆ ಕೊಟ್ಟಿದ್ದಾರೆ ಎನ್ನಲಾಗಿದ್ದು, ಈ ಕಾರಣಕ್ಕೆ ಕೂಡ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಒಟ್ಟಿನಲ್ಲಿ ಯಾವುದೋ ಒಂದು ಕಾರಣಕ್ಕೆ ಸಮಂತಾ ಅವರು ಸುದ್ದಿ ಆಗುತ್ತಲೇ ಇರುತ್ತಾರೆ.



